ನಮ್ಮ ರಾಜ್ಯದ ರಾಜಧಾನಿಯಾದ ಬೆಂಗಳೂರಿನಲ್ಲಿ ವಿಧಾನಸೌಧ ಸುಪ್ರಸಿದ್ಧವಾಗಿದೆ. ಈ ಭವ್ಯ ಕಟ್ಟಡವನ್ನು ಕೆಂಗಲ್ ಹನುಮಂತಯ್ಯ ಅವರು ಕಟ್ಟಿಸಿದರು. ವಿಧಾನಸೌಧ ಎಂಬ ಹೆಸರನ್ನು ಕೇಳಿದರೆ ಸಾಕು ರಾಜಕಾರಣಿಗಳ ಜಗಳ ಮತ್ತು ಕಚ್ಚಾಟ ನೆನಪಾಗುತ್ತದೆ. ಆದರೆ ಇದು ನೋಡಲು ಬಹಳ ಸುಂದರವಾಗಿದೆ. ಆದ್ದರಿಂದ ನಾವು ಇಲ್ಲಿ ವಿಧಾನಸೌಧದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ಹಿಂದೆ ಬ್ರಿಟಿಷ್ ಅಧಿಕಾರಿಯೊಬ್ಬರು ಭಾರತಕ್ಕೆ ಭೇಟಿ ನೀಡಿದಾಗ ದೇಶದ ಎಲ್ಲಾ ಕಟ್ಟಡಗಳನ್ನು ಗಮನಿಸಿ ಕರ್ನಾಟಕದಲ್ಲಿ ಯಾವುದೇ ವಾಸ್ತುಶಿಲ್ಪಿ ಕಟ್ಟಡ ಇಲ್ಲವೇ ಎಂದು ಕೆಂಗಲ್ ಹನುಮಂತಯ್ಯ ಇವರನ್ನು ಪ್ರಶ್ನಿಸಿದ್ದರು. ಇದನ್ನು ಕೇಳಿದ ಕೆಂಗಲ್ ಹನುಮಂತಯ್ಯ ಅವರು ಕರ್ನಾಟಕದ ಬೆಂಗಳೂರಿನಲ್ಲಿ ವಿಧಾನಸೌಧ ಕಟ್ಟಡ ನಿರ್ಮಾಣದ ಬಗ್ಗೆ ಯೋಚಿಸಿದ್ದರು. ಕೆಂಗಲ್ ಹನುಮಂತಯ್ಯ ಅವರು ಇದರಿಂದ ರಷ್ಯಾ, ಅಮೇರಿಕಾ,ಫ್ರಾನ್ಸ್ ಹೀಗೆ ಅನೇಕ ಯುರೋಪ್ ರಾಷ್ಟ್ರಗಳನ್ನು ಭೇಟಿ ನೀಡಿ ಅಲ್ಲಿನ ಕಟ್ಟಡದ ವಾಸ್ತುಶಿಲ್ಪದ ಶೈಲಿಯನ್ನು ಗಮನಿಸಿದ್ದರು.

ವಿಶೇಷವೆಂದರೆ ಈ ವಿಧಾನಸೌಧವನ್ನು ಸುಮಾರು 5000 ಖೈದಿಗಳನ್ನು ಬಳಸಿಕೊಂಡು ಕಟ್ಟಲಾಗಿದೆ. ಅಂದಿನ ಭಾರತದ ಪ್ರಧಾನಿಯಾಗಿದ್ದ ಜವಹರಲಾಲ್ ನೆಹರು ಅವರು 1951 ಜುಲೈ 13 ರಂದು ಈ ಕಟ್ಟಡದ ಶಂಕುಸ್ಥಾಪನೆಯನ್ನು ನೆರವೇರಿಸಿದರು. ಆಗಿನ ಕಾಲದಲ್ಲಿ ಸುಮಾರು ಒಂದೂವರೆ ಕೋಟಿ ರೂಪಾಯಿಯನ್ನು ಈ ವಿಧಾನಸೌಧವನ್ನು ಕಟ್ಟಲು ಖರ್ಚು ಮಾಡಿದ್ದರು. ಇದು 1956 ರಲ್ಲಿ ಕಟ್ಟಡ ನಿರ್ಮಾಣ ಸಂಪೂರ್ಣಗೊಂಡಿತು. ಈ ವಿಧಾನಸೌಧವು ಸುಮಾರು 60 ಎಕರೆ ಪ್ರದೇಶದಲ್ಲಿ ವಿಸ್ತಾರಗೊಂಡಿದೆ. ಇದು ವಿಧಾನಸಭೆ, ವಿಧಾನಪರಿಷತ್, ಕ್ಯಾಬಿನೆಟ್ ಹಾಲ್, ಸಮ್ಮೇಳನ ಸಭಾಂಗಣ, ಬಾಂಕ್ವಿಟ್ ಹಾಲ್ ಗಳನ್ನು ಒಳಗೊಂಡಿದೆ.

ಕಟ್ಟಡ ನಿರ್ಮಾಣಕ್ಕೆ ಅಗತ್ಯವಾದ ಗ್ರಾನೈಟ್, ಮರಗಳನ್ನು ಸ್ಥಳೀಯವಾಗಿಯೇ ಬಳಸಿಕೊಂಡು ಕಟ್ಟಿರುವುದು ಇನ್ನೊಂದು ವಿಶೇಷವಾಗಿದೆ. ಮೊದಲೇ ಹೇಳಿದ ಹಾಗೆ ಈ ಕಟ್ಟಡವನ್ನು ಕಟ್ಟಲು ಖೈದಿಗಳನ್ನು ಸಹ ಬಳಸಿಕೊಳ್ಳಲಾಗಿದೆ. ಈ ವಿಧಾನಸೌಧವು ಪ್ರವಾಸಿಗಳ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಬೆಂಗಳೂರನ್ನು ಮುಖ್ಯವಾಗಿ ಪರಿಚಯಿಸುವುದೇ ಈ ವಿಧಾನಸೌಧವಾಗಿದೆ. ಕಟ್ಟಡದ ವಿಶಿಷ್ಟ ವಾಸ್ತುಶಿಲ್ಪ ಶೈಲಿಯು ಪ್ರಮುಖ ಆಕರ್ಷಣೆ ಆಗಿದೆ. ರಾಜಕಾರಣಿಗಳಿಗೆ ವಿಶೇಷ ವ್ಯವಸ್ಥೆಯನ್ನು ಈ ವಿಧಾನಸೌಧವು ಹೊಂದಿದೆ.

ಶಾಸಕರೊಂದಿಗೆ ಸಚಿವಾಲಯಕ್ಕೂ ಉತ್ತಮ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ವಿಧಾನಸೌಧ ನಾಲ್ಕು ಮಹಡಿಗಳನ್ನು ಹೊಂದಿದೆ. ದಕ್ಷಿಣ ಭಾಗದಲ್ಲಿ ಪ್ರವೇಶ ದ್ವಾರವಿದ್ದು ಎತ್ತರದ ಕಮಾನುಗಳನ್ನು ಹೊಂದಿದೆ. ಗೋಪುರದಲ್ಲಿ ನಾಲ್ಕು ಮುಖದ ಸಿಂಹವನ್ನು ಹೊಂದಿದೆ. ಇವೆಲ್ಲವುಗಳಿಂದ ವಿಧಾನಸೌಧವು ಭವ್ಯವಾಗಿಯೂ ರಮಣೀಯವಾಗಿಯೂ, ಆಕರ್ಷಣೀಯ ವಾಗಿಯೂ ಕಾಣುತ್ತದೆ. ವಿಧಾನಸೌಧವನ್ನು ನಾಲ್ಕು ದಿಕ್ಕಿನ ಮೂಲಗಳಿಂದಲೂ ಪ್ರವೇಶಿಸಬಹುದು.

ಆದರೆ ಇತ್ತೀಚಿನ ದಿನದ ಕೆಲವು ಘಟನೆಗಳಿಂದ ಸಾರ್ವಜನಿಕರ ಪ್ರವೇಶವನ್ನು ಬಿಗಿಗೊಳಿಸಲಾಗಿದೆ. ವಾರದ ಭಾನುವಾರದ ಸಂಜೆಯ ಹೊತ್ತಿನಲ್ಲಿ ಸಾರ್ವಜನಿಕರ ವೀಕ್ಷಣೆಗೆ ಬಿಡುವನ್ನು ಮಾಡಿಕೊಡಲಾಗುತ್ತದೆ. 1956 ಅಕ್ಟೋಬರ್ 10 ವಿಜಯ ದಶಮಿ ದಿನದಂದು ವಿಧಾನಸೌಧ ಕರ್ನಾಟಕ ರಾಜ್ಯಕ್ಕೆ ಸಮರ್ಪಣೆಯಾಗಿದೆ. ಅಂದಿನಿಂದ ಇಂದಿನವರೆಗೂ ಕರ್ನಾಟಕ ರಾಜ್ಯದ ಜನರ ಜನಪ್ರತಿನಿಧಿಗಳ ಕಾರ್ಯಾಲಯ ಈ ವಿಧಾನಸೌಧವಾಗಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!