peacock feather: ನವಿಲು ಒಂದು ಸುಂದರ ಪಕ್ಷಿ ಅದರ ಗರಿ ಮನೆಯೊಳಗಿಟ್ಟುಕೊಂಡರೆ ಏನೇನು ಉಪಯೋಗವಿದೆ ಎಂದು ನಾವು ಇದರಲ್ಲಿ ತಿಳಿದುಕೊಳ್ಳಬಹುದು. ಮಕ್ಕಳ ವಿದ್ಯಾಭ್ಯಾಸದಲ್ಲಿ (children’s education) ವೃದ್ಧಿ ಆಗಬೇಕೆಂದರೆ 5 ನವಿಲುಗರಿಯನ್ನು ಅವರು ಓದುವ ಟೇಬಲ್ (Reading Table) ಹತ್ತಿರ ಇಡುವುದರಿಂದ ಏಕಾಗ್ರತೆ ಹೆಚ್ಚುತ್ತದೆ ಮತ್ತು ಓದಲು ಆಸಕ್ತಿ ತೋರಿಸುತ್ತಾರೆ. ಗುರುವಾರದಂದು ನವಿಲುಗರಿಯನ್ನು ಮನೆಗೆ ತಂದು ಇಟ್ಟುಕೊಳ್ಳುವುದು ಒಳ್ಳೆಯದು ಮತ್ತು ನವಿಲುಗರಿ (peacock feather) ಎಂದರೆ ಸರಸ್ವತಿಗೆ ತುಂಬಾ ಇಷ್ಟ.
ಮಲಗುವ ಸಮಯದಲ್ಲಿ ತಲೆದಿಂಬಿನ ಅಡಿಯಲ್ಲಿ ನವಿಲುಗರಿಯನ್ನು ಇಟ್ಟುಕೊಳ್ಳುವುದರಿಂದ ಕೆಟ್ಟ ಕನಸು ಬೀಳುವುದಿಲ್ಲ. ಮಕ್ಕಳು ಮಲಗಿದಾಗ ಹೆದರುತ್ತೀದ್ದರೆ ಆಗ ನವಿಲುಗರಿಯನ್ನು ಇಟ್ಟುಕೊಂಡು ಮಲಗುವುದರಿಂದ ಭಯಪಡುವುದು ಕಡಿಮೆಯಾಗುತ್ತದೆ.
ಕೊಟ್ಟ ದುಡ್ಡು ಕೊಡದಿರುವಂತದ್ದು, ಆರ್ಥಿಕ ಸಮಸ್ಯೆ ಇದ್ದಂತವರು ದಕ್ಷಿಣ ದಿಕ್ಕಿನ ಗೋಡೆಯ ಮೇಲೆ ನವಿಲುಗರಿ ಇಡಬೇಕು. ಗಂಡ ಹೆಂಡತಿ ಮಧ್ಯ ಜಗಳ ನಡೆಯುತ್ತಿದ್ದರೆ ಎರಡು ನವಿಲುಗರಿಯಿಟ್ಟು ಪೂಜೆ ಮಾಡುವುದರಿಂದ ಜಗಳ ದೂರವಾಗುತ್ತದೆ. ನವಿಲುಗರಿಯನ್ನು ಮಲಗುವ ಕೋಣೆಯ ಪೂರ್ವ ದಿಕ್ಕಿಗೆ ಇಟ್ಟರೆ ತುಂಬಾ ಒಳ್ಳೆಯದು.
ನವಿಲುಗರಿ ಇಟ್ಟುಕೊಳ್ಳುವುದರಿಂದ ಸುಖ, ಶಾಂತಿ, ನೆಮ್ಮದಿ, ಸಮೃದ್ಧಿ, ಸುಖ ಅಭಿವೃದ್ಧಿಯಾಗುತ್ತದೆ ಮತ್ತು ಕಷ್ಟಗಳು ಕಮ್ಮಿಯಾಗಿ ಲಕ್ಷ್ಮಿ ಅನುಗ್ರಹ ಹೆಚ್ಚಾಗುತ್ತದೆ. ನವಿಲುಗರಿಯಿಂದಾಗಿ ಮನೆಯ ವಾಸ್ತುದೋಷ ನಿವಾರಣೆ ಆಗುತ್ತದೆ ಮತ್ತು ನವಿಲುಗರಿಯಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಯಾವುದೇ ಕೆಟ್ಟ ದೃಷ್ಟಿ ಮನೆಯ ಮೇಲೆ ಬೀಳುವುದಿಲ್ಲ.
ಇದನ್ನೂ ಓದಿ..Viral News: ಮಗಳನ್ನು ಹೂವಿನಂತೆ ಸಾಕಿ ಮದುವೆ ಮಾಡಿಕೊಟ್ಟಿದ್ದ ತಂದೆ, ನಂತರ ಆಗಿದ್ದೆ ಬೇರೆ.
ವ್ಯವಹಾರದಲ್ಲಿ ನಷ್ಟ ಉಂಟಾದರೆ ಈಶಾನ್ಯ ದಿಕ್ಕಿನಲ್ಲಿ ನಾಲ್ಕು ನವಿಲುಗರಿ ಇಡಬೇಕು ಆಗ ವ್ಯವಹಾರದಲ್ಲಿ ಆಗುವ ನಷ್ಟಗಳು ದೂರವಾಗುತ್ತದೆ. ಹಣದ ಅರಿವು ಹೆಚ್ಚಾಗಬೇಕೆಂದರೆ ಕೃಷ್ಣ ದೇವಸ್ಥಾನಕ್ಕೆ ಹೋಗಿ ನವಿಲುಗರಿ ಕೊಟ್ಟು ಪೂಜೆ ಮಾಡಿಸಬೇಕು. ನವಿಲುಗರಿ ತುಂಬಾ ಉಪಯೋಗಕಾರಿ, ಅದರ ಮಹತ್ವವನ್ನು ತಿಳಿದುಕೊಂಡು ಬಳಸುವುದರಿಂದ ಒಳ್ಳೆಯದಾಗುತ್ತದೆ.