ಹುಟ್ಟಿದ ಜನ್ಮ ರಾಶಿಯ ಆಧಾರದ ಮೇಲೆ ಅವರ ಮುಂದಿನ ಭವಿಷ್ಯವನ್ನು ಹೇಳಬಹುದು. ಪ್ರತಿಯೊಂದು ರಾಶಿಯಲ್ಲಿ ಪ್ರತಿ ತಿಂಗಳು ಗ್ರಹಗತಿ ಬದಲಾಗಿ ಅದಕ್ಕೆ ತಕ್ಕಂತೆ ಫಲಗಳನ್ನು ಪಡೆಯುತ್ತಾರೆ. ಮೇಷ ರಾಶಿಯಿಂದ ಮೀನ ರಾಶಿಯವರಿಗೆ ಯಾವ ರಾಶಿಗೆ ಯಾವ ಫಲವಿದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಮಾರ್ಚ್ ತಿಂಗಳಿನಲ್ಲಿ ಮೇಷ ರಾಶಿಯವರಿಗೆ ಗುರು ಸಂಚಾರ ಉತ್ತಮವಾಗಿದೆ ಅವಿವಾಹಿತರಿಗೆ ವಿವಾಹವಾಗುವ ಸಂಭವವಿದೆ ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯುತ್ತವೆ. ಈ ರಾಶಿಯ ಶಿಕ್ಷಕರಿಗೆ ಹಾಗೂ ಸಂಶೋಧಕರಿಗೆ ಪ್ರಶಸ್ತಿಗಳು ದೊರೆಯುವ ಸಂಭವವಿದೆ. ಈ ತಿಂಗಳಿನಲ್ಲಿ ಮೇಷ ರಾಶಿಯವರಿಗೆ ಧನಲಾಭವಾಗುತ್ತದೆ ಕೈಕೊಂಡ ಕೆಲಸಗಳು ಜರುಗುತ್ತವೆ. ಹೊಸಮನೆ ನಿವೇಶನವನ್ನು ಕೊಂಡುಕೊಳ್ಳಬಹುದು. ಮೇಷ ರಾಶಿಯ ರೈತರಿಗೆ ಮಾರ್ಚ್ ತಿಂಗಳು ಉತ್ತಮವಾಗಿದೆ.

ಈ ರಾಶಿಯವರು ದುಡುಕಿ ನಿರ್ಧಾರ ತೆಗೆದುಕೊಳ್ಳುವ ಸಂಭವವಿದೆ ಆದ್ದರಿಂದ ಯೋಚಿಸಿ ನಿರ್ಧಾರವನ್ನು ಕೈಗೊಳ್ಳಬೇಕು. ವೃಷಭ ರಾಶಿಯವರು ಮಾರ್ಚ್ ತಿಂಗಳಿನಲ್ಲಿ ಆರೋಗ್ಯದ ಬಗ್ಗೆ ಸ್ವಲ್ಪ ಗಮನ ಕೊಡಬೇಕಾಗುತ್ತದೆ. ವೃಷಭ ರಾಶಿಯ ವಿದ್ಯಾರ್ಥಿಗಳಿಗೆ ಉತ್ತಮ ಸಮಯವಾಗಿದೆ, ಧನ ಲಾಭವಾಗುತ್ತದೆ. ಶನಿದೇವರ ಸಂಚಾರದಿಂದ ಮನೆಯಲ್ಲಿ ಅನಾರೋಗ್ಯ ಕಾಣಿಸಿಕೊಳ್ಳುವ ಸಂಭವವಿದೆ. ನರ ಸಂಬಂಧಿ ಖಾಯಿಲೆಗಳು ಬರುವ ಸಂಭವವಿದೆ ಎಚ್ಚರಿಕೆಯಿಂದ ಇರಬೇಕಾಗುತ್ತದೆ.

ಮಿಥುನ ರಾಶಿಯವರಿಗೆ ಮಾರ್ಚ್ ತಿಂಗಳಿನಲ್ಲಿ ರಾಜಕಾರಣಿಗಳಿಂದ ಲಾಭವಾಗುತ್ತದೆ. ಮನೆಯಲ್ಲಿ ಮಂಗಳಕಾರ್ಯ ಜರುಗುತ್ತದೆ ಉದ್ಯೋಗಸ್ಥರಿಗೆ ಪ್ರಮೋಷನ್ ಸಿಗುವ ಸಂಭವವಿದೆ. ಆಸ್ತಿ ನಿವೇಶನ ಕೊಂಡುಕೊಳ್ಳಲು ಇದು ಉತ್ತಮ ಅವಕಾಶವಾಗಿದೆ. ಕೆಲವರಿಗೆ ವಿದೇಶ ಪ್ರವಾಸದ ಅವಕಾಶ ಸಿಗುತ್ತದೆ. ಆರೋಗ್ಯದಲ್ಲಿ ಏರು ಪೇರು ಕಾಣಿಸಿಕೊಳ್ಳಬಹುದು ಎಚ್ಚರಿಕೆಯಿಂದ ಇರಬೇಕು. ಕಟಕ ರಾಶಿಯವರಿಗೆ ಮಾರ್ಚ್ ತಿಂಗಳು ಹೆಚ್ಚಿನ ಶುಭ ತರುವುದಿಲ್ಲ. ಕೆಲಸ ಕಾರ್ಯಗಳು ಸ್ನೇಹಿತರ, ಗುರು ಹಿರಿಯರ ಸಹಾಯದಿಂದ ಪೂರ್ಣಗೊಳ್ಳುತ್ತದೆ. ಈ ರಾಶಿಯವರು ಪಾಲುದಾರಿಕೆ ವ್ಯವಹಾರ ಮಾಡುತ್ತಿದ್ದರೆ ಉತ್ತಮ ಲಾಭ ಇರುವುದಿಲ್ಲ. ವಿದ್ಯಾಸಂಸ್ಥೆಗಳನ್ನು ನಡೆಸುವವರಿಗೆ ಇದು ಉತ್ತಮ ಸಮಯವಾಗಿದೆ. ಸಿಂಹ ರಾಶಿಗೆ ಗುರು ಬಲ ಚೆನ್ನಾಗಿದೆ ಮುಖ್ಯ ಕೆಲಸಗಳನ್ನು ಪೂರ್ಣಗೊಳಿಸಿ. ಮಾರ್ಚ್ ತಿಂಗಳಿನಲ್ಲಿ ದೊಡ್ಡ ದೊಡ್ಡ ಉದ್ದಿಮೆ ನಡೆಸುವವರಿಗೆ ಲಾಭ ಸಿಗಲಿದೆ.

ಕನ್ಯಾ ರಾಶಿಯವರಿಗೆ ಮಾರ್ಚ್ ತಿಂಗಳಿನಲ್ಲಿ ಮಿಶ್ರ ಫಲ. ಯಾವುದೆ ಕೆಲಸವನ್ನು ಸರಿಯಾಗಿ ತಿಳಿದುಕೊಳ್ಳದೆ ಮಾಡಬಾರದು. ಮಕ್ಕಳಿಂದ ಅಪಕೀರ್ತಿಗೆ ಒಳಗಾಗುವ ಸಂದರ್ಭ ಬರಬಹುದು. ತುಲಾ ರಾಶಿಗೆ ಮಾರ್ಚ್ ತಿಂಗಳಿನಲ್ಲಿ ಮಾಡುವ ಕೆಲಸಕ್ಕೆ ವಿಘ್ನ, ಬರಬೇಕಾದ ಹಣ ಬರದೆ ಇರುವುದು ಆಗುತ್ತದೆ. ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಈ ರಾಶಿಯವರಿಗೆ ಮಕ್ಕಳಿಂದ ಕೀರ್ತಿ ಸಹಕಾರ ದೊರೆಯುತ್ತದೆ. ಮನೆಯಲ್ಲಿ ಸಂತಸದ ವಾತಾವರಣ ನಿರ್ಮಾಣವಾಗುತ್ತದೆ. ಗುರು ಬಲದಿಂದ ಐಷಾರಾಮಿ ವಸ್ತುಗಳನ್ನು ಮನೆಗೆ ತರಬಹುದು, ಜ್ಞಾನ ವೃದ್ಧಿಯಾಗುತ್ತದೆ. ಕೆಲಸದಲ್ಲಿ ಇರುವವರಿಗೆ ಪ್ರಶಸ್ತಿ ಲಭಿಸಬಹುದು.

ವೃಶ್ಚಿಕ ರಾಶಿಯವರಿಗೆ ಮಾರ್ಚ್ ತಿಂಗಳಿನಲ್ಲಿ ಮಿಶ್ರ ಫಲ ಸಿಗಲಿದೆ. ಹಿಡಿದ ಕೆಲಸವನ್ನು ಸಾಧಿಸಿ ತೋರಿಸುತ್ತಾರೆ. ಕೃಷಿಯಿಂದ ಈ ರಾಶಿಯವರಿಗೆ ಒಳ್ಳೆಯ ಲಾಭವಿದೆ. ಕಾರ್ಮಿಕ ವರ್ಗದವರಿಗೆ ಸರ್ಕಾರದಿಂದ ಧನಲಾಭ ದೊರೆಯುತ್ತದೆ. ವೃಶ್ಚಿಕ ರಾಶಿಯವರು ಆರೋಗ್ಯದ ಕಡೆ ಗಮನ ಕೊಡಬೇಕು ಅದರಲ್ಲೂ ಜಾಯಿಂಟ್ ಪೇನ್ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಧನಸ್ಸು ರಾಶಿ ಈ ರಾಶಿಯವರಿಗೆ ಮಾರ್ಚ್ ತಿಂಗಳಿನಲ್ಲಿ ಗುರು ಸಂಚಾರ ಉತ್ತಮವಾಗಿದೆ ಆದರೆ ಶನಿಯಿಂದ ಹೆಚ್ಚಿನ ಲಾಭ ಆಗುವುದಿಲ್ಲ. ಅನವಶ್ಯಕ ಹಣ ಖರ್ಚಾಗುವ ಸಂಭವವಿದೆ. ಈ ರಾಶಿಯವರು ವಿದ್ಯುತ್ ಉಪಕರಣಗಳ ಜೊತೆ ಕೆಲಸ ಮಾಡುವಾಗ ಎಚ್ಚರಿಕೆಯಿಂದ ಇರಬೇಕು.

ಆಯುಧಗಳನ್ನು ಬಳಸುವಾಗ ಎಚ್ಚರಿಕೆಯಿಂದ ಇರಬೇಕು. ಮಕರ ರಾಶಿಗೆ ಗುರುಬಲ ಉತ್ತಮವಾಗಿದೆ, ಹಾಕಿದ ಬಂಡವಾಳಕ್ಕೆ ಒಳ್ಳೆಯ ಲಾಭ ಬರುತ್ತದೆ. ಈ ರಾಶಿಯ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಉತ್ತಮ ಶ್ರೇಣಿಯಲ್ಲಿ ಅಂಕಗಳನ್ನು ಪಡೆಯುತ್ತಾರೆ. ಕೆಲವರಿಗೆ ಉದ್ಯೋಗ ಸಿಗುತ್ತದೆ. ಶನಿ ಸಂಚಾರದಿಂದ ಅಕ್ಕಪಕ್ಕದವರೊಂದಿಗೆ ಜಗಳ ಆಗುವ ಸಂಭವವಿರುತ್ತದೆ. ಈ ರಾಶಿಯವರು ಶನಿಸ್ತೋತ್ರ ಹಾಗೂ ನವಗ್ರಹ ಸ್ತೋತ್ರವನ್ನು ಓದುವುದರಿಂದ ಪರಿಹಾರವಾಗುತ್ತವೆ.

ಕುಂಭ ರಾಶಿಯವರಿಗೆ ಮಾರ್ಚ್ ತಿಂಗಳು ಅಷ್ಟೇನೂ ಉತ್ತಮವಾಗಿಲ್ಲ ಬಂದ ಹಣ ನೀರಿನಂತೆ ಖರ್ಚಾಗಬಹುದು ಅನವಶ್ಯಕ ಸಾಲ ಮಾಡುವ ಪರಿಸ್ಥಿತಿ ಬರಬಹುದು. ಮಾರ್ಚ್ ತಿಂಗಳಿನಲ್ಲಿ ಕುಂಭರಾಶಿಯವರ ಮನಸ್ಸು ಚಂಚಲವಾಗಿರುತ್ತದೆ. ಮಾನಸಿಕ ಕಿರಿಕಿರಿಯನ್ನು ಅನುಭವಿಸುತ್ತಿರುತ್ತಾರೆ. ಕೊನೆಯ ರಾಶಿ ಮೀನ ರಾಶಿಯವರಿಗೆ ಲಾಭ ಸ್ಥಾನದಲ್ಲಿ ಶನಿ ಇರುವುದರಿಂದ ಕೆಲಸ ಕಾರ್ಯಗಳು ಮಂದಗತಿಯಲ್ಲಿ ಸಾಗುತ್ತಿರುತ್ತದೆ.

ಮೀನ ರಾಶಿಯ ರೈತರಿಗೆ ಮಾರ್ಚ್ ತಿಂಗಳಿನಲ್ಲಿ ಒಳ್ಳೆಯ ಫಸಲು ಒಳ್ಳೆಯ ಬೆಲೆ ಸಿಗಲಿದೆ. ಪಶುಸಂಗೋಪನೆ ಮಾಡುವವರಿಗೆ ಒಳ್ಳೆಯ ಆದಾಯ ಸಿಗಲಿದೆ. ಮೀನ ರಾಶಿಯವರು ಗುರು ಸ್ತೋತ್ರ ಓದಬೇಕು ಹಾಗೂ ರಾಘವೇಂದ್ರ ಸ್ವಾಮಿ ದರ್ಶನ ಮಾಡುವುದರಿಂದ ಪರಿಹಾರ ಸಿಗಲಿದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

Leave a Reply

Your email address will not be published. Required fields are marked *