ಇತ್ತೀಚಿನ ದಿನಗಳಲ್ಲಿ ನಗರಲ್ಲಿ ಬಹಳಷ್ಟು ಜನ ಮನೆಗೆ ಹಾಲು ಮೊಸರಿನ ಪ್ಯಾಕೆಟ್ ಬಳಸುತ್ತಾರೆ, ಇನ್ನು ಕೆಲವರ ಮನೆಗಳಿಗೆ ಹಳ್ಳಿ ಕಡೆಯಿಂದ ಬಂದು ಮನೆಗೆ ಹಾಲು ಹಾಕಿ ಹೋಗುತ್ತಾರೆ ಆದ್ರೆ ಇಲ್ಲಿ ಮುಖ್ಯವಾಗಿ ಮನೆಯಲ್ಲಿ ಹಾಲು ಹಾಗೂ ಮೊಸರಿನ ಪ್ಯಾಕೆಟ್ ಬಳಸುವವರು ಇದನೊಮ್ಮೆ ತಿಳಿಯುವುದು ತುಂಬಾನೇ ಒಳ್ಳೆಯದು. ಅಷ್ಟಕ್ಕೂ ಏನಿದು ಸ್ಟೋರಿ ಅನ್ನೋದನ್ನ ಮುಂದೆ ನೋಡಿ.

ಹಾಲು ಹಾಗೂ ಮೊಸರಿನ ಪ್ಯಾಕೆಟ್ ಬಳಸುವಾಗ ಬಹಳಷ್ಟು ಜನರು ಇಂತಹ ತಪ್ಪನ್ನು ಮಾಡುತ್ತಾರೆ, ಇನ್ನು ಕೆಲವರು ಮಾಡದೇನು ಇರಬಹುದು. ಯಾಕೆಂದರೆ ಹಾಲಿನ ಪ್ಯಾಕೆಟ್ ಕಟ್ ಮಾಡಿ ಪೂರ್ತಿ ಕವರ್ ಅನ್ನು ಕಸದ ಬುಟ್ಟಿಗೆ ಹಾಕುತ್ತಾರೆ. ಇನ್ನು ಕಟ್ ಮಾಡಿದ ಚಿಕ್ಕ ತುಂಡನ್ನು ಹಾಗೆ ಬಿಡುತ್ತಾರೆ. ಕೆಲವರು ಹಾಲಿನ ಅಥವಾ ಮೊಸರಿನ ಕಟ್ ಮಾಡಿದ ಪ್ಯಾಕೆಟ್ ಅನ್ನು ಪೇಪರ್ ಮಾರುವವರಿಗೆ ಮಾರುತ್ತಾರೆ, ಅಥವಾ ಕಸದ ಬುಟ್ಟಿಗೆ ಹಾಕುತ್ತಾರೆ. ಆದ್ರೆ ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ವಿಷಯ ಏನು ಅಂದ್ರೆ.

ನಾವುಗಳು ಹಾಲನ್ನು ಬಳಸುವಾಗ ಆ ಪ್ಯಾಕ್ ನ ಕವರಿನ ತುದಿಯ ಭಾಗವನ್ನು ಕಟ್ ಮಾಡಿ ಬಿಸಾಕುತ್ತೇವೆ. ಆದರೆ ಆ ಕವರಿನ ದೊಡ್ಡ ಮುಖ್ಯ ಭಾಗ ರಿಸೈಕ್ಲಿಂಗ್ ಪ್ರಕ್ರಿಯೆಗೆ ಹೋಗಿ ಸೇರುವ ಸಾಧ್ಯತೆ ಹೆಚ್ಚಿರುತ್ತದೆ. ಆದರೆ ಕತ್ತರಿಸಲ್ಪಟ್ಟಿರುವ ಸಣ್ಣ ತುಣುಕು ಮಾತ್ರ ಕಸದಲ್ಲಿ ಸೇರಿ ಹೋಗುತ್ತದೆ. ಇದು ರಿಸೈಕ್ಲಿಂಗ್ ಪ್ರಕ್ರಿಯೆಗೆ ಸಿಗದೆ ಶಾಶ್ವತವಾಗಿ ಭೂಮಿಯ ಮೇಲೆ ಅದೇ ರೂಪದಲ್ಲಿ ಉಳಿಯುತ್ತದೆ.

ಹೀಗೆ ಮಾಡುವುದರಿಂದ ಪ್ರತಿದಿನ ಇಂತಹ ತುಣುಕುಗಳು ಬೆಂಗಳೂರಿನಂತಹ ದೊಡ್ಡ ನಗರದಲ್ಲಿ ಲಕ್ಷಗಟ್ಟಲೆ ಪ್ರಮಾಣದ ಪ್ಲಾಸ್ಟಿಕ್ ಕಸವಾಗಿ ಸೇರಿ ಪರಿಸರಮಾಲಿನ್ಯಕ್ಕೆ‌ ಪ್ರಧಾನ ಕಾರಣವಾಗುತ್ತಿದೆ. ನಾವುಗಳು ಮನಸ್ಸು ಮಾಡಿದ್ರೆ ಇದರಿಂದ ಆಗುವ ಪರಿಣಾಮವನ್ನು ತಪ್ಪಿಸಬಹುದಾಗಿದೆ. ಹೌದು ಹೇಗೆ ಅಂದ್ರೆ ಹಾಲಿನ ಪ್ಲಾಸ್ಟಿಕ್ ಕವರನ್ನು ಸೂಜಿ ಅಥವಾ ಪಿನ್ ಮೂಲಕ‌ ರಂಧ್ರ ಮಾಡಿ ಹಾಲನ್ನು ಪಾತ್ರೆಗೆ ಸುರಿದುಕೊಳ್ಳಬಹುದು ಅಥವಾ ತುಣುಕನ್ನು ಬೇರ್ಪಡಿಸದೆಯೇ ಕವರನ್ನು ಕಟ್ ಮಾಡಿ ಬಳಸಿಕೊಳ್ಳಬಹುದಾಗಿದೆ. ಹೀಗೆ ಮಾಡಿದ್ದೆ ಆದಲ್ಲಿ ಖಂಡಿತ ಪ್ಲಾಸ್ಟಿಕ್ ತುಣುಕಿನ ಪ್ರಶ್ನೆಯೇ ಬರುವುದಿಲ್ಲ.

ಈಗಾಗಲೇ ಬಹಳಷ್ಟು ಜನ ಈ ವಿಧಾನವನ್ನು ಮಾಡುತ್ತಿದ್ದಾರೆ, ನಾವು ಪ್ಲಾಸ್ಟಿಕ್ ಅನ್ನು ಕಸವಾಗಿ ಮಾರ್ಪಡಿಸದೆ ಮರುಬಳಕೆಗೆ ಬಳಸಿಕೊಳ್ಳಬಹುದು. ಮತ್ತು ಪರಿಸರ ಮಾಲಿನ್ಯವನ್ನು ತಡೆಗಟ್ಟುವ ಮೂಲಕ ಪ್ರಕೃತಿಯನ್ನು ಉಳಿಸಬಹುದಾಗಿದೆ. ಹಾಗಾಗಿ ಈ ವಿಚಾರ ನಿಮಗೆ ಉಪಯುಕ್ತ ಅನಿಸಿದರೆ ಖಂಡಿತ ಬೇರೆಯವರಿಗೂ ಷೇರ್ ಮಾಡಿ ಇದರಿಂದ ಬೇರೆಯವರಿಗೂ ತಿಳಿಯಲಿ ಪರಿಸರ ರಕ್ಷಣೆ ನಮ್ಮೆಲರ ಹಕ್ಕು. ಶುಭವಾಗಲಿ

By

Leave a Reply

Your email address will not be published. Required fields are marked *