ಹಸಿರು ಮೆಣಸಿನಕಾಯಿ ಮತ್ತು ಕೆಂಪು ಮೆಣಸಿನಕಾಯಿ ಈ ಎರಡರಲ್ಲಿ ಯಾವುದು ನಮ್ಮ ಆರೋಗ್ಯಕ್ಕೆ ಉತ್ತಮ ಅನ್ನೋದನ್ನ ತಿಳಿದುಕೊಳ್ಳೋಣ. ಜಗತ್ತಿನಲ್ಲಿ 4 ಸಾವಿರಕ್ಕೂ ಹೆಚ್ಚಿನ ವಿಧದ ಮೆಣಸಿನಕಾಯಿಗಳು ಇವೆ. ಪುಟ್ಟ ಜೀರಿಗೆಯಷ್ಟೇ ಜೀರಿಗೆ ಮೆಣಸಿನವರೆಗೂ ಹಲವಾರು ರೀತಿಯ ಮೆಣಸಿನಕಾಯಿಗಳು ಇವೆ. ಕಾರವೇ ಇಲ್ಲದ ಮೆಣಸಿನಿಂದ ಹಿಡಿದು ಬುದ್ಸಲಾಕಿಯ ಎಂಬ ಭಾರತದ ಅತ್ಯಂತ ಕಾರದ ಮೆಣಸಿನವರೆಗೂ ಇದೆ. ಇನ್ನು ನಾವೆಲ್ಲರೂ ಸಾಮಾನ್ಯವಾಗಿ ಅಡುಗೆಯಲ್ಲಿ ಎರಡು ರೀತಿಯ ಮೆಣಸನ್ನು ಬಳಸುತ್ತೇವೆ. ಅವುಗಳೆಂದರೆ, ಒಣ ಮೆಣಸು, ಕೆಂಪು ಮೆಣಸು ಮತ್ತು ಹಸಿರು ಮೆಣಸಿನ ಕಾಯಿ. ಇವುಗಳಲ್ಲಿ ನಮ್ಮ ಆರೋಗ್ಯದ ದ್ರುಷ್ಟಿಯಿಂದ ನೋಡುವುದಾದರೆ ಯಾವುದು ಹೆಚ್ಚು ಉತ್ತಮ? ಸಾಮಾನ್ಯವಾಗಿ ಕಾರದ ಮಸಾಲೆಯುಕ್ತ ಅಡುಗೆಯಮನು ಇಷ್ಟ ಪಡುವವರಿಗೆ ಮೆಣಸಿನಕಾಯಿ ಇಲ್ಲದೇ ತಯಾರಿಸಿದ ಆಹಾರ ರುಚಿಸುವುದಿಲ್ಲ. ಇನ್ನೂ ಕೆಲವರು ರೊಟ್ಟಿ ಮತ್ತು ಚಪಾತಿಯ ಜೊತೆಗೆ ಈರುಳ್ಳಿ ಮತ್ತು ಮೆಣಸನ್ನು ಸೇವಿಸುತ್ತಾರೆ. ಮೆಣಸಿನಕಾಯಿ ಯಲ್ಲಿ ವಿಟಮಿನ್ ಎ, ಬಿ6, ಕಬ್ಬಿಣಾoಶ, ತಾಮ್ರ, ಪ್ರೊಟೀನ್, ಪೊಟ್ಯಾಶಿಯಂ, ಕಾರ್ಬೋಹೈಡ್ರೇಟ್ ಗಳಂತಹ ಹಲವಾರು ಪೋಷಕಾಂಶಗಳು ಇವೆ.
ಇನ್ನು ಮೆಣಸಿನಕಾಯಿಯನ್ನು ಆಹಾರದಲ್ಲೂ ರುಚಿಯನ್ನು ಹೆಚ್ಚಿಸಲು ಬಳಸಲಾಗುತ್ತದೆ. ಹಸಿರು ಮೆಣಸಿನ ಕಾಯಿ ತಿನ್ನುವುದರಿಂದ ಅನೇಕ ಆರೋಗ್ಯಕಾರಿ ಅಂಶಗಳನ್ನು ಹೆಚ್ಚಿಸಿಕೊಳ್ಳಬಹುದು ಎಂದು ಇತ್ತೀಚಿನ ಅನೇಕ ಸಂಶೋಧನೆಗಳು ಹೇಳುತ್ತವೆ.. ಒಣ ಮೆಣಸು ಮತ್ತು ಹಸಿರು ಮೆಣಸಿನ ಕಾಯಿಯಲ್ಲಿ ಬಣ್ಣ ಮತ್ತು ರುಚಿಯಲ್ಲಿ ಸ್ವಲ್ಪ ಮಟ್ಟಿಗೆ ಬದಲಾವಣೆ ಇರುತ್ತದೆ ಹೊರತಾಗಿ ಪೋಷಕಾಂಶಗಳು ಮತ್ತು ಆರೋಗ್ಯಕಾರಿ ಅಂಶಗಳಲ್ಲಿ ಹಸಿರು ಮೆಣಸಿನಕಾಯಿಗೂ ಮತ್ತು ಒಣ ಮೆಣಸಿನಕಾಯಿಗೂ ಯಾವುದೇ ವ್ಯತ್ಯಾಸಗಳೂ ಇಲ್ಲ. ಮೇ ಅಸಿನಕಾಯಿ ಒಣಗಿದಂತೆ ಅದರಲ್ಲಿ ಇರುವ ನೀರಿನ ಪ್ರಮಾಣ ಕಡಿಮೆ ಆಗುತ್ತದೆ ಅಷ್ಟೇ…. ಉಳಿದಂತೆ ಎಲ್ಲವೂ ಸರಿ ಸಮವೇ ಎಂದು ಹೇಳಬಹುದು. ಹಸಿರು ಮೆಣಸಿನ ಕಾಯಿ ಮತ್ತು ಕೆಂಪು ಮೆಣಸಿನ ಕಾಯಿ ಇವೆರಡೂ ಕೂಡಾ ನಮ್ಮ ಆರೋಗ್ಯಕ್ಕೆ ಪ್ರಯೋಜನ ಕಾರಿ ಆಗಿದೆ. ಹಾಗಿದ್ರೆ ಈ ಎರಡು ರೀತಿಯ ಮೆಣಸಿನ ಕಾಯಿಯನ್ನು ಸೇವಿಸುವುದರಿಂದ ನಮ್ಮ ಆರೋಗ್ಯಕ್ಕೆ ಸಿಗುವ ಲಾಭಗಳು ಏನು ಅನ್ನೋದನ್ನ ನೋಡೋಣ.
ಮೆಣಸಿನಕಾಯಿಗಳಲ್ಲಿ ಹಲವಾರು ಪೋಷಕಾಂಶಗಳು ಇರುವುದರಿಂದ ಇವುಗಳು ನಮ್ಮ ಆರೋಗ್ಯವನ್ನು ವೃದ್ಧಿಸಲು ಹಲವು ರೀತಿಯಲ್ಲಿ ಸಹಾಯವನ್ನು ಮಾಡುತ್ತದೆ. ಇವುಗಳಲ್ಲಿ ಹಲವು ಮುಖ್ಯ ಪ್ರಯೋಜನಗಳು ಎಂದರೆ, ತೂಕ ಇಳಿಸಲು ನೆರವಾಗುತ್ತದೆ. ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಕ್ಯಾನ್ಸರ್ ನಿಂದ ರಕ್ಷಣೆ ನೀಡುತ್ತದೆ. ಬೇಡದ ಕೊಬ್ಬನ್ನು ಕೂಡಾ ಕರಗಿಸಲು ಸಹಾಯವಾಗುತ್ತದೆ. ರಕ್ತದ ಒತ್ತಡವನ್ನು ನಿಯಂತ್ರಿಸಿ ರೋಗ ನಿರೋಧಕ ಶಕ್ತಿಯನ್ನು ಸಹ ಉತ್ತಮಗೊಳಿಸುತ್ತದೆ. ಹೃದಯ ನಾಳದ ಆರೋಗ್ಯವನ್ನು ಹೆಚ್ಚಿಸುತ್ತದೆ. ಮಿತವಾಗಿ ಸೇವಿಸಿದರೆ, ಜೀರ್ಣ ಕ್ರಿಯೆಗೂ ಮೆಣಸು ತುಂಬಾ ಒಳ್ಳೆಯದು.
ಇಷ್ಟೆಲ್ಲ ಪ್ರಯೋಜನ ಇರೋದಾದ್ರೆ ಯಾವ ಮೇಣಸು ನಮ್ಮ ಆರೋಗ್ಯಕ್ಕೆ ಒಳ್ಳೆಯದು ಅದು ಹಸಿರು ಮೆಣಸಿನ ಕಾಯಿ ನೋ ಅಥವಾ ಕೆಂಪು ಮೆಣಸಿನ ಕಾಯಿಯೋ ಅನ್ನೋದನ್ನ ನೋಡೋಣ. ಮೆಣಸು ಯಾವುದೇ ಆದರೂ ಕೂಡ ಇವೆರಡೂ ತಮ್ಮದೇ ಆದ ಆರೋಗ್ಯಕರ ಗುಣವನ್ನು ಹೊಂದಿರುತ್ತವೆ. ಆದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ವಿಪರೀತವಾಗಿ ಸೇವಿಸಿದರೆ ದೇಹಕ್ಕೆ ದುಷ್ಪರಿಣಾಮ ಬೀರುತ್ತದೆ. ಇದರಿಂದ ಅಲ್ಸರ್, ಹೊಟ್ಟೆಯಲ್ಲಿ ಹುಣ್ಣು, ಗ್ಯಾಸ್ಟ್ರಿಕ್ , ವಾಂತಿ , ಮಲಬದ್ಧತೆ ಮೊದಲಾದ ತೊಂದರೆಗಳು ಉಂಟಾಗುತ್ತವೆ. ಹಾಗಾಗಿ ಮಿತವಾಗಿ ಸೇವಿಸಿದರೆ ನಮ್ಮ ಆರೋಗ್ಯಕ್ಕೂ ಒಳ್ಳೆಯದು. ಅಷ್ಟೇ ಅಲ್ಲದೇ ಅತಿಯಾಗಿ ಕಾರವನ್ನು ಸೇವಿಸಿದಾಗ ತಪ್ಪದೆ ಮೊಸರು ಅಥವಾ ಹಾಲು ಕುಡಿಯಲು ಮರೆಯಬಾರದು. ಯಾವುದೇ ತರಕಾರಿ ಆದರೂ ಸಹ ಇದರಿಂದ ಹಲವಾರು ಲಾಭಗಳು ಇರುತ್ತವೆ. ಒಂದಲ್ಲ ಒಂದು ರೀತಿಯಲ್ಲಿ ತರಕಾರಿಗಳು ನಮ್ಮ ಆರೋಗ್ಯವನ್ನು ಕಾಪಾಡುತವೇ. ಚಿಕ್ಕ ಪುಟ್ಟ ರೋಗಗಳಿಂದ ನಮ್ಮ ದೇಹವನ್ನು ರಕ್ಷಿಸುತ್ತವೆ. ಹಾಗೆಯೇ ಮೆಣಸೂ ಕೂಡಾ…. ಮೆಣಸಿನ ಸೇವನೆ ಮಿತವಾಗಿ ಇದ್ದರೆ ಒಳ್ಳೆಯದು. ಅತಿಯಾದರೆ ಮತ್ತೆ ಹೊಸ ಆರೋಗ್ಯಕಾರಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಮೆಣಸಿನಕಾಯಿ ಬಳಕೆ ಮಾಡುವಾಗ ಈ ಕೆಲವು ತಪ್ಪುಗಳನ್ನು ಮಾಡಲೇಬಾರದು. ಅವುಗಳೆಂದರೆ, ಟೊಮೆಟೊ ಸಿಪ್ಪೆಯಂತೆ ಮೆಣಸಿನ ಸಿಪ್ಪೆಯೂ ದೃಢವಾಗಿ ಇರುತ್ತದೆ. ಹಾಗಾಗಿ ಇದು ಜೀರ್ಣ ಆಗದೆ ವಿಸರ್ಜಿಸಲ್ಪಡುತ್ತದೆ. ಈ ಪದರವೂ ಕಾರವೇ ಆಗಿರುವ ಕಾರಣ ಇದರ ಪ್ರಮಾಣ ಹೆಚ್ಚಾದರೆ, ಮಲ ವಿಸರ್ಜನೆ ಸಮಯದಲ್ಲಿ ಉರಿ ಕಾಣಿಸಿಕೊಳ್ಳುತ್ತದೆ. ಮೆಣಸಿನ ಬೀಜಗಳು ಅತಿಯಾಗಿ ಬೆಳೆದಿದ್ದರೆ ಅದನ್ನು ಸೇವಿಸಬಾರದು. ಇದರಿಂದಾಗಿ ಮೂತ್ರ ಪಿಂಡಗಳು ಮತ್ತು ಅಪೆಂಡಿಕ್ಸ್ ಗಳಲ್ಲಿ ಕಲ್ಲು ಬೆಳೆಯುವ ಸಾಧ್ಯತೆ ಇರುತ್ತದೆ. ಒಣ ಮೆಣಸನ್ನು ಮನೆಯಲ್ಲಿಯೇ ಆರಿಸಿ ಕುಟ್ಟಿ ಪುಡಿ ಮಾಡಿಸಿದರೆ ಒಳ್ಳೆಯದು. ಮಾರುಕಟ್ಟೆಯಲ್ಲಿ ಸಿಗುವ ಪ್ಯಾಕೆಟ್ ಪುಡಿಯಲ್ಲಿ ಕಲಬೆರಿಕೆ ಇರಬಹುದು. ಹಾಗಾಗಿ ಮನೆಯಲ್ಲಿಯೇ ತಯಾರಿಸಿದ ಮೆಣಸಿನ ಪುಡಿಯನ್ನು ಬಳಸುವುದು ಉತ್ತಮ. ಮೆಣಸು ಹಸಿ ಇದ್ದಾಗಲೂ ಖಾರ ಒಣಗಿದ್ದಾಗಲೂ ಖಾರ. ರುಚಿಗೆ ಹೋಲಿಸಿದರೆ ವ್ಯತ್ಯಾಸ ಇದೆಯೇ ಹೊರತು ಕಾರಕ್ಕೆ ಮಾರಣ ಆಗಿರುವ ಕ್ಯಾಪಿಸಯ್ಸಿನ್ ಅರೋಗ್ಯಕ್ಕೆ ಹಲವಾರು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ.