ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಅಂತೆಯೇ ಯುವಕರು ಮತ್ತು ಯುವತಿಯರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ.ಅದೇನೆಂದರೆ ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆಯ ಬಗ್ಗೆ ಸವಿವರವಾಗಿ ಈ ಲೇಖನದ ಮೂಲಕ ತಿಳಿಯೋಣ.
ರಾಜ್ಯಸರ್ಕಾರದಿಂದ 2020-21ರಲ್ಲಿ ನಿರುದ್ಯೋಗ ಯುವಕರು ಮತ್ತು ಯುವತಿಯರಿಗೆ ಈ ಯೋಜನೆಯನ್ನು ಜಾರಿಗೊಳಿಸಿದೆ. ಕರ್ನಾಟಕದ ಬಡ ಕುಟುಂಬದ ಯುವಕರು, ಯುವತಿಯರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಆರ್ಥಿಕ ಸಹಾಯಧನವನ್ನು ನೀಡುತ್ತದೆ. ರಾಜ್ಯದ ಅರ್ಹ ಹಾಗೂ ಆಸಕ್ತಿ ಯುವಕರು ಮತ್ತು ಯುವತಿಯರು ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಿ ಸರ್ಕಾರದ ಉಚಿತ ಸಹಾಯಧನವನ್ನು ಪಡೆದುಕೊಳ್ಳಬಹುದಾಗಿದೆ. ಯುವಕರು ಮತ್ತು ಯುವತಿಯರು ಈ ಯೋಜನೆಯಡಿಯಲ್ಲಿ ಹೊಸದಾಗಿ ವ್ಯಾಪಾರ ಮಾಡಲು ಅಥವಾ ಈಗಾಗಲೆ ಇರುವ ವ್ಯಾಪಾರವನ್ನು ಅಭಿವೃದ್ಧಿಗೊಳಿಸಲು ಈ ಯೋಜನೆಯಡಿಯಲ್ಲಿ ಸಾಲ ಪಡೆಯಬಹುದಾಗಿದೆ. ಉದಾಹರಣೆಗೆ ಸಣ್ಣ ಕೈಗಾರಿಕೆ ಸ್ಥಾಪನೆ ಮಾಡುವುದಾದರೆ ಅಂದರೆ ಸ್ಟೀಲ್ ಫ್ಯಾಕ್ಟರಿ, ಇಟ್ಟಿಗೆ ಫ್ಯಾಕ್ಟರಿ, ಇಂತಹ ಕೈಗಾರಿಕೆ ಸ್ಥಾಪನೆ ಮಾಡಲು ಸಾಲ ಪಡೆಯಬಹುದಾಗಿದೆ. ಇದರೊಂದಿಗೆ ಸೇವಾ ಘಟಕಗಳು ಅಂದರೆ ಹೋಟೆಲ್, ಫೋಟೋ ಸ್ಟುಡಿಯೋ, ಗ್ಯಾರೇಜ್, ಮೆಡಿಕಲ್ ಶಾಪ್, ಸೂಪರ್ ಮಾರ್ಕೆಟ್ ಪ್ರಾರಂಭಿಸಲು ಈ ಯೋಜನೆಯಡಿಯಲ್ಲಿ ಸಾಲ ಪಡೆಯಬಹುದಾಗಿದೆ.
ಸರ್ಕಾರದಿಂದ 70% ಆರ್ಥಿಕ ಸಹಾಯಧನವನ್ನು ನೀಡಲಾಗುತ್ತದೆ. ಅಂದರೆ 5ಲಕ್ಷ ದವರೆಗೆ ಸಾಲ ತೆಗೆದುಕೊಂಡರೆ ಇದರಲ್ಲಿ 70% ಸರ್ಕಾರದಿಂದ ಆರ್ಥಿಕ ಸಹಾಯಧನ ದೊರೆಯುತ್ತದೆ. ಈ ಯೋಜನೆಯಡಿಯಲ್ಲಿ ಗರಿಷ್ಠ 20,00,000ದವರೆಗೆ ಸಾಲವನ್ನು ಪಡೆಯಬಹುದು. ಈ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಲು 18 ರಿಂದ 55 ವರ್ಷದ ಒಳಗಿರಬೇಕು. ಈ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳೆಂದರೆ ಆಧಾರ ಕಾರ್ಡ್, ರೇಷನ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣಪತ್ರ ಯೋಜನಾ ವರದಿ ಅಂದರೆ ಮಾಡುವ ಬಿಸಿನೆಸ್ ಬಗ್ಗೆ ಮಾಹಿತಿ, ಬ್ಯಾಂಕ್ ಪಾಸ್ ಬುಕ್ ಪ್ರತಿ, ಪಾಸ್ ಪೋರ್ಟ್ ಸೈಜ್ ಫೋಟೋ 3 ಕಡ್ಡಾಯವಾಗಿ ಸಲ್ಲಿಸಬೇಕು. ಈ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರು ಅರ್ಜಿ ಸಲ್ಲಿಸಬಹುದು ಮತ್ತು ಅರ್ಜಿ ಸಲ್ಲಿಸಲು ಅರ್ಜಿಯನ್ನು ಆನ್ ಲೈನ್ ನಲ್ಲಿ ಸಲ್ಲಿಸಬೇಕು. ಈ ಮಾಹಿತಿಯನ್ನು ಯುವಕರು ಮತ್ತು ಯುವತಿಯರಿಗೆ ತಿಳಿಸಿ.