ಸಿಂಹ ರಾಶಿಯವರು ದೈರ್ಯದಿಂದ ಮುಂದೆ ಹೆಜ್ಜೆಹಾಕಿ, ಕೀರ್ತಿ ಯಶಸ್ಸು ನಿಮ್ಮದೆ

0 5

ಪ್ರತಿಯೊಂದು ರಾಶಿಯಲ್ಲಿಯೂ ಜನಿಸಿದವರು ಪ್ರತಿ ತಿಂಗಳು ವಿಭಿನ್ನವಾದ ರಾಶಿ ಭವಿಷ್ಯವನ್ನು ಹೊಂದಿರುತ್ತಾರೆ. ಅದರಂತೆ ರಾಶಿಯಲ್ಲಿ ಪ್ರಮುಖ ರಾಶಿಯಾದ ಸಿಂಹ ರಾಶಿಯಲ್ಲಿ ಜನಿಸಿದವರಿಗೆ ಎಪ್ರಿಲ್ ತಿಂಗಳಿನಲ್ಲಿ ಕಂಡುಬರುವ ಅನುಕೂಲ, ಅನಾನುಕೂಲದ ಬಗ್ಗೆ ಈ ಲೇಖನದಲ್ಲಿ ನೋಡೋಣ.

ಸಿಂಹ ರಾಶಿಯವರಿಗೆ ಎಪ್ರಿಲ್ ತಿಂಗಳಿನಲ್ಲಿ ಜಾಗತಿಕ ಮಟ್ಟದಲ್ಲಿ ಅನೇಕ ಬದಲಾವಣೆಗಳು ಕಂಡುಬರುತ್ತವೆ. ಈ ತಿಂಗಳಿನಲ್ಲಿ 9 ಗ್ರಹಗಳು ಸ್ಥಾನ ಬದಲಾವಣೆ ಮಾಡುತ್ತದೆ. ಏಪ್ರಿಲ್ 7 ರಂದು ಕುಜ ಕುಂಭ ರಾಶಿಗೆ ಸ್ಥಾನ ಬದಲಾಯಿಸುತ್ತಾನೆ. ಸಿಂಹ ರಾಶಿಗೆ ಕುಜ ದೋಷವಿದೆ ಆದರೆ ಕುಜನಿಂದ ಒಳ್ಳೆಯದಾಗುತ್ತದೆ. ಕುಜನಿಂದ ಸಿಂಹ ರಾಶಿಯವರಿಗೆ ಧೈರ್ಯ ಬಲ ಸಿಗುತ್ತದೆ. ಈ ರಾಶಿಯವರ ಮನೆಯಲ್ಲಿ ಶುಭಕಾರ್ಯ ನಡೆಯುತ್ತದೆ. ಬುದನಿಂದಲು ಈ ರಾಶಿಯವರಿಗೆ ಒಳ್ಳೆಯ ಫಲವಿದೆ. ವಿದ್ಯಾಭ್ಯಾಸದಲ್ಲಿ ಈ ರಾಶಿಯವರಿಗೆ ಒಳ್ಳೆಯದಾಗುತ್ತದೆ.

ಈ ರಾಶಿಯವರ ಉದ್ಯೋಗ, ವ್ಯಾಪಾರ, ವ್ಯವಹಾರದಲ್ಲಿ ಪ್ರಗತಿ ಕಾಣುತ್ತದೆ. ಸರ್ಕಾರಿ ಕೆಲಸ ಮಾಡುವ ಸಿಂಹ ರಾಶಿಯವರಿಗೆ ಪ್ರಮೋಷನ್, ಉತ್ತಮ ಬದಲಾವಣೆ ಕಂಡುಬರುತ್ತದೆ. ಎಪ್ರಿಲ್ 13 ರವರೆಗೆ ಗುರುಬಲ ಇರುತ್ತದೆ ನಂತರ ಇರುವುದಿಲ್ಲ. ಸಿಂಹ ರಾಶಿಯವರಿಗೆ ಈ ತಿಂಗಳು ಶನಿಯಿಂದ ಯಾವುದೆ ಸಮಸ್ಯೆ ಇಲ್ಲ.

ಈ ತಿಂಗಳು ರಾಹು ಕೇತುವಿನ ಸ್ಥಾನ ಬದಲಾವಣೆ ಆಗುವುದರಿಂದ ಸಿಂಹ ರಾಶಿಯವರು ಯಾರು ಏನೇ ಹೇಳಿದರೂ ಒಪ್ಪುವುದಿಲ್ಲ ತಿರುಗಿ ಮಾತನಾಡುತ್ತಾರೆ. ಉತ್ತಮ ಅಧಿಕಾರ ಪಡೆಯುತ್ತಾರೆ. ಆರ್ಥಿಕವಾಗಿ, ರಾಜಕೀಯವಾಗಿ ಉತ್ತಮ ಫಲ ಪಡೆಯುತ್ತಾರೆ. ಮನೆಯಲ್ಲಿ ಸಣ್ಣ ಸಣ್ಣ ಜಗಳ ಆಗುವ ಸಾಧ್ಯತೆ ಇರುತ್ತದೆ. ಬುದ್ದಿವಂತಿಕೆಯನ್ನು ತೋರಿಸಿ ಎಲ್ಲರೂ ಕೊಂಡಾಡುವಂತೆ ಆಗುತ್ತದೆ. ತೀರ್ಥ ಕ್ಷೇತ್ರಕ್ಕೆ ಹೋಗುವ ಯೋಗ ಫಲ ಸಿಗಲಿದೆ. ಸಿಂಹ ರಾಶಿಯವರು ತಮ್ಮ ಕೆಲಸಕ್ಕಾಗಿ ಬೇರೆಯವರನ್ನು ಸಿಕ್ಕಿಹಾಕಿಸುವ ಕೆಲಸ ಮಾಡುತ್ತಾರೆ, ಸಾಧ್ಯವಾದರೆ ಅಂತಹ ಕೆಲಸ ಮಾಡಬಾರದು. ಆಯಸ್ಸು ಹೆಚ್ಚಾಗುತ್ತದೆ, ಧನ ಬಲ, ಸ್ತ್ರೀ ಸೌಖ್ಯ, ಪುರುಷ ಸೌಖ್ಯ ಸಿಗುತ್ತದೆ. ಸಹೋದರರಿಂದ ಸ್ವಲ್ಪ ಅಸಮಾಧಾನ ಉಂಟಾಗುವ ಸಾಧ್ಯತೆಗಳಿವೆ.

ಸಿಂಹ ರಾಶಿಯವರು ವಿವಾದವನ್ನು ಮೈ ಮೇಲೆ ಎಳೆದುಕೊಳ್ಳಬಾರದು, ಅಹಂಕಾರ ಪಡಬಾರದು. ಬಂಧುಗಳಿಂದ ಮನಸ್ಸಿಗೆ ಬೇಸರ ಉಂಟಾಗುತ್ತದೆ. ಸ್ನೇಹಿತರಿಂದ ಸಣ್ಣ ಪುಟ್ಟ ಸಮಸ್ಯೆ ಬರುತ್ತದೆ. ಈ ತಿಂಗಳು ಸಿಂಹ ರಾಶಿಯವರಿಗೆ ಶತ್ರುಬಾಧೆ ಕಡಿಮೆ ಆಗುತ್ತದೆ. ಉನ್ನತ ವಿದ್ಯಾಭ್ಯಾಸ ಮಾಡುವವರಿಗೆ ಒಳ್ಳೆಯದಾಗುತ್ತದೆ. ವಿವಾಹ ಪ್ರಯತ್ನದಲ್ಲಿರುವವರಿಗೆ ಯಶಸ್ಸು ಸಿಗುತ್ತದೆ. ಸ್ನೇಹಿತರಿಂದ ಸಹಾಯ ಸಿಗುತ್ತದೆ. ತಂದೆ ತಾಯಿಯರಿಂದ ಪ್ರಶಂಸೆಗೆ ಒಳಗಾಗುತ್ತಾರೆ.

ಉನ್ನತ ಸ್ಥಾನಮಾನ, ಕೆಲಸದಲ್ಲಿ ಉತ್ತಮ ಅಭಿವೃದ್ದಿ ಕಾಣುತ್ತದೆ. ಕುಟುಂಬದಲ್ಲಿ ಸಂತಸದ ವಾತಾವರಣ, ರಾಜಕೀಯದಲ್ಲಿ ಯಶಸ್ಸು ಸಿಗುತ್ತದೆ. ಆರೋಗ್ಯದಲ್ಲಿ ಸಣ್ಣ ಪುಟ್ಟ ಸಮಸ್ಯೆ ಕಂಡುಬರುತ್ತದೆ. ಅಪಘಾತವಾಗುವ ಸಾಧ್ಯತೆಗಳಿವೆ ಎಚ್ಚರದಿಂದಿರಿ. ಕೋಪವನ್ನು ಕಡಿಮೆ ಮಾಡಿಕೊಳ್ಳಬೇಕು. ದೂರ ಪ್ರಯಾಣ ಯಶಸ್ಸು ಕೊಡುವುದಿಲ್ಲ ಆದ್ದರಿಂದ ದೂರ ಪ್ರಯಾಣ ಮಾಡದಿರುವುದು ಒಳ್ಳೆಯದು. ಈ ಮಾಹಿತಿಯನ್ನು ಸಿಂಹ ರಾಶಿಯವರಿಗೆ ತಪ್ಪದೆ ತಿಳಿಸಿ.

Leave A Reply

Your email address will not be published.