ರಾಶಿಗಳಲ್ಲಿ ಪ್ರತಿ ತಿಂಗಳು ಗ್ರಹ ಸ್ಥಿತಿ ಬದಲಾವಣೆ ಕಂಡುಬರುತ್ತದೆ. ದ್ವಾದಶ ರಾಶಿಗಳಲ್ಲಿ ಒಂದು ಪ್ರಮುಖ ರಾಶಿಯಾದ ವೃಶ್ಚಿಕ ರಾಶಿಯವರ ಮಾರ್ಚ್ ತಿಂಗಳಿನಲ್ಲಿ ಭವಿಷ್ಯ ಹೇಗಿದೆ, ಉದ್ಯೋಗ, ವಿವಾಹ, ಆರೋಗ್ಯ ಮೊದಲಾದ ವಿಷಯದಲ್ಲಿ ಭವಿಷ್ಯ ಹೇಗಿದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ವೃಶ್ಚಿಕ ರಾಶಿಯವರಿಗೆ ಮಾರ್ಚ್ ತಿಂಗಳಿನಲ್ಲಿ ವಿವಿಧ ಕ್ಷೇತ್ರದಲ್ಲಿ ಅನುಕೂಲಕರ ಶ್ರೇಯಸ್ಸು ಸಿಗಲಿದೆ. ವೃತ್ತಿಜೀವನದ ವಿಷಯದಲ್ಲಿ ಮಾರ್ಚ್ ತಿಂಗಳಿನಲ್ಲಿ ವೃಶ್ಚಿಕ ರಾಶಿಯವರಿಗೆ ಉತ್ತಮ ಸಮಯ ಅದರಲ್ಲೂ ಖಾಸಗಿ ವಲಯದಲ್ಲಿ ಕೆಲಸ ಮಾಡುತ್ತಿರುವವರಿಗೆ ಇದು ಉತ್ತಮ ಸಮಯವಾಗಿದೆ. ಕಚೇರಿಯಲ್ಲಿ ಈ ರಾಶಿಯವರು ಕೆಲಸದಿಂದ ಗುರುತಿಸಿಕೊಳ್ಳುತ್ತಾರೆ, ಹೆಚ್ಚಿನ ಜವಾಬ್ದಾರಿಯನ್ನು ಪಡೆಯುತ್ತಾರೆ. ಈ ರಾಶಿಯವರಿಗೆ ಹಿರಿಯ ಅಧಿಕಾರಿಗಳು ನಂಬಿಕೆ ಇಟ್ಟು ಪ್ರಗತಿಗೆ ದಾರಿ ಮಾಡಿಕೊಡುತ್ತಾರೆ.

ಮಾರ್ಚ್ ತಿಂಗಳಿನಲ್ಲಿ ವೃಶ್ಚಿಕ ರಾಶಿಯವರು ಅಧ್ಯಯನ ಹಾಗೂ ಶಿಸ್ತಿಗೆ ಮಹತ್ವ ಕೊಡುತ್ತಾರೆ ಅಲ್ಲದೆ ಹೆಚ್ಚಿನ ಸಮಯ ಅಧ್ಯಯನಕ್ಕೆ ಮೀಸಲಿಡಲು ಸಾಧ್ಯವಾಗುತ್ತದೆ. ಮಾರ್ಚ್ ತಿಂಗಳಿನಲ್ಲಿ ವೃಶ್ಚಿಕ ರಾಶಿಯವರ ಕುಟುಂಬದಲ್ಲಿ ಬಹಳ ಹಿಂದಿನಿಂದ ಇದ್ದ ವೈಮನಸ್ಸು ದೂರವಾಗುತ್ತದೆ. ಮನೆಯ ಸದಸ್ಯರಲ್ಲಿ ಪರಸ್ಪರ ನಂಬಿಕೆ ಬೆಳೆಯುತ್ತದೆ, ಎಲ್ಲರನ್ನು ಒಟ್ಟಿಗೆ ಸೇರಿಸುವಲ್ಲಿ ಈ ರಾಶಿಯವರ ಪಾತ್ರ ಉತ್ತಮವಾಗಿರುತ್ತದೆ ಆದ್ದರಿಂದ ಮೆಚ್ಚುಗೆಗೆ ಪಾತ್ರರಾಗುತ್ತಾರೆ. ಕುಟುಂಬದ ಹಿರಿಯರ ಆರೋಗ್ಯದ ಬಗ್ಗೆ ಒಳ್ಳೆಯ ಸುದ್ದಿಯನ್ನು ಪಡೆಯುತ್ತಾರೆ. ಮಾರ್ಚ್ ತಿಂಗಳ ಆರಂಭದಲ್ಲಿ ಒಡಹುಟ್ಟಿದವರಿಂದ ಬೆಂಬಲ ಪಡೆಯುತ್ತಾರೆ ಹಾಗೂ ಸಂಬಂಧದಲ್ಲಿ ಧನಾತ್ಮಕತೆ ಕಂಡುಬರುತ್ತದೆ.

ಈ ತಿಂಗಳಿನಲ್ಲಿ ವೃಶ್ಚಿಕ ರಾಶಿಯವರ ಪ್ರೀತಿ ಬಲವಾಗಿ ಬೆಳೆಯುತ್ತದೆ ಹಾಗು ಒಬ್ಬರ ಮೇಲೊಬ್ಬರು ನಂಬಿಕೆಯನ್ನು ಇಡುತ್ತಾರೆ. ವೃಶ್ಚಿಕ ರಾಶಿಯವರು ಹೊಸ ಪ್ರೀತಿಯನ್ನು ಬಯಸುತ್ತಿದ್ದರೆ ಅವರಿಗೆ ಉತ್ತಮ ಸಮಯವಾಗಿದೆ. ಒಟ್ಟಿಗೆ ಇರಲು ಸಾಕಷ್ಟು ಅವಕಾಶಗಳು ಸಿಗುತ್ತದೆ ಆದರೆ ವೃಶ್ಚಿಕ ರಾಶಿಯವರು ಈ ತಿಂಗಳಿನಲ್ಲಿ ಧ್ವನಿಯನ್ನು ನಿಯಂತ್ರಣದಲ್ಲಿ ಇಟ್ಟುಕೊಂಡರೆ ವಿವಾದಗಳನ್ನು ತಪ್ಪಿಸಬಹುದು. ವೃಶ್ಚಿಕ ರಾಶಿಯವರ ವಾಕ್ ಚಾತುರ್ಯದಿಂದ ದಾಂಪತ್ಯ ಜೀವನದ ಕಹಿಯನ್ನು ನಿವಾರಿಸಲು ಅನುಕೂಲವಾಗುತ್ತದೆ. ಈ ರಾಶಿಯವರು ಜೀವನ ಸಂಗಾತಿಯೊಂದಿಗೆ ಸಮಯವನ್ನು ಕಳೆಯಬೇಕು.

ವೃಶ್ಚಿಕ ರಾಶಿಯ ಉದ್ಯೋಗಸ್ಥರಿಗೆ ಆರ್ಥಿಕ ಲಾಭವಾಗಲಿದೆ. ಉದ್ಯೋಗದಲ್ಲಿ ಪ್ರಗತಿ ಆಗಿ ಆದಾಯಕ್ಕೆ ದಾರಿ ಸಿಗಲಿದೆ ಇಂಥಹ ಸಮಯದಲ್ಲಿ ಖರ್ಚಿನ ಬಗ್ಗೆಯೂ ಗಮನಹರಿಸಬೇಕು. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ವೃಶ್ಚಿಕ ರಾಶಿಯವರು ಮಾರ್ಚ್ ತಿಂಗಳಿನಲ್ಲಿ ಗಮನಾರ್ಹ ಪರಿಹಾರವನ್ನು ಕಂಡು ಕೊಳ್ಳುತ್ತಾರೆ ಅಲ್ಲದೆ ಕುಟುಂಬದ ಸದಸ್ಯರು ಕೂಡ ರೋಗಗಳಿಂದ ಗುಣಮುಖರಾಗುತ್ತಾರೆ. ವೃಶ್ಚಿಕ ರಾಶಿಯವರು ಮಂಗಗಳಿಗೆ ಬೆಲ್ಲ ಹಾಗೂ ಕಾಳುಗಳನ್ನು ತಿನ್ನಿಸಬೇಕು ಇದರಿಂದ ಅವರಿಗೆ ಒಳ್ಳೆಯದಾಗುತ್ತದೆ. ಈ ಮಾಹಿತಿಯನ್ನು ನೀವು ಓದಿ ಜೊತೆಗೆ ನಿಮ್ಮ ಸಂಬಂಧಿಕರು ಹಾಗೂ ಸ್ನೇಹಿತರಲ್ಲಿರುವ ಮೀನರಾಶಿಯವರಿಗೆ ತಪ್ಪದೆ ತಿಳಿಸಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!