Virgo Ugadi Astrology: ಮೈಗೆ ಎಳ್ಳೆಣ್ಣೆಯನ್ನು ಲೇಪಿಸಿಕೊಂಡು ನಮ್ಮ ಜೀವನವು ಸಹ ಹೀಗೆ ತಂಪಾಗಿರಲಿ ಎಂದು ದೇವರಲ್ಲಿ ಬೇಡುವಂತಹ ವಿಶೇಷ ಹಬ್ಬವೇ ಯುಗಾದಿ. ಯುಗಾದಿ ಎನ್ನುವುದು ಕೇವಲ ಹಬ್ಬವಲ್ಲ, ಅದು ನಮ್ಮ ಸಮಸ್ತ ಜೀವನವನ್ನು ನಿರ್ಧರಿಸುವ ದಿನವಾಗಿದೆ. ಆ ದಿನದಿಂದ ಎಲ್ಲ ರಾಶಿಗಳ ತಮ್ಮ ಗ್ರಹಗತಿಗಳನ್ನು ಬದಲಿಸಿಕೊಳ್ಳುತ್ತವೆ. ಹಾಗಿದ್ದರೆ ಬದಲಾದ ಯಾವ ಗ್ರಹಸ್ಥಾನವು ಕನ್ಯಾರಾಶಿಯ ಮೇಲೆ ಹೇಗೆ ಪರಿಣಾಮ ಬೀರಲಿದೆ ಎನ್ನುವುದನ್ನು ತಿಳಿಯೋಣ.

ಹನ್ನೆರಡು ರಾಶಿಗಳಲ್ಲಿ ಆರನೇ ರಾಶಿಯಾದಂತಹ ಕನ್ಯಾರಾಶಿಯವರಿಗೆ ಆದಾಯ ಎರಡಂಶವಿದ್ದರೆ, ವ್ಯಯವು ಒಂಬತ್ತಿರಲಿದೆ. ಇದರಿಂದಾಗಿ ವಿಪರೀತ ಖರ್ಚುಗಳು ಆಗಲಿದ್ದು, ಸಾಲದ ಬಾಧೆಗೆ ತುತ್ತಾಗುವ ಸಂಭವವು ಹೆಚ್ಚಾಗಿದೆ. ಆದಷ್ಟು ಖರ್ಚುಗಳನ್ನು ಮೊದಲಿನಿಂದಲೇ ಹಿಡಿತದಲ್ಲಿ ಇರಿಸಿಕೊಳ್ಳುವುದು ಉತ್ತಮ. ಇಲ್ಲವಾದಲ್ಲಿ ವರ್ಷಾಂತ್ಯದ ವೇಳೆಗೆ ನಿಮ್ಮಲ್ಲಿರುವ ಸಂಪತ್ತು ಕರಗಲಿದೆ. ಎಚ್ಚರವಾಗಿರಿ. ಆದಷ್ಟು ಹೊಸ ಉದ್ಯೋಗಕ್ಕೆ ಕೈ ಹಾಕದಿರುವುದು ಒಳ್ಳೆಯದು. ಗಣಪತಿಯ ಆರಾಧನೆಯನ್ನು ನಿರಂತರವಾಗಿ ಮಾಡುತ್ತಿರಿ.

ಇನ್ನು ಕನ್ಯಾರಶಿಯವರ ರಾಜಕೋಪವು ಏಳರಷ್ಟಿದ್ದು, ರಾಜಪೂಜೆಯು ಎರಡರಷ್ಟಿದೆ. ಇಲ್ಲಿಯು ಕೂಡ ರಾಜನ‌ಕೋಪವೇ ಅಧಿಕವಾಗಿ ಇರುವುದರಿಂದ ಸತತವಾಗಿ ಅವಮಾನಗಳಿಗೆ ಗುರಿಯಾಗುತ್ತಲೇ ಇರುತ್ತಿರಿ. ಬಂಧು ಬಾಂಧವರಲ್ಲಿ ಜಗಳಗಳು ಉಂಟಾಗಲಿದ್ದು ಅದರಲ್ಲಿ ನೀವು ಬಹಳಷ್ಟು ನೋವನ್ನು ಅನುಭವಿಸಲಿದ್ದಿರಿ. ಸಮಾಜದಲ್ಲಿಯೂ ಸಹ ನಿಮ್ಮ ಸ್ಥಾನ ಕೊಂಚ ಕೆಳಗಿಳಿಯಲಿದೆ. ಹಾಗಾಗಿ ಎಲ್ಲ ಕಡೆಯು ಮಾತನಾಡುವಾಗ ಬಳಸುವ ಪದಗಳ ಮೇಲೆ ಎಚ್ಚರವಿರಲಿ.

ಈ ಅವಧಿಯಲ್ಲಿ ಕನ್ಯಾರಾಶಿಯ ಶನಿಯು ಮಕರರಾಶಿಯಲ್ಲಿ ಸಂಚರಿಸುವುದರಿಂದ ಸ್ವಲ್ಪ ಮಟ್ಟಿಗಿನ ಮಾನಸಿಕ ಸಮಸ್ಯೆಗಳು ಎದುರಾಗಲಿವೆ. ನಂಬಿಕಸ್ಥ ವ್ಯಕ್ತಿಗಳ ಜೊತೆ ಒಡಕು ಉಂಟಾಗುವ ಸಾಧ್ಯತೆಗಳು ಹೆಚ್ಚಾಗಿದ್ದು, ಆದಷ್ಟು ತಾಳ್ಮೆಯಿಂದ ವ್ಯವಹರಿಸುವುದು ಉತ್ತಮ. ಕುಟುಂಬ ಕಲಹಗಳು ಹೆಚ್ಚಾಗಲಿದ್ದು, ಅದರಿಂದಾಗಿ ಒಂದಷ್ಟು ಮನಸ್ಥಾಪ, ಅವಮಾನಗಳನ್ನು ಎದುರಿಸುವ ಸಂದರ್ಭಗಳು ಬರಬಹುದು ಎಚ್ಚರಿಕೆಯಿಂದ ಇರಿ. ಕೆಟ್ಟಜನರ ಸಹವಾಸದಿಂದ ಕೆಟ್ಟ ಚಟಗಳಿಗೆ ಒಳಗಾಗುವ ಭಯವಿದೆ ಹಾಗಾಗಿ ನಿಮ್ಮ ಮನಸ್ಸಿನ ನಿಯಂತ್ರಣ ಅತ್ಯಗತ್ಯವಾಗಿದೆ‌. ಕನ್ಯಾರಾಶಿಯವರಿಗೆ ಶನಿಯಕಾಟ ಹೆಚ್ಚಾಗಿದ್ದು ವಿದ್ಯಾರ್ಥಿಗಳಲ್ಲಿ ಓದಿನ ಆಸಕ್ತಿ ಕಡಿಮೆಯಾಗಲಿದೆ.

ಕನ್ಯಾರಾಶಿಯ ಮೇಲೆ ರಾಹು ಹಾಗೂ ಕೇತು ಪ್ರಭಾವವು ಹೀಗಿದೆ:- ಈ ವರ್ಷದಲ್ಲಿ ಮೇಷ ಮತ್ತು ತುಲಾ ರಾಶಿಯಲ್ಲಿ ರಾಹುಕೇತು ಗ್ರಹಗಳು ಸಂಚರಿಸುತ್ತವೆ. ಎಂಟನೆಯ ಮನೆಯಲ್ಲಿ ರಾಹು ಹಾಗೂ ಎರಡನೇ ಮನೆಯಲ್ಲಿ ಕೇತು ತಮ್ಮ ಪ್ರಭಾವವನ್ನು ತೋರಿಸುವುದರಿಂದ ದಾಂಪತ್ಯ ಸಮಸ್ಯೆಗಳು ಹೆಚ್ಚಾಗಿ ಬಾಧಿಸಲಿವೆ. ಆರೋಗ್ಯ ಸಮಸ್ಯೆಗಳು ಕಾಡುವುದರಿಂದ ಅಪಘಾತ ಅವಘಡಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಆ ನಿಟ್ಟಿನ ಕಾಳಜಿ ವಹಿಸಿ. ಜಾಮೀನು, ಶ್ಯೂರಿಟಿಗಳಂತಹ ಕಾನೂನಾತ್ಮಕ ವಿಚಾರಗಳಲ್ಲಿ ಜಾಗೃತಿಯಿಂದ ವ್ಯವಹರಿಸುವುದಲ್ಲಿ ಸಮಸ್ಯೆಗಳಿಂದ ದೂರವಿರುವಿರಿ.

ಕನ್ಯಾರಾಶಿಯ ಗುರುವು ಈ ಸಂವತ್ಸರದಲ್ಲಿ ಮೀನಾರಾಶಿಯಲ್ಲಿ ಸಂಚರಿಸುತ್ತಾನೆ. ಏಳನೇ ಮನೆಯಲ್ಲಿ ಗುರುವಿನ ಸಂಚಾರವು ಶುಭಫಲಗಳನ್ನು ತರುತ್ತದೆಯಾದ್ದರಿಂದ, ಈ ವರ್ಷವಿಡಿ ಕನ್ಯಾರಾಶಿಯವರು ಶುಭವಾರ್ತೆಗಳನ್ನು ಕೇಳಬಹುದಾಗಿದೆ. ವರ್ಷದ ಆರಂಭದಲ್ಲಿ ಕಠಿಣ ಸಮಸ್ಯೆಗಳು ಎದುರಾದರೂ ಸಹ ಕೈ ಹಾಕಿದ ಕಾರ್ಯಗಳು ಸಫಲಗೊಳ್ಳುತ್ತವೆ. ಗುರುವಿನ ಅನುಗ್ರಹದಿಂದ ವ್ಯಾಪಾರ, ಉದ್ಯೋಗಗಳಲ್ಲಿ ಉತ್ತಮ ಸ್ಥಾನಕ್ಕೆ ಏರುತ್ತಾರೆ. ಅತೀ ಶೀಘ್ರದಲ್ಲಿ ಅರೆಕಾಲಿಕ ಸರ್ಕಾರಿ ಉದ್ಯೋಗಗಳಲ್ಲಿ ಭಡ್ತಿ ಹೊಂದುವಿರಿ‌. ಈ ವರ್ಷವು ನಿಮಗೆ ಶುಭದಾಯಕವಾಗಿದ್ದು, ಬಹಳ ದಿನಗಳಿಂದ ವಿವಾಹ ತೊಂದರೆಯನ್ನು ಅನುಭವಿಸುತ್ತಿದ್ದರೆ, ಗುರುಬಲದಿಂದಾಗಿ ಆ ತೊಂದರೆಯು ಸಹ ಇಲ್ಲವಾಗಿ ಕಂಕಣ ಭಾಗ್ಯ ಒದಗಿ ಬರಲಿದೆ. ಸಂತಾನ ಯೋಗವಿದೆ.

Leave a Reply

Your email address will not be published. Required fields are marked *