ಪ್ರತಿದಿನ ಸೇವನೆ ಮಾಡುವಂತ ಆಹಾರಗಳು ನಮ್ಮ ಆರೋಗ್ಯವನ್ನು ವೃದ್ಧಿಸುತ್ತವೆ ಹಾಗೂ ಆಹಾರ ಕ್ರಮದಲ್ಲಿ ಏನಾದರು ಸ್ವಲ್ಪ ವ್ಯತ್ಯಾಸವಾದರೆ ಅನಾರೋಗ್ಯ ಸಮಸ್ಯೆ ಕಾಡುತ್ತದೆ ಹಾಗಾಗಿ ದೇಹಕ್ಕೆ ಪೋಷಕಾಂಶಗಳನ್ನು ನೀಡುವಂತ ಆಹಾರಗಳನ್ನು ಸೇವನೆ ಮಾಡುವುದು ಸೂಕ್ತವಾಗಿದೆ. ಹಾಗಾದರೆ ಯಾವ ಆಹಾರಗಳು ಅತಿ ಸೂಕ್ತ ಹಾಗೂ ದೇಹಕ್ಕೆ ಬೇಕಾಗುವಂತ ಕ್ಯಾಲ್ಶಿಯಂ ಕೊರತೆಯನ್ನು ನೀಗಿಸುವ ಆಹಾರಗಳು ಯಾವುವು ಅನ್ನೋದನ್ನ ನೋಡುವುದಾದರೆ. ವಿಟಮಿನ್ ಸಿ ಹಾಗೂ ವಿಟಮಿನ್ ಡಿ ದೇಹಕ್ಕೆ ಅಗತ್ಯವಾಗಿದೆ ಆದ್ದರಿಂದ ಈ ರೀತಿಯ ಆಹಾರಗಳನ್ನು ಸೇವನೆ ಮಾಡಬೇಕಾಗುತ್ತದೆ.
ದೇಹದ ಮೂಳೆಗಳನ್ನು ಬಲಿಷ್ಠ ಮಾಡುವ ಜೊತೆಗೆ ದೇಹದಲ್ಲಿನ ಕ್ಯಾಲ್ಶಿಯಂ ಕೊರತೆಯನ್ನು ನೀಗಿಸುವಂತ ಆಹಾರಗಳು ಹಸಿ ಸೊಪ್ಪು ತರಕಾರಿಗಳು ಕ್ಯಾರೆಟ್ ಬೀನ್ಸ್ ಬಿಟ್ರೋಟ್ ಹಾಗೂ ಹಾಲು ಉತ್ಪನ್ನಗಳು ಅಷ್ಟೇ ಅಲ್ದೆ ಒಣ ಹಣ್ಣುಗಳಾದಂತ ಗೋಡಂಬಿ ದ್ರಾಕ್ಷಿ ಒಣ ಅಂಜೂರ ಬಾದಾಮಿ ಇತ್ಯಾದಿಗಳು ಇನ್ನು ಮೀನು ಸೇವನೆ ಕೂಡ ದೇಹಕ್ಕೆ ಉತ್ತಮ ಆರೋಗ್ಯವನ್ನು ವೃದ್ಧಿಸುತ್ತದೆ ದೇಹಕ್ಕೆ ಕ್ಯಾಲ್ಶಿಯಂ ಕೊರತೆಯನ್ನು ನಿವಾರಿಸುತ್ತದೆ.
ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ನೀಡುವಂತ ಆಹಾರಗಳು ವಿಟಮಿನ್ ಸಿ ಅಂಶವನ್ನು ಹೊಂದಿರುವಂತ ಆಹಾರಗಳನ್ನು ಸೇವನೆ ಮಾಡುವುದರಿಂದ ದೇಹಕ್ಕೆ ಉತ್ತಮ ಅರೋಗ್ಯ ವೃದ್ಧಿಯಾಗುವುದು ಕಿತ್ತಳೆಹಣ್ಣು ಮೂಸಂಬಿ ಕಿವಿಹಣ್ಣು ಇಂತಹ ಹಣ್ಣುಗಳನ್ನು ಸೇವನೆ ಮಾಡಬೇಕು. ಅಷ್ಟೇ ಅಲ್ದೆ ಪೊಟ್ಯಾಶಿಯಂ ಮೆಗ್ನಿಶಿಯಂ ಇರುವಂತ ಆಹಾರಗಳನ್ನು ಸೇವನೆ ಮಾಡುವುದು ಅತಿ ಸೂಕ್ತ
ಕೆಲವರಲ್ಲಿ ವಿಟಮಿನ್ ಡಿ ಕೊರತೆ ಇರುತ್ತದೆ ಅಂತವರು ಈ ವಿಧಾನವನ್ನು ಅನುಸರಿಸುವುದರಿಂದ ಉತ್ತಮ ಫಲಿತಾಂಶವನ್ನು ಕಾಣಬಹುದಾಗಿದೆ. ಪ್ರತಿದಿನ ಸೂರ್ಯನ ಕಿರಣಗಳನ್ನು ದೇಹಕ್ಕೆ ಬೀಳುವ ರೀತಿಯಲ್ಲಿ ೧೫ ರಿಂದ ೨೦ ನಿಮಿಷಗಳ ಕಾಲ ಮೈಹೊಡ್ಡಿ ನಿಂತುಕೊಳ್ಳಬೇಕು. ಇನ್ನು ಆಹಾರ ಕ್ರಮದಲ್ಲಿ ಸೇವನೆ ಮಾಡಬೇಕಾದ ಕ್ರಮಗಳು ಮೊಟ್ಟೆ, ಅಣಬೆ ಮೀನು ಇವುಗಳಿಂದ ವಿಟಮಿನ್ ಡಿ ಕೊರತೆ ನಿವಾರಣೆಯಾಗುವುದು.