ಹಲವು ಆರೋಗ್ಯಕರ ಗುಣಗಳನ್ನು ಹೊಂದಿದ ಮೆಂತೆಯನ್ನು ಅತಿಯಾಗಿ ಸೇವಿಸಬಾರದು. ಅತಿಯಾಗಿ ಸೇವಿಸಿದರೆ ಆಗುವ ದುಷ್ಪರಿಣಾಮಗಳನ್ನು ಈ ಲೇಖನದ ಮೂಲಕ ತಿಳಿಯೋಣ.

ಸಾಮಾನ್ಯವಾಗಿ ಬಹಳಷ್ಟು ಮನೆಗಳಲ್ಲಿ ದೋಸೆ, ಇಡ್ಲಿ ಮಾಡುವಾಗ ಮೆಂತೆ ಕಾಳನ್ನು ಹಾಕುವುದು ರೂಢಿಯಾಗಿದೆ. ಮೆಂತೆ ದೇಹಕ್ಕೆ ತಂಪು, ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತದೆ, ಅಲ್ಲದೇ ಬಾಯಿ ಹುಣ್ಣಿಗೆ ಮೆಂತೆ ಸಹಾಯಕಾರಿ. ಔಷಧೀಯ ಗುಣಗಳಿರುವ ಮೆಂತೆಯನ್ನು ವಿಪರೀತವಾಗಿ ಸೇವಿಸುವುದರಿಂದ ದುಷ್ಪರಿಣಾಮ ಉಂಟಾಗುತ್ತದೆ. ಅವುಗಳೆಂದರೆ ಹೈಪರಗ್ಲೈಸೆಮಿಯಾ ರಕ್ತದಲ್ಲಿ ಸಕ್ಕರೆಯ ಪ್ರಮಾಣ ನಿಗದಿತ ಪ್ರಮಾಣಕ್ಕಿಂತ ಕಡಿಮೆ ಆಗುವುದನ್ನು ಹೈಪರಗ್ಲೈಸೇಮಿಯ ಎನ್ನುವರು. ಇದರಿಂದ ಮೆದುಳಿಗೆ ಗ್ಲೂಕೋಸ್ ಅಂಶ ಸರಬರಾಜು ಆಗುವುದಿಲ್ಲ ಇದರಿಂದ ಮೂರ್ಛೆ ತಪ್ಪಬಹುದು, ಮೆದುಳಿಗೆ ಹಾನಿಯಾಗುತ್ತದೆ. ಸಕ್ಕರೆ ಖಾಯಿಲೆ ಇರುವವರು ಮೆಂತೆ ಕಾಳನ್ನು ವೈದ್ಯರ ಸಲಹೆಯನ್ನು ಪಡೆದು ಸೇವಿಸಬೇಕು. ಮೆಂತೆ ಸೇವಿಸುವುದರಿಂದ ಕೆಲವರಿಗೆ ಅಲರ್ಜಿಯಾಗುತ್ತದೆ ಅಲರ್ಜಿಯ ಮೂಲವನ್ನು ಹುಡುಕುವುದು ಕಷ್ಟವಾಗುತ್ತದೆ.

ಇತರ ಔಷಧೀಯ ಜೊತೆಗೆ ಮೆಂತೆಯನ್ನು ಬಳಸುವುದು ಒಳ್ಳೆಯದಲ್ಲ. ಔಷಧಿಯಲ್ಲಿರುವ ಗುಣಗಳನ್ನು ಮೆಂತೆಯಲ್ಲಿರುವ ನಾರಿನ ಅಂಶ ಹೀರಿಕೊಂಡು ದೇಹದಿಂದ ಹೊರಕಳಿಸುತ್ತದೆ. ಮೆಂತೆ ಮೂತ್ರನಾಳಗಳನ್ನು ಹಿಗ್ಗಿಸುವ ಗುಣ ಹೊಂದಿರುವುದರಿಂದ ಗರ್ಭಿಣಿ ಮಹಿಳೆಯರಿಗೆ ಒಳ್ಳೆಯದಲ್ಲ ಅದು ಅಕಾಲಿಕ ಹೆರಿಗೆಯನ್ನು ಪ್ರಚೋದಿಸುತ್ತದೆ. ಅಲ್ಸರ್, ಎದೆ ಉರಿ, ಗ್ಯಾಸ್ ಸಮಸ್ಯೆ ಇರುವವರು ಅತಿಯಾಗಿ ಮೆಂತೆ ಸೇವನೆ ಮಾಡುವುದು ಒಳ್ಳೆಯದಲ್ಲ. ಒಂದು ಚಮಚ ಮೆಂತೆ ಸೇವಿಸುವುದು ಆರೋಗ್ಯಕ್ಕೆ ಉತ್ತಮ ಅದಕ್ಕಿಂತ ಹೆಚ್ಚು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಒಟ್ಟಿನಲ್ಲಿ ಯಾರೂ ಸಹ ಅತಿಯಾಗಿ ಮೆಂತೆಯನ್ನು ಸೇವಿಸಬಾರದು ಅದು ಆರೋಗ್ಯಕ್ಕೆ ಒಳ್ಳೆಯದಲ್ಲ. ಈ ಮಾಹಿತಿಯನ್ನು ತಪ್ಪದೇ ಎಲ್ಲರಿಗೂ ತಿಳಿಸಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!