ಯುಪಿಎಸ್ಸಿ ಪರೀಕ್ಷೆಯಲ್ಲಿ 17 ನೆ ರ್ಯಾಂಕ್ ಪಡೆದು ಉತ್ತೀರ್ಣರಾಗಿ ಕರ್ನಾಟಕ ರಾಜ್ಯಕ್ಕೆ ಮೊದಲ ಸ್ಥಾನ ಪಡೆದ ರಾಹುಲ್ ಸಂಕನೂರ್ ಎಂಬ ಹುಬ್ಬಳ್ಳಿ ಹುಡುಗನ ಮಾತುಗಳು ಇವು.
ಯುಪಿಎಸ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾದ ಹಿನ್ನೆಲೆಯಲ್ಲಿ ಈ ಹುಬ್ಬಳ್ಳಿ ಹುಡುಗ ರಾಹುಲ್ ನಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿತ್ತು. ಕಾರಣ ಇಷ್ಟೇ. ಯುಪಿಎಸ್ಸಿ ಪರೀಕ್ಷೆಯಲ್ಲಿ 17 ನೆ ರ್ಯಾಂಕ್ ಪಡೆದು ನಮ್ಮ ಕರ್ನಾಟಕ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದ. ಫಲಿತಾಂಶ ಪ್ರಕಟವಾದಾಗ ಮೊದಲು ಇವರಿಗೆ ವಿಷಯ ತಿಳಿಸಿದ್ದು ಇವರ ಫ್ರೆಂಡ್ ಪ್ರಥ್ವಿ ಶಂಕರ್ ಎಂಬ ಐಪಿಎಸ್ ಆಫಿಸರ್. “”ಮನೆಯವರ, ಸ್ನೇಹಿತರ ಎಲ್ಲರ ಆಶೀರ್ವಾದ, ಹಾರೈಕೆ ಇಂದ ಪಾಸ್ ಆಗಿದ್ದೀನಿ ತುಂಬಾ ಖುಷಿ ಆಗ್ತಾ ಇದೆ. ಯುಪಿಎಸ್ಸಿ ಪರೀಕ್ಷೆ ಎಷ್ಟು ಚಾಲೆಂಜ್ ಆಗಿ ಇತ್ತೋ ಅಷ್ಟೇ ಮುಖ್ಯವಾದದ್ದು ಮಾನಸಿಕ ಒತ್ತಡವೂ ಕೂಡಾ ಒಂದು. ಯಾವುದೇ ಪರೀಕ್ಷೆಗೂ ತಯಾರಿ ಆಗುವಾಗ ಮಾನಸಿಕವಾಗಿ ನಾವು ಪರೀಕ್ಷೆ ಬರೆಯಲು ಸಿದ್ಧ ಇರಬೇಕು. ಇದಕ್ಕೆ ಮನೆಯವರ ಸಹಕಾರ ತುಂಬಾ ಮುಖ್ಯ ಅಂತ ಹೇಳ್ತಾರೆ ರಾಹುಲ್. ಹಾಗೆಯೇ ಮುಂದುವರೆದು ತನ್ನ ವಿದ್ಯಾಭ್ಯಾಸದ ವಿಷಯದಲ್ಲು ಕೂಡಾ ತನಗೆ ತನ್ನ ಪೋಷಕರು ಯಾವುದೇ ರೀತಿಯ ಒತ್ತಡವನ್ನು ಹೇರಲಿಲ್ಲ, ಇನ್ನೊಬ್ಬರ ಜೊತೆ ನನಗೆ ಹೋಲಿಕೆ ಮಾಡಿ ಮಾತನಾಡಲಿಲ್ಲ . ಯಾವಾಗ ನನಗೇ ನನ್ನ ಮೇಲೆ ನಂಬಿಕೆ ಇಲ್ಲದೇ ಕೂರುತ್ತಿದ್ದೆ ಆಗೆಲ್ಲ ನನಗೆ ಸಮಾಧಾನ ಮಾಡಿ ಆತ್ಮ ಸ್ಥೈರ್ಯ ತುಂಬುತ್ತಿದ್ದರು. ಅದರಲ್ಲೂ 94 ವರ್ಷದ ಇವರ ಅಜ್ಜ ತನಗೆ ತುಂಬಾ ಸಪೋರ್ಟ್ ಮಾಡುತ್ತಿದ್ದರು ಅಂತ ಹೆಮ್ಮೆ ಪಡುತ್ತಾರೆ”.
ಯುಪಿಎಸ್ಸಿ ಪರೀಕ್ಷೆಯ ಫಲಿತಾಂಶ ಏನೋ ಬಂತು ಆದ್ರೆ ಮುಂದೆ ಯಾವ ಇಲಾಖೆಯಲ್ಲಿ ಕೆಲಸ ಮಾಡುವ ಹಂಬಲ, ಆಸೆ ಇದೆ ಅಂತ ಕೇಳಿದ್ರೆ ರಾಹುಲ್ ಹೇಳುವುದು “ಇಂಥದ್ದೇ ಇಲಾಖೆಯಲ್ಲಿ ಕೆಲಸ ಮಾಡಬೇಕು ಅಂತ ಇಲ್ಲ ಯಾವ ಇಲಾಖೆಯಲ್ಲಿ ಕೆಲಸಕ್ಕೆ ಸೇರಿಸಿದರೂ ನನ್ನ ಪಾಲಿನ ಕೆಲಸವನ್ನು ನಿಷ್ಠೆಯಿಂದ ಮಾಡುತ್ತೇನೆ ಆದರೂ ಸಹ ಶಿಕ್ಷಣ ಇಲಾಖೆಗೆ ಸೇವೆ ಸಲ್ಲಿಸಬೇಕು ಎನ್ನುವ ಹಂಬಲ ಇದೆ. ಯಾಕಂದ್ರೆ ದೇವರ ದಯೆಯಿಂದ ನನಗೆ ಹೈಸ್ಕೂಲ್ ಇಂದನೂ ಒಳ್ಳೆಯ ಶಿಕ್ಷಕರು ಸಿಕ್ಕಿದ್ದಾರೆ. ಅದೇ ರೀತಿಯ ಉತ್ತಮ ಶಿಕ್ಷಣ ಎಲ್ಲರಿಗೂ ಸಿಗಬೇಕು . ಆದರೆ ಕೆಲಸಕ್ಕೆ ಅಂತ ಹೋಗೋಕೆ ಆರಂಭಿಸಿದಮೇಲೆ ಅಷ್ಟೇ ಹೇಗೆ ಅನ್ನೋದು ತಿಳಿಯುತ್ತೆ” ಅಂತ ಹೇಳ್ತಾರೆ ರಾಹುಲ್.
ಇನ್ನೂ ರಾಹುಲ್ ಅವರು ಪರೀಕ್ಷೆಗೆ ನಡೆಸಿಕೊಂಡ ತಯಾರಿ ಅವರ ಅಭ್ಯಾಸ ಹೇಗಿತ್ತು ಅಂತ ನೋಡೋದಾದ್ರೆ. ಬೆಳಿಗ್ಗೆ 6 ಗಂಟೆಗೆ ಎದ್ದು ಸ್ವಲ್ಪ ವ್ಯಾಯಾಮ ಮಾಡಿ ನಂತರ ಓದಲು ಕುರುತ್ತಿದ್ದರು. ಎರಡು ಗಂಟೆಗಳ ಕಾಲ ಅಭ್ಯಾಸ ಎರಡು ಗಂಟೆಗೂ ಹೆಚ್ಚಿನ ಕಾಲ ಒಂದು ಕಡೆ ಕೂರುತ್ತಿರಲಿಲ್ಲ ಹಾಗಾಗಿ ಎರಡು ಗಂಟೆಗೆ ಒಮ್ಮೆ ಮಧ್ಯದಲ್ಲಿ ಒಂದು ಬ್ರೇಕ್ ತೆಗೆದುಕೊಂಡು ಸ್ವಲ್ಪ ಹೊರಗಿನ ವಾತಾವರಣದಲ್ಲಿ ಬೆರೆತು ಕಾಲ ಕಳೆದು ನಂತರ ಮತ್ತೆ ಓದಿನ ಕಡೆಗೆ. ಹೀಗೆ ಮಾಡುವುದರಿಂದ ಓದಿದ್ದು ನೆನಪಲ್ಲಿ ಇರತ್ತೆ ಹೆಚ್ಚು ಒತ್ತಡ ಬೀಳಲ್ಲ. ಮಾನಸಿಕಾವಾಗಿಯೂ ಸಹ ಒತ್ತಡದಿಂದ ದೂರ ಇರಬಹುದು ಅಂತ ಹೇಳ್ತಾರೆ. ಯುಪಿಎಸ್ಸಿ ಪರೀಕ್ಷೆಯ ತಯಾರಿ ನಡೆಸುವವರಿಗೆ ರಾಹುಲ್ ಅವರ ಸಲಹೆ ಏನಪ್ಪಾ ಅಂದ್ರೆ. ಮಾಡಿದ ತಪ್ಪನ್ನೇ ಪುನಃ ಪುನಃ ಮಾಡುವುದು. ಯಾವುದೋ ಒಂದು ಬಾರಿಗೆ ತಪ್ಪು ಮಾಡಿದಾಗ ಮತ್ತೆ ಅದೇ ತಪ್ಪನ್ನೇ ಮಾಡುವುದು. ಇದರಿಂದಾಗಿ ಪ್ರತೀ ಬಾರಿಯೂ ಫಲಿತಾಂಶ ಚೆನ್ನಾಗಿ ಬರಲ್ಲ. ಹಾಗಾಗಿ ಮೊದಲು ನಾವು ಒಮ್ಮೆ ತಪ್ಪು ಮಾಡಿದರೆ ಇನ್ನೊಂದು ಸಲಕ್ಕೆ ಅದೇ ತಪ್ಪು ಆಗದೆ ಇರುವ ಹಾಗೆ ಯಾವುದೇ ತಪ್ಪು ಕೂಡಾ ಆಗದೇ ಇರುವ ಹಾಗೇ ನೋಡಿಕೊಳ್ಳಬೇಕು. ಪ್ರಶ್ನೆಗೆ ಉತ್ತರವನ್ನು ಮೊದಲು ಕಂಡುಹಿಡಿದುಕೊಳ್ಳಬೇಕು. ಸ್ನೇಹಿತರ ಜೊತೆ ಚರ್ಚೆ ಮಾಡಿ ಅಥವಾ ಶಿಕ್ಷಕರ ಬಳಿ ಕೇಳಿ ತಿಳಿದುಕೊಳ್ಳಬೇಕು. ಬರವಣಿಗೆಯನ್ನ ಸ್ಪೀಡ್ ಮಾಡಿಕೊಳ್ಳಬೇಕು. ಇದು ಹೊಸದಾಗಿ ಯುಪಿಎಸ್ಸಿ ಪರೀಕ್ಷೆಯ ತಯಾರಿ ನಡೆಸುವವರಿಗೆ ರಾಹುಲ್ ಅವರ ಸಲಹೆಗಳು.