ಇಲೆಕ್ಷನ್ ಬಂದರೆ ಊರಿನ ವೋಟರ್ ಲಿಸ್ಟ್ ನ್ನು ಪಡೆಯಲು ಕಷ್ಟ ಪಡದೆ ಮೊಬೈಲ್ ನಲ್ಲಿ ಸುಲಭವಾಗಿ ವೋಟರ್ ಲಿಸ್ಟ್ ನ್ನು ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆಂದು ಈ ಲೇಖನದ ಮೂಲಕ ತಿಳಿಯೋಣ.
ಊರಿನ ವೋಟರ್ ಲಿಸ್ಟ್ ಪಡೆಯಲು ಕಷ್ಟ ಪಡಬೇಕಾಗುತ್ತದೆ. ಆದರೆ ಸುಲಭವಾಗಿ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು. ಹೇಗೆಂದರೆ ಚೀಪ್ ಇಲೆಕ್ಟ್ರಾಲ್ ಆಫಿಸರ್ ಕರ್ನಾಟಕ ಈ ವೆಬ್ ಸೈಟ್ ನಲ್ಲಿ ಹಲವು ಸೇವೆಗಳು ದೊರೆಯುತ್ತದೆ. ಅದರಲ್ಲಿ ವ್ಯೂ ವೋಟರಲ್ ಇಲೆಕ್ಟ್ರಲ್ ರೋಲ್ಸ್ ಇದನ್ನು ಕ್ಲಿಕ್ ಮಾಡಿ ನಂತರ ಕೆಳಗೆ ವ್ಯೂ ಫೈನಲ್ ಇಲೆಕ್ಟ್ರಲ್ ರೋಲ್ಸ್ 2019 ಇದನ್ನು ಕ್ಲಿಕ್ ಮಾಡಬೇಕು. ಪ್ರತಿ ವರ್ಷಕ್ಕೊಮ್ಮೆ ವೋಟರ್ ಲಿಸ್ಟ್ ಬಿಡುಗಡೆಯಾಗುತ್ತದೆ .
ನಂತರ ನಮ್ಮ ಜಿಲ್ಲೆಯನ್ನು ಸೆಲೆಕ್ಟ್ ಮಾಡಬೇಕು ವೋಟರ್ ಐ.ಡಿಯಲ್ಲಿ ಭಾಗ ಸಂಖ್ಯೆ, ಮತ್ತು ವಿಧಾನಸಭಾ ಕ್ಷೇತ್ರದ ಸಂಖ್ಯೆ ಇರುತ್ತದೆ ಭಾಗ ಸಂಖ್ಯೆಯನ್ನು ಹಾಕಿ ಸರ್ಚ್ ಮಾಡಿದರೆ ಸಂಪೂರ್ಣ ವೋಟರ್ ಲಿಸ್ಟ್ ದೊರೆಯುತ್ತದೆ ಅದರಲ್ಲಿ ನಮ್ಮ ಹೆಸರು ಬೇಕೆಂದರೆ ಕಂಪ್ಯೂಟರ್ ನಲ್ಲಿ ಕಂಟ್ರೋಲ್ ಎಫ್ ಹೊಡೆದರೆ ಫೈಂಡಿಂಗ್ ಬರುತ್ತದೆ ಅಲ್ಲಿ ಹೆಸರನ್ನು ಟೈಪ್ ಮಾಡಿದರೆ ನಮ್ಮ ವೋಟರ್ ಬಗ್ಗೆ ಮಾಹಿತಿ ಪಡೆಯಬಹುದು. ಈ ರೀತಿ ಯಾವುದೇ ಊರಿನ ವೋಟರ್ ಲಿಸ್ಟ್ ನ್ನು ಸುಲಭವಾಗಿ ಮತ್ತು ಯಾವುದೇ ಖರ್ಚಿಲ್ಲದೆ ಮೊಬೈಲ್ ನಿಂದ ಪಡೆಯಬಹುದು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.