ನಮ್ಮ ಹಳೆಯ ಮೊಬೈಲ್ ಫೋನ್ ಗಳನ್ನು ನಾವು ಸಿಸಿ ಕ್ಯಾಮರಾ ತರ ಹೇಗೆ ಬಳಕೆ ಮಾಡಿಕೊಳ್ಳಬಹುದು ಎನ್ನುವುದರ ಬಗ್ಗೆ ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ನಿಮ್ಮ ಹಳೆಯ ಮೊಬೈಲ್ ನಲ್ಲಿ ಸಿಸಿ ಕ್ಯಾಮರಾ ಮಾಡಿಕೊಂಡು ಹೊಸ ಮೊಬೈಲ್ ನಲ್ಲಿ ಎಲ್ಲಿ ಬೇಕಿದ್ದರೂ ಕುಳಿತು ನೋಡಬಹುದು. ಇದಕ್ಕಾಗಿ ನಿಮ್ಮ ಹಳೆಯ ಫೋನ್ ಹಾಗೂ ಹೊಸ ಫೋನ್ ಎರಡರಲ್ಲಿ ಕೂಡಾ ಪ್ಲೇ ಸ್ಟೋರ್ ಗೆ ಹೋಗಿ ಒಂದು ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ಸಿಸಿ ಟಿವಿ ಎನ್ನುವ ಅಪ್ಲಿಕೇಶನ್ ಅನ್ನು ನಿಮ್ಮ ಎರಡೂ ಮೊಬೈಲ್ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬೇಕು. ನಂತರ ಓಪನ್ ಮಾಡಿ ಕೇಳುವ ಕೆಲವು ಪರ್ಮಿಶನ್ ಗಳಿಗೆ ಓಕೆ ಕೊಟ್ಟು ಸೈನ್ ವಿಥ್ ಗೂಗಲ್ ಎಂದು ಕೇಳಿದಾಗ ಅದರ ಮೇಲೆ ಕ್ಲಿಕ್ ಮಾಡಿದಾಗ ಲಾಗ್ ಇನ್ ಆಗತ್ತೆ. ನಂತರ ನಿಮ್ಮ ಗೂಗಲ್ ಅಕೌಂಟ್ ಸೆಲೆಕ್ಟ್ ಮಾಡಿಕೊಂಡು ಓಕೆ ಕೊಟ್ಟು ಸೆಟ್ ಮಾಡಿಕೊಳ್ಳಬೇಕು.
ಹೀಗೆ ಇದೆ ರೀತಿಯಾಗಿ ನಿಮ್ಮ ಹಳೆಯ ಮೊಬೈಲ್ ಫೋನ್ ನಲ್ಲಿ ಕೂಡಾ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ಲಾಗ್ ಇನ್ ಆಗಿ ಮೊದಲೇ ನೀಡಿದ ಜಿ ಮೇಲ್ ಅಕೌಂಟ್ ಅನ್ನು ಸೇರಿಸಬೇಕು. ನಂತರ ಹಳೆಯ ಮೊಬೈಲ್ ನಲ್ಲಿ ಬಲಭಾಗದಲ್ಲಿ ಕಾಣುವ ಐಕಾನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಹಳೆಯ ಮೊಬೈಲ್ ಸಿಸಿ ಕ್ಯಾಮರಾ ಆಗಿ ಬದಲಾಗುತ್ತೆ ಹಾಗೂ ನಿಮ್ಮ ಹೊಸ ಮೊಬೈಲ್ ಗೆ ರೆಕಾರ್ಡ್ ಆಗುವ ಎಲ್ಲಾ ವಿಡಿಯೋ ಗಳು ಸಹ ಬರತ್ತೆ.
ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋಗಳನ್ನು ನೋಡಿ..