ವಿಟಮಿನ್ ಗಳಲ್ಲಿ ಹಲವಾರು ವಿಧಗಳಿವೆ. ವಿಟಮಿನ್ ಎ, ಬಿ, ಸಿ, ಡಿ, ಇ ಇನ್ನೂ ಹಲವಾರು ವಿಧಗಳಿವೆ. ಒಂದೊಂದು ವಿಟಮಿನ್ ಗಳು ಒಂದೊಂದು ಆಹಾರ ಪದಾರ್ಥಗಳಲ್ಲಿ ಸಿಗುತ್ತವೆ. ಬೆಳಿಗ್ಗೆ ಬರುವ ಸೂರ್ಯನ ಬಿಸಿಲಿಗೆ ನಿಂತರೆ ವಿಟಮಿನ್ ಡಿ ಸಿಗುತ್ತದೆ. ಹಾಗೆಯೇ ನಾವು ಇಲ್ಲಿ ವಿಟಮಿನ್ ಎ ಇರುವ ಆಹಾರಗಳ ಬಗ್ಗೆ ಮತ್ತು ಪ್ರಯೋಜನಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ವಿಟಮಿನ್ ಎ ಹಲವಾರು ಪ್ರಯೋಜನಗಳನ್ನು ಹೊಂದಿದೆ. ಇದು ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ. ಕಣ್ಣಿನ ಸ್ನಾಯುಗಳನ್ನು ಗಟ್ಟಿಯಾಗಿ ಇಟ್ಟು ಕುರುಡುತನ ಆಗದಂತೆ ನೋಡಿಕೊಳ್ಳುತ್ತದೆ. ಇದು ದೇಹದಲ್ಲಿ ಯಾವುದೇ ರೀತಿಯ ಕ್ಯಾನ್ಸರ್ ಕೋಶಗಳು ಬೆಳೆಯಲು ಕೊಡುವುದಿಲ್ಲ. ಹಾಗೆಯೇ ಮೂಳೆಗಳ ಆರೋಗ್ಯವನ್ನು ಕಾಪಾಡುತ್ತದೆ. ದೇಹದ ಮೂಳೆಗಳನ್ನು ಗಟ್ಟಿಯಾಗಿ ಇಡುತ್ತದೆ. ಹಾಗೆಯೇ ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇದು ಸೋಂಕುಗಳಿಂದ ಕಾಪಾಡುತ್ತದೆ.

ವಿಟಮಿನ್ ಎ ಯು ಮೊಟ್ಟೆ, ಮೀನು ಮುಂತಾದ ತಿನ್ನುವ ಪ್ರಾಣಿಗಳಲ್ಲಿ ಇರುತ್ತದೆ. ಹಾಗೆಯೇ ಪನ್ನೀರು ಮತ್ತು ಹಾಲಿನ ಉತ್ಪನ್ನಗಳಲ್ಲಿ ವಿಟಮಿನ್ ಎ ಹೆಚ್ಚಾಗಿ ಕಂಡುಬರುತ್ತದೆ. ಹಸಿರು ಬಣ್ಣದ ಸೊಪ್ಪುಗಳಲ್ಲಿ ವಿಟಮಿನ್ ಎ ಇರುತ್ತದೆ. ಕ್ಯಾರೆಟ್, ಬೀಟ್ರೂಟ್, ಟೊಮಾಟೋ, ಕುಂಬಳಕಾಯಿ , ಕೊತ್ತಂಬರಿ, ಬೀನ್ಸ್, ಸೌತೆಕಾಯಿ, ಸಿಹಿಗೆಣಸು, ಪಾಲಕ್ ಸೊಪ್ಪು, ಈ ತರಕಾರಿಗಳಲ್ಲಿ ಹೆಚ್ಚು ಇರುತ್ತದೆ. ಹಣ್ಣುಗಳಲ್ಲಿ ಕೇಸರಿ ಮತ್ತು ಹಳದಿ ಬಣ್ಣದಲ್ಲಿ ಸಿಗುವ ಎಲ್ಲಾ ಹಣ್ಣುಗಳಲ್ಲಿ ವಿಟಮಿನ್ ಎ ಇರುತ್ತದೆ. ಮಾವಿನಹಣ್ಣು, ಚಿಕ್ಕುಹಣ್ಣು, ಪಪ್ಪಾಯಿ, ಕಿತ್ತಳೆ, ಖರಬೂಜ ಇವುಗಳಲ್ಲಿ ಸಿಗುತ್ತದೆ.

ಇವುಗಳನ್ನು ದಿನನಿತ್ಯದ ಆಹಾರದಲ್ಲಿ ಬಳಸಿದರೆ ವಿಟಮಿನ್ ಎ ಯ ಕೊರತೆ ಉಂಟಾಗುವುದಿಲ್ಲ. 4 ವರ್ಷದಿಂದ 8 ವರ್ಷದವರಿಗೆ 1300 ಐ.ಯು. ವಿಟಮಿನ್ ಎ ಬೇಕಾಗುತ್ತದೆ. 9 ವರ್ಷದಿಂದ 13 ವರ್ಷದವರಿಗೆ 2000 ಐ.ಯು. ವಿಟಮಿನ್ ಎ ಬೇಕಾಗುತ್ತದೆ. 14 ವರ್ಷದಿಂದ 18ವರ್ಷದ ಮಕ್ಕಳಿಗೆ 2300 ಐ.ಯು. ವಿಟಮಿನ್ ಎ ಬೇಕಾಗುತ್ತದೆ. 18ವರ್ಷ ಮೇಲ್ಪಟ್ಟವರಿಗೆ 3000 ಐ.ಯು. ದ ವಿಟಮಿನ್ ಎ ಯ ಅವಶ್ಯಕತೆ ಇರುತ್ತದೆ. ಹಾಗೆಯೇ ಮಹಿಳೆಯರಿಗೆ 2300ಐ.ಯು. ವಿಟಮಿನ್ ಎ ದೊರೆಯುತ್ತದೆ. ಆದಷ್ಟು ಆರೋಗ್ಯಕ್ಕೆ ಮಾರಕವಾದ ಕಾರ್ಬೋಹೈಡ್ರೇಟ್ ಗಳಿಂದ ದೂರ ಇರಬೇಕು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!