ಕಸದಿಂದ ರಸ ಅನ್ನುವ ಗಾದೆ ಮಾತೊಂದಿದೆ. ಅದಕ್ಕೆ ಅತ್ತ್ಯುತ್ತಮ ಉದಾಹರಣೆಯನ್ನು ನಾವು ಇಲ್ಲಿ ನೋಡಬಹುದು. ನಾವು ಎಷ್ಟೋ ಬಾರಿ ಇವು ಕೆಲಸಕ್ಕೆ ಬರಲ್ಲ ಎಂಬ ಕಾರಣಕ್ಕೆ ವಸ್ತುಗಳನ್ನ ಬಿಸಾಡುವುದು ಸಹಜ. ಆದರೆ ಯಾವುದನ್ನೂ ಕೀಳಾಗಿ ನೋಡಬಾರದು ಎಂಬುದಕ್ಕೆ ಇಲ್ಲೊಂದು ನೈಜ ನಿದರ್ಶನವಿದೆ. ಅನೇಕ ಬಾರಿ ನಾವು ವೇಸ್ಟ್ ಅಂತ ಬಿಸಾಡುವ ವಸ್ತುಗಳೇ ನಮ್ಮ ಜೀವನದ ಬದಲಾವಣೆಗೆ ಕಾರಣವಾಗುತ್ತವೆ ಎಂಬುದನ್ನ ಒಂದು ಕ್ಷಣ ಕೂಡ ಯೋಚನೆ ಮಾಡುವುದಿಲ್ಲ.

ಅಂತದ್ದೇ ಒಂದು ನಾವೆಲ್ಲಾ ಬೆರುಗಾಗಿ ಅಚ್ಚರಿ ಪಡುವಂತಹ ಒಂದು ಘಟನೆ ನಡೆದಿದೆ. ವೆಸ್ಟ್ ಎಂದು ಬಿಸಾಡಿದ ಒಂದು ಮೊಬೈಲ್ ಕವರ್ ಗೆ ಬರೋಬ್ಬರಿ ಒಂದು ಕೋಟಿ ಮೇಲೆ ಹಣ ಸಿಗುತ್ತೆ ಅಂತ ಕನಸಿನಲ್ಲಿಯೂ ಕೂಡ ಯೋಚನೆ ಮಾಡಿರಕ್ಕೆ ಸಾಧ್ಯವಿಲ್ಲ. ಹಾಗಾದ್ರೆ ಆ ಮೊಬೈಲ್ ಕವರ್ ನಲ್ಲಿ ಅಂತದ್ದೇನಿತ್ತು? ಎಂಬ ಪ್ರಶ್ನೆ ಎಲ್ಲರಿಗೂ ಸಹಜವಾಗಿ ಕಾಡುವುದು.

ಜರ್ಮನ್ ಮೂಲದವಳಾದ ಬಿಯಾಂಕ ಎನ್ನೋ ೨೭ ವರ್ಷದ ಯುವತಿಯೊಬ್ಬಳು ನೀರಿನಲ್ಲಿ ನಿಂತು ಸೆಲ್ಫಿ ಫೋಟೋಗೆ ಪೋಸ್ ಕೊಡುತ್ತಿದ್ದಳು. ಇದೆ ವೇಳೆ ಆಕಸ್ಮಿಕವಾಗಿ ಮೊಬೈಲ್ ನೀರಿನಲ್ಲಿ ಬಿದ್ದು ಹೋಗಿದ್ದು ಅದರ ಮೊಬೈಲ್ ಕವರ್ ಮತ್ತೆ ಉಪಯೋಗಕ್ಕೆ ಬಾರದಷ್ಟು ಹಾಳಾಗಿತ್ತು. ಇನ್ನು ವೆಸ್ಟ್ ಆಗಿರುವ ಮೊಬೈಲ್ ಕವರ್ ನ್ನ ಬಿಸಾಡಬೇಕೆಂದು ಮನೆಯ ಒಂದು ಭಾಗದಲ್ಲಿಡುತ್ತಾಳೆ. ಬಳಿಕ ತನ್ನ ಮೊಬೈಲ್ ಗೆ ಹೊಸ ಮೊಬೈಲ್ ಕವರ್ ನ್ನ ತೆಗೆದುಕೊಂಡ ಬಿಯಾಂಕಾ ವೆಸ್ಟ್ ಆದ ಮೊಬೈಲ್ ಕವರನ್ನು ಬಿಸಾಡುವುದನ್ನ ಮರೆತುಹೋಗಿರುತ್ತಾಳೆ. ಅದು ಆ ಯುವತಿ ಇಟ್ಟ ಸ್ಥಳದಲ್ಲಿಯೇ ಬಿದ್ದಿರುತ್ತದೆ. ಇನ್ನು ಮೂರ್ನಾಲ್ಕು ತಿಂಗಳು ಕಳೆದ ಬಳಿಕ ತಾನಿಟ್ಟ ಮೊಬೈಲ್ ಕವರ್ ಬಿಯಾಂಕ ಅವರ ಕಣ್ಣಿಗೆ ಬೀಳುತ್ತದೆ. ಅದನ್ನ ಬಿಸಾಕೋಣ ಎಂದು ಕೈಗೆ ಎತ್ತಿಕೊಂಡ ಬಿಯಾಂಕಾ ಆ ಮೊಬೈಲ್ ಕವರ್ ಮೇಲೆ ವಿಚಿತ್ರವಾದ ಡಿಸೈನ್ ಮೂಡಿರುವುದನ್ನ ಗಮನಿಸುತ್ತಾಳೆ.

ಇದು ಏನೋ ಒಂತರ ವಿಚಿತ್ರವಾಗಿದೆಯೆಲ್ಲಾ ಎಂದು ಬಿಯಾಂಕಾ ಅದರ ಫೋಟೋ ಕ್ಲಿಕ್ ಮಾಡಿ ಇ ಬೇ ನಲ್ಲಿ ಪೋಸ್ಟ್ ಮಾಡುತ್ತಾಳೆ. ಆದರೆ ಅಚ್ಚರಿ ವಿಚಿತ್ರ ನಂಬಲಾರದ ಸಂಗತಿ ಏನೆಂದರೆ ಫೋಟೋ ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಬಹುತೇಕರು ಅದನ್ನ ಖರೀದಿಸುವುದಾಗಿ ಮುಂದೆ ಬರುತ್ತಾರೆ. ಇನ್ನು ನಂಬಲಾರದ ಅಚ್ಚರಿ ಸಂಗತಿ ಏನೆಂದರೆ ವ್ಯಕ್ತಿಯೊಬ್ಬ ಅದನ್ನ ಖರೀದಿ ಮಾಡುವ ಸಲುವಾಗಿ ಬರೋಬ್ಬರಿ 1,19,23,000 ಕ್ಕೆ ಬಿಟ್ ಮಾಡುತ್ತಾನೆ. ಆದರೆ ಏನಾಗುತ್ತಿದೆ ಎಂಬುದನ್ನ ನೋಡಿದ ಯುವತಿ ಬಿಯಾಂಕಗೆ ಅಲ್ಲಿದ್ದ ಬಿಟ್ ನೋಡಿ ನಂಬಿಕೆನೇ ಬರೋದಿಲ್ಲ. ಸತ್ಯ ಎಂದು ಗೊತ್ತಾದ ಮೇಲೆ ಎಂತಹವರಿಗೆ ಆದರೂ ಆ ಸಮಯಕ್ಕೆ ಕುಣಿದು ಕುಪ್ಪಳಿಸಬೇಕು ಎಂದೆನಿಸುತ್ತದೆ. ಅದೇ ರೀತಿ ಬಿಯಾಂಕಗೂ ಕೂಡ ಆಯಿತು. ಬಳಿಕ ಒಂದು ದೊಡ್ಡ ನಿರ್ಧಾರ ಮಾಡಿ ಆ ಬಿಟ್ ನ್ನ ಒಪ್ಪಿಕೊಂಡ ಬಿಯಾಂಕಾ ಅದರಿಂದ ಬರುವ ಹಣವನ್ನ ಸಮಾಜ ಸೇವೆಗೆ ಮುಡಿಪಿಡಬೇಕು ಎಂಬ ತೀರ್ಮಾನಕ್ಕೆ ಬರುತ್ತಾಳೆ.

ಇದೆ ರೀತಿ ಘಟನೆಯೊಂದು ಕೆಲ ದಿನಗಳ ಹಿಂದಷ್ಟೇ ನ್ಯೂಜಿಲ್ಯಾಂಡ್ ನಲ್ಲಿ ನಡೆದಿದ್ದು ಅಲ್ಲಿನ ವ್ಯಕ್ತಿಯೊಬ್ಬ ತನ್ನ ಮನೆಯಲ್ಲಿದ್ದ ವಿಚಿತ್ರ ಗಿಡವೊಂದನ್ನ ಪೋಸ್ಟ್ ಮಾಡಿದ್ದ ಆ ವ್ಯಕ್ತಿ ೪ ಲಕ್ಷಕ್ಕಿಂತಲೂ ಹೆಚ್ಚು ಹಣವನ್ನ ಗಳಿಸುತ್ತಾನೆ. ಅದಕ್ಕೆ ಹೇಳೋದು ಯಾವುದೇ ವಸ್ತುವನ್ನ ವೆಸ್ಟ್ ಅಂತ ನೋಡಬಾರದು. ಯಾವುದೇ ವಸ್ತುಗಳು ನಮಗೆ ವಿಚಿತ್ರ ಹಾಗೂ ವಿಭಿನ್ನವಾಗಿ ಕಂಡರೆ ಅದರ ಫೋಟೋವೊಂದನ್ನ ಕ್ಲಿಕ್ ಮಾಡಿ ಈ ಜಗತ್ತಿನ ಮುಂದೆ ಇಡಿ. ಯಾರಿಗೆ ಗೊತ್ತು ಆ ವಸ್ತು ನಿಮ್ಮ ಜೀವನದ ಬದಲಾವಣೆಗೆ ಕಾರಣವಾಗಬಹುದು. ಒಟ್ಟಿನಲ್ಲಿ ವೆಸ್ಟ್ ಎಂದು ಬಿಸಾಡಬೇಕಿದ್ದ ವಸ್ತುವಿನಿಂದ ಬಂದ ಒಂದು ಕೋಟೀಗಿಂತಲೂ ಹೆಚ್ಚು ಹಣವನ್ನ ಬಿಯಾಂಕಾ ತನ್ನ ಜೀವನಕ್ಕೆ ಉಪಯೋಗಿಸಿ ಮಜಾ ಮಾಡಬಹುದಿತ್ತು. ಆದರೆ ಅದನ್ನ ಸಮಾಜ ಸೇವೆಗೆ ಉಪಯೋಗಿಸಿದ ಬಿಯಾಂಕಾ ಅವರಿಗೆ ಒಂದು ಮೆಚ್ಚುಗೆಯನ್ನು ಸಲ್ಲಿಸಲೇಬೇಕು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!