ಈ ಸಲ ಯುಪಿಎಸ್ಸಿ ಪರೀಕ್ಷೆಯಲ್ಲಿ ೪೧೮ ನೇ ರ್ಯಾಂಕಿಂಗ್ ನಲ್ಲಿ ಪಾಸ್ ಆದ ಮಂಡ್ಯದ ಡಾಕ್ಟರ್ ನಾಗಾರ್ಜುನ್ ಗೌಡ ಅವರು ತಾವು ಯುಪಿಎಸ್ಸಿ ಪರೀಕ್ಷೆಯಲ್ಲಿ ೪೧೮ ನೇ ರ್ಯಾಂಕಿಂಗ್ ನಲ್ಲಿ ಪಾಸ್ ಆಗಿದ್ದರ ಬಗ್ಗೆ ಹಾಗೂ ಅವರ ವಿಧ್ಯಾಭ್ಯಾಸದ ಬಗ್ಗೆ ಏನೆಲ್ಲಾ ಹೇಳ್ತಾರೆ? ಓದು, ಅಭ್ಯಾಸ ಇವುಗಳ ಬಗ್ಗೆ ಏನು ಹೇಳ್ತಾರೆ ಅನ್ನೋದರ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ.
ಯುಪಿಎಸ್ಸಿ ಪರೀಕ್ಷೆಯಲ್ಲಿ ೪೧೮ ನೇ ರ್ಯಾಂಕಿಂಗ್ ನಲ್ಲಿ ಪಾಸ್ ಆಗಿದ್ದು ಇದು ಎರಡು, ಎರಡೂ ವರೆ ವರ್ಷದ ಪ್ರತಿಫಲ. ಎಂಬಿಬಿಎಸ್ಸ ಮುಗಿಸಿದ ಡಾಕ್ಟರ್ ನಾಗಾರ್ಜುನ್ ಗೌಡ ಅವರು ಕಳೆದ ಎರಡು ವರ್ಷಗಳಿಂದ ಯುಪಿಎಸ್ಸಿ ಪರೀಕ್ಷೆಯ ಬಗ್ಗೆ ಯೋಚನೆ ಮಾಡುತ್ತಾ ಇದ್ದು ಕೆಲವು ಆರ್ಥಿಕ ಸಮಸ್ಯೆಗಳಿಂದಾಗಿ ಯಾವುದೇ ಕೋಚಿಂಗ್ ತೆಗೆದುಕೊಳ್ಳಲು ಆಗಲಿಲ್ಲ. ಅದರಿಂದಾಗಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸುವ ಸಲುವಾಗಿ ಕೆಲಸಕ್ಕೆ ಸೇರಬೇಕಾಯಿತು. ಕರ್ನಾಟಕ ಸರ್ಕಾರದಿಂದ ಸ್ಕಾಲರ್ ಶಿಪ್ ಬಂದಿತ್ತು. ದೆಲ್ಲಿಗೆ ಕೂಡಾ ಕಳಿಸಿದ್ದರು. ಆದರೆ ಇದರ ಮಧ್ಯೆ ಬೇರೆ ಉಳಿದ ಖರ್ಚುಗಳು ಕೂಡಾ ಇದ್ದಿದ್ದರಿಂದ ಕೆಲಸಕ್ಕೆ ಸೇರಲೇಬೇಕಾದ ಅನಿವಾರ್ಯ ಪರಿಸ್ಥಿತಿ. ನಾಗಾರ್ಜುನ್ ಅವರಿಗೆ ಯಾವುದೇ ಕೋಚಿಂಗ್ ಇಲ್ಲದೆಯೇ ತಾನು ೪೧೮ ನೇ ರ್ಯಾಂಕ್ ಬಂದಿರುವುದು ತುಂಬಾ ಖುಷಿ ಇದೆ ಹಾಗೇ ಯಾವುದೇ ಕೋಚಿಂಗ್ ಇಲ್ಲದೆಯೂ ಕೂಡಾ ಯುಪಿಎಸ್ಸಿ ಪರೀಕ್ಷೆಯನ್ನು ಪಾಸ್ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಹದಗೆಟ್ಟ ಆರ್ಥಿಕ ಪರಿಸ್ಥಿತಿ ಒಂದು ಕಡೆ ಆದರೆ ಯುಪಿಎಸ್ಸಿ ಪರೀಕ್ಷೆಯನ್ನು ಪಾಸ್ ಮಾಡಲೆ ಬೇಕು ಎನ್ನುವ ಛಲ ಇನ್ನೊಂದು ಕಡೆ. ಇದರ ಮಧ್ಯೇ ಕೆಲಸ ಮಾಡುವಾಗ ಯಾವತ್ತಾದರೂ ಓದಲು ಕಷ್ಟ ಅಂತ ಎನಿಸಿ ಓದುವುದು ಬೇಡ ಓದುವುದನ್ನು ಬಿಟ್ಟು ಬಿಡಬೇಕು ಅನಿಸಿದೆಯಾ ಅಂತ ಕೇಳಿದ್ರೆ ನಾಗಾರ್ಜುನ್ ಅವರು ” ಯಾವುದೇ ಕೆಲಸ ಮಾಡಿಕೊಂಡು ಅಭ್ಯಾಸ ಮಾಡುವವರಿಗೆ ಹೇಳುವ ಒಂದು ಮುಖ್ಯ ಮಾತು ಎಂದರೆ, ಕೆಲಸ ಮಾಡಿಕೊಂಡು ಉಳಿದವರ ಹಾಗೇ ೧೦ ಗಂಟೆಗಳ ಕಾಲ ಅಭ್ಯಾಸ ಮಾಡಬೇಕು ಅಂತ ಏನೂ ಇಲ್ಲ, ಏಕಾಗ್ರತೆಯಿಂದ ಕೇವಲ ಆರು ಗಂಟೆಗಳ ಕಾಲ ಮಾತ್ರ ಅಭ್ಯಾಸ ಮಾಡಿದರೆ ಸಾಕು. ಆದರೆ ಲಕ್ಷಾಂತರ ಜನರು ಪಾಸ್ ಆಗಬೇಕು ಎಂದು ಕಷ್ಟ ಪಟ್ಟು ಶ್ರಮದಿಂದ ಓದುತ್ತಾ ಇದ್ದಾರೆ. ಹಾಗೇ ಓದಿದ್ದನ್ನೆ ಮುಖ್ಯವಾಗಿ ಇರುವುದನ್ನು ಮತ್ತೆ ಮತ್ತೆ ಓದಿ ನೆನಪಿನಲ್ಲಿ ಇಟ್ಟುಕೊಳ್ಳಬೇಕು.
ಇನ್ನು ಇಂಟರ್ವ್ಯೂ ವಿಷಯಕ್ಕೆ ಬಂದರೆ, ಯುಪಿಎಸ್ಸಿ ಯಲ್ಲಿ ಇಂಟರ್ವ್ಯೂ ಅನ್ನು PT ಅಂದರೆ, ಪರ್ಸನಾಲಿಟಿ ಟೆಸ್ಟ್ ಅಂತ ಹೇಳ್ತಾರೆ. ಆದರೆ ಅದನ್ನ ಒಂದು ಇಂಟರ್ವ್ಯೂ ಅಂತ ಪರಿಗಣಿಸದೆ, ಒಬ್ಬ ಆಫೀಸರ್ ಆಗಿ ಹೇಗೆ ಇರಬೇಕು ಮೊದಲಿಂದಲೂ ಹಾಗೇ ಅದೇ ರೀತಿಯ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಬಂದರೆ ಇಂಟರ್ವ್ಯೂ ನಲ್ಲಿ ಯಾವುದೇ ರೀತಿಯ ಭಯ ಹಾಗೂ ತೊಂದರೆಯೂ ಆಗುವುದಿಲ್ಲ. ಹಾಗೆಯೇ ದಿನದಲ್ಲಿ ತಾನು ೬ ರಿಂದ ೮ ತಾಸುಗಳ ಕಾಲ ಮಧ್ಯ ಮಧ್ಯ ೧೦, ೧೫ ನಿಮಿಷಗಳ ವಿಶ್ರಾಂತಿ ಪಡೆದುಕೊಂಡು ಓದುತ್ತಿದ್ದೆ ಅಂತ ಹೇಳುತ್ತಾರೆ ಡಾಕ್ಟರ್ ನಾಗಾರ್ಜುನ್. ರೈತರು, ಬಡವರು, ಅನಾರೋಗ್ಯ ಪೀಡಿತ ವ್ಯಕ್ತಿಗಳು ಇವರಿಗೆ ಸೇವೆ ಮಾಡಬೇಕು ಎನ್ನುವುದು ಇವರ ಉದ್ದೇಶ. ಇವು ಬಡ ಕುಟುಂಬದಿಂದ ಬಂದು ತನ್ನ ಸ್ವಂತ ಪರಿಶ್ರಮದಿಂದ ಕಷ್ಟ ಪಟ್ಟು ಓದಿ ಯುಪಿಎಸ್ಸಿ ಯಲ್ಲಿ ೪೧೮ ನೆ ಸ್ಥಾನ ಪಡೆದೂ ಪಾಸ್ ಆದ ಡಾಕ್ಟರ್ ನಾಗಾರ್ಜುನ್ ಅವರ ಕಥೆ.