ಬಡವರಿಗಾಗಿ ಸರಕಾರದಿಂದ ಹಲವಾರು ಯೋಜನೆಗಳು ಜಾರಿಗೆ ಬರುತ್ತಿವೆ. ಬಡವರಿಗೆ ಸಹಾಯವಾಗುವಂತಹ ಯೋಜನೆಗಳಲ್ಲಿ ಇಂದಿರಾ ಗಾಂಧಿ ವೃದ್ಯಾಪ್ಯ ಯೋಜನೆಯು ಒಂದು. ಇಂದಿರಾ ಗಾಂಧಿ ವೃದ್ಯಾಪ್ಯ ಯೋಜನೆಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಕ್ರಮಗಳನ್ನು ನಾವೂ ಇಲ್ಲಿ ತಿಳಿಯೋಣ.

ವಯಸ್ಸಾದವರಿಗೆ ನೆರವಾಗಲೂ ವೃದ್ಯಾಪ್ಯ ವೇತನ ತಿಂಗಳಿಗೆ ಒಮ್ಮೆ ಕೊಡುತ್ತಾರೆ. ಈ ವೇತನವನ್ನು ಅರವತ್ತು ವಯಸ್ಸಿನ ನಂತರ ಕೊಡುತ್ತಾರೆ. ಈ ವೃದ್ಯಾಪ್ಯ ವೇತನ ಪಡೆಯಲು ಅರ್ಜಿ ಸಲ್ಲಿಸಿ ದಾಖಲೆ ನೀಡಬೇಕಾಗಿರುತ್ತದೆ. ಅರ್ಜಿ ಹಾಕಲು ಯಾವುದೆ ಕಛೇರಿಗಳಿಗೆ ತಿರುಗುವ ಅವಶ್ಯಕತೆ ಇರುವುದಿಲ್ಲ. ಕಂಪ್ಯೂಟರ್ ಮೂಲಕ ಮನೆಯಲ್ಲಿಯೆ ಅರ್ಜಿ ಹಾಕಬಹುದು. ಮೊದಲು ಕಂಪ್ಯೂಟರ್ ನಲ್ಲಿ ಒಂದು ವೆಬ್ ಬ್ರೌಸರ್ ಓಪನ್ ಮಾಡಿಕೊಳ್ಳಬೇಕು. ಸರ್ಚ್ ಮಾಡುವಲ್ಲಿ ಸೇವಾ ಸಿಂಧು ಸರ್ವಿಸ್ ಪ್ಲಸ್ ಎಂದು ಸರ್ಚ್ ಮಾಡಿ. ನಂತರ ಸೇವಾ ಸಿಂಧು 1-ಸರ್ವಿಸ್ ಪ್ಲಸ್ ಎಂದು ಬಂದಿರುವುದನ್ನು ತೆರೆಯಿರಿ. ಸೇವಾ ಸಿಂಧು ಪ್ಲಸ್ ಪೊರ್ಟಲ್ ಓಪನ್ ಆಗುತ್ತದೆ. ನಂತರ ಈಗಾಗಲೇ ಅರ್ಜಿ ಹಾಕಿದ್ದಲ್ಲಿ ಅರ್ಜಿಯಲ್ಲಿ ಕೊಟ್ಟಿರುವ ಮೊಬೈಲ್ ನಂಬರ್ ಹಾಕಿ, ಗೆಟ್ ಓಟಿಪಿಯನ್ನು ಆಯ್ಕೆ ಮಾಡಿದರೆ ಮೊಬೈಲ್ ನಂಬರ್ ಗೆ ಓಟಿಪಿ ಬರುತ್ತದೆ. ಅಲ್ಲಿ ಒಂದು ಕ್ಯಾಪ್ಚರ್ ಕೋಡ್ ಇರುತ್ತದೆ ಅದನ್ನು ಹಾಕಿ ಸಬ್ಮಿಟ್ ಮಾಡಿದರೆ, ಸೇವಾ ಸಿಂಧು ಸರ್ವಿಸ್ ಪ್ಲಸ್ ಪೊರ್ಟಲ್ ಓಪನ್ ಆಗುತ್ತದೆ.

ಇಲ್ಲಾ ಇದೆ ಮೊದಲು ಈ ವೆಬ್ ಸೈಟ್ ಬಳಸುತ್ತಿದ್ದಲ್ಲಿ ಸಬ್ಮಿಟ್ ಬಟನ್ ಕೆಳಗೆ ನ್ಯೂ ಯುಸರ್ ರೆಜಿಸ್ಟರ್ ಹಿಯರ್ ಎಂಬ ಅಕ್ಷರಗಳು ಕಾಣಿಸುತ್ತದೆ. ಅದನ್ನು ಆಯ್ಕೆ ಮಾಡಿ. ನಂತರ ಡಿಜಿ ಲಾಕರ್ ಓಪನ್ ಆಗುತ್ತದೆ ಅಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಕಬೇಕು. ಇದರ ನಂತರ ಆಧಾರ್ ಕಾರ್ಡ್ ಗೆ ಲಿಂಕ್ ಇರುವ ಮೊಬೈಲ್ ನಂಬರ್ ಗೆ ಓಟಿಪಿ ಬರುತ್ತದೆ. ಅದನ್ನು ಅಲ್ಲಿ ನಮೂದಿಸಿ ಕಂಟಿನ್ಯು ಎಂದು ಕ್ಲಿಕ್ ಮಾಡಬೇಕು. ನಂತರ ಅಲೊವ್ ಕೊಡಬೇಕು. ನಂತರ ಇ-ಮೇಲ್ ಐಡಿ ಹಾಗೂ ಮೊಬೈಲ್ ನಂಬರ್ ನಮೂದಿಸಬೇಕು. ನಂತರ ನಿಮ್ಮದೆ ಆದ ಒಂದು ಪಾಸ್ವರ್ಡ್ ನಮೂದಿಸಬೇಕು‌. ನಂತರ ಕ್ಯಾಪ್ಚರ್ ಕೋಡ್ ಹಾಕಿ ಸಬ್ಮಿಟ್ ಬಟನ್ ಒತ್ತಬೇಕು. ಇಲ್ಲಿಗೆ ರೆಜಿಸ್ಟ್ರೆಷನ್ ಮುಗಿಯುತ್ತದೆ.

ನಂತರ ಮೊದಲು ರೆಜಿಸ್ಟರ್ ಮಾಡಲು ಹೋದ ಪೇಜ್ ಗೆ ಬಂದು ರೆಜಿಸ್ಟ್ರೇಷನ್ ಮಾಡಲು ಕೊಟ್ಟ ನಂಬರ್ ಅಥವಾ ಇ- ಮೇಲ್ ಎರಡರಲ್ಲಿ ಒಂದನ್ನು ಹಾಕಿದಾಗ ಓಟಿಪಿ ಬರುತ್ತದೆ ಅದನ್ನು ನಮೂದಿಸಿ, ಕ್ಯಾಪ್ಚರ್ ಕೋಡ್ ಹಾಕಿ, ಸಬ್ಮಿಟ್ ಬಟನ್ ಒತ್ತಬೇಕು. ನಂತರ ಓಪನ್ ಆದ ಪೋರ್ಟಲ್ ಅಂದರೆ ಪೇಜ್ ನಲ್ಲಿ ಎಡಗಡೆ ಅಪ್ಲೈ ಫಾರ್ ಸರ್ವಿಸ್ ಎಂದಿರುತ್ತದೆ. ಅದನ್ನು ಆಯ್ಕೆ ಮಾಡಬೇಕು. ಅಲ್ಲಿ ವಿವ್ ಆಲ್ ಅವೆಲೆಬಲ್ ಸರ್ವಿಸ್ ಎಂದು ಬರುತ್ತದೆ ಅದನ್ನು ಒತ್ತಬೇಕು. ನಂತರ ಓಪನ್ ಆಗುವ ಪೇಜ್ ನಲ್ಲಿ ಭಾಷೆ ಬದಲಾವಣೆ ಮಾಡುವ ಆಯ್ಕೆಯೂ ಇರುತ್ತದೆ. ಅಲ್ಲೆ ಕೆಳಗೆ ಸರ್ಚ್ ಬಾಕ್ಸ್ ಇರುತ್ತದೆ ಅಲ್ಲಿ ಓಲ್ಡ್ ಏಜ್ ಎಂದು ಹಾಕಬೇಕು.

ಹೀಗೆ ಹಾಕಿದಾಗ ಇಂದಿರಾ ಗಾಂಧಿ ವೃದ್ಯಾಪ್ಯ ವೇತನ ಎಂದು ಬರುತ್ತದೆ. ಅದನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರದ ಪೇಜ್ ಅರ್ಜಿ ಹಾಕುವುದಾಗಿರುತ್ತದೆ. ಮೊದಲಿಗೆ ಜಿಲ್ಲೆ ಯಾವುದು ಎಂದು ಮೊದಲಿಗೆ ಆರಿಸಿಕೊಳ್ಳಬೇಕು. ನಂತರ ತಾಲ್ಲೂಕು ಯಾವುದು ಎಂದು ಆರಿಸಿಕೊಳ್ಳಬೇಕು. ಗ್ರಾಮೀಣ ಪ್ರದೇಶದವರಾ ಇಲ್ಲ ನಗರ ಪ್ರದೇಶದ ಜನರಾ ಎಂದು ಆಯ್ದುಕೊಳ್ಳಬೇಕು. ನಂತರ ಹೋಬಳಿ ಯಾವುದು, ಪಟ್ಟಣ ಯಾವುದು, ವಾರ್ಡ್ ಯಾವುದು ಎಂದು ಆರಿಸಿ, ನಮೂದಿಸಬೇಕು. ಕೆಳಗೆ ಬಂದಾಗ ಅರ್ಜಿದಾರರ ವಿಳಾಸ ಇತರೆ ವಿಷಯಗಳ ನಮೂದಿಸಬೇಕಾಗುತ್ತದೆ. ಎಡಗಡೆಯಲ್ಲಿ ಕನ್ನಡದಲ್ಲಿ ಬಲಗಡೆಯಲ್ಲಿ ಇಂಗ್ಲೀಷ್ ನಲ್ಲಿ ಬರೆಯಬೇಕು. ಮೊದಲು ಗೌರವ ಸೂಚಕ ಅಂದರೆ ಶ್ರೀ, ಶ್ರೀಮತಿ ಇದನ್ನು ಆಯ್ದುಕೊಳ್ಳಬೇಕು. ಸಂಬಂಧ ಇದ್ದಲ್ಲಿ ಬಿನ್ ಅಥವಾ ಕೊಂ ಎಂದು ಕೇಳುತ್ತದೆ ಅದನ್ನು ಭರ್ತಿ ಮಾಡಬೇಕು. ಸಂಬಂಧಿಕರ ಗೌರವ ಸೂಚಕ ಕೇಳುತ್ತದೆ. ಅದನ್ನು ಭರ್ತಿ ಮಾಡಬೇಕು. ನಂತರ ಸಂಬಂಧಿಕರ ಹೆಸರು, ವಿಳಾಸ, ಪಿನ್ ಕೋಡ್ ಎಲ್ಲವನ್ನು ಭರ್ತಿ ಮಾಡಬೇಕು. ಇದೇ ಮಾಹಿತಿಯನ್ನು ಇಂಗ್ಲೀಷ್ ಭಾಷೆಯಲ್ಲಿ ಹಾಕಬೇಕು. ಸ್ವಲ್ಪ ಕೆಳಗೆ ಬಂದ ನಂತರ ಧರ್ಮ ಯಾವುದು, ಜಾತಿ, ಹುಟ್ಟಿದ ದಿನಾಂಕ, ಆದಾಯ ಎಷ್ಟು, ವಯಸ್ಸು ಎಷ್ಟು, ಲಿಂಗ ಯಾವುದು ಎಂದು ನಮೂದಿಸಬೇಕು. ನಂತರ ಐಡಿ ಕೇಳುತ್ತದೆ.

ಆಧಾರ್ ಕಾರ್ಡ್ ಆಯ್ದು ನಂತರ ಆಧಾರ್ ಕಾರ್ಡ್ ನಂಬರ್ ಅನ್ನು ನಮೂದಿಸಬೇಕು. ಕೆಳಗಡೆ ಬ್ಯಾಂಕ್ ವಿವರ ನಮೂದಿಸಬೇಕು. ಬ್ಯಾಂಕ್ ಹೆಸರು, ತಾಲ್ಲೂಕು ಯಾವುದು, ಬ್ರಾಂಚ್ ಯಾವುದು, ಬ್ಯಾಂಕ್ ವಿಳಾಸ ಭರ್ತಿ ಮಾಡಬೇಕು. ನಂತರ ಡಿಕ್ಲೆರೇಷನ್ ನಲ್ಲಿ ಐ ಅಗ್ರಿ ಎಂದು ಆಯ್ಕೆ ಮಾಡಬೇಕು. ನಂತರ ಕ್ಯಾಪ್ಚರ್ ಕೋಡ್ ಹಾಕಿ ಸಬ್ಮಿಟ್ ಮಾಡಬೇಕು. ಇಲ್ಲಿಗೆ ವೃದ್ಯಾಪ್ಯ ವೇತನ ಯೋಜನೆಗೆ ಅರ್ಜಿ ಹಾಕಿ ಮುಗಿಯುತ್ತದೆ.

ಇವು ಇಂದಿರಾ ಗಾಂಧಿ ವೃದ್ಯಾಪ್ಯ ವೇತನ ಯೋಜನೆಗೆ ಅರ್ಜಿ ಹಾಕುವ ವಿಧಾನ. ಒಂದು ವೇಳೆ ಅರ್ಜಿ ಹಾಕಿದ ನಂತರ ಅದರ ಸ್ಥಿತಿಗತಿಗಳನ್ನು ನೋಡಲು ಅಪ್ಲೈ ಫಾರ್ ಸರ್ವಿಸ್ ಅದರ ಕೆಳಗಡೆಗೆ ವಿವ್ ಸ್ಟೇಟಸ್ ಎಂದು ಇರುತ್ತದೆ ಅದರಲ್ಲಿ ನೀವು ನೋಡಬಹುದು.

Leave a Reply

Your email address will not be published. Required fields are marked *