ಈ ವರ್ಷದ ತುಲಾ ರಾಶಿಯವರ ಯುಗಾದಿ ಭವಿಷ್ಯ ಹೇಗಿರಲಿದೆ ತಿಳಿದುಕೊಳ್ಳಿ

0 2

ದ್ವಾದಶ ರಾಶಿಗಳ ಪೈಕಿಯಲ್ಲಿ ತುಲಾ ರಾಶಿ ಒಂದಾಗಿದ್ದು ಈ ರಾಶಿಯವರು ಉತ್ತಮ ವಾಗ್ಮಿ ಆಗಿದ್ದು ರಾಜಕೀಯ ಕ್ಷೇತ್ರದಲ್ಲಿ ಜಾಸ್ತಿ ತೊಡಗಿದ್ದಾರೆ ನೋಡಲು ಸರಾಸರಿ ಎತ್ತರ ಮೊಟ್ಟೆಯ ಆಕಾರ ಹೊಂದಿರುತ್ತಾರೆ ಕಾರು ಹಾಗೇ ಇತರ ವಾಹನಗಳ ಬಗ್ಗೆ ಜಾಸ್ತಿ ಆಸಕ್ತಿ ಹೊಂದಿದ್ದು ತೋಟಗಾರಿಕೆ ಅಲ್ಲಿ ವಿಶೇಷ ಆಸಕ್ತಿ ಇರುತ್ತದೆ.ಹಾಗೂ ಸಾಂಸಾರಿಕ ಜೀವನ ಚೆನ್ನಾಗಿ ಇರುವುದು ಈ ವರ್ಷ ಯುಗಾದಿ ಹಬ್ಬ ಶುಭಕೃತ ನಾಮ ಸಂವತ್ಸರದಲ್ಲಿ ಬಂದಿದ್ದು ಈ ವರ್ಷದ ತುಲಾ ರಾಶಿ ಅವರ ವಾರ್ಷಿಕ ಭವಿಷ್ಯವಾಣಿ ನೋಡೋಣ

ತುಲಾ ರಾಶಿಯವರ ಅದೃಷ್ಟ ಸಂಖ್ಯೆ 7 ಈ ರಾಶಿಯವರಿಗೆ ಈ ವರ್ಷ ಆದಾಯ ಮತ್ತು ವ್ಯಯ 8 ಹಾಗೂ ರಾಜಯೋಗ ಮತ್ತು ಅವಮಾನ 7 ಮತ್ತು 5 ಇದೆ ಎಂದು ಪಂಚಾಂಗದಲ್ಲಿ ಕಾಣಬಹುದು. ಇನ್ನೂ ಉದ್ಯೋಗದಲ್ಲಿ ಬಡ್ತಿ ಹೊಂದುವ ಸಾಧ್ಯತೆ ಇದೆ ಹಾಗೂ ತುಂಬ ಪರಿಶ್ರಮ ಅಗತ್ಯ ಇದ್ದು ತಮ್ಮ ಸಹದ್ಯೋಗಿ ಮಾತು ಮೇಲು ಅಧಿಕಾರಿಗಳೊಂದಿಗೆ ಉತ್ತಮ ಸ್ನೇಹ ಹೊಂದಾಣಿಕೆ ಅಗತ್ಯವಿದೆ . ಹೊಸದಾಗಿ ಕೆಲಸ ಹುಡುಕ್ತಾ ಇರುವರು ಹಾಗೆಯೇ ಉದ್ಯೋಗವನ್ನು ಬದಲಾಯಿಸಬೇಕು ಅನ್ನೋ ಮನೋಭಾವನೆ ಇರುವರು ಆದಷ್ಟು ಯೋಚಿಸಿ ವಿಶ್ಲೇಷಿಸಿ ಮುಂದೆ ಹೆಜ್ಜೆ ಇಟ್ಟರೆ ಉತ್ತಮ.

ವಿದ್ಯಾರ್ಥಿಗಳಿಗೆ ಅದ್ಬುತ ಸಮಯವಾಗಿದ್ದು ವಿದೇಶದಲ್ಲಿ ವ್ಯಾಸಂಗ ಮಾಡಲು ಇಚ್ಛಿಸುವ ವಿದ್ಯಾರ್ಥಿಗಳಿಗೆ ಜನವರಿ ಇಂದ ಜೂನ್ ವರೆಗೂ ಒಳ್ಳೆಯ ಕಾಲವಾಗಿದೆ .ಆರ್ಥಿಕ ಜೀವನದಲ್ಲಿ ಸ್ಥಿರತೆ ಕಂಡುಬಂದಿದ್ದು ವರ್ಷದ ದ್ವಿತೀಯ ಖರ್ಚು ಜಾಸ್ತಿ ಆಗಲಿದ್ದು ಆದಷ್ಟು ಜಾಗರೂಕರಾಗಿರಿ
ಇನ್ನೂ ಕೌಟುಂಬಿಕ ಜೀವನವನ್ನು ಉತ್ತಮವಾಗಿದ್ದು ತಮ್ಮ ಮನೆಯಲ್ಲಿ ಅನೇಕ ಹೊಸ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ ಇದರಿಂದಾಗಿ ಅವರ ಮನೆಯಲ್ಲಿ ಸದಾ ಸಂತೋಷ ನೆಲೆಸುತ್ತದೆ. 5ನೇ ಮನೆಯಲ್ಲಿ ಗುರುವಿನ ಸಂಚಾರವಿದ್ದು ಮಕ್ಕಳ ಜೀವನದಲ್ಲಿಉತ್ತಮವಾಗಿದ್ದು ತಮ್ಮ ವಿದ್ಯಾಭ್ಯಾಸದಲ್ಲಿ ಉತ್ತಮ ಶ್ರೇಣಿಯಲ್ಲಿ ಇರುತ್ತಾರೆ ಉತ್ತಮ ವಿದ್ಯಾಸಂಸ್ಥೆಯಲ್ಲಿ ತಮ್ಮ ಸ್ಥಾನವನ್ನು ಗಿಟ್ಟಿಸಿಕೊಂಡು ಒಳ್ಳೆಯ ದಾರಿಯಲ್ಲಿ ನಡೆಯುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ

ಇನ್ನೂ ಅವಿವಾಹಿತರಿಗೆ ಕಂಕಣಬಲವು ವರ್ಷದ ದ್ವಿತೀಯಾರ್ಧದಲ್ಲಿ ಕೂಡಿಬರುತ್ತದೆ ಮಕ್ಕಳ ವಿಚಾರದ ಆರೋಗ್ಯ ಸಮಸ್ಯೆ ಇದ್ದು ಜಾಗ್ರತೆ ವಹಿಸಬೇಕಾಗುತ್ತದೆ ಈ ರಾಶಿಯ ವೈವಾಹಿಕ ಜೀವನವು ಮಿಶ್ರ ಫಲವನ್ನು ಹೊಂದಿದ್ದು ಕುಟುಂಬದಲ್ಲಿ ಸಂಗಾತಿಯ ಜೊತೆ ಕಲಹ ಜಗಳ ಇದ್ದರು ಕೂಡ ತಮ್ಮ ಸಂಗಾತಿಯ ಬೆಂಬಲದೊಂದಿಗೆ ಜೀವನವು ಮುನ್ನಡೆಯುತ್ತದೆ ಈ ವರ್ಷದ ಮಧ್ಯದಲ್ಲಿ ಆದಷ್ಟು ಜಾಗ್ರತೆಯಿಂದ ಇರಬೇಕು ಯಾಕೆಂದ್ರೆ ಶನಿಯ ಸಂಚಾರ ಇದ್ದು ವರ್ಷದ ಅಂತ್ಯದಲ್ಲಿ ಮಂಗಳ ಸ್ಥಾನ ಪಲ್ಲಟದಿಂದ ಸಂಸಾರದಲ್ಲಿನ ಜಗಳ ಅನುಮಾನ ಇಂತಹ ಸಮಸ್ಯೆಗಳ ತೊಡೆದುಹಾಕಿ ತಮ್ಮ ಬಾಳಸಂಗಾತಿಯೊಂದಿಗೆ ಪರಸ್ಪರ ವಿಶ್ವಾಸ ನಂಬಿಕೆ ಪ್ರೀತಿಯಿಂದ ಪುನಹ ಬಾಳ್ವೆ ನಡೆಸುವ ಅವಕಾಶವಿದೆ.

ವ್ಯಾಪಾರಸ್ತರು ಆದಷ್ಟು ಹುಷಾರಾಗಿ ಇರ್ಬೇಕು ಇಲ್ಲವಾದಲ್ಲಿ ನಷ್ಟವಾಗುವ ಸಾಧ್ಯತೆ ಇದ್ದು ಯಾವುದೇ ಕಡತಗಳು ಇದ್ದರೂ ಆದಷ್ಟು ಹುಷಾರಾಗಿ ಎತ್ತಿಕೊಂಡು ಜಾಗೃತವಾಗಿರಬೇಕು ಇನ್ನು ಹೊಸದಾಗಿ ವ್ಯಾಪಾರ ಮಾಡಲು ಇಚ್ಚಿಸುವವರು ಕೂಡ ಆದಷ್ಟು ಹಿಂದೆ ಮುಂದೆ ಯೋಚಿಸಿ ಹೆಜ್ಜೆ ಇಡಿ ಆಸ್ತಿ ವಾಹನ ವಿಚಾರದಲ್ಲಿ ಉತ್ತಮವಾಗಿದ್ದು ಒಮ್ಮೆ ಮನೆಯ ಹಿರಿಯರ ಆದೇಶದ ಮೇಲೆ ಮುನ್ನಡೆದರೆ ಉತ್ತಮ ಇಲ್ಲವಾದಲ್ಲಿ ನಷ್ಟವಾಗುವ ಸಾಧ್ಯತೆ ಇದೆ ವಾಹನ ಖರೀದಿ ಮನೆ ಕಟ್ಟುವ ಇಲ್ಲ ಕಟ್ಟಡ ಕಟ್ಟುವ ಯೋಚನೆ ಇದ್ದವರಿಗೆ ಒಳ್ಳೆಯ ಕಾಲಾವಕಾಶ ಆಗಿದೆ

ಹಣವನ್ನು ವೆಚ್ಚ ಮಾಡಬೇಕಾದರೆ ದುಂದುವೆಚ್ಚ ಮಾಡುವರು ಸ್ವಲ್ಪ ಕಡಿವಾಣ ಹಾಕಿಕೊಳ್ಳಬೇಕು
ಆರೋಗ್ಯ ಜೀವನದಲ್ಲಿ ಬಹಳ ವ್ಯತ್ಯಾಸ ಇದ್ದು ವೈರಲ್ ಸೋಂಕು ಹಾಗೂ ಜೀರ್ಣಾಂಗ ಕ್ರಿಯೆಗೆ ಸಂಬಂಧಪಟ್ಟ ಖಾಯಿಲೆ ತುತ್ತಾಗುವ ಸಾಧ್ಯತೆ ಇದೆ . ಮಾನಸಿಕ ಹಾಗೂ ಒತ್ತಡ ಜೀವನ ಕಡಿಮೆ ಆಗಲೂ ಪ್ರತಿನಿತ್ಯ ವ್ಯಾಯಾಮ ಮಾಡಿ ಯೋಗ ಮಾಡಿ ಹಾಗೂ ಉತ್ತಮ ಆಹಾರ ಸೇವನೆಯಿಂದ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

Leave A Reply

Your email address will not be published.