ಖ್ಯಾತ ನಟಿ ಅನುಷ್ಕಾ ಶರ್ಮಾ ಈಗ ತುಂಬು ಗರ್ಭಿಣಿ. ಪತಿ ವಿರಾಟ್‌ ಕೊಹ್ಲಿ ಜೊತೆಗೆ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಅನುಷ್ಕಾ ಈ ಸಮಯದಲ್ಲೂ ಯೋಗಾಸನ ತಪ್ಪಿಸಿಲ್ಲ. ಅದರಲ್ಲೂ ಅತಿ ಕಷ್ಟದ ಕೆಲವು ಆಸನಗಳನ್ನೂ ಅವರು ಮಾಡುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ಶೂಟಿಂಗ್‌ನಲ್ಲಿ ಭಾಗವಹಿಸುವ ಮೂಲಕ ಎಲ್ಲರಿಗೂ ಅಚ್ಚರಿ ನೀಡಿದ್ದರು ಅನುಷ್ಕಾ ಶರ್ಮಾ. ಆದರೆ ಈಗ ಅವರು ಹಂಚಿಕೊಂಡಿರುವ ಹೊಸ ಫೋಟೋ ನೋಡಿದರೆ ಎದೆ ಝಲ್‌ ಎನ್ನುವುದು ಖಂಡಿತ. ಸಾಮಾನ್ಯವಾಗಿ ಗರ್ಭಿಣಿಯರು ತುಂಬ ಕಷ್ಟದ ಕೆಲಸಗಳನ್ನು ಮಾಡುವುದಿಲ್ಲ. ಅಂಥದ್ದರಲ್ಲಿ ಅನುಷ್ಕಾ ಕೆಲವು ಕಷ್ಟದ ಆಸನಗಳನ್ನು ಮಾಡಿದ್ದಾರೆ. ಆ ಬಗ್ಗೆ ಅವರು ಸೋಶಿಯಲ್‌ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಇದು ಅತಿ ಕಷ್ಟದ ಆಸನ. ನನ್ನ ಬದುಕಿನಲ್ಲಿ ಯೋಗಾಸನ ಒಂದು ಮುಖ್ಯ ಭಾಗ. ಕೆಲವು ಆಸನಗಳನ್ನು ಹೊರತುಪಡಿಸಿ ಬೇರೆಲ್ಲ ಆಸನಗಳನ್ನು ಮಾಡಬಹುದು ಎಂದು ನನಗೆ ವೈದ್ಯರು ಸಲಹೆ ನೀಡಿದ್ದಾರೆ. ಅದಕ್ಕೆ ಸೂಕ್ತ ಬೆಂಬಲ ಮತ್ತು ಸಹಾಯ ಬೇಕು. ಹಲವು ವರ್ಷಗಳಿಂದ ನಾನು ಶೀರ್ಷಾಸನ ಮಾಡುತ್ತ ಬಂದಿದ್ದೇನೆ. ಈಗ ಗೋಡೆ ಮತ್ತು ಗಂಡನ ಸಪೂರ್ಟ್‌ನಿಂದ ಅದೇ ಆಸನವನ್ನು ಮಾಡಿದ್ದೇನೆ’ ಎಂದಿದ್ದಾರೆ ಅನುಷ್ಕಾ. ಈ ರೀತಿ ಮಾಡುವಾಗ ಅತಿ ಎಚ್ಚರಿಕೆ ಅಗತ್ಯ ಎಂಬುದನ್ನೂ ಅವರು ಹೇಳಿದ್ದಾರೆ. ಈ ಆಸನಗಳನ್ನು ಮಾಡುವಾಗ ಅವರ ಯೋಗ ಟೀಚರ್‌ ಕೂಡ ವರ್ಚುವಲ್‌ ಆಗಿ ಜೊತೆಗಿದ್ದರು. ಗರ್ಭಿಣಿ ಆಗಿದ್ದಾಗಲೂ ಯೋಗ ಮಾಡಲು ಸಾಧ್ಯವಾಗಿದ್ದಕ್ಕೆ ಖುಷಿಯಾಗುತ್ತಿದೆ ಎಂದು ಅನುಷ್ಕಾ ಹೇಳಿದ್ದಾರೆ. ಈ ಫೋಟೋ ಕಂಡು ಅನೇಕರು ಬೆರಗಾಗಿದ್ದಾರೆ. ಅಭಿಮಾನಿಗಳು ಮಾತ್ರವಲ್ಲದೆ ಅನೇಕ ಬಾಲಿವುಡ್‌ ಸೆಲೆಬ್ರಿಟಿಗಳು ಕೂಡ ಅನುಷ್ಕಾಗೆ ಕಾಮೆಂಟ್ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ.

ಐಪಿಎಲ್ ಟೂರ್ನಿ ನಡೆಯುತ್ತಿದ್ದ ಸಂದರ್ಭದಲ್ಲಿ ಕೂಡಾ ಅನುಷ್ಕಾ ಶರ್ಮಾ ಕೊಹ್ಲಿ ಜೊತೆಗೆ ದುಬೈ ಪ್ರವಾಸದಲ್ಲಿದ್ದರು. ಈಗ ಸದ್ಯ ಕೊಹ್ಲಿ ಮತ್ತೆ ಆಸ್ಟ್ರೇಲಿಯಾ ಪ್ರವಾಸದ ನಿರತವಾಗಿದ್ದು ಟೀಮ್ ಇಂಡಿಯಾ ಈಗಾಗಲೇ ಎರಡು ಪಂದ್ಯಗಳನ್ನು ಸೋತಿದೆ. ಅನುಷ್ಕ ಮುಂಬೈ ಗೆ ವಾಪಸ್ಸಾಗಿದ್ದು, ಕೆಲವು ಜಾಹೀರಾತುಗಳ ಶೂಟಿಂಗ್ನಲ್ಲಿ ಕೂಡ ತೊಡಗಿಸಿಕೊಂಡಿದ್ದಾರೆ. ಜನವರಿ ತಿಂಗಳಿನಲ್ಲಿ ಕೊಹ್ಲಿ ಮತ್ತು ಅನುಷ್ಕಾ ತಮ್ಮ ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿ ಇದ್ದಾರೆ.

Leave a Reply

Your email address will not be published. Required fields are marked *