ಭಾರತೀಯ ಚುನಾವಣಾ ಆಯೋಗ ಪ್ರತಿ ನಾಗರಿಕನಿಗೂ ೧೮ ವರ್ಷ ಆದವರಿಗೆ ಗುರುತಿನ ಚೀಟಿಯನ್ನು ನೀಡುವಂತ ಯೋಜನೆಯನ್ನು ರೂಪಿಸಿದೆ ಅಷ್ಟೇ ಅಲ್ದೆ ಈ ಗುರುತಿನ ಚೀಟಿ ಇದ್ರೆ ಸರ್ಕಾರದ ಹಲವು ಯೋಜನೆಗಳನ್ನು ಪಡೆದುಕೊಳ್ಳಬಹುದಾಗಿದೆ ಹಾಗೂ ಸ್ಥಳೀಯ ಚುನಾವಣೆಗೆ ಮತದಾನ ಮಾಡಲು ಕೂಡ ಈ ಗುರುತಿನ ಚೀಟಿ ಅವಶ್ಯಕವಾಗಿ ಬೇಕಾಗುತ್ತದೆ. ಇದು ಒಂದು ವೇಳೆ ನಿಮ್ಮಲ್ಲಿ ಕಳೆದು ಹೋಗಿದ್ದಾರೆ ಅಥವಾ ಹಾಳಾಗಿದ್ದರೆ ಹೊಸದಾಗಿ ಪಡೆಯಲು ವಿಧಾನವನ್ನು ಅನುಸರಿಸಬಹುದಾಗಿದೆ.
ಈ ಗುರುತಿನ ಚೀಟಿಯನ್ನು ತಾಲ್ಲೂಕ್ ಆಫೀಸ್ ಗಳಲ್ಲಿ ನೀಡಲಾಗುತ್ತದೆ, ನೀವು ಇದನ್ನು ಆನ್ಲೈನ್ ಮೂಲಕ ಪಡೆಯಲು ಬಯಸಿದರೆ ಈ ವಿಧಾನ ನಿಮಗೆ ಸುಲಭ ಅನಿಸುತ್ತದೆ. ಮೊದಲನೆಯದಾಗಿ ಹೊಸ ಐಡಿ ಡೌನ್ಲೋಡ ಮಾಡುವ ವಿಧಾನ ಹೀಗಿದೆ ನೋಡಿ, ಮೊದಲಿಗೆ ನೀವು ಮತದಾರರ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿರಿ(WWW.NVSP.IN) ನಂತರ ಅಲ್ಲಿ ಹೋಮ್ ಪೇಜ್ ಕಾಣಿಸಿಕೊಳ್ಳುತ್ತದೆ. ನಂತರ ಅಲ್ಲಿ ಅದರಲ್ಲಿ ಹಲವಾರು ಮೆನುಗಳು ಲಭ್ಯವಿರುತ್ತದೆ, ಇದರಲ್ಲಿ ನೀವು ತಿದ್ದುಪಡಿ ಹಾಗೂ ಇತರೆ ಆಯ್ಕೆಗಳನ್ನು ಕಾಣಬಹುದು.
ಇನ್ನು ಎರಡನೇ ಹಂತ ಸರಿಯಾಗಿ ಹೋಮ್ ಪೇಜ್ ನ ಎಡಬದಿಯಲ್ಲಿ ಒಂದು ಸರ್ಚ್ ಆಯ್ಕೆ ಲಭ್ಯವಿರುತ್ತದೆ ಅದುವೇ SEARCH YOUR NAME IN ELECTORAL ROLE. ಇದನ್ನು ಕ್ಲಿಕ್ ಮಾಡಿದ ತಕ್ಷಣ ಮತ್ತೊಂದು ಪೋರ್ಟಲ್ ಒಪೆನ್ ಆಗುತ್ತದೆ, ಇಲ್ಲಿ ನೀವು ಮಾಡಬೇಕಾಗಿರೋದು ಏನು ಅನ್ನೋದಾದರೆ ನಿಮ್ಮ ಹಳೆಯ ವೋಟರ್ ಐಡಿ ಡೌನ್ಲೋಡ್ ಮಾಡಿಕೊಳ್ಳಲು ಬೇಕಾದ ವಿವರಗಳನ್ನು ನೀಡಿ ಅಷ್ಟೇ ಅಲ್ಲದೆ ಇಲ್ಲಿ ನೀವು ನಿಮ್ಮ EPIC NUMBER ಕೂಡ ನೀಡಿ ಡೌನ್ಲೋಡ್ ಮಾಡಿಕೊಳ್ಳಬಹುದು ಅಥವಾ ಬೇರೆ ವಿವರಗಳನ್ನು ನೀಡಿ ಕೂಡ ಡೌನ್ಲೋಡ್ ಮಾಡಿಕೊಳ್ಳಬಹುದು.
ಮತ್ತೊಂದು ವಿಧಾನ ಏನು ಅನ್ನೋದನ್ನ ನೋಡುವುದಾದರೆ ನಿಮ್ಮ ಹಳೆಯ ವೋಟರ್ ಐಡಿ ಹರಿದು ಹೋಗಿದ್ರೆ ಅಥವಾ ತುಂಬಾ ಹಳೆಯದಾಗಿದ್ದರೆ ನಿಮ್ಮ EPIC ಸಂಖ್ಯೆಯನ್ನು ನಮೂದಿಸಿ ಹಾಗೂ ಜಿಲ್ಲೆಯನ್ನು ಸೆಲೆಕ್ಟ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಬಹುದು. ಒಂದುವೇಳೆ ನಿಮಗೆ ಆನ್ಲೈನ್ ನಲ್ಲಿ ಪಡೆದುಕೊಳ್ಳಲು ಬರಲಿಲ್ಲವೆಂದರೆ ನಿಮ್ಮ ಊರಿನ ಶಾಲೆಯ ಶಿಕ್ಷಕರಲ್ಲಿ ವಿಚಾರಿಸಿ ಊರಿನ ಅಥವಾ ಗ್ರಾಮದ ಜನರ ಗುರುತಿನ ಚೀಟಿ ಎಲೆಕ್ಷನ್ ಐಡಿ ಕಾರ್ಡ್ ಅನ್ನು ಒದಗಿಸಿಕೊಡುವ ವ್ಯವಸ್ಥೆಯನ್ನು ಮಾಡಿರುತ್ತಾರೆ. ನಿಮಗೆ ಈ ಮಾಹಿತಿ ಇಷ್ಟವಾಗಿದ್ದರೆ ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಲು ಮರೆಯದಿರಿ ಧನ್ಯವಾದಗಳು