Success Story: ಹಳ್ಳಿಯಲ್ಲಿ ಸೈಕಲ್ ತುಳಿದು ಬಟ್ಟೆ ವ್ಯಾಪಾರ ಮಾಡುವ ತಂದೆಯ ಅಸೆ ಈಡೇರಿಸಿದ ಮಗ UPSC ಯಲ್ಲಿ ರ‍್ಯಾಂಕ್‌

News

Success Story: ನಮ್ಮ ಸುತ್ತಮುತ್ತ ಇರುವ ಕೆಲ ಜಿಲ್ಲಾಧಿಕಾರಿಗಳು ಅಥವಾ ಐಎಎಸ್ ಅಧಿಕಾರಿಗಳನ್ನು ನೋಡಿದ್ರೆ ನಮಗೂ ಅವರಂತೆ ಆಗಬೇಕು ಎಂಬ ಆಸೆ ಹುಟ್ಟೋದು ಸಹಜ. ಅದಕ್ಕಾಗಿ ಯುಪಿಎಸ್ಸಿ ಪರೀಕ್ಷೆ ಬರೆಯಬೇಕು ಎಂದು ಅನೇಕರು ಯೋಚಿಸ್ತಾರೆ. ಇನ್ನು ಕೆಲವರು ಇದಕ್ಕಾಗಿಯೇ ಮೊದಲಿನಿಂದಲೂ ಸಿದ್ಧತೆಗಳನ್ನು ಮಾಡಿಕೊಂಡು ಬರುತ್ತಿರುತ್ತಾರೆ. ಇನ್ನೂ ಕೆಲವರು ಆಸೆಯಿದ್ದರೂ ಈ ಪರೀಕ್ಷೆ ಪಾಸ್ ಮಾಡುವುದು ನಮ್ಮ ಹಣೆಯಲ್ಲಿಲ್ಲ ಎಂಬ ಕೀಳರಿಮೆ ಹೊಂದಿರುತ್ತಾರೆ.

ಆದರೆ ಕಠಿಣ ಪರಿಶ್ರಮ, ಆತ್ಮವಿಶ್ವಾಸ ಮತ್ತು ಸತತ ಪ್ರಯತ್ನದಿಂದ ಯಾವುದೇ ವಿದ್ಯಾರ್ಥಿ ಈ ಪರೀಕ್ಷೆಯನ್ನು ಕ್ಲಿಯರ್ ಮಾಡಬಹುದು. ಅದೇ ರೀತಿ ತನ್ನಲ್ಲಿರುವ ಆತ್ಮವಿಶ್ವಾಸ , ಛಲದ ಪರಿಣಾಮವಾಗಿ ಸೈಕಲ್‍ನಲ್ಲಿ ಬಟ್ಟೆ ಮಾರುವ ವ್ಯಾಪಾರಿಯ ಪುತ್ರ UPSC ಪರೀಕ್ಷೆಯಲ್ಲಿ 45ನೇ ರ್‍ಯಾಂಕ್ ಪಡೆದಿದ್ದಾರೆ.

ಕಷ್ಟಗಳನ್ನು ಎದುರಿಸದೆ ಯಾರೂ ಕೂಡ ಇತಿಹಾಸದ ಪುಟ ಸೇರೋಕೆ ಆಗುವುದಿಲ್ಲ. ಕಷ್ಟ, ನೋವು ಎಲ್ಲವನ್ನೂ ಮೀರಿ ನಿಂತಾಗ ಮಾತ್ರವೇ ಸುಖ, ಸಂತೋಷವನ್ನು ನಮ್ಮದಾಗಿಸಿಕೊಳ್ಳಲು ಆಗೋದು. ಈ ಲೇಖನದ ಮೂಲಕ ನಾವು ಸೈಕಲ್ ನಲ್ಲಿ ಬಟ್ಟೆ ಮಾರುವ ವ್ಯಾಪಾರಿಯ ಮಗ ಹೇಗೆ UPSC ಪರೀಕ್ಷೆಯಲ್ಲಿ ಉತ್ತೀರ್ಣನಾದ ಎನ್ನುವುದನ್ನ ತಿಳಿದುಕೊಳ್ಳೋಣ.

ಸಾಧನೆಗೆ ಬಡತನ ಅಡ್ಡಿಯಾಗುವುದಿಲ್ಲ ಎನ್ನುವುದು ಈಗ ಸಾಬೀತಾಗಿದೆ. ಸೈಕಲ್ ಮೇಲೆ ಬಟ್ಟೆ ಮಾರುವ ಬಡ ವ್ಯಾಪಾರಿಯ ಮಗನೊಬ್ಬ ಇದೀಗ ಯುಪಿಎಸ್‍ಸಿ ಅಂದರೆ, UNION PUBLIC SERVICE COMMISSION ಪಾಸ್ ಮಾಡಿ ಇತರರಿಗೆ ಮಾದರಿಯಾಗಿದ್ದಾನೆ. ಯುಪಿಎಸ್ಸಿ ಪರೀಕ್ಷೆಗೆ ತಯಾರಿ ಆಗಬೇಕು ಎಂದರೆ ದಿನಕ್ಕೆ ಹದಿನೆಂಟು ಗಂಟೆಗಳ ಕಾಲ ಓದಬೇಕು ಎನ್ನುವ ಮಾತಿದೆ. ಆದರೆ ಐಎಎಸ್ ಆಗಿರುವ ಕೆಲವು ಅಧಿಕಾರಿಗಳು ದಿನಕ್ಕೆ ಹತ್ತು ಗಂಟೆಗಳ ಕಾಲ ಶ್ರದ್ಧೆಯಿಂದ ಓದಿದರೂ ಸಾಕು ಯಾವುದು ಮುಖ್ಯವೋ ಅದನ್ನು ತಿಳಿದುಕೊಳ್ಳಬೇಕು ಎಂದು ಹೇಳ್ತಾರೆ.

ಹಾಗಂತ ಹೇಳಿ ಐಎಎಸ್ ಆಗುವುದು ಸುಲಭದ ಮಾತೂ ಸಹ ಅಲ್ಲ. ಮನಸ್ಸು ಮಾಡಿದ್ರೆ ಏನು ಬೇಕಾದ್ರೂ ಮಾಡಬಹುದು. ಆದ್ರೆ ಏನನ್ನಾದರೂ ಸಾಧಿಸಲೇಬೇಕು ಎನ್ನುವ ಛಲ ನಮಗೆ ಇರಬೇಕು ಅಷ್ಟೇ. ಅದೆ ರೀತಿ ಈ ಹುಡುಗ ಕೂಡಾ ಬಡತನ ಓದಿಗೆ ಅಡ್ಡಿಯಾಗುವುದಿಲ್ಲ ಎನ್ನುವುದನ್ನು ಸಾಬೀತು ಮಾಡಿದ್ದಾನೆ.

ಸೈಕಲ್‍ನಲ್ಲಿ ಬಟ್ಟೆಯ ಮೂಟೆಗಳನ್ನು ಹೊತ್ತುಕೊಂಡು ಊರೂರು ತಿರುಗಿ ಬಟ್ಟೆ ಮಾರಿ ಬದುಕುತ್ತಿರುವ ಬಿಹಾರದ ವ್ಯಾಪಾರಿ ಕುಟುಂಬದಲ್ಲಿ ಈಗ ಸಂಭ್ರಮ ಮನೆ ಮಾಡಿದೆ. ಈ ವ್ಯಾಪಾರಿಯ ಮಗ ಯುಪಿಎಸ್‍ಸಿ ಪರೀಕ್ಷೆಯಲ್ಲಿ 45ನೇ ರ್‍ಯಾಂಕ್ ಪಡೆದಿರುವುದು ಈ ಸಂಭ್ರಮಕ್ಕೆ ಕಾರಣವಾಗಿದೆ. 2018 ರಲ್ಲಿ ದೆಹಲಿ ಐಐಟಿ ಪದವಿ ಪಡೆದಿರುವ ಅನಿಲ್ ಬೋಸಕ್ ಎಂಬವರೇ ಈಗ ತಮ್ಮ ಮೂರನೇ ಪ್ರಯತ್ನದಲ್ಲಿ ಯುಪಿಎಸ್‍ಸಿ ರ್‍ಯಾಂಕ್ ಪಡೆದವರಾಗಿದ್ದಾರೆ.

ತಮ್ಮ ಪುತ್ರನ ಸಾಧನೆ ಕುರಿತು ಮಾತನಾಡಿರುವ ಬಿನೋದ್ ಬೋಸಕ್, ನಾನೇನೂ ಕಲಿತಿಲ್ಲ. ಆದರೆ ಈ ಪರೀಕ್ಷೆ ನನ್ನ ಮಗನ ಕನಸಾಗಿತ್ತು. ಎಲ್ಲರೂ ತಮ್ಮ ಮಕ್ಕಳಿಗೆ ಉತ್ತೇಜನ ಕೊಟ್ಟರೆ ಅವರೂ ಈ ರೀತಿಯ ಸಾಧನೆ ಮಾಡುತ್ತಾರೆ ಎಂದಿದ್ದಾರೆ. ಐಐಟಿ ಮುಗಿಸಿ ಕೆಲಸಕ್ಕೆ ಸೇರಬಹುದೆಂದು ನಾವು ಅಂದುಕೊಂಡಿದ್ದೇವು. ಆದರೆ ಆತ ಯುಪಿಎಸ್‍ಸಿಗೆ ತಯಾರಿ ನಡೆಸುವುದಾಗಿ ಹೇಳಿದ.

ಅವನ ಕನಸಿಗೆ ನಾವು ಅಡ್ಡಿಯಾಗಲಿಲ್ಲ. ಆತನ ಶಿಕ್ಷಕರು ಅವನಿಗೆ ಆರ್ಥಿಕವಾಗಿ ಸಹಾಯ ಮಾಡಿದರು. ಎಲ್ಲರ ಬೆಂಬಲ ಹಾಗೂ ಆತನ ಶ್ರಮದಿಂದ ಯುಪಿಎಸ್‍ಸಿ ಪರೀಕ್ಷೆ ಪಾಸ್ ಆಗಿದ್ದಾನೆ. ಇಡೀ ಊರಿನ ಜನರೂ ಸಹ ಮನೆಗೆ ಬಂದು ಶುಭಾಶಯ ಕೋರುತ್ತಿದ್ದಾರೆ ಇದನ್ನೆಲ್ಲ ನೋಡಿದರೆ ನನಗೆ ಖುಷಿಯಾಗುತ್ತಿದೆ ಎಂದು ಮಗನ ಸಾಧನೆ ಬಗ್ಗೆ ಹೆಮ್ಮೆಯಿಂದ ಬಿನೋದ್ ಬೋಸಕ್ ಹೇಳಿಕೊಂಡಿದ್ದಾರೆ.

ಪ್ರತಿವರ್ಷ ಐಎಎಸ್ ಪರೀಕ್ಷೆಯನ್ನು ಕೇಂದ್ರ ಲೋಕಸೇವಾ ಆಯೋಗ ನಡೆಸುತ್ತದೆ. ಇದು ಭಾರತದ ಕಷ್ಟಕರ ಪರೀಕ್ಷೆಗಳಲ್ಲಿ ಒಂದು. ಇದಕ್ಕೆ ಸರಿಯಾದ ತಯಾರಿ ಮಾಡಿಕೊಂಡರೆ ಇದನ್ನು ಪಾಸ್ ಮಾಡುವುದು ಸುಲಭ. ಐಎಎಸ್​ಗೆ ಪ್ರತಿವರ್ಷ ಹತ್ತು ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಪರೀಕ್ಷೆ ಬರೆಯುತ್ತಾರೆ.

ಆದರೆ ಅದರಲ್ಲಿ ತೇರ್ಗಡೆಯಾಗುವುದು ಕೆಲವೇ ಸಾವಿರ ಜನ. ಇದಕ್ಕಾಗಿ ಹಗಲು ರಾತ್ರಿ ಕಷ್ಟಪಟ್ಟು ಓದುತ್ತಾರೆ. ಕೋಚಿಂಗ್​ಗಳಿಗೂ ಹೋಗುತ್ತಾರೆ. ಸಾಧಿಸುವ ಮನಸಿದ್ದರೆ ಕಲ್ಲು ಸಹ ಶಿಲೆಯಾಗುತ್ತದೆ ಎಂದು ಹೇಳುತ್ತಾರೆ.

ಡಿಗ್ರಿಯಲ್ಲಿ ಕಡಿಮೆ ಅಂಕಗಳಿಸಿದವರು ಸಹ ಐಎಎಸ್​ ತೇರ್ಗಡೆಯಾದ ಹಲವು ಉದಾಹರಣೆಗಳಿವೆ. ಇದು ಕೇವಲ ಪರಿಶ್ರಮಕ್ಕೆ ಸಿಗುವ ಫಲ. ಹಾಗಾಗಿ ಐಎಎಸ್ ಆಗಲು ಬಯಸುವವರು ಯಾವುದೇ ಕಾರಣಕ್ಕೂ ತಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಬಾರದು. ಸತತ ಪ್ರಯತ್ನ ಏನನ್ನು ಬೇಕಾದರೂ ಗೆಲ್ಲುವ ಶಕ್ತಿ ನೀಡುತ್ತೆ. ಮೊದಲ ಪ್ರಯತ್ನದಲ್ಲಿ ಪಾಸಾಗದಿದ್ದರೆ ಇರುವ ಇನ್ನಷ್ಟು ಅವಕಾಸಗಳನ್ನು ಬಳಸಿಕೊಳ್ಳಬೇಕು.

Leave a Reply

Your email address will not be published. Required fields are marked *