ಹಿಂದೂ ಪಂಚಾಗದಲ್ಲಿ ಒಟ್ಟು 27 ನಕ್ಷತ್ರಗಳು ಹಾಗೂ 12 ರಾಶಿಗಳಿದ್ದು ಇದು ಮನುಷ್ಯನ ಜೀವನದ ಆಗುಹೋಗು ಖರ್ಚು ವೆಚ್ಚ ಸುಖ ದುಃಖ ಪರಿಚಯಿಸುವುದರಲ್ಲಿ ಮಹತ್ವ ಪಾತ್ರ ಹೊಂದಿದೆ .ಈ ವರ್ಷ ಶುಭಕೃತ ನಾಮ ಸಂವತ್ಸರದ ಹಿಂದೂ ಪಂಚಾಗಾದಲ್ಲಿ ರಾಶಿ ಫಲಗಳ ಬಗ್ಗೆ ಮಾಹಿತಿ ನೀಡಿರುತ್ತಾರೆ ಹೊಸ ವರ್ಷದ ಆರಂಭದಲ್ಲಿ ಬೇವು ಬೆಲ್ಲ ಸೇವಿಸಿ ಒಳ್ಳೆ ಮಾತು ಆಡುತ್ತಾ ರಾಶಿಯಲ್ಲಿ ವೃಷಭ ರಾಶಿಯವರ ವಾರ್ಷಿಕ ಭವಿಷ್ಯ ಹೇಗಿದೆ ಎಂದು ಈ ಲೇಖನದಲ್ಲಿ ನೋಡೋಣ.
ಸಾಮಾನ್ಯವಾಗಿ ಈ ರಾಶಿಯಲ್ಲಿ ಜನಿಸಿದವರು ತುಂಬಾ ಶ್ರಮ ಜೀವಿ ಆಗಿದ್ದು ತಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ನೀರೀಕ್ಷೆ ಮಾಡುವದರಲ್ಲಿ ಬೇರೆ ಮಾತಿಲ್ಲ. ಹಾಗಾಗಿ ಈ ವರ್ಷ ಈ ರಾಶಿಯವರಿಗೆ ಒಳ್ಳೆ ಕಾಲಾವಕಾಶ ಕೂಡಿ ಬರಲಿದೆ ಹಾಗೂ ಕೈಗೊಂಡ ಕಾರ್ಯ ಎಲ್ಲವೂ ಒಳ್ಳೆಯ ಪ್ರತಿಫಲ ಕೊಡುವುದು . ಈ ರಾಶಿ ಅಧಿಪತಿ ಶುಕ್ರ ಈ ವರ್ಷ ಆದಾಯ ಮತ್ತು ವ್ಯಯ 8 ಇದ್ದೂ ರಾಜಯೋಗ ಹಾಗೂ ಅವಮಾನ 6 ಇದ್ದು ಎಲ್ಲವೂ ಸರಿಸಮನಾಗಿ ಇರುತ್ತದೆ.
ಕೃತಿಕಾ 2 3 4 ಪಾದ ರೋಹಿಣಿ 4 ಪಾದ ಮೃಗಶಿರಾ 1 ಮತ್ತು 2 ಪಾದದಲ್ಲಿ ಜನಿಸಿದವರು ವೃಷಭ ರಾಶಿಯವರು ಆಗಿರುತ್ತಾರೆ. ಈ ವರ್ಷವು ವೃಷಭ ರಾಶಿಯವರಿಗೆ ಮುಟ್ಟಿದೆಲ್ಲ ಚಿನ್ನ ಅನ್ನೋ ಹಾಗೆ ತುಂಬ ಒಳ್ಳೆಯ ವರ್ಷವಾಗಿದೆ. ತಮ್ಮ ಸಾಂಸಾರಿಕ ಜೀವನದಲ್ಲಿ ವ್ಯವಹಾರ ಶಿಕ್ಷಣ ಮುಂತಾದ ಯಾವುದೇ ಕ್ಷೇತ್ರದಲ್ಲು ಯಶಸ್ಸು ಲಭಿಸಿದೆ . ಗುರುವು ಈ ರಾಶಿಯಲ್ಲಿ 11 ನೆ ಮನೆಯಲ್ಲಿ ಸಂಚಾರ ಮಾಡಿದ್ದು ಉದ್ಯೋಗದಲ್ಲಿ ಬಡ್ತಿ ಪಡೆಯುವ ಸಾಧ್ಯತೆ ಇದ್ದು ಇನ್ನೂ ವ್ಯಾಪಾರದಲ್ಲಿ ಹೆಚ್ಚಿನ ಲಾಭದಾಯಕವಾಗಿದೆ. ಉನ್ನತ ಹುದ್ದೆಗಳಿಗೆ ಬಡ್ತಿ ಹೊಂದುವ ಸಾಧ್ಯತೆ ಇದೆ ಹೊಸದಾಗಿ ಉದ್ಯೋಗ ಹುಡುಕ್ತಾ ಇರುವರಿಗೆ ಉದ್ಯೋಗ ದೊರೆಯುತ್ತದೆ .
ವೃಷಭ ರಾಶಿಯಲ್ಲಿ ಜನಿಸಿದ ವಿದ್ಯಾರ್ಥಿಗಳಿಗೆ ತಮ್ಮ ಓದಿನಲ್ಲಿ ಒಳ್ಳೆಯ ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಒಳ್ಳೆಯ ಕೋರ್ಸ್ ಅಯ್ಕೆ ಮಾಡಲು ಸುವರ್ಣಾವಕಾಶ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಒಳ್ಳೆಯ ಫಲ ಸಿಗುತ್ತದೆ ಇನ್ನೂ ವ್ಯವಹಾರ ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಹುಷಾರು ಇರ್ಬೇಕು ಶನಿಯು 9ನೇ ಮನೆಯಲ್ಲಿನಿದ್ದು ಇವರ ಜೀವನ ಈ ವರ್ಷ ಸಮೃದ್ಧಿಯಿಂದ ಕೂಡಿರುತ್ತದೆ.
ಮನೆಯಲ್ಲಿ ಶುಭ ಕಾರ್ಯ ನಡೆಯಲಿದೆ ಆರ್ಥಿಕ ಪರಿಸ್ಥಿತಿ ಅತ್ಯತುಮ ಹಾಗೂ ಈ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಯಾವುದೇ ನಿರ್ಣಾಯಕ ಯೋಚ್ನೆ ಇಟ್ಟುಕೊಂಡು ಹೂಡಿಕೆ ಮಾಡಿದಾದಲ್ಲಿ ಉತ್ತಮ ಫಲಿತಾಂಶ ಸಿಗುವುದು ಹಾಗೂ ಹಿಂದೆ ಯಾವುದೇ ಕೆಲ್ಸದಲ್ಲಿ ಹಿನ್ನಡೆ ಕಂಡು ಬಂದಿದಲ್ಲಿ ಈ ವರ್ಷವೂ ಎಲ್ಲ ಕೆಲಸ ಕಾರ್ಯಗಳಲ್ಲಿ ಮುನ್ನಡೆ ಸಾಧ್ಯತೆ ಇನ್ನು ಅವಿವಾಹಿತರಿಗೆ ಕಂಕಣಬಲ ಕೂಡಿ ಬರಲಿದ್ದು ಒಳ್ಳೆಯ ಕುಟುಂಬ ಸೇರ್ಪಡೆಯಾಗಿ ಒಳ್ಳೆಯ ಹೆಸರನ್ನು ತರುತ್ತಾರೆ.
ಸಂತಾನ ಯೋಗವು ಇದ್ದು ಮನೆಯಲ್ಲಿ ಮಗುವಿನ ನಗುವಿನಿಂದ ಮನೆಯು ಆನಂದದಿಂದ ಇರುತ್ತದೆ ಹಾಗೆಯೇ ಪರಿವಾರ ಸಮೇತ ದೂರ ಪ್ರಯಾಣ ಸಾಧ್ಯತೆ. ಮಕ್ಕಳ ವಿಚಾರದ ಬಗ್ಗೆ ಈ ರಾಶಿಯ ಮಕ್ಕಳು ತಮ್ಮ ಪರಿಶ್ರಮ ಏಕಾಗ್ರತೆಯಿಂದ ಉನ್ನತ ಸ್ಥಾನದಲ್ಲಿ ಇದ್ದು ಒಳ್ಳೆಯ ಗುರಿ ತಲುಪುತ್ತಾರೆ. ನವ ವಿವಾಹಿತರು ಒಳ್ಳೆಯ ಶುಭ ಸುದ್ದಿ ನೀಡಿ ಸಂತೋಷ ದಿಂದ ಜೀವನ್ಳ ಸಾಗಿಸುತ್ತಾರೆ ವ್ಯವಹಾರ ಮಾಡುವರಿಗೆ ಅನೇಕ ಮೂಲಗಳಿಂದ ಧನಾಗಮನ ಸಾಧ್ಯತೆ ಹೆಚ್ಚುಆರೋಗ್ಯದಲ್ಲಿ ಯಾವುದೇ ತೊಂದರೆ ಕಾಣಿಸಿ ಕೊಳ್ಳುವುದು ಇಲ್ಲ ಆದರೆ ಅತಿಯಾಗಿ ಎಣ್ಣೆ ಪದಾರ್ಥಗಳ ಸೇವೇನೆ ಮಾಡಿದದ್ದಲ್ಲಿ ಆರೋಗ್ಯದಲ್ಲಿ ಸ್ವಲ್ಪ ಮಟ್ಟಿಗೆ ಏರು ಪೇರು ಸಾಧ್ಯತೆ ಇದೆ ಇದರಿಂದ ಗ್ಯಾಸ್ಟ್ರಿಕ್ ಅಸಿಡಿಟಿ ತೊಂದ್ರೆ ಆಗುವ ಸಾಧ್ಯತೆ ಇದ್ದು ಆದಷ್ಟು ಎಣ್ಣೆ ಪದಾರ್ಥದಿಂದ ದೂರವಿರಿ. ಇನ್ನು ದಿನನಿತ್ಯದ ವ್ಯಾಯಾಮ ಯೋಗ ಇವುಗಳಿಂದ ತಮ್ಮ ಆರೋಗ್ಯವನ್ನು ಸುರಕ್ಷಿತವಾಗಿ ಇಡಬಹುದು. ಈ ರಾಶಿಯವರ ಅದೃಷ್ಟ ಸಂಖ್ಯೆ 8 ಮತ್ತು 6 ಈ ವರ್ಷ ವೃಷಭ ರಾಶಿಯವರಿಗೆ ತುಂಬಾ ಒಳ್ಳೆಯ ಕಾಲವಾಗಿದೆ .