ಕೆಲವರಿಗೆ ಹುಲಿಯ ಹೆಸರು ಕೇಳಿದರೆ ಭಯ ಉಂಟಾಗತ್ತೆ. ಹುಲಿಯ ಹತ್ತಿರ ಹೋಗುವುದು ಅಲ್ಲ ಒಮ್ಮೆ ಅದರ ಘರ್ಜನೆಯ ಶಬ್ಧ ಕೇಳಿದರೆ ಸಾಕು ನಡುಕ ಹುಟ್ಟಿಸುವುದು ಸಹಜ. ಆದರೆ ಇಲ್ಲಿ ಒಬ್ಬ ವ್ಯಕ್ತಿ ದಿನಕ್ಕೆ ಕಡಿಮೆ ಎಂದರೂ ಹತ್ತು ಸಲ ಆದರೂ ನೇರವಾಗಿ ಹುಲಿಯ ಎದುರು ನಿಲ್ಲುತ್ತಾರೆ. ಯಾಕಂದರೆ ಈ ವ್ಯಕ್ತಿ ಮಾಡುವಂತಹ ಕೆಲಸವೇ ಆಂತದ್ದು. ಆ ವ್ಯಕ್ತಿ ಯಾರು? ಅವರು ಮಾಡುವ ಕೆಲಸ ಯಾವುದು ಅನ್ನೋದರ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ.

ಈ ವ್ಯಕ್ತಿಗೆ ಅದೆಷ್ಟು ಸಲ ಸಾವು ಎನ್ನುವುದು ಕಣ್ಣ ಮುಂದೆ ಬಂದಿದೆಯೋ ಗೊತ್ತಿಲ್ಲ ಅದೆಷ್ಟು ಬಾರಿ ಸಾವಿನಿಂದ ಉಳಿದು ಬಂದಿದ್ದಾರೋ ಏನೋ ಆದರೆ ಇವರು ಅದ್ಯಾವುದಕ್ಕೂ ಅಂಜಲಿಲ್ಲ. ಇವರ ಹೆಸರು ಶ್ರೀನಿವಾಸನ್ ವಯಸ್ಸು 28 ವರ್ಷ. ಟೈಗರ್ ಶ್ರೀನಿ ಎಂದೇ ಇವರು ವಿಖ್ಯಾತಿ ಆಗಿರುವುದು. ಟೈಗರ್ ಶ್ರೀನಿ ಎಂದೇ ಫೇಮಸ್ ಆಗಿರುವ ಇವರು ಕಳೆದ ಎರಡು ದಶಕಗಳಿಂದ ಕೇರಳ ಫಲ ಕಾಡಿನ ಪರಂಬಿಕುಲಂ ಟೈಗರ್ ರೆಸಾರ್ಟ್ ನಲ್ಲಿ ಅರಣ್ಯ ವೀಕ್ಷಕನಾಗಿ ಕಾರ್ಯ ನಿರ್ವಹಿಸುತ್ತಾ ಇದ್ದಾರೆ. ಮನುಷ್ಯನ ನೆರಳನ್ನೇ ಕಂಡರೆ ಕೆರಳುವ ಹುಲಿಗಳು ಶ್ರೀನಿವಾಸನ್ ಅವರನ್ನು ನೋಡಿದರೆ ಸುಮ್ಮನೆ ಹೋಗುತ್ತಾರೆ. ಇವರು ಇದುವರೆಗೂ 2 ಸಾವಿರಕ್ಕೂ ಹೆಚ್ಚು ಬಾರಿ ಅತೀ ಸಮೀಪದಿಂದ ಹುಲಿಗಳನ್ನು ನೋಡಿದ್ದಾರೆ. ಅಷ್ಟೇ ಅಲ್ಲದೆ ಪ್ರತೀ ದಿನ 10 ಬಾರಿ ಆದರೂ ಇವರು ಹುಲಿಯನ್ನ ನೋಡುತ್ತಾರಂತೆ. ಆದರೆ ಅಚ್ಚರಿಯ ಸಂಗತಿ ಏನೆಂದರೆ ಇವರು ಹುಲಿಯನ್ನ ನೋಡುವುದಕ್ಕಿಂತ ಹುಲಿಯೇ ಇವರನ್ನ ಹೆಚ್ಚು ಬಾರಿ ನೋಡುತ್ತದೆಯಂತೆ. ಅರಣ್ಯ ವೀಕ್ಷಕರ ಕೆಲಸ ಎಷ್ಟು ಅಪಾಯ ಎಂದರೆ ಒಮ್ಮೆ ಹುಲಿ ಟೈಗರ್ ಶ್ರೀನಿ ಅವರ ಎದುರಿಗೆ ಬಂದಿದೆ ಅಷ್ಟು ಸಮೀಪದಿಂದ ಹುಲಿಯನ್ನ ನೋಡಿದ ಶ್ರೀನಿವಾಸನ್ ಇವತ್ತು ನನ್ನ ಕಥೆ ಮುಗೀತು ಅಂತ ಭಾವಿಸಿ ಮನಸಲ್ಲಿ ಹೆಂಡತಿ ಮಕ್ಕಳನ್ನು ನೆನೆದು ಕಣ್ಣಲ್ಲಿ ನೀರು ಬಂದರೂ ಎದುರಿಗೆ ಇರುವುದು ವ್ಯಾಘ್ರ. ಆಗ ಅವರ ಪರಿಸ್ಥಿತಿ ಹೇಗಾಗಿರಬೇಡ ಆದರೆ ನೋಡುತ್ತಾ ಇದ್ದ ಹಾಗೇ ಹುಲಿ ಅಲ್ಲಿಂದ ಹೊರಟು ಹೋಗಿತ್ತು. ಪ್ರತೀ ದಿನ ಶ್ರೀನಿವಾಸನ್ ನೋಡುವ ಹುಲಿಗೆ ವಾಸನೆ ತಿಳಿದು ಯಾವುದೇ ಹಾನಿ ಮಾಡದೇ ಹೋಗಿದೆ ಎನ್ನುವುದು ಶ್ರೀನಿವಾಸನ್ ಅವರ ಅಭಿಪ್ರಾಯ.

ಹುಲಿಗಳ ಜೊತೆ ನಿಕಟ ಸಂಪರ್ಕ ಹೊಂದಿದ ಶ್ರೀನಿವಾಸನ್ ಅರಣ್ಯ ವೀಕ್ಷಕನಾಗಿದ್ದೆ ಒಂದು ರೋಚಕ ಕಥೆ. ಮೂಲತಃ ಶ್ರೀನಿವಾಸನ್ ಅವರ ತಂದೆ ಮಾವುತ. ಚಿಕ್ಕ ವಯಸ್ಸಿನಲ್ಲಿ ಇವರ ತಂದೆ ಅಕಾಲಿಕ ಮರಣ ಹೊಂದುತ್ತಾರೆ. ಮನೆಯಲ್ಲಿ ಕಿತ್ತು ತಿನ್ನುವ ಬಡತನ. 5 ನೆ ತರಗತಿ ಓದುತ್ತಿದ್ದ ಶ್ರೀನಿವಾಸನ್ ತಮ್ಮ ಓದನ್ನು ಅರ್ಧಕ್ಕೆ ನಿಲ್ಲಿಸುತ್ತಾರೆ. ಬುಡಕಟ್ಟು ಜನಾಂಗಕ್ಕೆ ಸೇರಿದ ಶ್ರೀನಿವಾಸನ್ ಕುಟುಂಬದ ಬಹುತೇಕ ಮಂದಿ ಅರಣ್ಯ ಇಲಾಖೆಯಲ್ಲಿಯೇ ಕೆಲಸ ಮಾಡುತ್ತಾ ಇದ್ದಾರೆ. ಆದರೆ ಟೈಗರ್ ರೆಸಾರ್ಟ್ ನಲ್ಲಿ ಕೆಲಸ ಮಾಡುತ್ತಾ ಇರುವ ವ್ಯಕ್ತಿ ಎಂದರೆ ಅದು ಟೈಗರ್ ಶ್ರೀನಿ. ಇವರ ಮುಖ್ಯ ಕೆಲಸ ಎಂದರೆ ಹುಲಿಗಳ ಚಲನವಲನ , ಹುಲಿಗಳ ಸಂಖ್ಯೆಯನ್ನು ಮಾನಿಟರಿಂಗ್ ಮಾಡುವುದು. ಮೊದ ಮೊದಲು ಹುಲಿಗಳ ಕಾಲಿನ ಹೆಜ್ಜೆ ಗುರುತುಗಳಿಂದ ಇವುಗಳನ್ನು ಪತ್ತೆ ಮಾಡಲಾಗುತ್ತಿತ್ತು. ಆದರೆ ಇದು ಅವೈಜ್ಞಾನಿಕಾವಾಗಿತ್ತು. ನಿಖರ ಮಾಹಿತಿ ದೊರೆಯುತ್ತಿರಲಿಲ್ಲ. ಆದರೆ ಡೆಹ್ರಾಡೂನ್ ವನ್ಯ ಜೀವಿ ಸಂಸ್ಥೆಯ ಗ್ರೆಡ್ ವ್ಯವಸ್ಥೆಯನ್ನು ಅನುಸರಿಸಿ ಕಾಡಿಲ್ಲಿ ಬೇರೆ ಬೇರೆ ಭಾಗಗಳಾಗಿ ಮಾಡಲಾಯಿತು. ಒಂದೊಂದು ಭಾಗಗಳಲ್ಲಿ ಸಹ ಇಂತಿಷ್ಟು ಎಂದು ಕ್ಯಾಮರಾಗಳನ್ನು ಫಿಕ್ಸ್ ಮಾಡಲಾಯಿತು. ಆಗ ಹುಲಿಗಳ ಬಗ್ಗೆ ನಿಖರ ಮಾಹಿತಿ ದೊರೆಯುತ್ತಿತ್ತು. ಈ ಎಲ್ಲಾ ಕೆಲಸಗಳಲೂ ಪರಂಭಿಕುಲಮ್ ನ ಟೈಗರ್ ಶ್ರೀನಿ ಅವರದ್ದು ಪಳಗಿದ ಕೈ.

ಶ್ರೀನಿ ಅವರ ಕೆಲಸದ ಬಗ್ಗೆ ಅವರ ಹೈಯರ್ ಆಫೀಸರ್ಸ್ ಹಾಡಿ ಹೊಗಳುತ್ತಾರೆ. ಯಾವುದೇ ತರಬೇತಿ ಇಲ್ಲದೆಯೇ ಶ್ರೀನಿವಾಸನ್ ಬಹಳ ಚೆನ್ನಾಗಿ ಕ್ಯಾಮೆರಾ ಹ್ಯಾಂಡಲ್ ಮಾಡುತ್ತಾರೆ. ಅದರಲ್ಲಿ ಇವರು ಸೆರೆ ಹಿಡಿದಿದ್ದ 5 ಹುಲಿಗಳು ಒಟ್ಟಿಗೇ ಇರುವ ಫೋಟೋ ಒಂದು ಬಹಳ ಫೇಮಸ್ ಆಗಿದೆ. ಶ್ರೀನಿ ಅವರ ಈ ಗುಣದಿಂದಲೇ ಅವರನ್ನು ಇತರ ಸಿಬ್ಬಂಧಿಗಳಿಗೆ ಹಾಗೂ ವೀಕ್ಷಕರಿಗೆ ತರಬೇತುದಾರರನ್ನಾಗಿ ಮಾಡಿದ್ದಾರೆ. ಇವರು ಎಲ್ಲಾ ರೀತಿಯ ತರಬೇತಿಗಳನ್ನು ಬಹಳ ಪರಿಣಾಮಕಾರಿಯಾಗಿ ನಡೆಸುತ್ತಾರೆ, ಅಷ್ಟೇ ಅಲ್ಲದೆ ಅರಣ್ಯಕ್ಕೆ ಭೇಟಿ ನೀಡುವ ಸಂಶೋಧನಾ ವಿದ್ಯಾರ್ಥಿಗಳೂ ಸಹ ಶ್ರೀನಿ ಅವರನ್ನೇ ಮಾರ್ಗದರ್ಶಕರನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಬರೀ ಶಬ್ಧ, ವಾಸನೆಯಲ್ಲಿಯೇ ಹುಲಿಗಳ ಬಗ್ಗೆ ತಿಳಿದುಕೊಳ್ಳುವ ಶ್ರೀನಿವಾಸನ್ ಬಗ್ಗೆ ಜೆಂಟಿ ಆರ್ಟಿಒ ಮತ್ತು ವನ್ಯ ಜೀವಿ ಫೋಟೋಗ್ರಾಫರ್ ಒಂದು ಮುಖ್ಯವಾದ ವಿಷಯವನ್ನು ತಿಳಿಸಿದ್ದಾರೆ. ಒಂದು ದಿನ ಶ್ರೀನಿ ಅವರ ಜೊತೆ ಇವರು ಮಂಜು ಮುಸುಕಿದ ಮುಂಜಾನೆಯಲ್ಲಿ ಕಾಡಿನಲ್ಲಿ ಹೋಗುವಾಗ ಕಾಡಿನ ಬಗ್ಗೆ ಏನೇನೂ ತಿಳಿಯಲಿಲ್ಲ. ಆದರೆ ಶ್ರೀನಿ ಅವರಿಗೆ ಕಾಡಿನ ಬಗ್ಗೆ ಇಂಚಿಂಚು ಸಹ ತಿಳಿದಿದೆ. ಅವರಿದ್ದರು ಅನ್ನುವ ಧೈರ್ಯದಿಂದಲೇ ನಾನು ಹೊರಟೆ ಇದ್ದಕ್ಕಿದ್ದ ಹಾಗೇ ಎಲೆಗಳ ಶಬ್ಧ ಕೇಳಿಸಿತು. ಶ್ರೀನಿ ಕೂಡಲೇ ಮುಂದೆ ಹಿಗಬೇಡಿ ನಿಲ್ಲಿ ಎಂದು ನನ್ನನು ನಿಲ್ಲಿಸಿದರಿ. ಅಂದು ನಾನು ಶ್ರೀನಿ ಅವರ ಮಾತು ಕೇಳದೆ ಮುಂದೆ ಹೋಗಿದ್ದರೆ ಇಂದು ಜೀವಂತವಾಗಿ ಇರುತ್ತಿರಲಿಲ್ಲ. ಅಲ್ಲೊಂದು ದೊಡ್ಡ ಹುಲಿ ಹೋಗುತ್ತಿತ್ತು. ಶ್ರೀನಿ ಅವರನ್ನು ನೋಡಿದ ಕೂಡಲೇ ಹುಲಿ ಸ್ವಲ್ಪ ಸುಮ್ಮನೆ ನಿಂತು ಮುಂದೆ ಹೋಯಿತು. ಅದೇ ಸಮಯದಲ್ಲಿ ನನಗೆ ಕೆಲವು ಫೋಟೋ ಕೂಡಾ ತೆಗೆಯಲು ಅವಕಾಶ ಸಿಕ್ಕಿತು ಎಂದು ಆ ಫೋಟೋಗ್ರಾಫರ್ ಈ ರೀತಿಯಾಗಿ ತನ್ನ ಅಭಿಪ್ರಾಯ ತಿಳಿಸಿದ್ದಾರೆ. ಚಿರತೆಯೋ ಹುಲಿಯೋ ಎಲ್ಲಾ ಪ್ರಾಣಿಗಳ ಬಗ್ಗೆ ಶ್ರೀನಿ ಅವರಿಗೆ ಪೂರ್ಣ ವಿವರ ಗೊತ್ತು. ಶ್ರೀನಿ ಅವರ ಈ ಕೆಲಸ ಗುರುತಿಸಿ 2019 ರಲ್ಲಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದಿಂದ ಅತ್ಯುತ್ತಮ ಅರಣ್ಯ ವೀಕ್ಷಕ ಎನ್ನುವ ಪ್ರಶಸ್ತಿ ಲಭಿಸಿದೆ.

By

Leave a Reply

Your email address will not be published. Required fields are marked *