ಹೆಣ್ಣು ಮಕ್ಕಳು ಮಾತ್ರ ಅನುಭವಿಸುವ ಮುಟ್ಟಿನ ಅನೇಕ ಸಮಸ್ಯೆಗಳಿಗೆ ಮನೆಯಲ್ಲಿ ನೈಸರ್ಗಿಕವಾಗಿ ಕೆಲವು ಸೊಪ್ಪುಗಳಿಂದ ಕಷಾಯ ಮಾಡಿಕೊಂಡು ಕುಡಿಯುವುದರಿಂದ ಮುಟ್ಟಿನ ಅನೇಕ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು. ಹಾಗಾದರೆ ಯಾವ ಯಾವ ಕಷಾಯಗಳಿವೆ, ಅವುಗಳನ್ನು ಮಾಡುವ ವಿಧಾನ ಹಾಗೂ ಅನುಸರಿಸಬೇಕಾದ ಆಹಾರ ಪದ್ಧತಿಯನ್ನು ಈ ಲೇಖನದಲ್ಲಿ ನೋಡೋಣ.
ಹೆಣ್ಣುಮಕ್ಕಳು ಋತುಮತಿಯರಾದಾಗ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಸರಿಯಾಗಿ ಋತುಮತಿಯರಾಗದೆ ಇರುವುದು, ಅತಿ ಹೆಚ್ಚು ಬ್ಲೀಡಿಂಗ್ ಆಗುತ್ತಿದ್ದರೆ ಅಥವಾ ಅತಿ ಕಡಿಮೆ ಬ್ಲೀಡಿಂಗ್ ಆಗುತ್ತಿದ್ದರೆ, ವೈಟ್ ಡಿಸ್ಚಾರ್ಜ್ ಆಗುತ್ತಿದ್ದರೆ, ಋತುಮತಿ ಆದಾಗ ಹೊಟ್ಟೆ ನೋವು, ಬೆನ್ನು ನೋವು, ಕಾಲು ನೋವು ಈ ಎಲ್ಲಾ ಸಮಸ್ಯೆಗಳಿಗೆ ಮನೆಯಲ್ಲಿಯೇ ಸಸ್ಯಗಳಿಂದ ತಯಾರಿಸಿದ ಔಷಧಿಯನ್ನು ತೆಗೆದುಕೊಳ್ಳುವುದರಿಂದ ಯಾವುದೇ ಅಡ್ಡ ಪರಿಣಾಮವಿಲ್ಲದೆ ಸಮಸ್ಯೆ ನಿವಾರಣೆಯಾಗುತ್ತದೆ. ಮೊದಲನೇ ಮನೆ ಮದ್ದು ಗೊಂಗುರ ಕಷಾಯ ಈ ಗಿಡಕ್ಕೆ ಪುಂಡಿಸೊಪ್ಪು ಎಂತಲೂ ಕರೆಯುತ್ತಾರೆ. ಒಂದು ಸ್ಟೀಲ್ ಪಾತ್ರೆ ಅಥವಾ ಮಣ್ಣಿನ ಮಡಿಕೆಯಲ್ಲಿ 150ml ನೀರು ಹಾಕಿ ಸಣ್ಣ ಉರಿಯಲ್ಲಿ ಕುದಿಸಬೇಕು ನಂತರ 4-5 ಗೊಂಗುರ ಎಲೆಯನ್ನು ತೊಳೆದು ಕುದಿಯುತ್ತಿರುವ ನೀರಿಗೆ ಹಾಕಬೇಕು. 4-5 ನಿಮಿಷ ಕುದಿಸಿದ ನಂತರ ಮುಚ್ಚಳದಿಂದ ಮುಚ್ಚಿ 5 ನಿಮಿಷ ಹಾಗೆಯೇ ಬಿಡಬೇಕು. ನಂತರ ಮುಚ್ಚಳ ತೆಗೆದು ಫಿಲ್ಟರ್ ಮಾಡಿಕೊಂಡು ಉಗುರು ಬೆಚ್ಚಗೆ ಅಥವಾ ತಣ್ಣಗಾದಾಗ ಕುಡಿಯಬೇಕು. ಪ್ರತಿದಿನ ಬೆಳಗ್ಗೆ ಖಾಲಿಹೊಟ್ಟೆಯಲ್ಲಿ 45ರಿಂದ 60 ದಿನದವರೆಗೆ ಕುಡಿದರೆ ಎಲ್ಲಾ ರೀತಿಯ ಮುಟ್ಟಿನ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಇದರ ಜೊತೆಗೆ ವಾರಕ್ಕೆ ಒಂದರಿಂದ ಎರಡು ಸಲ ಗೊಂಗುರ ಚಟ್ನಿ ಮಾಡಿಕೊಂಡು ಸೇವಿಸಬಹುದು. ಜೀರಿಗೆ ಕಷಾಯ ಒಂದು ಲೋಟ ನೀರನ್ನು ಕುದಿಸಿ ಅದಕ್ಕೆ ಒಂದು ಸ್ಪೂನ್ ಜೀರಿಗೆಯನ್ನು ಹಾಕಿ 4-5 ನಿಮಿಷ ಕುದಿಸಿದರೆ ಜೀರಿಗೆ ಕಷಾಯ ಸಿದ್ಧವಾಗುತ್ತದೆ. ಶುಂಠಿ ಕಷಾಯ ಕುದಿಯುತ್ತಿರುವ ನೀರಿಗೆ ಸಣ್ಣ ಚೂರು ಶುಂಠಿ ಹಾಕಿ 4-5 ನಿಮಿಷ ಕುದಿಸಿದರೆ ಶುಂಠಿ ಕಷಾಯ ಸಿದ್ಧವಾಗುತ್ತದೆ. ದಾಲ್ಚಿನ್ನಿ ಚಕ್ಕೆ ಕಷಾಯ ಕುದಿಯುವ ನೀರಿಗೆ ಸಣ್ಣ ದಾಲ್ಚಿನ್ನಿ ಚಕ್ಕೆ ಅಥವಾ ಒಂದು ಸ್ಪೂನ್ ದಾಲ್ಚಿನ್ನಿ ಪುಡಿಯನ್ನು ಹಾಕಿ 4-5 ನಿಮಿಷ ಕುದಿಸಿದರೆ ದಾಲ್ಚಿನ್ನಿ ಚಕ್ಕೆ ಕಷಾಯ ಸಿದ್ಧವಾಗುತ್ತದೆ. ಕರಿಬೇವಿನ ಕಷಾಯ ಕುದಿಯುತ್ತಿರುವ ನೀರಿಗೆ ಸ್ವಲ್ಪ ಕರಿಬೇವಿನ ಎಲೆಯನ್ನು ಹಾಕಿ 4-5 ನಿಮಿಷ ಕುದಿಸಿ ತಣ್ಣಗಾದ ನಂತರ ಕುಡಿಯಬೇಕು. ಕರಿಬೇವು ನಮ್ಮ ರಕ್ತ ಶುದ್ಧೀಕರಿಸುವ ಜೊತೆಗೆ ಮುಟ್ಟಿನ ಸಮಸ್ಯೆಯನ್ನು ನಿವಾರಿಸುತ್ತದೆ.
ಕೊತ್ತಂಬರಿ ಸೊಪ್ಪಿನ ಕಷಾಯ ಕುದಿಯುತ್ತಿರುವ ನೀರಿಗೆ ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಕಟ್ ಮಾಡಿ ಹಾಕಿ ನಂತರ 4-5 ನಿಮಿಷ ಕುದಿಸಿ ತಣ್ಣಗಾದ ನಂತರ ಕುಡಿಯಬೇಕು. ಪುದೀನಾ ಸೊಪ್ಪಿನ ಕಷಾಯ ಕುದಿಯುವ ಒಂದು ಲೋಟ ನೀರಿಗೆ ಸ್ವಲ್ಪ ಪುದೀನಾ ಸೊಪ್ಪನ್ನು ಕಟ್ ಮಾಡಿ ಹಾಕಿ 4-5 ನಿಮಿಷ ಕುದಿಸಿ ತಣ್ಣಗಾದ ನಂತರ ಕುಡಿಯಬೇಕು. ಯಾವುದೇ ಕಷಾಯವನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು ಕಷಾಯಕ್ಕೆ ಒಂದು ಸ್ಪೂನ್ ಬೆಲ್ಲ ಹಾಕಿಕೊಂಡು ಕುಡಿಯಬಹುದು. ವಾರಕ್ಕೆ ಒಂದು ಅಥವಾ ಎರಡು ಸಾರಿ ಎಳ್ಳುಂಡೆ ತಿನ್ನಬೇಕು. ಹೆಚ್ಚು ಜಂಕ್ ಫುಡ್ ತಿನ್ನುವುದನ್ನು ಕಡಿಮೆ ಮಾಡಬೇಕು. ಕಾಫಿ ಟೀ ಕುಡಿಯಬಾರದು. ಹಾಲು, ಮೊಟ್ಟೆ, ಸೋಯಾಬೀನ್, ವೈಟ್ ರೈಸ್, ನೋನವೆಜ್, ಗೋಧಿ, ಮೈದಾ ಸೇವಿಸಬಾರದು. ಅಡುಗೆ ಮಾಡಲು ಅಲ್ಯೂಮಿನಿಯಂ ಪಾತ್ರೆ ಬಳಸಬಾರದು. ತಾಮ್ರ ಅಥವಾ ಸ್ಟೀಲ್ ಪಾತ್ರೆಗಳಲ್ಲಿ ಶೇಖರಿಸಿಟ್ಟ ನೀರನ್ನು ಕುಡಿಯಬೇಕು. ಸಿರಿಧಾನ್ಯಗಳನ್ನು ಹೆಚ್ಚು ಸೇವಿಸಬೇಕು ಇದರಿಂದ ಆರೋಗ್ಯವಂತರಾಗಿ ಇರಬಹುದು. ಪ್ರತಿದಿನ ಒಂದು ಗಂಟೆ ವಾಕಿಂಗ್ ಮಾಡಬೇಕು. ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ಗೊಂಗುರ ಕಷಾಯ, ಮಧ್ಯಾಹ್ನ ಖಾಲಿಹೊಟ್ಟೆಯಲ್ಲಿ ಯಾವುದಾದರೂ ಒಂದು ಕಷಾಯವನ್ನು ಕುಡಿಯಬಹುದು ಮತ್ತು ಕೆಲವು ಆಹಾರ ಪದ್ಧತಿಯನ್ನು ಬದಲಾಯಿಸಿಕೊಂಡರೆ ಮುಟ್ಟಿನ ಎಲ್ಲಾ ಸಮಸ್ಯೆಯು ನಿವಾರಣೆಯಾಗುತ್ತದೆ. ಈ ಮಾಹಿತಿಯನ್ನು ಎಲ್ಲಾ ಹೆಣ್ಣುಮಕ್ಕಳಿಗೆ ತಪ್ಪದೇ ತಿಳಿಸಿ.
ಶ್ರೀ ಮಂತ್ರಾಲಯ ಗುರು ಬೃಂದಾವನ ಜ್ಯೋತಿಷ್ಯ ಮಂದಿರ, ಗುರೂಜಿ ಶ್ರೀ ಪರುಶುರಾಮ ಎಲ್ ಜ್ಯೋಷಿ ವ್ಯಾಪಾರ ಸಮಸ್ಯೆ ಮದುವೆ ಸಮಸ್ಯೆ ಸಂತಾನ ಸಮಸ್ಯೆ ಹಣಕಾಸಿನ ಸಮಸ್ಯೆ ಗಂಡ-ಹೆಂಡತಿ ಸಮಸ್ಯೆ ಅತ್ತೆ ಸೊಸೆ ಕಿರಿಕಿರಿ ಇನ್ನು ನಿಮ್ಮ ಜೀವನದಲ್ಲಿ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ಶ್ರೀ ಮಂತ್ರಾಲಯ ಗುರು ರಾಯರ ಅನುಗ್ರಹದಿಂದ ಮತ್ತು ದುರ್ಗಾ ಹೋಮ ಸುದರ್ಶನ ಹೋಮ ಮಹಾಗಣಪತಿ ಯಾಗ ಶ್ರೀ ಕರ ಮಂತ್ರ ಹೋಮ ಸುಗ್ರೀವ ಹೋಮ ಹಾಗೂ 1008 ಜಪ ತಪ ಹೋಮ ಹವನ ಗಳಿಂದ ಕೇವಲ 24 ಗಂಟೆಗಳಲ್ಲಿ ಶಾಶ್ವತವಾಗಿ ಪರಿಹಾರ ಶತಸಿದ್ಧ ಇಂದೇ ಸಂಪರ್ಕಿಸಿ 9845111287