ತೂಕ ಹೆಚ್ಚಳ ಈಗಿನ ಕಾಲದವರಲ್ಲಿ ಕಾಡುವ ಅತೀ ದೊಡ್ಡ ಸಮಸ್ಯೆ ಎಂದರೆ ತಪ್ಪಾಗಲಾರದು. ಮೊದಲೇ ದಪ್ಪ ಇರುವವರಿಗೆ ಈಗಂತೂ ಲಾಕ್ ಡೌನ್ ಇದ್ದ ಕಾರಣ ಮನೆಯಲ್ಲಿಯೇ ಇದ್ದು ಇದ್ದು ಮತ್ತಷ್ಟು ದಪ್ಪ ಆಗುವ ಭಯ ಇದ್ದೆ ಇರತ್ತೆ. ತೂಕ ಹೆಚ್ಚು ಆಗೋದು ದೊಡ್ಡ ವಿಷಯ ಅಲ್ಲ , ತೂಕ ಇಳಿಸಿಕೊಳ್ಳೋದು ದೊಡ್ಡ ವಿಷಯ ಅಲ್ಲ ಆದರೆ ತುಕವನ್ನ ಇಳಿಸಿಕೊಂಡ ನಂತರ ಅದನ್ನೇ ಮೆಂಟೈನ್ ಮಾಡೋದು ತುಂಬಾ ಕಷ್ಟ. ಕೆಲವು ಜನರು ತೂಕ ಇಳಿಸೋಕೆ ಅಂತ ಯಾವ ಯಾವುದೋ ಬೆಲ್ಟ್ , ಮಾತ್ರೆಗಳನ್ನು ಸಹ ತೆಗೆದುಕೊಂಡಿರುತ್ತಾರೆ. ಇವುಗಳಿಂದ ತೂಕ ಇಳಿಕೆ ಆದರೂ ಸಹ ಅದು ಶಾಶ್ವತ ಅಲ್ಲ ಕ್ಷಣಿಕ ಮಾತ್ರ. ಹಾಗಾಗಿ ಯಾವುದೆ ಪ್ರಾಡೆಕ್ಟ್ಸ್ ಗಳ ಬಳಕೆ ಮಾಡದೆ ಮತ್ತೆ ತೂಕ ಕೂಡ ಹೆಚ್ಚು ಆಗದಂತೆ ನೈಸರ್ಗಿಕವಾಗಿ 5 – 6 ಕೆಜಿ ತೂಕ ಇಳಿಕೆ ಮಾಡಿಕೊಳ್ಳುವುದು ಹೇಗೆ ಅನ್ನೋದನ್ನ ತಿಳಿದುಕೊಳ್ಳೋಣ.
ನಮ್ಮ ತೂಕ ಇಳಿಯಬೇಕು ಅಂದರೆ ನಮಗೆ ಅವಶ್ಯ ಇರುವಷ್ಟು ಮಾತ್ರ ಪೋಷಕಾಂಶಗಳು ಇರುವಂತಹ ಆಹಾರ ಸರ್ವನೆ ಮಾಡಬೇಕು. ಅದರ ಜೊತೆಗೆ 30 ರಿನ 45 ನಿಮಿಷಗಳ ಕಾಲ ವ್ಯಾಯಾಮದ ಅವಶ್ಯಕತೆ ಕೂಡಾ ಇರುತ್ತದೆ. ತೂಕ ಇಳಿಸಿಕೊಳ್ಳೋಕೆ ಮೊದಲು ನಮ್ಮ ಮನಸಲ್ಲಿ ನಾವು ತೂಕ ಇಳಿಸಿಕೊಳ್ಳಲೇ ಬೇಕು ಅನ್ನೋ ಛಲ ಹಾಗೂ ಧೃಢ ಸಂಕಲ್ಪ ಇಲ್ಲದೆ ನಾವು ತೂಕ ಇಳಿಸಿಕೊಳ್ಳೋಕೆ ಆಗಲ್ಲ. ಇದಿಲ್ಲದೆ ಹೋದರೆ ಒಂದೆರಡು ದಿನ ವ್ಯಾಯಾಮ ಮಾಡುವುದು ಮತ್ತೆ ನಾಲ್ಕು ದಿನ ಬಿಡೋದು ಮಾಡ್ತೀವಿ ಹಾಗಿದ್ದಾಗ ತೂಕ ಇಳಿಕೆ ಆಗೋಕೆ ಸಾಧ್ಯವೇ ಇಲ್ಲ. ಹಾಗಾಗಿ ಪಾಸಿಟಿವ್ ಆಗಿ ಯೋಚನೆ ಮಾಡಬೇಕು. ತೂಕ ಇಳಿಸಿಕೊಳ್ಳೋಕೆ ಮುಖ್ಯವಾಗಿ ಹೆಚ್ಚು ಹೆಚ್ಚು ನೀರನ್ನು ಕುಡಿಯುವುದು ಸಹ ಮುಖ್ಯವಾಗಿ ಇರುತ್ತದೆ. ತೂಕ ಇಳಿಸೋಕೆ ಏನ್ ಮಾಡಬೇಕು ಅನ್ನೋ ಸೀಕ್ರೆಟ್ ಟಿಪ್ಸ್ ತಿಳಿಯಲು ಈ ಕೆಳಗಿನ ವಿಡಿಯೋ ನೋಡಿ.