Virgo Horoscope October 2023 prediction: ಮೊದಲಿಗೆ ಅಕ್ಟೋಬರ್ ತಿಂಗಳಿನಲ್ಲಿ ಸ್ಥಾನ ಬದಲಾವಣೆ ಮಾಡುವ ಗ್ರಹಗಳು ಯಾವುವು ಎಂದು ನೋಡುವುದಾದರೆ, ಅಕ್ಟೋಬರ್ 1ರಂದು ಬುಧ ಶುಕ್ರ ಇಬ್ಬರ ಸ್ಥಾನ ಬದಲಾವಣೆ ಕೂಡ ನಡೆಯಲಿದ್ದು, ಬುಧ ಕನ್ಯಾ ರಾಶಿಗೆ ಪ್ರವೇಶ ಮಾಡಲಿದ್ದಾನೆ, ಶುಕ್ರ ಸಿಂಹ ರಾಶಿಗೆ ಪ್ರವೇಶ ಮಾಡಲಿದ್ದಾನೆ. 3ನೇ ತಾರೀಕು ಕುಜ ಗ್ರಹ ತುಲಾ ರಾಶಿಗೆ ಪ್ರವೇಶ ಮಾಡಲಿದ್ದಾನೆ, 17ನೇ ತಾರೀಕಿನಂದು ಸೂರ್ಯ ತುಲಾ ರಾಶಿಗೆ ಪ್ರವೇಶ ಮಾಡಲಿದ್ದಾನೆ. 18ನೇ ತಾರೀಕಿನಂದು ಬುಧ ತುಲಾ ರಾಶಿಗೆ ಪ್ರವೇಶ ಮಾಡಲಿದ್ದಾನೆ..

ಈ ರಾಶಿಯಲ್ಲಿ ಗ್ರಹಗಳ ಸ್ಥಾನ ಬದಲಾವಣೆ ಯಾವ ರೀತಿ ಆಗುತ್ತೆ ಎಂದು ನೋಡುವುದಾದರೆ, ಕನ್ಯಾ ರಾಶಿಯ 1ನೇ ಮತ್ತು 2ನೇ ಮನೆಯಲ್ಲಿ ಸೂರ್ಯದೇವನ ಸಂಚಾರ ನಡೆಯುತ್ತದೆ, 2ನೇ ಮನೆಯಲ್ಲಿ ಕುಜನ ಸಂಚಾರ ಇರುತ್ತದೆ, ಬುಧನ ಸಂಚಾರ 1ನೇ ಮತ್ತು 2ನೇ ಮನೆಯಲ್ಲಿ ಇರುತ್ತದೆ, ಗುರುವಿನ ಸಂಚಾರ 8ನೇ ಮನೆಯಲ್ಲಿ ಇರುತ್ತದೆ, ಶುಕ್ರನ ಸಂಚಾರ 12ನೇ ಮನೆಯಲ್ಲಿ, ಶನಿ ಸಂಚಾರ 6ನೇ ಮನೆಯಲ್ಲಿ, ರಾಹುವಿನ ಸಂಚಾರ 8ನೇ ಮನೆಯಲ್ಲಿ, ಕೇತುವಿನ ಸಂಚಾರ 2ನೇ ಮನೆಯಲ್ಲಿ ಇರಲಿದೆ.

ಅಕ್ಟೋಬರ್ ತಿಂಗಳಿನಲ್ಲಿ ಕನ್ಯಾರಾಶಿಯವರಿಗೆ ಫಲ ಹೇಗಿರುತ್ತದೆ ಎಂದು ನೋಡುವುದಾದರೆ, ಈ ತಿಂಗಳು ನಿಮಗೆ ಮಿಶ್ರ ಫಲ ಇರುತ್ತದೆ, ಗುರುದೇವ ಅಷ್ಟಮದ ಮನೆಯಲ್ಲಿ ಇರುವುದರಿಂದ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಬಹುದು, ನಿಮಗೆ ಯಶಸ್ಸು ಸಿಗುವುದಿಲ್ಲ. 6ನೇ ಮನೆಯಲ್ಲಿ ಶನಿ ಇರುವುದರಿಂದ ನಿಮಗೆ ಸ್ವಲ್ಪ ಒಳ್ಳೆಯದೇ ಆಗುತ್ತದೆ. ಶನಿಯ ಅನುಗ್ರಹವಿದೆ ಆದರೆ ಗುರುಬಲ ಇಲ್ಲ. ಈ ಸಮಯದಲ್ಲಿ ಹಣಕಾಸಿನ ವಿಚಾರದಲ್ಲಿ ಅಭಿವೃದ್ಧಿ ಹೊಂದುತ್ತೀರಿ, ಆದಾಯ ಜಾಸ್ತಿ ಇರುತ್ತದೆ, ಆದರೆ ಅದಕ್ಕೆ ಸಮವಾಗಿ ಖರ್ಚು ಕೂಡ ಇರುತ್ತದೆ.

Virgo Horoscope October 2023 prediction

ಈ ವೇಳೆ ಮದುವೆ ಮಾತುಕತೆ ನಡೆಯುತ್ತದೆ, ಒಳ್ಳೆಯ ಸಂಬಂಧಗಳು ಬರುತ್ತವೆ. ಈ ತಿಂಗಳು ನಿಮಗೆ ಶತ್ರುಕಾಟ ಇರುತ್ತದೆ. ಸರ್ಕಾರಿ ಕೆಲಸದಲ್ಲಿ ಇರುವವರಿಗೆ ಸುಳ್ಳು ಆರೋಪ, ಅಪವಾದ ಬಂದು ತೊಂದರೆ ಆಗಬಹುದು, ಇದರಿಂದ ಮಾನಸಿಕವಾಗಿ ನೋವು ಅನುಭವಿಸುವ ಹಾಗೆ ಆಗಬಹುದು. ಹಾಗಾಗಿ ಹುಷಾರಾಗಿರಿ. ಈ ವೇಳೆ ಕೃಷಿ ಮಾಡುತ್ತಿರುವವರಿಗೆ ಲಾಭ ಬರುತ್ತದೆ. ಹಣ್ಣು ಮತ್ತು ತರಕಾರಿ ವ್ಯಾಪಾರ ಮಾಡುವವರಿಗೆ ಲಾಭ ಇರುತ್ತದೆ. ರಾಜಕೀಯದಲ್ಲಿ ಸಕ್ತಿಯವಾಗಿ ಇರುವವರಿಗೆ ಒಳ್ಳೆಯ ಅಧಿಕಾರ ಸಿಗಬಹುದು.

ಕಬ್ಬಿಣದ ವ್ಯಾಪಾರ, ಔಷಧಿ ಸಸ್ಯಗಳ ವ್ಯಾಪಾರ, ಹಾಲಿನ ವ್ಯಾಪಾರ ಮಾಡುವವರಿಗೆ, ಪಶು ಸಂಗೋಪನೆ ಮಾಡುವವರಿಗೆ ಲಾಭ ಕಟ್ಟಿಟ್ಟ ಬುತ್ತಿ. ಮಹಿಳೆಯರಿಗೆ ಅನಾರೋಗ್ಯ ಕಾಡಬಹುದು, 18ನೇ ತಾರೀಕಿನ ನಂತರ ನಿಮಗೆ ಸಮಸ್ಯೆಗಳು ಉಂಟಾಗಬಹುದು, ಜಾಗ್ರತೆಯಿಂದ ಇರಿ. ಕೆಲಸ ಎಲ್ಲವೂ ಅದರ ಪಾಡಿಗೆ ಅದು ನಡೆಯುತ್ತಿದ್ದರೂ ಕೂಡ, ನೀವು ನಿಮ್ಮವರು ಎಂದುಕೊಂಡಿದ್ದವರಿಂದಲೇ ನಿಮಗೆ ತೊಂದರೆ ಆಗಬಹುದು. ಈ ವೇಳೆ ನೀವು ಹೆಚ್ಬು ಪ್ರಯಾಣ ಮಾಡಬಹುದು.

ಕೆಲಸ ಕಾರ್ಯಗಳು ನಡೆದರು ಕೂಡ, ಮಧ್ಯದಲ್ಲಿ ಎಲ್ಲೋ ಅರ್ಧಕ್ಕೆ ನಿಂತ ಹಾಗೆ ಆಗಬಹುದು. ಧಾರ್ಮಿಕ ಸಂಘಟನೆ ಮತ್ತು ಧಾರ್ಮಿಕ ಕೆಲಸ ಮಾಡುವವರಿಗೆ ಇದು ಉತ್ತಮ ಸಮಯ, ನಿಮಗೆ ಒಳ್ಳೆಯ ಹೆಸರು ಮತ್ತು ಯಶಸ್ಸು ಸಿಗುತ್ತದೆ. ದಿಢೀರ್ ಕೋಪ ಬರುತ್ತದೆ, 2ನೇ ಮನೆಯಲ್ಲಿ ಕುಜ ಮತ್ತು ಕೇತುವಿನ ಸಂಯೋಗ ಆಗುವುದರಿಂದ ಇದು ಅಷ್ಟೇನು ಒಳ್ಳೆಯ ಸಮಯ ಅಲ್ಲ. ಹಳೆ ಘಟನೆಗಳಿಂದ ಮನಸ್ಸಿಗೆ ನೋವಾಗಬಹುದು. ಪ್ರೇಮಿಗಳಿಗೆ ಲವ್ ಫೆಲ್ಯೂರ್ ಆಗಬಹುದು. ಹಾಗಾಗಿ ನೀವು ಬಹಳ ಹುಷಾರಾಗಿ ಇರಬೇಕು.

ಇನ್ನು ಈ ಸಮಸ್ಯೆಗಳಿಗೆ ಪರಿಹಾರ ಏನು ಎಂದು ನೋಡುವುದಾದರೆ, ಉತ್ತರ ನಕ್ಷತ್ರದಲ್ಲಿ ಎರಡನೇ, ಮೂರನೇ ಮತ್ತು ನಾಲ್ಕನೇ ಪಾದದಲ್ಲಿ ಜನಸಿದವರು ನಾರಾಯಣ ಸ್ವಾಮಿಯ ಪೂಜೆ ಮಾಡಿ. ಇದರಿಂದ ಒಳ್ಳೆಯದಾಗುತ್ತದೆ. ಹಸ್ತ ನಕ್ಷತ್ರದಲ್ಲಿ ಹುಟ್ಟಿರುವವರು ವಿಷ್ಣು ಸಹಸ್ರನಾಮ ಪಠಣೆ ಮಾಡಿ. ಚಿತ್ತ ನಕ್ಷತ್ರದಲ್ಲಿ ಹುಟ್ಟಿರುವವರು ಶಿವಗಾಮಿ ದೇವಿಯ ಪೂಜೆ ಮಾಡಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *