ಕೃಷಿ ಕೆಲಸ ಈಗ ಸವಾಲಿನದ್ದು. ಎಲ್ಲ ಸೌಲಭ್ಯಗಳಿದ್ದರೂ, ಕೃಷಿ ಕೆಲಸಗಾರರೇ ಸಿಕ್ಕುವುದಿಲ್ಲ. ಉಳುಮೆ ಮತ್ತು ಕಳೆ ತೆಗೆಯುವ ಕೆಲಸಕ್ಕಿಂತ ನಗರದ ಕೆಲಸಗಳೇ ಹೆಚ್ಚು ಆದಾಯ ತರುತ್ತವೆಂದು ಅನೇಕರು ಕೃಷಿ ಕೆಲಸಗಳನ್ನು ಕೈಬಿಟ್ಟು, ನಗರ ಸೇರಿದ್ದಾರೆ. ಆದರೆ ಕೃಷಿಯನ್ನೇ ನಂಬಿಕೊಂಡವರು ಸುಮ್ಮನಿರುವಂತಿಲ್ಲವಲ್ಲ. ಪರ್ಯಾಯಗಳನ್ನು ಹುಡುಕಿಕೊಳ್ಳಲೇಬೇಕು. ಅಂಥ ಪ್ರಯತ್ನಗಳು ನಮ್ಮ ಸುತ್ತಲೂ ನಡೆಯುತ್ತಿವೆ. ಇದೇ ರೀತಿ ರೈತರೊಬ್ಬರು ಅತೀ ಹೆಚ್ಚು ಹಣವನ್ನೂ ವ್ಯಯ ಮಾಡದೇ ತಾವೇ ಸ್ವತಃ ಕಳೆ ಕೀಳುವ ಸಾಧನವನ್ನು ತಯಾರಿಸಿದ್ದಾರೆ. ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಹೊಲಗಳಲ್ಲಿ ಕಳೆ ತೆಗೆಯಲು ಬಹಳ ತ್ರಾಸದಾಯಕ ಕೆಲಸ. ಅದರಲ್ಲೂ ಮಳೆಗಾಲ ಆರಂಭ ಆಯಿತು ಎಂದರೆ ಕಳೆಗಳು ಹೆಚ್ಚಾಗಿ ಹುಟ್ಟಿಕೊಳ್ಳುತ್ತವೆ. ಒಬ್ಬರೇ ಕುಳಿತು ಕಳೆ ತೆಗೆಯಲು ಸಾಧ್ಯವಿಲ್ಲ ಹೊಲ ಗದ್ದೆಗಳಲ್ಲಿ ಬೆಳೆದ ಕಳೆಗಳನ್ನು ತೆಗೆಯದೆ ಹಾಗೇ ಬಿಟ್ಟರೆ ಬೆಳೆಗಳಿಗೆ ಹಾನಿ. ಬೇಡವಾದ ಸಸ್ಯಗಳು , ಬಳ್ಳಿಗಳು ಕಂಡಕಂಡಲ್ಲಿ ಹುಟ್ಟಿಕೊಂಡು ಮುಖ್ಯವಾಗಿ ನಾವು ಬೆಳೆದ ಬೆಳೆಗಳಿಗೆ ಹಾನಿಯುಂಟು ಮಾಡುತ್ತದೆ. ಹಾಗಾಗಿ ಈ ಕಳೆಗಳನ್ನು ತೆಗೆಯಲೇ ಬೇಕು. ಹಾಗಂತ ಎಲ್ಲಾ ರೈತರಿಗೂ ಕೆಲಸಗಾರರಿಗೆ ಹಣ ಕೊಟ್ಟು ಕಳೆ ತೆಗಿಸಲು ಸಾಧ್ಯವಿಲ್ಲ. ಅಂತಹ ರೈತರಿಗೆ ಸಹಾಯವಾಗುವುದು ಈ ಒಂದು ಕಳೆ ಕೀಳುವ ಸಾಧನ. ಈ ಕಳೆ ಕೀಳುವ ಸಾಧನವನ್ನು ತಯಾರಿಸಿದವರು ರಂಗ ಕಸ್ತೂರಿ ಎಂಬ ರೈತರು. ಇದನ್ನು ಇವರು ಅತೀ ಕಡಿಮೆ ಖರ್ಚಿನಲ್ಲಿ ಸುಲಭವಾಗಿ ಕಳೆ ಕೀಳುವ ಸಾಧನವನ್ನು ತಯಾರಿಸಿದ್ದಾರೆ. ಇದರಿಂದ ಸಾಕಷ್ಟು ರೈತರಿಗೂ ಸಹಾಯ ಆಗಬಲ್ಲದು. ರಂಗು ಕಸ್ತೂರಿ ಅವರು ಈ ಸಾಧನವನ್ನು ಹೇಗೆ ತಯಾರಿಸಿದ್ದಾರೆ? ಅದರ ಬಳಕೆ ಮಾಡುವುದು ಹೇಗೆ ಎನ್ನುವುದನ್ನು ನೋಡೋಣ.
ಈ ಕಳೆ ಕೀಳುವ ಸಾಧನದಿಂದ ಇಬ್ಬರು ಮಾಡುವ ಕೆಲಸವನ್ನು ಒಬ್ಬರೇ ಮಾಡಬಹುದು. ಇದೇ ಕಳೆ ಕೀಳುವ ಸಾಧನವನ್ನು ನಾವು ಆನ್ಲೈನ್ ನಲ್ಲಿ ಅಥವಾ ಮಾರ್ಕೆಟ್ ನಲ್ಲಿಯೇ ಖರೀದಿ ಮಾಡುತ್ತೇವೆ ಎಂದರೆ ನಾವು ಅದಕ್ಕೆ ಸಾವಿರ ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಅದರ ಬದಲು ನಾವೇ ಮನೆಯಲ್ಲಿ ಹೀಗೆ ಮಾಡಿಕೊಂಡು ಬಳಸಿದರೆ ಖರ್ಚು ಕಡಿಮೆ. ಈ ಸಾಧನವನ್ನು ತಯಾರಿಸಲು ಅತೀ ಹೆಚ್ಚು ಖರ್ಚು ಬೀಳುವುದಿಲ್ಲ. ಏಳರಿಂದ ಎಂಟು ಇಂಚಿನ ಬ್ಲೇಡ್ ಅಥವಾ ಯಾವುದೇ ಕಬ್ಬಿಣದ ಪಟ್ಟಿ ತೆಗೆದುಕೊಂಡು ಅದಕ್ಕೆ ಯು ‘U’ ಆಕಾರದಲ್ಲಿ ಕಬ್ಬಿಣದ ರಾಡ್ ನಿಂಡ ವೆಲ್ಡ್ ಮಾಡಿ ಪೈಪ್ ಗೆ ಸೇರಿಸಿಕೊಳ್ಳಬೇಕು. ಇದನ್ನ ಗಿಡಗಳ ಸುತ್ತಲೂ ಇರುವ ಕಳೆಗಳನ್ನು ತೆಗೆಯಲು ಬಳಸಬಹುದು ಹಾಗೂ ಇದು ಬಹಳ ಸುಲಭ ಕೂಡಾ ಹೌದೂ. ಇದರಿಂದ ಕಳೆ ತೆಗೆಯುವಾಗ ಗಿಡಗಳಿಗೆ ಯಾವುದೇ ರೀತಿಯ ಹಾನಿ ಉಂಟಾಗುವುದಿಲ್ಲ ಹಾಗೂ ಮಣ್ಣು ಕೂಡಾ ಅಷ್ಟಾಗಿ ಸರಿಯುವುದಿಲ್ಲ. ಇನ್ನೂ ಕೆಲವು ಚಿಕ್ಕ ಚಿಕ್ಕ ಬೇಡವಾದ ಸಸ್ಯಗಳು ಇದ್ದರೆ ಅದನ್ನೂ ಸಹ ಬೇರು ಸಮೇತ ಕಿತ್ತು ಹಾಕಬಹುದು ಹಾಗೇ ಸ್ವಲ್ಪ ಪ್ರೆಶರ್ ಬಳಸಿ ದೊಡ್ಡ ದೊಡ್ಡ ಸಸ್ಯಗಳನ್ನೂ ಸಹ ಕೇಳಬಹುದು. ಆರಂಭದಲ್ಲಿ ಒಂದೆರಡು ಬಾರಿ ಕೆಲಸ ನಿಧಾನಾವಾಗಿ ಆದಹಾಗೆ ಎನಿಸಿದರೂ ನಂತರ ರೂಢಿಯಾಗಿ ಕೆಲಸ ವೇಗವಾಗಿ ಆಗುತ್ತದೆ. ಹೀಗೇ ಗಿಡಗಳ ಸುತ್ತ ಇರುವ ಬೇಡವಾದ ಕಳೆಗಳನ್ನು ತೆಗೆದು ಹಾಕುವುದರಿಂದ ಗಿಡಗಳಿಗೆ ಮಣ್ಣಿನಲ್ಲಿ ಇರುವ ಹೆಚ್ಚಿನ ಪೋಷಕಾಂಶ ದೊರೆಯುತ್ತದೆ. ಈ ರೀತಿಯಾಗಿ ತೋಟ ಗದ್ದೆಗಳಲ್ಲಿ ಇಬ್ಬರು ಮಾಡುವ ಕೆಲಸವನ್ನು ಕಳೆ ಕೇಳುವ ಈ ಸಾಧನದಿಂದ ಒಬ್ಬರೇ ಮಾಡಬಹುದು.