ಈಗಿನ ಕಾಲದಲ್ಲಿ ನಾವು ಸಾಮಾಜಿಕ ಜಾಲತಾಣಗಳಲ್ಲಿ ಎಷ್ಟೇ ಸುರಕ್ಷಿತವಾಗಿದ್ದರೂ ಸಾಲದು. ಕೆಲವೊಮ್ಮೆ ಒಂದಲ್ಲ ಒಂದು ರೀತಿಯಲ್ಲಿ ಏನಾದರೂ ಒಂದು ಅನಾಹುತ ಆಗುತ್ತಲೇ ಇರುತ್ತದೆ. ಹಾಗಾಗಿ ನಾವು ನಮ್ಮ ಸಾಮಾಜಿಕ ಜಾಲತಾಣಗಳನ್ನು ಆದಷ್ಟು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ವಾಟ್ಸಪ್ ಇದನ್ನ ನಾವು ನಮ್ಮ ಫೋನ್ ನಲ್ಲಿ ಮತ್ತಷ್ಟು ಸೇಫ್ ಹಾಗೂ ಸೆಕ್ಯೂರ್ ಆಗಿ ಹೇಗೆ ಇಟ್ಟುಕೊಳ್ಳಬಹುದು ಎನ್ನುವುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ನೀವು ನಿಮ್ಮ ಮೊಬೈಲ್ ನಲ್ಲಿ ವಾಟ್ಸಪ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡ ನಂತರ, ಒಂದು ಅಕೌಂಟ್ ಕ್ರಿಯೇಟ್ ಮಾಡಿಕೊಂಡು, ಇನ್ನೊಂದು ಫೋನ್ ನಲ್ಲಿ ನಿಮ್ಮ ಅಕೌಂಟ್ ಬಳಸಬೇಕು ಅಂತ ಇದ್ದರೆ, ಅಥವಾ ನಿಮ್ಮ ಫೋನಿನಲ್ಲಿ ನಿಮ್ಮ ವಾಟ್ಸಪ್ ಅನ್ನು ಅನ್ ಇನ್ಸ್ಟಾಲ್ ಮಾಡಿ ಮತ್ತೆ ಇನ್ಸ್ಟಾಲ್ ಮಾಡಬೇಕು ಅಂತ ಇದ್ದರೆ, ನಿಮಗೂ ವಾಟ್ಸಪ್ ಗೆ ಯಾವ ನಂಬರ್ ಕೊಟ್ಟಿರುತ್ತದೆ ಆ ನಂಬರ್ಗೆ ಒಂದು ಓಟಿಪಿ ಅಂದ್ರೆ ಒನ್ ಟೈಮ್ ಪಾಸ್ವರ್ಡ್ ಬರುತ್ತಿತ್ತು. ಒಟಿಪಿಯನ್ನು ನಾವು ಇಂಟರ್ ಮಾಡಬೇಕಿತ್ತು ಒಮ್ಮೆ ಎಂಟರ್ ಮಾಡಿದ ನಂತರ ನಮ್ಮ ವಾಟ್ಸಾಪ್ ಗೆ ಲಾಗಿನ್ ಆಗಬಹುದಿತ್ತು. ಕೆಲವೊಮ್ಮೆ ಹ್ಯಾಕರ್ಸ್ ವಾಟ್ಸಪ್ ಇನ್ಸ್ಟಾಲ್ ಮಾಡಿ ನಮ್ಮ ಮೊಬೈಲ್ ನಂಬರನ್ನು ಎಂಟರ್ ಮಾಡುವಾಗ ನಮ್ಮ ಮೊಬೈಲ್ ನಂಬರನ್ನು ಹ್ಯಾಕ್ ಮಾಡುವ ಸಾಧ್ಯತೆ ಇರುತ್ತಿತ್ತು. ಕಾಲ್ ಅಥವಾ ಮೆಸೇಜ್ ಮೂಲಕ ಬಂದ ಒಟಿಪಿ ಯನ್ನೂ ಹ್ಯಾಕರ್ಸ್ ಬಳಸಿಕೊಂಡು ಅವರ ಮೊಬೈಲ್ ನಲ್ಲಿ ಇನ್ಯಾರದ್ದೋ ನಂಬರ್ ನಿಂಡ ವಾಟ್ಸಪ್ ಬಳಸುತ್ತಾ ಇದ್ದರು. ಈ ರೀತಿಯ ಸಮಸ್ಯೆ ಬರದೇ ಇರುವ ಹಾಗೆ ವಾಟ್ಸಾಪ್ ನವರು ತಮ್ಮ ಸೆಕ್ಯೂರಿಟಿ ಯನ್ನು ಬಲಗೊಳಿಸಿದ್ದರು. ಅದೇನೆಂದರೆ two-step ವೆರಿಫಿಕೇಶನ್. ಇಟ್ಟು ಸ್ಟಿಕ್ ವೆರಿಫಿಕೇಶನ್ ಅನ್ನು ನಿಮ್ಮ ಮೊಬೈಲ್ನಲ್ಲಿ ನೀವು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು. ಇಟ್ಟು ಸ್ಟಿಕ್ ವೆರಿಫಿಕೇಶನ್ ಆಕ್ಟಿವೇಟ್ ಮಾಡಿಕೊಳ್ಳುವಾಗ 6 ಸಂಖ್ಯೆಯ ನಂಬರನ್ನು ಕೊಡಬೇಕಾಗುತ್ತದೆ. ಈ 6 ಸಂಖ್ಯೆ ನಂಬರನ್ನು ಪಾಸ್ವರ್ಡ್ ಎಂದು ಪರಿಗಣಿಸಲಾಗುತ್ತದೆ.
two-step ವೆರಿಫಿಕೇಶನ್ ಆದ ನಂತರ ಮತ್ತೆ ಇನ್ನೊಂದು ಓಟಿಪಿ ಬರುತ್ತದೆ ಅದನ್ನು ಬಳಸಿಕೊಂಡು ವಾಟ್ಸಪ್ ನಲ್ಲಿ ಲಾಗಿನ್ ಆಗಬೇಕಾಗುವುದು. ಹಾಗೆ ಆರು ಡಿಜಿಟ್ ನ ಪಾಸ್ವರ್ಡ್ ಅನ್ನು ಕೂಡ ಮತ್ತೆ ನೀಡಬೇಕಾಗುತ್ತದೆ. ಈ ರೀತಿ ಮಾಡುವುದರಿಂದ ನಿಮ್ಮ ಮೊಬೈಲ್ ಅಥವಾ ನಿನ್ನ ಸಿಮ್ಕಾರ್ಡ್ ಬೇರೆ ಯಾರಿಗಾದರೂ ಸಿಕ್ಕಿದ್ದರೆ ಅವರು ನಿಮ್ಮ ನಂಬರ್ ನಿಂದ ನಕಲಿ ಅಕೌಂಟ್ ಕ್ರಿಯೇಟ್ ಮಾಡಲು ಆಗುವುದಿಲ್ಲ. ನೀವು ಸೆಟ್ ಮಾಡಿರುವ 6-digit ನ ಪಾಸ್ವರ್ಡ್ ನಿಮ್ಮ ಹೊರತಾಗಿ ಇನ್ನೂ ಯಾರಿಗೂ ಗೊತ್ತಾಗಬಾರದು. ಈ ರೀತಿಯಾಗಿ two-step ವೆರಿಫಿಕೇಶನ್ ಮೂಲಕ ನೀವು ನಿಮ್ಮ ವಾಟ್ಸಪ್ ಅಕೌಂಟನ್ನು ಬೇರೆ ಯಾರು ಬಳಸಿಕೊಳ್ಳದ ಹಾಗೆ ಸೆಕ್ಯೂರ್ ಮಾಡಿಕೊಳ್ಳಬಹುದು. ವಾಟ್ಸಪ್ ಸೆಟ್ಟಿಂಗ್ಸ್ ಗೆ ಹೋಗಿ ಅಲ್ಲಿ two-step ವೆರಿಫಿಕೇಶನ್ ಮಾಡಿಕೊಳ್ಳುವ ಸೌಲಭ್ಯವಿರುತ್ತದೆ. 2-step ವೇರಿಫೈಕೇಶನ್ ಸರಿಯಾದ ರೀತಿಯಲ್ಲಿ ಆಹಾರ ನಂಬರನ್ನು ಪಾಸ್ವರ್ಡ್ ನೀಡಬೇಕು ಹಾಗೂ ನಮ್ಮ ಇಮೇಲ್ ಐಡಿಯನ್ನು ಕೂಡ ನೀಡಬೇಕು. ಈ ಮೂಲಕ ನಾವು ನಮ್ಮ ವಾಟ್ಸಪ್ ಅನ್ನು ಸೆಕ್ಯೂರ್ ಆಗಿಟ್ಟುಕೊಳ್ಳಬಹುದು.