ದ್ವಾದಶ ರಾಶಿಗಳಲ್ಲಿ ಪ್ರತಿಯೊಂದು ತಿಂಗಳು ಗ್ರಹಗಳ ಬದಲಾವಣೆಯಿಂದ ವಿಭಿನ್ನವಾದ ಪರಿಣಾಮ ಬೀರುತ್ತದೆ, ನಾವು ಯಾವ ರಾಶಿಯಲ್ಲಿ ಹುಟ್ಟಿದ್ದೇವೆ ಎನ್ನುವುದರ ಆಧಾರದ ಮೇಲೆ ಆಯಾ ತಿಂಗಳ ಭವಿಷ್ಯ ನಿರ್ಧಾರವಾಗುತ್ತದೆ. ಹಾಗಾದರೆ ವೃಶ್ಚಿಕ ರಾಶಿಯವರಿಗೆ ಮೆ ತಿಂಗಳಿನಲ್ಲಿ ಫಲಾಫಲಗಳು ಹೇಗಿದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.
ಗುರುಗ್ರಹ ಮೀನ ರಾಶಿ ಅಂದರೆ ತನ್ನ ಸ್ವಂತ ಮನೆಯಲ್ಲಿ ಇರುವುದರಿಂದ ವೃಶ್ಚಿಕ ರಾಶಿಯವರಿಗೆ ಗುರುಬಲ ಇದ್ದು ಸಾಕಪ್ಪಾ ಜೀವನ ಎನ್ನುವಷ್ಟರಲ್ಲಿ ಒಳ್ಳೆಯದಾಗುತ್ತದೆ. ಬಹುತೇಕ ಅವರಿಗೆ ಮೆ ತಿಂಗಳಿನಲ್ಲಿ ಒಳ್ಳೆಯದಾಗುತ್ತದೆ. ಶನಿದೇವನಿಂದಲೂ ವೃಶ್ಚಿಕ ರಾಶಿಯವರಿಗೆ ಒಳ್ಳೆಯದಾಗುತ್ತದೆ. ಆರನೆ ಮನೆಯಲ್ಲಿ ರಾಹು, ಏಳನೆ ಮನೆಯಲ್ಲಿ ಕೇತು ಇರುವುದರಿಂದ ಶತ್ರುಗಳ ಸಂಹಾರ ಆಗುತ್ತದೆ.
ಹಣ ಬೇಡದ ವಿಷಯಕ್ಕೆ ಖರ್ಚಾಗುತ್ತದೆ ಆದರೆ ರಾಹು ಕೇತುವಿನಿಂದ ಸರಿಯಾದ ಉದ್ದೇಶಕ್ಕೆ ಮಾತ್ರ ಖರ್ಚಾಗುತ್ತದೆ. ವೃಶ್ಚಿಕ ರಾಶಿಯವರಿಗೆ ಮೆ ತಿಂಗಳಿನಲ್ಲಿ ಶುಭ ಫಲ ಸಿಗುತ್ತದೆ. ಹೊರದೇಶಕ್ಕೆ ಹೋಗಿ ಕೆಲಸ ಮಾಡಬೇಕು ಎಂಬ ಮನಸಿರುವ ವಿದ್ಯಾರ್ಥಿಗಳಿಗೆ ಮೆ ತಿಂಗಳು ಅನುಕೂಲ ಮಾಡಿಕೊಡುತ್ತದೆ.
ವೃಶ್ಚಿಕ ರಾಶಿಯ ಸ್ಪೋರ್ಟ್ಸ್ ನಲ್ಲಿ ಇರುವವರಿಗೆ ಒಳ್ಳೆಯದಾಗುತ್ತದೆ, ಸರ್ಕಾರಿ ಸ್ಪಾನ್ಸರ್ ಸಿಗುತ್ತದೆ. ಸರ್ಕಾರಿ ಕೆಲಸದಲ್ಲಿರುವ ವೃಶ್ಚಿಕ ರಾಶಿಯವರಿಗೆ ಒಳ್ಳೆಯದಾಗುತ್ತದೆ. ಟೆಕ್ನಿಕಲ್ ಅಂದರೆ ಇಂಜಿನಿಯರಿಂಗ್ ಶಿಕ್ಷಣ ಓದುತ್ತಿರುವವರಿಗೆ ಒಳ್ಳೆಯದಾಗುತ್ತದೆ. ಇನ್ಫ್ರಾಸ್ಟ್ರಕ್ಚರ್ ನಲ್ಲಿ ಕೆಲಸ ಮಾಡುವ ರೋಡ್, ಡ್ಯಾಮ್ ನಿರ್ಮಾಣ ಕಾರ್ಯ ಮಾಡುವ ಕೆಲಸಗಳಲ್ಲಿ ಇರುವವರಿಗೆ ಪ್ರಮೋಷನ್ ಸಿಗಬಹುದು. ರಾಜಕೀಯದಲ್ಲಿ ಇರುವ ವೃಶ್ಚಿಕ ರಾಶಿಯವರಿಗೆ ಬಹಳ ಒಳ್ಳೆಯದಾಗುತ್ತದೆ. ಬಿಸಿನೆಸ್ ಮಾಡುವವರಿಗೆ, ಭೂಮಿ ಖರೀದಿ ಮಾಡುವವರಿಗೆ, ಮನೆ ನಿರ್ಮಾಣ ಮಾಡುವವರಿಗೆ ಒಳ್ಳೆಯದಾಗುತ್ತದೆ. ವೃಶ್ಚಿಕ ರಾಶಿಯ ಮನೆ, ಅಂಗಡಿ ನಿರ್ಮಾಣ ಮಾಡಬೇಕೆಂದು ಅಂದುಕೊಂಡು ಅರ್ಧಕ್ಕೆ ನಿಂತ ಕೆಲಸ ಈಗ ಮುಂದುವರೆಯುತ್ತದೆ.
ವೃಶ್ಚಿಕ ರಾಶಿಯವರಿಗೆ ಒತ್ತಡ, ಆರೋಗ್ಯದಲ್ಲಿ ಸ್ವಲ್ಪ ಮಟ್ಟಿಗೆ ಸಮಸ್ಯೆ ಕಂಡುಬರುತ್ತದೆ. 40-50 ವರ್ಷಗಳ ಮೆಲ್ಪಟ್ಟವರಿಗೆ ಆರೋಗ್ಯದಲ್ಲಿ ಸಮಸ್ಯೆ ಕಂಡುಬರುತ್ತದೆ. ವೃಶ್ಚಿಕ ರಾಶಿಯ ಅಣ್ಣ ತಮ್ಮ, ಅಕ್ಕ ತಂಗಿ ಸಂಬಂಧಗಳಲ್ಲಿ ಸಣ್ಣ ಪುಟ್ಟ ಜಗಳ ಬಂದರೂ ಬೇಗ ನಿವಾರಣೆಯಾಗುತ್ತದೆ, ಈ ರಾಶಿಯವರಿಗೆ ಶತ್ರು ಆಗಲೂ ಬಂದರೂ ಶತ್ರುತ್ವ ಬಿಟ್ಟು ಸ್ನೇಹದಿಂದ ಇರುತ್ತಾರೆ.
ವೃಶ್ಚಿಕ ರಾಶಿಯ ರಾಶ್ಯಾಧಿಪತಿ ಮಂಗಳ ಗ್ರಹ, ಮಂಗಳನ ಅಧಿದೇವತೆ ಷಣ್ಮುಖನ ಆರಾಧನೆ ಮಾಡಬೇಕು. ಈ ರಾಶಿಯವರು ವಿಕಲಚೇತನರಿಗೆ ಆದಷ್ಟು ಸಹಾಯ ಮಾಡಬೇಕು. ಪ್ರಾಣಿ, ಪಕ್ಷಿಗಳಿಗೆ ಏನಾದರೂ ಸಹಾಯ ಮಾಡುವುದು. ಈ ರೀತಿ ಮಾಡುವುದರಿಂದ ಹೆಚ್ಚು ಒಳ್ಳೆಯದು ನಡೆದು, ಕಡಿಮೆ ಕೆಟ್ಟದ್ದು ಕಂಡುಬರುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.