ನಮ್ಮ ದೇಶದಲ್ಲಿ ನಿರುದ್ಯೋಗ ಹೆಚ್ಚಾಗಿದೆ. ವಿದ್ಯಾವಂತ ನಿರುದ್ಯೋಗಿ ಯುವಕ ಯುವತಿಯರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ನಿರುದ್ಯೋಗಿ ಯುವಕ ಯುವತಿಯರಿಗೆ ಕರ್ನಾಟಕ ಸರ್ಕಾರದಿಂದ ಸಿಹಿ ಸುದ್ದಿಯೊಂದು ಬಂದಿದೆ. ಹಾಗಾದರೆ ಕರ್ನಾಟಕ ಸರ್ಕಾರ ಕೊಟ್ಟಿರುವ ಸಿಹಿ ಸುದ್ದಿ ಏನೆಂದು ಈ ಲೇಖನದಲ್ಲಿ ನೋಡೋಣ.
ಕರ್ನಾಟಕ ಸರ್ಕಾರ ವಿದ್ಯಾವಂತ ನಿರುದ್ಯೋಗಿ ಯುವಕ ಯುವತಿಯರಿಗೆ ಸಿಹಿಸುದ್ದಿಯನ್ನು ನೀಡಿದೆ. ಬಡಕುಟುಂಬದ ನಿರುದ್ಯೋಗಿ ಯುವಕ ಯುವತಿಯರಿಗೆ ಸ್ವಯಂ ಉದ್ಯೋಗ ಮಾಡಿಕೊಳ್ಳಲು ಉದ್ಯಮಶೀಲತಾ ಅಭಿವೃದ್ಧಿ ಯೋಜನೆ 2021ರಡಿ 5 ಲಕ್ಷದಿಂದ 25 ಲಕ್ಷ ರೂಪಾಯಿವರೆಗೆ ಸಬ್ಸಿಡಿ ಸಹಿತ ಆರ್ಥಿಕ ಸಹಾಯ ನೀಡಲಾಗುತ್ತದೆ. ಯುವಕ-ಯುವತಿಯರು ಬಿಸಿನೆಸ್ ಪ್ರಾರಂಭಿಸಿದರೆ ಈ ಯೋಜನೆಯಡಿ ಸಾಲವನ್ನು ತೆಗೆದುಕೊಳ್ಳಬಹುದು. ಈಗಾಗಲೆ ಬಿಸಿನೆಸ್ ಪ್ರಾರಂಭಿಸಿದ್ದು ಬಿಸಿನೆಸ್ ಅನ್ನು ಅಭಿವೃದ್ಧಿ ಮಾಡಿಕೊಳ್ಳುವವರು ಕೂಡ ಈ ಯೋಜನೆಯಡಿ ಸಾಲ ತೆಗೆದುಕೊಳ್ಳಬಹುದು.
ನಿರುದ್ಯೋಗಿ ಯುವಕ ಯುವತಿಯರು ತಮ್ಮದೆ ಸ್ವಂತ ಚಿಕ್ಕದಾಗಿ ಫ್ಯಾಕ್ಟರಿ ಪ್ರಾರಂಭಿಸುವುದಾದರೆ ಅದಕ್ಕೂ ಸಹ ಈ ಯೋಜನೆಯಡಿಯಲ್ಲಿ ಲೋನ್ ಕೊಡುತ್ತಾರೆ. ಸರ್ವಿಸ್ ಸೆಂಟರ್ ಓಪನ್ ಮಾಡುವುದಿದ್ದರೆ ಅದಕ್ಕೂ ಕೂಡ ಈ ಯೋಜನೆಯಡಿ ಅರ್ಜಿ ಸಲ್ಲಿಸಬಹುದು. ಸೂಪರ್ ಮಾರ್ಕೆಟ್, ಆಟೋಮೊಬೈಲ್, ಬುಕ್ ಸ್ಟೋರ್, ಮೆಡಿಕಲ್, ಗ್ಯಾರೇಜ್, ಹೋಟೆಲ್ ಮುಂತಾದ ಹಲವು ಉದ್ಯೋಗಗಳನ್ನು ಪ್ರಾರಂಭಿಸುವುದಾದರೆ ಈ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಬಹುದು.
ನೀವು 5 ಲಕ್ಷ ರೂಪಾಯಿಯ ಬಿಸಿನೆಸ್ ಪ್ರಾರಂಭಿಸುವುದಾದರೆ 70% ಸಬ್ಸಿಡಿ ಕೊಡಲಾಗುತ್ತದೆ. 5 ಲಕ್ಷ ರೂಪಾಯಿಯಿಂದ 10 ಲಕ್ಷ ರೂಪಾಯಿ ಒಳಗಿನ ಬಿಸಿನೆಸ್ ಪ್ರಾರಂಭಿಸುವುದಾದರೆ 60% ಸಬ್ಸಿಡಿ ಕೊಡಲಾಗುತ್ತದೆ. 10 ಲಕ್ಷ ರೂಪಾಯಿಯಿಂದ 20 ಲಕ್ಷ ರೂಪಾಯಿ ಒಳಗಿನ ಬಿಸಿನೆಸ್ ಆಗಿದ್ದರೆ 50% ಸಬ್ಸಿಡಿ ಕೊಡಲಾಗುತ್ತದೆ.
ಉದ್ಯಮಶೀಲತಾ ಅಭಿವೃದ್ಧಿ ಯೋಜನೆ 2021 ಅಡಿಯಲ್ಲಿ ಅರ್ಜಿಸಲ್ಲಿಸಲು ಕೆಲವು ಅರ್ಹತೆಗಳಿರಬೇಕು. ಈ ಯೋಜನೆಗೆ ಅರ್ಜಿ ಸಲ್ಲಿಸಲು ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ಸೇರಿದವರಾಗಿರಬೇಕು. ಈ ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಕನಿಷ್ಠ 15 ವರ್ಷಗಳಿಂದ ಕರ್ನಾಟಕದಲ್ಲಿ ವಾಸವಾಗಿರಬೇಕು. ಈ ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿ ಕನಿಷ್ಠ 18 ವರ್ಷದಿಂದ ಗರಿಷ್ಠ ಅರವತ್ತು ವರ್ಷದೊಳಗಿರಬೇಕು.
ಈ ಯೋಜನೆಯಡಿ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಕುಟುಂಬದ ವಾರ್ಷಿಕ ವರಮಾನ ಗ್ರಾಮೀಣ ಪ್ರದೇಶಗಳಲ್ಲಿ 1,50,000 ರೂ ಒಳಗಿರಬೇಕು, ನಗರಪ್ರದೇಶಗಳಲ್ಲಿ ಎರಡು ಲಕ್ಷ ರೂಪಾಯಿ ಒಳಗಿರಬೇಕು. ಈ ಯೋಜನೆಯಡಿ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಕುಟುಂಬದ ಯಾವುದೆ ಸದಸ್ಯನು ಸರ್ಕಾರಿ ನೌಕರಿಯಲ್ಲಿ ಇರಬಾರದು. ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಯಾಗಲಿ ಅಥವಾ ಅವರ ಕುಟುಂಬದ ಯಾವುದೆ ಸದಸ್ಯನಾಗಲಿ ಈ ಹಿಂದೆ ನಿಗಮದಡಿ ಯಾವುದೆ ಸೌಲಭ್ಯ ಪಡೆದಿರಬಾರದು.
ಈ ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿ ಅಂಗವಿಕಲನಾದರೆ ಅವರಿಗೆ 5% ಮೀಸಲಾತಿ ಇರುತ್ತದೆ. ಈ ಯೋಜನೆಯಡಿ ಟಾಟಾಎಸಿ, ಆಟೋ ವಾಹನಗಳಿಗೆ ಅರ್ಜಿ ಸಲ್ಲಿಸುವುದಾದರೆ ಕಡ್ಡಾಯವಾಗಿ ಡಿಎಲ್ಓ ಮತ್ತು ಬ್ಯಾಡ್ಜ್ ಹೊಂದಿರಬೇಕು.
ಉದ್ಯಮಶೀಲತಾ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಕಡ್ಡಾಯವಾಗಿ ಪಾಸ್ಪೋರ್ಟ್ ಸೈಜ್ ಭಾವಚಿತ್ರ, ಜಾತಿ ಪ್ರಮಾಣ ಪತ್ರ, ಕುಟುಂಬದ ವಾರ್ಷಿಕ ವರಮಾನ ಪತ್ರ, ಪಡಿತರ ಚೀಟಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ನ ಪ್ರತಿ, ಯಾವ ಬಿಸಿನೆಸ್ ಮಾಡಲಾಗುತ್ತದೆಯೋ ಅದರ ಸಂಪೂರ್ಣ ಪ್ರೊಜೆಕ್ಟ್ ಈ ಎಲ್ಲಾ ದಾಖಲಾತಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಕಚೇರಿಯಲ್ಲಿ ಸಲ್ಲಿಸಬೇಕು.
ಪರಿಶಿಷ್ಟ ಜಾತಿಗೆ ಸೇರಿದ ಅಭ್ಯರ್ಥಿಗಳು ತಮ್ಮ ಅರ್ಜಿ ಹಾಗೂ ದಾಖಲಾತಿಗಳನ್ನು ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಕಚೇರಿಗೆ ಸಲ್ಲಿಸಬೇಕು. ಆನ್ಲೈನ್ ನಲ್ಲಿಯೂ ಅರ್ಜಿ ಫಾರ್ಮ್ ಸಿಗುತ್ತದೆ ಅದನ್ನು ಡೌನ್ಲೋಡ್ ಮಾಡಿಕೊಂಡು ಪ್ರಿಂಟ್ ತೆಗೆದುಕೊಳ್ಳಬಹುದು. ಪರಿಶಿಷ್ಟ ಜಾತಿಗೆ ಸೇರಿದ ಅಭ್ಯರ್ಥಿಗಳಿಗೆ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಗೆ ಆನ್ಲೈನ್ ಅರ್ಜಿ ಫಾರ್ಮ್ ಪಡೆಯಲು ಬೇರೆಬೇರೆ ವೆಬ್ ಸೈಟ್ ಗಳಿವೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ಸ್ವಯಂ ಉದ್ಯೋಗ ಪ್ರಾರಂಭಿಸಿ ಜೀವನ ಕಟ್ಟಿಕೊಳ್ಳಿ.