Ugadi Festival: ಯುಗಾದಿ ಹಬ್ಬದ ದಿನ, ಮನೆಯಿಂದ ಈ ವಸ್ತುಗಳನ್ನು ಹೊರಗಿನವರಿಗೆ ಕೊಡಬೇಡಿ

0 32

Ugadi Festival on 2023: ಮನೆ ಮನೆಯನ್ನು ಹಸಿರ ಮಾವಿನ ತೋರಣಗಳಿಂದ ಸಿಂಗರಿಸಿ ವಿಜೃಂಭಣೆಯಿಂದ ಆಚರಿಸುವ ಹಬ್ಬವೇ ಯುಗಾದಿಯಾಗಿದೆ. ಒಂದು ವರ್ಷದಲ್ಲಿ ಬದಲಾಗುವ ಆರು ಋತುಗಳನ್ನು ಒಡಗೂಡಿಕೊಂಡು ಬರುವ ಈ ಹಬ್ಬವು ನಮ್ಮ ಸನಾತನ ಧರ್ಮದ ಪ್ರಧಾನ ಹಬ್ಬವಾಗಿದೆ. ಈ ದಿನ ಹೊಸದಾಗಿ ಮದುವೆಯಾದ ಹೆಣ್ಣುಮಕ್ಕಳ ತವರಿಗೆ ಬರುತ್ತಾರೆ. ಮೈಗೆ ಎಣ್ಣೆಯನ್ನು ಲೇಪನ ಮಾಡಿಕೊಂಡು ಬೀಸಿ ನೀರಿನಲ್ಲಿ ಸ್ನಾನ ಮಾಡುವುದು, ತದನಂತರದಲ್ಲಿ ನೆಂಟರೆಲ್ಲ ಸೇರಿ ಹಬ್ಬದ ಅಡುಗೆಯನ್ನು ಉಣ್ಣುವುದು ಈ ಹಬ್ಬದ ವಿಶೇಷ ಪದ್ದತಿಯಾಗಿದೆ.

ಈ ದಿನದಿಂದ ಬೇಸಿಗೆ ಕಾಲವು ಅಧಿಕೃತವಾಗಿ ಆರಂಭವಾಗುತ್ತದೆ. ಇಲ್ಲಿಯ ತನಕ ಇದ್ದ ಚಳಿಯು ಕೊನೆಯಾಗಿ ಬಿರುಬೇಸಿಗೆಯನ್ನು ಸ್ವಾಗತಿಸುತ್ತೆವೆ. ಯುಗಾದಿಯ ನಂತರ ವಸಂತ ನವರಾತ್ರಿಯನ್ನು ಒಂಬತ್ತು ದಿನಗಳ ಕಾಲ ಆಚರಿಸಿ ಶ್ರೀರಾಮ ನವಮಿಯಂದು ಮುಕ್ತಾಯಗೊಳಿಸುವ ಪದ್ಧತಿ ಭಾರತದಾದ್ಯಂತ ಕಂಡು ಬರುತ್ತದೆ. ಕೆಲವು ಮನೆಗಳಲ್ಲಿ ಹಬ್ಬದ ದಿನ ದೇವಸ್ಥಾನಗಳಿಗೆ ತೆರಳುವ ಪದ್ಧತಿಯು ರೂಢಿಯಲ್ಲಿದ್ದರೆ, ಇನ್ನು ಕೆಲವು ಕಡೆ ಮನೆಯಲ್ಲಿಯೆ ಆಚರಣೆ ಮಾಡಲಾಗುತ್ತದೆ.

ಒಂದು ಮನೆಯನ್ನು ನಿರ್ಮಿಸುವಾಗ ಹೇಗೆ ಅಡಿಪಾಯವನ್ನು ಸರಿಯಾಗಿ ಹಾಕುತ್ತೇವೆ ಎನ್ನುವುದು ಬಹಳ ಮುಖ್ಯವಾಗುತ್ತದೆ. ಅಂತೆಯೆ ವರ್ಷ ಪೂರ್ತಿ ನಾವು ಚೆನ್ನಾಗಿ ಇರಬೇಕು, ಸುಖ ಸಂಪತ್ತುಗಳನ್ನು ನಾವು ಪಡೆಯಬೇಕು ಎನ್ನುವುದಾದರೆ ಯುಗಾದಿಯ ದಿನ ಬಹಳ ಶಾಸ್ತ್ರೋಕ್ತ ರೀತಿಯಿಂದ ಹಬ್ಬವನ್ನು ಆಚರಿಸಬೇಕಾಗುತ್ತದೆ. ಈ ಆಚರಣೆಯು ನಮ್ಮನ್ನು ವರ್ಷ ಪೂರ್ತಿ ಕಾಡುವ ತೊಂದರೆಗಳಿಂದ ಕಾಪಾಡುತ್ತದೆ. ಆದರೆ ಈ ದಿನ ಮರೆತು ಸಹ ನಾವು ತಪ್ಪುಗಳನ್ನು ಮಾಡಬಾರದು. ಹಾಗೇನಾದರೂ ಮಾಡಿದ್ದಾದರೆ ಅದಕ್ಕೆ ತಕ್ಕನಾದ ಫಲಗಳನ್ನು ಅನುಭವಿಸುತ್ತಿರಿ.

ಯುಗಾದಿಯು ವರ್ಷದಾರಂಭದ ದಿನವಾದ್ದರಿಂದ, ಈ ದಿನ ನಾವು ಮಾಡುವ ಸಣ್ಣ ತಪ್ಪು ಸಹ ದೊಡ್ಡ ಅಪಾಯಗಳನ್ನು ತಂದಿಡಬಹುದು. ಅಥವಾ ನಮಗೆ ಸಿಗಬೇಕಾದ ಬಹುಮುಖ್ಯ ಯೋಗಗಳನ್ನು ಕಳೆದುಕೊಳ್ಳಬೇಕಾಗಬಹುದು. ಅದಕ್ಕಾಗಿ ನಾವು ಯುಗಾದಿಯ ದಿನ ಬಹಳಷ್ಟು ಜಾಗರೂಕತೆಯಿಂದ ಹಬ್ಬವನ್ನು ಆಚರಿಸಬೇಕು. ಈ ದಿನ ಕೇವಲ ನಾವು ಮಾತ್ರ ಹಬ್ಬ ಆಚರಿಸದೆ, ನಮ್ಮ ಬಂಧು ಬಳಗವನ್ನೆಲ್ಲ ಹಬ್ಬಕ್ಕೆ ಕರೆಯುವ ಪದ್ಧತಿಯನ್ನು ಮಾಡಿಕೊಂಡಿರುತ್ತೆವೆ. ಹಾಗೆ ಅಕ್ಕಪಕ್ಕದ ಮನೆಗಳಿಗೆ ಬೇವು-ಬೆಲ್ಲವನ್ನು ಹಂಚುತ್ತೇವೆ.

ಇಷ್ಟೇ ಅಲ್ಲದೆ ಗೊತ್ತಿದ್ದೊ ಗೊತ್ತಿಲ್ಲದೆಯೋ ಕೆಲವೊಂದು ವಸ್ತುಗಳನ್ನು ಹಬ್ಬದ ದಿನ ನಾವು ಬೇರೆಯವರಿಗೆ ಕೊಟ್ಟು ಬಿಡುತ್ತೆವೆ. ಅಥವಾ ಅವರಿಂದ ಪಡೆದುಕೊಳ್ಳುತ್ತೇವೆ. ಇವುಗಳು ನಮಗೆ ಗೊತ್ತಿಲ್ಲದೆ ನಡೆದರೂ ಸಹ ಇದರ ಪರಿಣಾಮವಾಗಿ ನಾವು ಏನನ್ನಾದರೂ ಕಳೆದುಕೊಳ್ಳುವ ಸಂದರ್ಭಗಳು ಬರುತ್ತವೆ. ಹಾಗಾಗಿ ಹಬ್ಬದ ದಿನ ನಾವು ಎಚ್ಚರಿಕೆಯಿಂದ ಇರಲೇಬೇಕು. ಹಾಗಿದ್ದರೆ ನಾವು ಯಾವ ವಸ್ತುಗಳನ್ನು ಹಬ್ಬದ ದಿನ ಇತರರಿಗೆ ನೀಡಬಾರದು ಎನ್ನುವುದನ್ನು ತಿಳಿಯೋಣವೆ?

ಹಬ್ಬದ ದಿನ ಅಲಂಕಾರಕ್ಕಾಗಿ ಹಾಗೂ ಪೂಜೆಗಾಗಿ ಮಾವಿನ ಎಲೆಗಳನ್ನು ತರುತ್ತೇವೆ. ಅದರಿಂದ ಸುಂದರವಾದ ತೋರಣವನ್ನು ಕಟ್ಟಿ ಬಾಗಿಲನ್ನು ಸಿಂಗರಿಸುತ್ತೇವೆ‌. ಅಂತೆಯೆ ಬೇವಿನ ಎಲೆ ಹಾಗೂ ಹೂವನ್ನು ಸಹ ತೋರಣಕ್ಕಾಗಿ ತರುತ್ತೆವೆ. ಈ ಎರಡು ವಸ್ತುಗಳನ್ನು ನಿಮ್ಮ ಪಕ್ಕದ ಮನೆಯವರಾಗಲಿ ಅಥವಾ ಬೇರೆಯವರಾಗಲಿ ಅಲಂಕಾರಕ್ಕಾಗಿ ಕೇಳಿದರೆ ಕೊಡಲೇ ಬೇಡಿ. ಕೊಡುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿಬಿಡಿ.

ಯಾಕೆಂದರೆ ಸಮೃದ್ಧಿಗಾಗಿ ಮಾವು ಹಾಗೂ ಬೇವಿನ ಎಲೆಗಳನ್ನು ಹಬ್ಬದ ದಿನ ಮನೆಗೆ ತರಲಾಗುತ್ತದೆ. ಅದನ್ನು ನೀವು ಬೇರೆಯವರಿಗೆ ನೀಡಿದರೆ, ನಿಮ್ಮ‌ ಮನೆಗೆ ಬರಬೇಕಿದ್ದ ಮಹಾಲಕ್ಷ್ಮಿಯು ಅವರ ಮನೆಗೆ ಹೋಗುತ್ತಾಳೆ. ಹಾಗಾಗಿ ಈ ವಸ್ತುವನ್ನು ಹಬ್ಬದ ದಿನ ಯಾರಿಗೂ ಕೊಡಬೇಡಿ.

Leave A Reply

Your email address will not be published.