ವೃಶ್ಚಿಕ ರಾಶಿ 2023 ರಲ್ಲಿ ನಿಮ್ಮ ಜೀವನದ ದಿಕ್ಕೇ ಬದಲಾಗಲಿದೆ ಹೇಗೆ ಗೊತ್ತಾ..

0 4,794

2023ರ ವರ್ಷ ಭವಿಷ್ಯ ವೃಶ್ಚಿಕ ರಾಶಿಯವರಿಗೆ ಹೇಗಿರಲಿದೆ ಯಾವ ರೀತಿ ಅದೃಷ್ಟ, ಶುಭ ಅಶುಭ ಫಲಗಳು ಹೊಂದಿದೆ ಎಂಬುದನ್ನ ಈ ಕೆಳಗಿನ ಲೇಖನದಲ್ಲಿ ನೋಡಬಹುದಾಗಿದೆ. ನಾವೆಲ್ಲಾ 2022 ನೇ ಇಸ್ವಿಯ ಅಂತ್ಯಕ್ಕೆ ಬಂದಿದ್ದೇವೆ ಇನ್ನು ಕೇವಲ ಒಂದೂವರೆ ತಿಂಗಳಲ್ಲಿ ಹೊಸ ವರ್ಷವೂ ನಮ್ಮನ್ನು ಸ್ವಾಗತಿಸಲಿದೆ. ಆ ವರ್ಷದಲ್ಲಿ ವೃಶ್ಚಿಕ ರಾಶಿಯವರಿಗೆ ಯಾವ ರೀತಿ ಇರಲಿದೆ ಮತ್ತು ಯಾವ ಯಾವ ರೀತಿಯ ಈ ವರ್ಷ ಶುಭ ಹಾಗೂ ಅಶುಭ ಫಲಗಳಿವೆ ಎನ್ನುವ ಬಗ್ಗೆ ಹೇಳುವುದಾದರೆ, ಭೂಮಿಯಲ್ಲಿ ಹುಟ್ಟಿದ ಪ್ರತಿಯೊಬ್ಬ ಮನುಷ್ಯನಿಗೂ ಕೂಡ ಜಾತಕ ಎನ್ನುವುದು ಇರುತ್ತದೆ.

ಒಮ್ಮೆ ಒಳ್ಳೆಯದಾದರೆ ಮತ್ತೊಮ್ಮೆ ಕೆಲವು ನೆಗೆಟಿವ್ ಬದುಕಿನಲ್ಲಿ ಉಂಟಾಗಬಹುದು ಆದರೆ ಯಾವುದು ಶಾಶ್ವತ ಅಲ್ಲ. ಭವಿಷ್ಯ ಎನ್ನುವುದು ಈ ರೀತಿ ಇರಲಿದೆ ಎನ್ನುವುದನ್ನು ಅಷ್ಟೇ ಹೇಳುತ್ತದೆ ನಮ್ಮ ಬುದ್ಧಿವಂತಿಕೆ ಹಾಗೂ ಸಮಯ ಪ್ರಜ್ಞೆಯಿಂದ ಎಂತಹ ಪರಿಸ್ಥಿತಿ ಇದ್ದರೂ ಏನಾದರೂ ಎದುರಿಸುವ ಶಕ್ತಿ ನಮ್ಮಲ್ಲಿ ಬರಬೇಕು. ಅದರ ಪ್ರಕಾರ 2023 ರ ವರ್ಷದ ವರ್ಷ ಭವಿಷ್ಯ ಈ ರೀತಿ ಇರಲಿದೆ.

ಶನಿ ಗುರು ಮತ್ತು ರಾಹು ಕೇತು ಈ ಗ್ರಹಗಳ ಆಧಾರದ ಮೇಲೆ ವರ್ಷ ಭವಿಷ್ಯವನ್ನು ಹೇಳಲಾಗುತ್ತದೆ. 2023ರ ವರ್ಷದಲ್ಲಿ ಈ ನಾಲ್ಕು ಗ್ರಹಗಳು ಯಾವ ಯಾವ ರಾಶಿಯಲ್ಲಿ ಸ್ಥಿತರಾಗಿರುತ್ತಾರೆ ಎಂದರೆ ಶನಿಯು 2023 ಜನವರಿ 17ಕ್ಕೆ ಕುಂಭ ರಾಶಿಗೆ ಮಕರ ರಾಶಿಯಿಂದ ಪ್ರವೇಶ ಮಾಡುತ್ತಾರೆ. ವರ್ಷಪೂರ್ತಿ ಕುಂಭ ರಾಶಿಯಲ್ಲಿ ಸ್ಥಿತರಾಗಿರುತ್ತಾರೆ. ಹಾಗೆಯೇ ಗುರು ಗ್ರಹವು 2023 ಏಪ್ರಿಲ್ 22ನೇ ತಾರೀಖಿನಂದು ಮೀನ ರಾಶಿಯಿಂದ ಮೇಷ ರಾಶಿಗೆ ಪ್ರವೇಶ ಮಾಡುತ್ತಾರೆ. ಗುರುವೂ ಕೂಡ ಈ ವರ್ಷ ಪೂರ್ತಿ ಮೇಷ ರಾಶಿಯಲ್ಲಿ ಸ್ಥಿತರಾಗಿರುತ್ತಾರೆ.

ಮೇಷ ರಾಶಿ ಅಲ್ಲಿ ರಾಹು ಈಗಾಗಲೇ ಇದ್ದಾರೆ ನವೆಂಬರ್ 29, 2023ರ ವರೆಗೂ ಮೇಷ ರಾಶಿಯಲ್ಲಿಯೇ ಇರುತ್ತಾರೆ. ಈ ವರ್ಷದ ಕೊನೆಯ ತಿಂಗಳಿನಲ್ಲಿ ಅಂದರೆ ನವೆಂಬರ್ 29ನೇ ತಾರೀಕಿನಂದು ಮೇಷ ರಾಶಿಯನ್ನು ಬಿಟ್ಟು ಮೀನ ರಾಶಿಗೆ ಪ್ರವೇಶ ಮಾಡುತ್ತಾರೆ. ಮತ್ತು ಅದೇ ದಿನದಂದು ತುಲಾ ರಾಶಿಯಲ್ಲಿ ಇರುವ ಕೇತು ಕನ್ಯಾ ರಾಶಿಗೆ ಪ್ರವೇಶ ಪಡೆಯುತ್ತಾರೆ.

ವೃಶ್ಚಿಕ ರಾಶಿಯ ಜನರು ಶನಿಯ ಅರ್ಧಾರ್ಧದಿಂದ ಮುಕ್ತರಾಗುತ್ತಿದ್ದಾರೆ. ಆದರೆ ಕೇತುವಿನ ಸಂವಹನವು ನಿಮ್ಮ ರಾಶಿಯ ಮೇಲೆ ನಡೆಯುತ್ತಿದೆ. ಈ ಸಮಯದಲ್ಲಿ, ರಾಶಿಚಕ್ರದ ಅಧಿಪತಿ ಮಂಗಳ ಕೂಡ ಹಿಮ್ಮುಖವಾಗಿರುವುದರಿಂದ ವರ್ಷದ ಅಂತ್ಯವು ಏರಿಳಿತಗಳಿಂದ ತುಂಬಿರುತ್ತದೆ. ಮಾನಸಿಕ ತೊಂದರೆಗಳು ಹೆಚ್ಚಾಗುತ್ತವೆ ಮತ್ತು ಅಪಘಾತಗಳ ಸಂಭವವಿದೆ. ಕುಟುಂಬ ಜೀವನದಲ್ಲಿ ಪರಸ್ಪರ ಸಹಕಾರ ಉಳಿಯುತ್ತದೆ. ನಂತರದ ಪ್ರತಿಷ್ಠೆ ಮತ್ತು ಆರ್ಥಿಕ ಲಾಭಗಳು ಉದ್ಯೋಗ ವ್ಯವಹಾರವನ್ನು ಹೆಚ್ಚಿಸುತ್ತವೆ. ಈ ವರ್ಷ ಧಾರ್ಮಿಕ ಕಾರ್ಯಗಳಿಗೆ ಹಣ ವ್ಯಯವಾಗಲಿದೆ. ಹೊಸ ಕೆಲಸಕ್ಕೆ ಇದು ಉತ್ತಮ ಸಮಯ.

Leave A Reply

Your email address will not be published.