ಪ್ರತಿ ವರ್ಷವೂ ಕೂಡ ಶಬರಿ ಮಲೆಯ ಅಯ್ಯಪ್ಪನ ದರ್ಶನಕ್ಕೆ ಲಕ್ಷಾಂತರ ಭಕ್ತಾಧಿಗಳು ಈ ದೇವಾಲಯಕ್ಕೆ ಆಗಮಿಸುತ್ತಾರೆ ಹದಿನೆಂಟು ಮೆಟ್ಟಿಲುಗಳನ್ನು ಏರಿ ಮಲೆಯಲ್ಲಿ ನೆಲೆಯಾಗಿರುವ ಅಯ್ಯಪ್ಪ ಸ್ವಾಮಿಯನ್ನು ಕಂಡೊಡನೆ ಭಕ್ತರ ಮನದಲ್ಲಿ ಭಕ್ತಿಯ ಪ್ರವಾಹವೇ ಹರಿದು ಹೋಗುತ್ತಿರುತ್ತದೆ ಭಕ್ತಾಧಿಗಳು ಮಾಲಾಧಾರಿಗಳಾಗಿ ನಲವತ್ತೊಂದು ದಿನಗಳ ವ್ರತವನ್ನು ಆಚರಿಸುತ್ತಾರೆ ಹಾಗೆಯೇ ಮಾಲಾಧಾರಿಗಳಾಗಿ ಸ್ವಾಮಿಯ ಆರಾಧನೆ ಮಾಡುವುದು ಇಲ್ಲಿನ ವಿಶೇಷ.
ಈ ಬೆಟ್ಟವು ರಾಮಾಯಣದಲ್ಲಿ ಬರುವ ಶಬರಿಗೆ ಸೇರಿದ ಬೆಟ್ಟವೆಂಬ ಕಾರಣಕ್ಕಾಗಿ ಇದನ್ನು ಶಬರಿಮಲೆ ಎಂದು ಕರೆಯಲಾಗುತ್ತದೆ ಅಯಪ್ಪ ಸ್ವಾಮಿ ಶಿವ ಹಾಗೂ ವಿಷ್ಣುವಿನ ಸಂಗಮದಿಂದ ಹುಟ್ಟಿದಂತ ಶಕ್ತಿ ಶಾಲಿ ದೇವರು ಈ ದೇವರು ತಾನೊಬ್ಬ ಬ್ರಹ್ಮಚಾರಿ ಯಾಗಿ ಭಕ್ತಾದಿಗಳಿಗೆ ವರ ನೀಡುತ್ತಾನೆ ಶಬರಿ ಮಲೆಯಲ್ಲಿ ಯುವ ಮಹಿಳೆಯರಿಗೆ ಪ್ರವೇಶ ಇರುವುದಿಲ್ಲ ಶಬರಿಮಲೆಯು ಸರ್ಕಾರಿ ಸ್ವಾಮ್ಯದ ತಿರುವಾಂಕೂರ್ ದೇವಸ್ಥಾನ ಮಂಡಳಿಯ ಆಡಳಿತದಲ್ಲಿದ್ದು ವಾರ್ಷಿಕ ಐದು ಕೋಟಿ ಜನರನ್ನು ಆಕರ್ಷಿಸುವ ವಿಶ್ವದ ಅತ್ಯಂತ ದೊಡ್ಡ ಯಾತ್ರಾಸ್ಥಳವಾಗಿದೆ. ನಾವು ಈ ಲೇಖನದ ಮೂಲಕ ಶಬರಿ ಮಲೆಯ ಬಗ್ಗೆ ತಿಳಿದುಕೊಳ್ಳೋಣ.
ಶಬರಿ ಮಲೆಯಲ್ಲಿ ಯುವ ಮಹಿಳೆಯರಿಗೆ ಪ್ರವೇಶ ಇರುವುದಿಲ್ಲ ಶಬರಿ ಮಲೆಯಲ್ಲಿ ಅಯಪ್ಪ ಸ್ವಾಮಿ ನೆಲೆಸಿರುತ್ತಾರೆ ಅಯಪ್ಪ ಸ್ವಾಮಿ ಶಿವ ಹಾಗೂ ವಿಷ್ಣುವಿನ ಸಂಗಮದಿಂದ ಹುಟ್ಟಿದಂತ ಶಕ್ತಿ ಶಾಲಿ ದೇವರು ಈ ದೇವರು ತಾನೊಬ್ಬ ಬ್ರಹ್ಮಚಾರಿ ಯಾಗಿ ಭಕ್ತಾದಿಗಳಿಗೆ ವರ ನೀಡುತ್ತಾನೆ ಎಲ್ಲಿಯವರೆಗೆ ಮೊದಲು ಬಾರಿಗೆ ಹೋಗದ ಕನ್ಯಾ ಸ್ವಾಮಿಗಳು ಹೋಗದೇ ಇರುತ್ತಾರೆ ಅಲ್ಲಿಯವರೆಗೆ ಅಯ್ಯಪ್ಪ ಸ್ವಾಮಿ ಬ್ರಹ್ಮ ಚಾರಿಗಳಾಗಿ ಇರುತ್ತಾರೆ ಪುರಾಣದ ಪ್ರಕಾರ ಒಂದು ರಾಕ್ಷಸಿ ಇದ್ದಳು ಆ ರಾಕ್ಷಸಿಯನ್ನು ಎದುರಿಸಲು ಸಾಧ್ಯ ಇರಲಿಲ್ಲ.
ಯಾಕೆ ಅಂದರೆ ವಿಷ್ಣು ಮತ್ತು ಶಿವ ಇಬ್ಬರ ಶಕ್ತಿ ಸೇರಿದಾಗ ಮಾತ್ರ ಸಾಯುವ ಶಕ್ತಿ ಹೊಂದಿದ್ದಳು ಅಯ್ಯಪ್ಪ ಸ್ವಾಮಿ ಲೋಕೋಪಕ್ಕಾಗಿ ರಾಕ್ಷಸಿಯನ್ನು ಸಾಗಿಸುತ್ತಾರೆ ಆದರೆ ಆ ರಾಕ್ಷಸಿ ಬಹಳ ಸುಂದರಿಯಾಗಿ ಇರುತ್ತಾಳೆ ಯಾವುದೋ ಶಾಪದಿಂದ ರಾಕ್ಷಸಿ ಆಗಿ ಇರುತ್ತಾಳೆ ಅಯ್ಯಪ್ಪ ರಾಕ್ಷಸಿಯನ್ನು ಕೊಂದ ನಂತರ ಮೊದಲಿನ ರೂಪವನ್ನು ತಾಳುತ್ತಾಳೆ ಆಕೆಗೆ ಮೊದಲ ನೋಟದಲ್ಲಿಯೆ ಅಯ್ಯಪ್ಪ ಸ್ವಾಮಿ ಮೇಲೆ ಪ್ರೀತಿಯಾಗಿ ನನ್ನನ್ನು ಮದುವೆ ಆಗಿ ಎಂದು ಕೇಳಿಕೊಳ್ಳುತ್ತಾಳೆ .
ಆಗ ಅಯ್ಯಪ್ಪ ಸ್ವಾಮಿ ಭಕ್ತರ ನೋವು ನಲಿವನ್ನಿನೋಡಿಕೊಳ್ಳ ಬೇಕು ಅದಕ್ಕೆ ನಾನು ಬ್ರಹ್ಮಚಾರಿಯಾಗಿ ಉಳಿಸಿಕೊಳ್ಳಬೇಕು ಎಂದು ಹೇಳಿ ಆಕೆಯ ಪ್ರೀತಿ ನೋಡಿ ಅಯ್ಯಪ್ಪ ಸ್ವಾಮಿಗೆ ಮನ ಕರಗುವಂತೆ ಆಯಿತು ಹಾಗಾಗಿ ಅವರು ಯಾವತ್ತೂ ಮೊದಲ ಬಾರಿಗೆ ಕನ್ಯಾ ಸ್ವಾಮಿಗಳು ಬರುವುದಿಲ್ಲವೋ ಆಗ ನಾನು ಮದುವೆ ಆಗುತ್ತೇನೆ ಎಂದು ಹೇಳುತ್ತಾರೆ. ಆ ದೇವಸ್ಥಾನ ಅಯ್ಯಪ್ಪ ಸ್ವಾಮಿಗೆ ಮೊದಲು ಸಿಗುವ ಮಲ್ಲಿಕಾ ಪೂರದಂಭ ದೇವಿ ಅಯ್ಯಪ್ಪ ಸ್ವಾಮಿ ಭಕ್ತರು ಅಲ್ಲಿಯೂ ಸಹ ಪೂಜೆ ಸಲ್ಲಿಸುತ್ತಾರೆ ಆದರೆ ಮಲ್ಲಿಕಾ ಪೂರದಂಭ ದೇವಿ ಇನ್ನೂ ಸಹ ಅಯ್ಯಪ್ಪ ಸ್ವಾಮಿಯನ್ನು ಕಾಯುತ್ತಾ ಇರುವುದರಿಂದ ಯುವ ಮಹಿಳೆಯರು ಅಲ್ಲಿಗೆ ಹೋಗುವುದು ಇಲ್ಲ ಅಯ್ಯಪ್ಪ ಸ್ವಾಮಿ ಪ್ರಚಂಡ ಬ್ರಹ್ಮ ಚಾರಿ ಯುವಕನಾಗಿದ್ದಾನೇ ಆದರೆ ಯುವ ಮಹಿಳೆಯರು ಈ ದೇವಸ್ಥಾನಕ್ಕೆ ಹೋದರೆ ಮಲ್ಲಿಕಾ ಪೂರದಂಭ ದೇವಿಗೆ ಮೋಸ ಮಾಡಿದಂತೆ ಆಗುತ್ತದೆ.
ಹೀಗಾಗಿ ಸಾವಿರ ವರ್ಷದಿಂದಲೂ ಈ ನಂಬಿಕೆಯನ್ನು ಪಾಲಿಸಿಕೊಂಡು ಬರಲಾಗುತ್ತಿದೆ ಹತ್ತು ವರ್ಷದಲ್ಲಿ ನ ಚಿಕ್ಕ ಹೆಣ್ಣು ಮಕ್ಕಳು ಹಾಗೂ ಇವತ್ತು ದಾಟಿದ ಮಾತೆಯರು ಮಾತ್ರ ಹೋಗಬಹುದು ಮಕರ ಜ್ಯೋತಿ ಬಗ್ಗೆ ಸಹ ಕೆಲವು ಪೂರಣಗಳಿವೆ ಎರಡು ಸಾವಿರದ ಹನ್ನೊದರಲ್ಲಿ ಮಕರ ಜ್ಯೋತಿ ನೋಡಲು ತುಂಬಾ ಭಕ್ತರು ಬಂದಿದ್ದರು ಅಲ್ಲಿ ಕಾಳು ತುಳಿತ ಉಂಟಾಗಿತ್ತು ಹಾಗಾಗಿ ನೂರಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡರು ಆದರೆ ಶಬರಿ ಮಲೆಯ ಪ್ರಖ್ಯಾತಿ ಯನ್ನು ಸಹಿಸದ ಕೆಲವರು ಕೋರ್ಟ್ ಗೆ ಹೋದರು ಹಾಗೂ ಮಕರ ಜ್ಯೋತಿ ಒಂದು ಮಾನವ ನಿರ್ಮಿತ ಎಂದು ತನಿಖೆ ಮಾಡಲು ಮನವಿ ಮಾಡಿದರು.
ಆಗ ಹಲವು ವಿಚಾರಗಳು ಸ್ಪಷ್ಟ ಆದವು ಕಾಡಲ್ಲಿ ಕಾಣುವ ಜ್ಯೋತಿ ಮಕರ ಜ್ಯೋತಿ ಅಲ್ಲ ಅದು ಮಕರ ವಿಲಕ್ಕು ಶಬರಿ ಮಲೆಯ ಕಾಡಿನಲ್ಲಿ ಇರುವ ಬುಡಕಟ್ಟು ಜನರು ಮಕರ ಸಂಕ್ರಾತಿ ದಿನ ಕಾಡಲ್ಲಿ ಬೆಂಕಿಹಚ್ಚಿ ಹಬ್ಬ ಆಚರಿಸುತ್ತಿದ್ದರು ಹಾಗೆಯೇ ಬೆಟ್ಟದ ಮೇಲೆ ಕಾಣುವ ಜ್ಯೋತಿ ಮಾನವ ನಿರ್ಮಿತವಾದದದ್ದು. ಆಕಾಶದಲ್ಲಿ ಕಾಣುವ ನಕ್ಷತ್ರಗಳು ಮಕರ ಜ್ಯೋತಿಗಳು ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ ಎಲ್ಲರ ಭಕ್ತರ ಜನಾಂಗ ಸಂತತಿ ಧರ್ಮಗಳನ್ನು ಲೆಕ್ಕಿಸದೇ ಎಲ್ಲ ಭಕ್ತರನ್ನೂ ಸಮಾನ ಭಾವನೆಯಿಂದ ಒಪ್ಪಿಕೊಳ್ಳುವ ಅಪರೂಪದ ದೇವಸ್ಥಾನಗಳಲ್ಲಿ ಶಬರಿಮಲೆಯ ಅಯ್ಯಪ್ಪ ದೇವಸ್ಥಾನವೂ ಒಂದು.