ನಮ್ಮ ರಾಜ್ಯದ ಬಹುತೇಕ ಜನರು ಸರ್ಕಾರದ ಬಗ್ಗೆ ನಂಬಿಕೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಅಸಮರ್ಥ ರಾಜಕಾರಣದಿಂದ ಬಹಳಷ್ಟು ಜನರು ಬೇಸತ್ತು ಹೋಗಿದ್ದಾರೆ ಅಲ್ಲದೆ ಕೊರೋನ ವೈರಸ್ ಎಲ್ಲೆಲ್ಲೂ ತಾಂಡವವಾಡುತ್ತಿದೆ ಇಂತಹ ಸಮಯದಲ್ಲಿ ಸಿನಿಮಾ ನಟ ಉಪೇಂದ್ರ ಅವರು ಸಾಮಾಜಿಕ ಜಾಲತಾಣದಲ್ಲಿ ನಮ್ಮ ರಾಜ್ಯದ ರಾಜಕೀಯದ ಬಗ್ಗೆ ಜನತೆಗೆ ಒಂದು ಪತ್ರವನ್ನು ಬರೆಯುವ ಮೂಲಕ ನಿಮ್ಮೊಂದಿಗೆ ಸದಾ ನಾನಿದ್ದೇನೆ ಎಂಬ ಭರವಸೆ ಮೂಡಿಸಿದ್ದಾರೆ. ಹಾಗಾದರೆ ಉಪೇಂದ್ರ ಅವರು ಪತ್ರದಲ್ಲಿ ಏನು ಬರೆದಿದ್ದಾರೆ ಎಂದು ಈ ಲೇಖನದಲ್ಲಿ ನೋಡೋಣ.

ಸಿನಿಮಾ ನಟ ಉಪೇಂದ್ರ ಅವರು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿ ರಾಜಕೀಯಕ್ಕೆ ಸಂಬಂಧಿಸಿ ಒಂದು ಪತ್ರವನ್ನು ಬರೆದಿದ್ದಾರೆ. ಪತ್ರದಲ್ಲಿ ಉಪೇಂದ್ರ ಅವರು ನಾನು ಉಪೇಂದ್ರ, ಈ ರಾಜ್ಯದ ಮುಖ್ಯಮಂತ್ರಿಯಾಗಬೇಕು, ನಾನು ಚುನಾವಣೆಯಲ್ಲಿ ಸ್ಪರ್ಧಿಸಿದರೆ ನೀವು ನನ್ನನ್ನು ಗೆಲ್ಲಿಸುತ್ತೀರಾ?. ನೋಡಿ ನಾನು ಸಮಾಜಸೇವೆ ಮಾಡುತ್ತಿದ್ದೇನೆ ರೈತರಿಂದ ಬೆಳೆಯನ್ನು ಖರೀದಿಸಿ ಉಚಿತವಾಗಿ ಕಷ್ಟದಲ್ಲಿರುವವರಿಗೆ ಹಂಚುತ್ತಿದ್ದೇನೆ. ಚುನಾವಣೆಯ ಸಮಯದಲ್ಲಿ ಹೋರಾಟವನ್ನು ಮಾಡುತ್ತೇನೆ ಆಡಳಿತ ಪಕ್ಷ, ವಿರೋಧ ಪಕ್ಷಗಳು ಏನು ಮಾಡದೆ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಮಾಧ್ಯಮದವರ ಮುಂದೆ ಕೂಗಿ ಹೇಳುತ್ತೇನೆ. ಇವರನ್ನೆಲ್ಲ ತೆಗೆದುಹಾಕಿ ನನಗೆ ಒಂದು ಅವಕಾಶ ಕೊಡಿ, ನಿಮ್ಮ ಮುಂದಿನ ಉಜ್ವಲ ಭವಿಷ್ಯಕ್ಕೆ ನಾನು ಕೆಲಸ ಮಾಡುತ್ತೇನೆ. ಹಗಲು ರಾತ್ರಿ ನೋಡದೆ ಕಷ್ಟಪಟ್ಟು ಸುವರ್ಣ ಕರ್ನಾಟಕವನ್ನಾಗಿ ಮಾಡುತ್ತೇನೆ, ನೀವು ನನ್ನನ್ನು ಗೆಲ್ಲಿಸುತ್ತೀರಾ?. ನೀವು ಗೆಲ್ಲಿಸುತ್ತೀರೊ, ಸೋಲಿಸುತ್ತೀರೊ ಆದರೆ ನಾನು ಚುನಾವಣೆಗೆ ನಿಲ್ಲುವುದಿಲ್ಲ. ಹಾಗಾದರೆ ಉತ್ತಮ ಪ್ರಜಾಕೀಯ ಪಕ್ಷ ಯಾಕೆಂದು ಕೇಳುತ್ತೀರಾ. ಪ್ರಜಾಕೀಯ ಪಕ್ಷದಿಂದ ದೊಡ್ಡ ಮಟ್ಟದಲ್ಲಿ ಸಮಾಜ ಸೇವೆ ಮಾಡಿ ಹೆಸರು ಮಾಡಿರುವವರು, ಫೇಮಸ್ ವ್ಯಕ್ತಿಗಳು ಮೇಲೆ ಹೇಳಿರುವ ಯಾವ ಕ್ವಾಲಿಟಿ ಇರುವ ನಾಯಕರು ನಿಲ್ಲುವುದಿಲ್ಲ ಎಂದು ಹೇಳಿದ್ದಾರೆ.

ಉಪೇಂದ್ರ ಅವರು ಮುಂದುವರೆದು ಪತ್ರದಲ್ಲಿ ದೊಡ್ಡ ನಾಯಕರನ್ನು ಕೊಡುವುದು ರಾಜಕೀಯ. ಪ್ರಜಾಕೀಯದಲ್ಲಿ ನಿಮಗೆ ಗೊತ್ತಿಲ್ಲದೇ ಇರುವ ಸಾಮಾನ್ಯರು ಚುನಾವಣೆಯಲ್ಲಿ ನಿಲ್ಲುತ್ತಾರೆ. ಕೇವಲ ಪ್ರಜಾಕೀಯ ವಿಚಾರ ತಿಳಿದುಕೊಂಡು ವೋಟ್ ಹಾಕಿ ಅವರಿಗೆ ಕೆಲಸ ಕೊಟ್ಟರೆ ನಿಮ್ಮ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದು ನಿಮಗೆ ಬೇಕಾದ ಕೆಲಸಗಳನ್ನು ಪೈಸ ಪೈಸ ಲೆಕ್ಕ ಕೊಟ್ಟು ಸಂಪೂರ್ಣ ಪಾರದರ್ಶಕತೆಯಿಂದ ಮಾಡುತ್ತಾರೆ. ಪ್ರಜಾಕೀಯದಲ್ಲಿ ನಿಮಗೆ ಅವನ ಅಥವಾ ಅವಳ ಕಾರ್ಯವೈಖರಿ ಇಷ್ಟವಾಗಲಿಲ್ಲ ಅಥವಾ ಹಣ, ಅಧಿಕಾರದ ಆಸೆಗೆ ಬೇರೆ ಪಕ್ಷದ ಜೊತೆಗೆ ಜಂಪ್ ಆಗೋಕೆ ನೋಡಿದರೆ ನಾನು ಉಪೇಂದ್ರ ಸಿಎಂ ಆಗಿ ನಿಮ್ಮ ಜೊತೆ ನಿಲ್ಲುತ್ತೇನೆ, ನಿಮ್ಮ ಜೊತೆ ಉಗ್ರ ಹೋರಾಟ ಮಾಡಿ ಅಂತಹ ಭೃಷ್ಟ ಪ್ರತಿನಿಧಿ ರಾಜೀನಾಮೆ ಕೊಡುವ ಹಾಗೆ ಮಾಡುತ್ತೇನೆ. ಇಂತಹ ವ್ಯವಸ್ಥೆ ಸರಿ ಹೋಗಲು ಎರಡು ಚುನಾವಣೆ ಜಾಸ್ತಿಯಾಗಲಿ, ಜನರಿಗೆ ಪ್ರಜಾಪ್ರಭುಗಳಿಗೆ ಅಭ್ಯರ್ಥಿ ಇಷ್ಟವಾಗದೆ ಇದ್ದರೆ ಅವನು ಅಥವಾ ಅವಳನ್ನು ಕೆಳಗಿಳಿಸಬೇಕು ಎಂಬ ಕಾನೂನು ಬರಬೇಕು ಅದಕ್ಕಾಗಿ ನಾನು ನಿಮ್ಮ ಜೊತೆ ಯಾವಾಗಲೂ ಇರುವ ಪರ್ಮನೆಂಟ್ ಸಿಎಂ. ನಾನು ಜನಸಾಮಾನ್ಯ ಅಲ್ಲ ಜನಅಸಾಮಾನ್ಯರಲ್ಲಿ ಒಬ್ಬನಾಗಿರುತ್ತೇನೆ, ಸರೀನಾ ಈ ರೀತಿಯಾಗಿ ರಾಜಕೀಯದ ಬಗ್ಗೆ ಉಪೇಂದ್ರ ಅವರು ಬಹಿರಂಗವಾಗಿ ಸಾಮಾಜಿಕ ಜಾಲತಾಣದಲ್ಲಿ ಪತ್ರವನ್ನು ಬರೆದಿದ್ದಾರೆ.

ಸಿನಿಮಾಗಳಲ್ಲಿ ನಟಿಸುತ್ತಿರುವ ಉಪೇಂದ್ರ ಅವರು ಹೇಳಿದ ಅಂಶಗಳು ನಿಜಕ್ಕೂ ಸತ್ಯವಾಗಿದೆ. ಪ್ರಜಾಕೀಯ ಎನ್ನುವುದು ಜನರಿಂದ ಆರಿಸಿದ ಪ್ರತಿನಿಧಿಗಳಿಂದ ಕೂಡಿದ ಜನರಿಗೋಸ್ಕರ ಜನರಿಗೆ ಒಳ್ಳೆಯದನ್ನು ಮಾಡಬೇಕು ಆದರೆ ನಮ್ಮ ರಾಜ್ಯದ ರಾಜಕೀಯದಲ್ಲಿ ಕಿತ್ತಾಟವೇ ಜಾಸ್ತಿಯಾಗುತ್ತದೆ ಎಂದು ಹೇಳಿದರೆ ತಪ್ಪಾಗಲಾರದು.

ಆದ್ರೆ ಒಂದಿಷ್ಟು ಅಭಿಮಾನಿಗಳು ನೀವು ರಾಜ್ಯದ ಮುಖ್ಯ ಮಂತ್ರಿ ಆಗಬೇಕು ಅಂತಿದಾರೆ, ಆದ್ರೆ ಇನ್ನು ಕೆಲವರು ನೀವು ರಾಜಕೀಯಕ್ಕೆ ಬರೋದು ಬೇಡ ಸಿನಿಮಾಗಳಲ್ಲಿ ಮಾತ್ರ ಸೀಮಿತವಾಗಿರಿ ಅಂತಿದಾರೆ, ನೀವೇನೋ CM ಆಗಬೇಕು ಅಂತಿದೀರಾ ಆದ್ರೆ ನೀವು ಗೆಲ್ತಿರಾ ಆದ್ರೆ ನಿಮ್ಮ ಜೊತೆಗೆ ಇರೋರು ಇಲ್ಲ ಗೆಲ್ಲಬೇಕು ಅಲ್ವಾ? ಇದು ಕಷ್ಟದ ಮಾತು ಅಂತಿದಾರೆ ಒಂದಿಷ್ಟು ಅಭಿಮಾನಿಗಳು ಅದೇನೇ ಇರಲಿ ಮುಂದಿನ ದಿನಗಳಲ್ಲಿ ಕಾದು ನೋಡಬೆಕಾಗಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!