ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದು ಕನಸು ಕಾಣುತ್ತಿರುವ ಪ್ರತಿಯೊಬ್ಬರಿಗೂ ಇವರ ಜೀವನವು ಮಾದರಿಯಾಗಿದೆ. ಇವರು ಕ್ರಿಕೆಟ್ ಲೋಕದ ದಿಗ್ಗಜರ ಸಾಧನೆಗಳನ್ನು ಮುರಿಯುತ್ತಿರುವ ಆಪ್ರತಿಮ ಆಟಗಾರ. ಇಂಡಿಯನ್ ಕ್ರಿಕೆಟ್ ನ ಸ್ಟಾರ್ ಪ್ಲೇಯರ್ ಹಾಗೂ ಪ್ರಸ್ತುತ ಭಾರತ ಕ್ರಿಕೆಟ್ ತಂಡದ ನಾಯಕ ಅವರೇ ವಿರಾಟ್ ಕೊಹ್ಲಿ. ಇವರ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಇವರು ಪ್ರೇಮ್ ಕೊಹ್ಲಿ ಹಾಗೂ ಸರೋಜಾ ಕೊಹ್ಲಿ ಅವರ ಮೂರನೇ ಮಗನಾಗಿ 1988 ನಂಬರ್ 5 ರಂದು ಜನಿಸುತ್ತಾರೆ. ತಂದೆ ಪ್ರೇಮ್ ಕೊಹ್ಲಿ ಅವರು ಕ್ರಿಮಿನಲ್ ಲಾಯರ್ ಆಗಿ ಕಾರ್ಯನಿರ್ವಹಿಸುತ್ತಿರುತ್ತಾರೆ. ವಿರಾಟ್ ಕೊಹ್ಲಿ ಅವರಿಗೆ ಬಾಲ್ಯದಿಂದಲೂ ಕ್ರಿಕೆಟ್ ನ ಮೇಲೆ ಅತೀವ ಆಸಕ್ತಿ ಇರುತ್ತದೆ. ವಿರಾಟ್ ಕೊಹ್ಲಿ ಅವರು ತಮ್ಮ ಮೂರನೇ ವರ್ಷದ ವಯಸ್ಸಿನಲ್ಲಿ ತಂದೆಯ ಜೊತೆ ಕ್ರಿಕೆಟ್ ಆಟವನ್ನು ಆಡಲು ಶುರುಮಾಡುತ್ತಾರೆ. ತಮ್ಮ ವಿದ್ಯಾಭ್ಯಾಸವನ್ನು ವಿಶಾಲ ಭಾರತಿ ಶಾಲೆಯಲ್ಲಿ ಪಡೆಯುತ್ತಾರೆ. ವಿರಾಟ್ ಕೊಹ್ಲಿ ಅವರ ಕ್ರಿಕೆಟ್ ಆಸಕ್ತಿಯನ್ನು ನೋಡಿ ತಂದೆ ಪ್ರೇಮ ಕೊಹ್ಲಿ ಅವರು ವಿರಾಟ್ ಕೊಹ್ಲಿ ಅವರ 9ನೇ ವರ್ಷದಲ್ಲಿ ವೆಸ್ಟ್ ವೆಲ್ಲಿ ಕ್ರಿಕೆಟ್ ಅಕಾಡೆಮಿಗೆ ಸೇರಿಸುತ್ತಾರೆ. ರಾಜಕುಮಾರ್ ಶರ್ಮಾ ಅವರ ಅಡಿಯಲ್ಲಿ ಕ್ರಿಕೆಟ್ ಆಟವನ್ನು ಕಲಿಯುತ್ತಾರೆ.

ಇವರು 2002ರಲ್ಲಿ ಅಂಡರ್ ಫಿಫ್ಟೀನ್ ಟೀಮ್ ಗೆ ಆಯ್ಕೆಯಾಗುತ್ತಾರೆ. 2004ರಲ್ಲಿ ಅಂಡರ್ ಸೆವೆಂಟೀನ್ ಟೀಮ್ ಗೆ ಆಯ್ಕೆಯಾಗುತ್ತಾರೆ. ಸಿಕ್ಕ ಅವಕಾಶವನ್ನು ಸರಿಯಾಗಿ ಸದುಪಯೋಗಪಡಿಸಿಕೊಂಡ ಕೊಹ್ಲಿಯವರು ಅಂಡರ್ ಫಿಫ್ಟೀನ್ ಹಾಗೂ ಅಂಡರ್ ಸೆವೆಂಟೀನ್ ಆಟಗಳಲ್ಲಿ ಅತಿ ಹೆಚ್ಚು ರನ್ನುಗಳನ್ನು ಗಳಿಸುತ್ತಾರೆ. ಇದರಿಂದಾಗಿ 2002ರಲ್ಲಿ ಈಸ್ಟ್ ತಂಡಕ್ಕೆ ಆಯ್ಕೆಯಾಗುತ್ತಾರೆ. ಆದರೆ ಇಲ್ಲಿ ಸರಿಯಾಗಿ ಬ್ಯಾಟಿಂಗ್ ಸಿಗದೇ ನಿರಾಶರಾಗುತ್ತಾರೆ. ನಂತರ ವಿರಾಟ್ ಕೊಹ್ಲಿ ಅವರು 2006ರ ಅಂಡರ್ ನೈಂಟೀನ್ ಟೀಮ್ ನಲ್ಲಿ ಆಡುವ ಅವಕಾಶವನ್ನು ಪಡೆಯುತ್ತಾರೆ. ರಣಜಿ ಆಟದ ಪ್ರಾಕ್ಟೀಸ್ ಅನ್ನು ಮುಗಿಸಿಕೊಂಡು ಮನೆಗೆ ಬಂದ ವಿರಾಟ್ ಕೊಯ್ಲಿಗೆ ಒಂದು ಆಘಾತಕಾರಿ ವಿಷಯ ಕಾದಿರುತ್ತದೆ.

ವಿರಾಟ್ ಕೊಹ್ಲಿ ಅವರ ತಂದೆಗೆ ಬ್ರೈನ್ ಸ್ಟ್ರೋಕ್ ಆಗಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಸುಧಾರಿಸಿ ಮನೆಗೆ ಬಂದ ನಂತರ ಮತ್ತೊಮ್ಮೆ ತಂದೆಯ ಆರೋಗ್ಯ ಬಿಗಡಾಯಿಸುತ್ತದೆ. ಮತ್ತೊಮ್ಮೆ ಆಸ್ಪತ್ರೆಗೆ ಕರೆದುಕೊಂಡು ಹೋದ ನಂತರ ಚಿಕಿತ್ಸೆ ಫಲಕಾರಿಯಾಗದೆ ತಂದೆ ಸಾವನ್ನಪ್ಪುತ್ತಾರೆ. ಇಷ್ಟಾದ ನಂತರ ವಿರಾಟ್ ಕೊಹ್ಲಿ ಅವರು ತಮ್ಮ ತಂದೆಯ ಇಚ್ಚೆಯಂತೆ ಕ್ರಿಕೆಟ್ನಲ್ಲಿ ಸಾಧಿಸುವ ಗುರಿಯನ್ನು ನಿರ್ಧರಿಸುತ್ತಾರೆ.ಅಂತೆಯೇ ರಣಜಿ ಆಟದಲ್ಲಿ ಉತ್ತಮ ಆಟವನ್ನು ಆಡುತ್ತಾರೆ. ನಂತರ ಮನೆಯ ಸಹೋದರರ ಬಳಿ ತಾನು ಭಾರತ ದೇಶಕ್ಕಾಗಿ ಆಟವನ್ನು ಆಡುತ್ತೇನೆ ಎಂಬ ಪ್ರಮಾಣವನ್ನು ಮಾಡುತ್ತಾರೆ. ನಂತರ ಕೊಹ್ಲಿ ಅವರು ಕ್ರಿಕೆಟ್ ಆಟವನ್ನೇ ತಮ್ಮ ಗುರಿಯನ್ನಾಗಿಸಿಕೊಳ್ಳುತ್ತಾರೆ.

ಇದಾದನಂತರ 2008ರಲ್ಲಿ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿರಾಟ್ ಕೊಹ್ಲಿ ಅವರನ್ನು ಖರೀದಿಸುತ್ತದೆ. ಹಾಗೆ ಭಾರತದ ಓಡಿಐ ತಂಡಕ್ಕೆ ವಿರಾಟ್ ಕೊಹ್ಲಿ ಅವರು ಆಯ್ಕೆಯಾಗುತ್ತಾರೆ. ಇಲ್ಲಿ ಸಿಕ್ಕ ಅವಕಾಶವನ್ನು ದುರುಪಯೋಗ ಪಡಿಸಿಕೊಳ್ಳುತ್ತಾರೆ. 2011ರಲ್ಲಿ ಭಾರತದ ಟೆಸ್ಟ್ ತಂಡಕ್ಕೆ ಆಯ್ಕೆಯಾಗುತ್ತಾರೆ. ಇಲ್ಲಿಯೂ ಕೂಡ ಒಳ್ಳೆಯ ಆಟವನ್ನು ಆಡುದುವುದರ ಮೂಲಕ ಒಳ್ಳೆಯ ಹೆಸರನ್ನು ಗಳಿಸುತ್ತಾರೆ. ನಂತರ 12ರಲ್ಲಿ ಭಾರತದ ಟಿ-ಟ್ವೆಂಟಿ ತಂಡಕ್ಕೂ ಸಹ ಆಯ್ಕೆಯಾಗುತ್ತಾರೆ.

ಎಲ್ಲವೂ ಸರಿಯಾಗಿ ಸಾಗುತ್ತಿದ್ದ ಸಮಯದಲ್ಲಿ ಕೊಹ್ಲಿ ಅವರು ತಮ್ಮ ಫಾರ್ಮನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ ಅವರ ಫಿಟ್ನೆಸ್ ಕಾರಣವಾಗಿರುತ್ತದೆ. ನಂತರ ಕೊಹ್ಲಿ ಅವರು ತಮ್ಮನ್ನು ತಾವು ಅವಲೋಕನ ಮಾಡಿಕೊಂಡು ಮತ್ತೊಮ್ಮೆ ದೈಹಿಕ ಪರಿಶ್ರಮದಿಂದ ಹಾಗೂ ಆಹಾರ ಪದ್ಧತಿಯಿಂದ ಮತ್ತೊಮ್ಮೆ ಹೊರಹೊಮ್ಮುತ್ತಾರೆ. ರನ್ ಮಿಶಿನ್ ಎಂದು ಖ್ಯಾತಿಯನ್ನು ಪಡೆಯುತ್ತಾರೆ. ನಂತರ ಮಹೇಂದ್ರ ಸಿಂಗ್ ದೋನಿ ಅವರ ನಾಯಕತ್ವ ದ ನಂತರ ವಿರಾಟ್ ಕೊಹ್ಲಿ ಅವರು ನಾಯಕತ್ವದ ಜವಾಬ್ದಾರಿಯನ್ನು ಹೊರುತ್ತಾರೆ. ಹಾಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರು ಸಹ ಆಗುತ್ತಾರೆ. ಸ್ವತಃ ಕ್ರಿಕೆಟ್ ದೇವರು ಎಂದು ಹೆಸರಾದ ಸಚಿನ್ ತೆಂಡೂಲ್ಕರ್ ಅವರು ವಿರಾಟ್ ಕೊಹ್ಲಿ ಅವರು ನನ್ನ ಸಾಧನೆಗಳನ್ನು ಮುರಿಯುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. ಇದು ವಿರಾಟ್ ಕೊಹ್ಲಿ ಅವರ ಅಪ್ರತಿಮ ಸಾಧನೆಯೇ ಸರಿ.

ವಿರಾಟ್ ಕೊಹ್ಲಿ ಅವರ ಈ ಸಾಧನೆಗಾಗಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ, ಹಾಗೂ ಅರ್ಜುನ ಪ್ರಶಸ್ತಿ, ಓಡಿಐ ಪ್ಲೇಯರ್ ಆಫ್ ದಿ ಇಯರ್ ಪ್ರಶಸ್ತಿ, ಮುಂತಾದ ಪ್ರತಿಷ್ಠಿತ ಪ್ರಶಸ್ತಿಗಳು ಇವರಿಗೆ ಲಭಿಸಿದೆ. ಹಾಗೆಯೇ ಇವರು ಹಲವಾರು ಕಂಪನಿಗಳ ಅಂಬಾಸಿಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗೆಯೇ ಸಾಮಾಜಿಕ ಹಾಗೂ ಸೇವಾ ವಲಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಒಬ್ಬ ಸಾಮಾನ್ಯ ಹುಡುಗನು ಸತತ ಪರಿಶ್ರಮದಿಂದ ಭಾರತ ತಂಡದ ನಾಯಕರಾಗಿ ಹೊರಹೊಮ್ಮಿದ್ದಾರೆ. ವಿರಾಟ್ ಕೊಹ್ಲಿ ಅವರ ಜೀವನ ಸಾಧನೆಯು ಹಲವಾರು ಜನರಿಗೆ ಪ್ರೇರಣೆಯಾಗಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!