ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ದಾಖಲೆಗಳ ಮೇಲೆ ದಾಖಲೆಗಳನ್ನು ಬರೆಯುತ್ತಲೇ ಸಾಗುತ್ತಿದ್ದಾರೆ. ಕೇವಲ ಮೈದಾನದಲ್ಲಷ್ಟೇ ಅಲ್ಲದೆ ಮೈದಾನದ ಹೊರಗೂ ದಾಖಲೆಗಳನ್ನು ಬರೆದಿದ್ದಾರೆ. ರನ್ ಮೆಶಿನ್ ಖ್ಯಾತಿಯ ವಿರಾಟ್ ಕೊಹ್ಲಿ ಭಾರತದಲ್ಲಿ ಅತಿ ಹೆಚ್ಚು ಬ್ರಾಂಡ್ ಮೌಲ್ಯ ಹೊಂದಿರುವ ಸೆಲೆಬ್ರಿಟಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದು ನಾಯಕ ವಿರಾಟ್ ಕೊಹ್ಲಿ ಜನಪ್ರಿಯತೆಗೆ ಕೈಗನ್ನಡಿಯಾಗಿದೆ. ಅಲ್ಲದೆ ದೇಶದ ಅತಿ ಬೇಡಿಕೆಯ ಹಾಗೂ ಅತ್ಯಂತ ಬೆಲೆಬಾಳುವ ಸೆಲೆಬ್ರಿಟಿ ಸಾಲಿನಲ್ಲಿ ಗುರುತಿಸಿದ್ದಾರೆ. ಇನ್ನೂ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿಗಳು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಹೌದು ಭಾರತ ಕಂಡ ಸುಂದರ ಜೋಡಿಗಳಲ್ಲಿ ಈ ಜೋಡಿ ಕೂಡ ಒಂದು ಎಂದು ಹೇಳಬಹುದು. ಹೌದು ಎರಡು ವರ್ಷಗಳ ಹಿಂದೆ ಪ್ರೀತಿ ಮಾಡಿ ಮದುವೆಯಾದ ಈ ದಂಪತಿಗೂ ಸುಖಕರವಾಗಿ ಜೀವನವನ್ನ ಮಾಡುತ್ತಿದ್ದಾರೆ ಎಂದು ಹೇಳಬಹುದು. ಇನ್ನು ಯಾವತ್ತೂ ಕೂಡ ಒಬ್ಬರನ್ನ ಬಿಟ್ಟು ಒಬ್ಬರು ಇರದ ಜೋಡಿ ಅಂದರೆ ವಿರಾಟ್ ಮತ್ತು ಅನುಷ್ಕಾ ಜೋಡಿಗಳು ಎಂದು ಹೇಳಬಹುದು. ಇನ್ನು ಈಗ ವಿಷಯಕ್ಕೆ ಬರುವುದಾದರೆ ಅನುಷ್ಕಾ ಮತ್ತು ವಿರಾಟ್ ದಂಪತಿಗಳಿಗೆ ಹೆಣ್ಣು ಮಗುವಿನ ಜನನವಾಗಿದ್ದು ಸದ್ಯ ಈ ಸುದ್ದಿ ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ ಸಾಕರ್ ವೈರಲ್ ಆಗಿದೆ ಎಂದು ಹೇಳಿದರೆ ತಪ್ಪಾಗಲ
ಇನ್ನು ದಂಪತಿಗಳಿಗೆ ಮುದ್ದಾದ ಹೆಣ್ಣು ಮಗು ಜನಿಸಿದ್ದು ಸದ್ಯ ಮಗುವಿನ ಜನನ ಕುರಿತಂತೆ ಅನೇಕ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಈ ಮಗು ತುಂಬಾ ಲಕ್ಕಿ ಎಂದು ಹೇಳಿದರೆ ತಪ್ಪಾಗಲ್ಲ, ದೇಶದ ಸರ್ವಶ್ರೇಷ್ಠ ಆಟಗಾರನ ಮಗಳಾಗಿ ಜನಿಸಿರುವುದು ಈ ಮಗುವಿನ ಅದೃಷ್ಟ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಈಗ ವಿಷಯವೇನು ಅಂದರೆ ವಿರಾಟ್ ಮತ್ತು ಅನುಷ್ಕಾ ದಂಪತಿಯ ಮಗು ಹುಟ್ಟುತ್ತಲೇ ತಂದೆ ತಾಯಿ ಭಾರಿ ಅದೃಷ್ಟವನ್ನ ತಂದಿದ್ದು ಸದ್ಯ ಈ ಸುದ್ದಿ ಸಕತ್ ವೈರಲ್ ಆಗಿದೆ. ಹಾಗಾದರೆ ಮಗಳು ತಂಡ ಅದೃಷ್ಟ ಏನು? ಎಂದು ನೋಡುವುದಾದರೆ , ತಂದೆ ಆಗುತ್ತಿದ್ದಂತೆ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಬ್ರಾಂಡ್ ವ್ಯಾಲ್ಯೂ ಹೆಚ್ಚಾಗಿದೆ ಮತ್ತು ಮುಂದಿನ ದಿನಗಳಲ್ಲಿ ವಿರಾಟ್ ಕೊಹ್ಲಿ ಅವರು ಅನೇಕ ಉತ್ಪನ್ನಗಳ ಜಾಹಿರಾತಿನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹೌದು ಜನವರಿ 11 ನೇ ತಾರೀಕಿನಂದು ಅನುಷ್ಕಾ ಶರ್ಮಾ ಅವರ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಸದ್ಯ ಮಗು ತಂದೆಗೆ ಭಾರಿ ಅದೃಷ್ಟವನ್ನ ಹೊತ್ತುತಂದಿದೆ ಎಂದು ಹೇಳಬಹುದು.
ಹೆಣ್ಣು ಮಗು ಹುಟ್ಟಿದ್ದು ಅನುಷ್ಕಾ ವಿರಾಟ್ ಜೀವನದಲ್ಲಿ ಸಾಕ್ಷಾತ್ ಲಕ್ಷ್ಮೀಯ ಆಗಮನವಾದಂತಿದೆ, ವಿರಾಟ್ ಅನುಷ್ಕಾಗೆ ಮಗುವಾದ ಸುದ್ದಿ ಹೊರಬರುತ್ತಿದ್ದಂತೆ, ಬಹಳಷ್ಟು ಕಂಪನಿಗಳು ಜಾಹೀರಾತಿನ ಪ್ರಸ್ತಾವನೆಯನ್ನು ಇವರ ಮುಂದಿಟ್ಟಿದೆ. ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ದಂಪತಿಗಳಿಗೆ ಈಗ ಮಗು ಜನಿಸಿದ್ದು ಅಪ್ಪ ಅಮ್ಮನ ಸಿರಿತನ ಇನ್ನಷ್ಟು ಜಾಸ್ತಿ ಆಗಿದೆ ಎಂದು ಹೇಳಬಹುದು. ಆನ್ ಲೈನ್ ಸೆಂಟಿಮೆಂಟ್ ಅನಾಲಿಸಸ್ ಕಂಪನಿ ಚೆಕ್ ಬ್ರಾಂಡ್ ಪ್ರಕಾರ ವಿರಾಟ್ ಕೊಹ್ಲಿಯ ಬ್ರಾಂಡ್ ವ್ಯಾಲ್ಯೂ ಭಾರತ ತಂಡದ ಇತರೆ ಎಲ್ಲಾ ಆಟಗಾರರಿಗಿಂತ ಅಧಿಕವಾಗಿದೆ ಮತ್ತು ವಿರಾಟ್ ಕೊಹ್ಲಿಯ ಬ್ರಾಂಡ್ ವಾಲ್ಯೂ 328 ಕೋಟಿ ರೂಪಾಯಿ ಎನ್ನಲಾಗಿದೆ. ಇನ್ನು ಮಹೇಂದ್ರ ಸಿಂಗ್ ಧೋನಿ ಈ ಪಟ್ಟಿಯಲ್ಲಿ 9ನೇ ಸ್ಥಾನ ಪಡೆದುಕೊಂಡಿದ್ದರೆ. ಹಾಗೆಯೇ ಕ್ರಿಕೆಟಿಗರ ಪೈಕಿ ವಿರಾಟ್ ಕೊಹ್ಲಿ ನಂತರದ ಸ್ಥಾನ ಪಡೆದಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಬ್ರ್ಯಾಂಡ್ ಮೌಲ್ಯ 293 ಕೋಟಿ ರೂ.ಗಳಾಗಿದೆ. 2019 ಏಕದಿನ ವಿಶ್ವಕಪ್‌ನಲ್ಲಿ ಧೋನಿ ಕೊನೆಯದಾಗಿ ಆಡಿದ್ದರು. ಕ್ರಿಕೆಟ್‌ನಿಂದ ದೀರ್ಘ ಸಮಯದಿಂದ ಹೊರಗುಳಿದರೂ ಬ್ರ್ಯಾಂಡ್ ಮೌಲ್ಯವನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಕ್ರಿಕೆಟ್ ದೇವರು ಎಂದೇ ಆರಾಧಿಸಲ್ಪಡುವ ಮಾಜಿ ಐಕಾನ್ ಸಚಿನ್ ತೆಂಡೂಲ್ಕರ್ ಪ್ರಸ್ತುತ ಪಟ್ಟಿಯಲ್ಲಿ 15ನೇ ಸ್ಥಾನದಲ್ಲಿದ್ದಾರೆ. ಹಾಗೆಯೇ ಕೊಹ್ಲಿ, ಧೋನಿ ಬಳಿಕ ಗರಿಷ್ಠ ಬ್ರ್ಯಾಂಡ್ ಮೌಲ್ಯ ಗಿಟ್ಟಿಸಿರುವ ಕ್ರಿಕೆಟಿಗ ಎಂದೆನಿಸಿದ್ದಾರೆ. ಮಾಸ್ಟರ್ ಬ್ಲಾಸ್ಟರ್ ಒಟ್ಟು 178 ಕೋಟಿ ರೂ.ಗಳ ಬ್ರ್ಯಾಂಡ್ ಮೌಲ್ಯವನ್ನು ಹೊಂದಿದ್ದಾರೆ. ಸಮಕಾಲೀನ ಕ್ರಿಕೆಟಿಗರ ಪೈಕಿ ವಿರಾಟ್ ಕೊಹ್ಲಿ ಬಳಿಕ ಬಳಿಕ ಅತಿ ಹೆಚ್ಚು ಅಭಿಮಾನಿಗಳ ಬಳಗವನ್ನು ಕಟ್ಟಿಕೊಂಡಿರುವ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮ ಪಟ್ಟಿಯಲ್ಲಿ 20ನೇ ಸ್ಥಾನ ಪಡೆದುಕೊಂಡಿದ್ದಾರೆ. ಈ ಮೂಲಕ ಟಾಪ್ 20 ಪಟ್ಟಿಯಲ್ಲಿರುವ ರೋಹಿತ್ ಶರ್ಮ ಒಟ್ಟು 163 ಕೋಟಿ ರೂ.ಗಳ ಬ್ರ್ಯಾಂಡ್ ಮೌಲ್ಯ ಪಡೆದಿದ್ದಾರೆ. ಆದರೆ ಏನೇ ಆಗಲಿ ಹುಟ್ಟುತ್ತಲೇ ಅಪ್ಪನ ಅದೃಷ್ಟವನ್ನ ಬದಲಾಯಿಸಿದ ಮಗು ಅನ್ನುವ ಹೆಗ್ಗಳಿಕೆಗೆ ವಿರಾಟ್ ಮತ್ತು ಅನುಷ್ಕಾ ದಂಪತಿಗಳ ಮಗು ಸಾಕ್ಷಿಯಾಗಲಿದೆ ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ.