ಕನ್ನಡ ಸಿನಿಮಾಗಳ ಈ ಜನಪ್ರಿಯ ನಟಿಯರ ವಯಸ್ಸು ಎಷ್ಟು ಗೊತ್ತೇ?

0 1

ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ನಟ ನಟಿಯರು ಇದ್ದಾರೆ. ಆದರೆ ಹಳೆಯ ಕಾಲದ ನಟ ನಟಿಯರು ತಮ್ಮ ಅಮೋಘ ನಟನೆಯಿಂದ ಈಗಲೂ ಸಹ ಪ್ರೇಕ್ಷಕರ ಮನದಲ್ಲಿ ನೆಲೆಯೂರಿದ್ದಾರೆ. ಹಿಂದಿನ ಕಾಲದ ಕೆಲವು ನಟ-ನಟಿಯರು ಈಗಲೂ ಸಹ ಅಭಿನಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ಸಿಕ್ಕ ಅವಕಾಶವನ್ನು ಬಿಡದೆ ಈಗಿನ ಕಾಲದವರ ಜೊತೆಗೆ ತಮ್ಮ ವಯಸ್ಸನ್ನು ಕೂಡ ಮರೆತು ತಂದೆ-ತಾಯಿ ಅಂತಹ ಪೋಷಕ ಪಾತ್ರಗಳಲ್ಲಿ ಕೂಡ ನಟನೆ ಮಾಡುತ್ತಾ ಇದ್ದಾರೆ ಹಾಗೂ ಅಷ್ಟೇ ಅಲ್ಲದೆ ಬೇರೆ ಬೇರೆ ಕೆಲಸ ಕಾರ್ಯಗಳಲ್ಲಿ ಕೂಡಾ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಅಂತಹ ಕೆಲವು ಹಿರಿಯ ನಟಿಯರು ವಯಸ್ಸಿನ ಬಗ್ಗೆ ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಮೊದಲಿಗೆ ಹಿರಿಯ ನಟಿ ಜಯಂತಿ ಅವರ ವಯಸ್ಸು ಎಷ್ಟು ಅನ್ನೋದನ್ನ ತಿಳಿದುಕೊಳ್ಳೋಣ. ಜಯಂತಿ ಅವರು ಜನಿಸಿದ್ದು ಜನವರಿ 6, 1965 ರಲ್ಲಿ. ಈಗ ಇವರ ವಯಸ್ಸು 75 ವರ್ಷ. ಎರಡನೆಯದಾಗಿ ಭಾರತಿ ವಿಷ್ಣುವರ್ಧನ್ ಅವರು. ಭಾರತಿ ವಿಷ್ಣುವರ್ಧನ್ ಅವರು ಜನಿಸಿದ್ದು ಆಗಸ್ಟ್ 15 , 1950ರಲ್ಲಿ ಹಾಗೆ ಈಗ ಇವರ ವಯಸ್ಸು 69 ವರ್ಷ. ಇನ್ನು ಕನ್ನಡದಲ್ಲಿ ಹಿಂದಿನ ಕಾಲದಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿದ ಹಿರಿಯ ನಟಿ ಸರೋಜಾದೇವಿ ಅವರ ವಯಸ್ಸು ಎಷ್ಟು ಅಂತ ನೋಡುವುದಾದರೆ ಇವರು ಜನಿಸಿದ್ದು ಜನವರಿ 7 , 1938 ರಲ್ಲಿ. ಸರೋಜದೇವಿ ಅವರ ಈಗಿನ ವಯಸ್ಸು 82 ವರ್ಷ. ಆಗಿನ ಕಾಲದಲ್ಲಿ ಡಾಕ್ಟರ್ ರಾಜಕುಮಾರ್ ವಿಷ್ಣುವರ್ಧನ್ ಎಲ್ಲಾ ನಟರ ಜೊತೆಗೆ ಅಭಿನಯಿಸಿದ್ದ ಆರತಿಯವರು ಜನಿಸಿದ್ದು 1954 ರಲ್ಲಿ ಹಾಗೂ ಅವರ ವಯಸ್ಸು 66 ವರ್ಷ.

ಇನ್ನು ಹೆಚ್ಚಾಗಿ ಆಕ್ಷನ್ ಸಿನಿಮಾಗಳಲ್ಲಿ ತಮ್ಮನ್ನು ಹೆಚ್ಚಾಗಿ ತೊಡಗಿಸಿಕೊಂಡಿದ್ದ ಮಾಲಾಶ್ರೀ ಅವರ ಈಗಿನ ವಯಸ್ಸು ನೋಡುವುದಾದರೆ , ಇವರು ಜನಿಸಿದ್ದು ಆಗಸ್ಟ್ 10 , 1973 ರಲ್ಲಿ. ಮಾಲಾಶ್ರೀ ಅವರ ಈಗಿನ ವಯಸ್ಸು 46 ವರ್ಷ. ನಟಿ ಪ್ರೇಮಾ ಅವರ ಈಗಿನ ವಯಸ್ಸು ಎಷ್ಟು ಅಂತ ನೋಡುವುದಾದರೆ ಇವರ ಜನಿಸಿದ್ದು 1977 ಜನವರಿ ಆರರಂದು. ಪ್ರೇಮ ಅವರ ಈಗಿನ ವಯಸ್ಸು 43 ವರ್ಷ. ಆಗಿನ ಕಾಲದಲ್ಲಿ ಸುಮಾರು ಎಲ್ಲಾ ನಾಯಕ ನಟರ ಜೊತೆ ಅಭಿನಯಿಸಿದ್ದ ಸುಧಾರಾಣಿ ಅವರು ಜನಿಸಿದ್ದು 1970 ಆಗಸ್ಟ್ 14ರಂದು. ಸುಧಾರಾಣಿ ಅವರ ಈಗಿನ ವಯಸ್ಸು ನೋಡುವುದಾದರೆ 49 ವರ್ಷ. ಫೆಬ್ರುವರಿ 28 , 1961 ರಲ್ಲಿ ಜನಿಸಿದ ಹಿರಿಯ ನಟಿ ಜಯಮಾಲಾ ಅವರ ಈಗಿನ ವಯಸ್ಸು ನೋಡುವುದಾದರೆ 61 ವರ್ಷ. ಇನ್ನು ಸಂಸದೆ ಆಗಿರುವ ಹಿರಿಯ ನಟಿ ಸುಮಲತಾ ಅವರ ಈಗಿನ ವಯಸ್ಸು ನೋಡುವುದಾದರೆ ಇವರಿಗೆ 56 ವರ್ಷ. ಸುಮಲತಾ ಅವರು ಜನಿಸಿದ್ದು 1963 ಆಗಸ್ಟ್ 27 ರಲ್ಲಿ. ಇನ್ನು ಡಾಕ್ಟರ್ ರಾಜಕುಮಾರ್ ಅವರ ಚಿತ್ರಗಳಲ್ಲಿ ಹೆಚ್ಚಾಗಿ ಅಭಿನಯಿಸಿದ್ದ ನಟಿ ಮಾಧವಿ ಅವರ ಈಗಿನ ವಯಸ್ಸು ನೋಡುವುದಾದರೆ ಇವರು ಜನಿಸಿದ್ದು 1966 , ಸೆಪ್ಟೆಂಬರ್ 14 ರಲ್ಲಿ . ಮಾಧವಿ ಅವರ ಈಗಿನ ವಯಸ್ಸು 57 ವರ್ಷ. ಇನ್ನು ಕರಾಟೆಕಿಂಗ್ ಅಂತಲೇ ಪ್ರಸಿದ್ಧಿ ಹೊಂದಿದ ಶಂಕರ್ ನಾಗ್ ಅವರ ಪತ್ನಿ ಅರುಂಧತಿ ನಾಗ್ ಅವರು ಜನಿಸಿದ್ದು ಜುಲೈ 6, 1953 ರಲ್ಲಿ. ಅರುಂಧತಿ ನಾಗ್ ಅವರ ಈಗಿನ ವಯಸ್ಸು 64 ವರ್ಷ. ಇನ್ನು ತಮ್ಮ ಅಳುಮುಂಜಿ ನಟನೆಯಿಂದಲೇ ಕನ್ನಡಿಗರ ಮನಗೆದ್ದ ನಟಿ ಶ್ರುತಿ ಅವರ ವಯಸ್ಸು ನೋಡುವುದಾದರೆ 44 ವರ್ಷ. ನಟಿ ಶ್ರುತಿ ಅವರು ಜನಿಸಿದ್ದು ಸೆಪ್ಟೆಂಬರ್ 18 , 1975 ರಲ್ಲಿ. ಹಿರಿಯ ನಟಿ ಗೀತಾ ಅವರ ಈಗಿನ ವಯಸ್ಸು ನೋಡುವುದಾದರೆ ಇವರು ಜನಿಸಿದ್ದು ಜುಲೈ 14 , 1962 ರಲ್ಲಿ ಹಾಗೆ ಇವರ ಈಗಿನ ವಯಸ್ಸು 58 ವರ್ಷ. ಪಂಚಭಾಷಾ ನಟಿ ಜಯಪ್ರದಾ ಅವರ ಈಗಿನ ವಯಸ್ಸು ನೋಡುವುದಾದರೆ ಇವರು ಜನಿಸಿದ್ದು ಏಪ್ರಿಲ್ 3 , 1962 ರಲ್ಲಿ. ಜಯಪ್ರದಾ ಅವರ ಈಗಿನ ವಯಸ್ಸು 58 ವರ್ಷ.

Leave A Reply

Your email address will not be published.