ಮಹಾಭಾರತ ಧಾರಾವಾಹಿಯ ಕಷ್ಣನ ಪಾತ್ರಧಾರಿ ಸೌರಭ ಜೈನ್ ಅವರು ಎಲ್ಲರಿಗೂ ತಿಳಿದಿದ್ದಾರೆ. ಅವರ ಮೇಲೆ ಕೃಷ್ಣನ ಪಾತ್ರ ಬೀರಿದ ಪರಿಣಾಮದ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ. ಮಹಾಭಾರತ ಧಾರಾವಾಹಿಯ ಕಷ್ಣನ ಪಾತ್ರಕ್ಕೆ ವೀಕ್ಷಕರು ಮನಸೋತಿದ್ದಾರೆ. ಕೃಷ್ಣನ ಉಪದೇಶ ಮತ್ತು ಹಿತನುಡಿ ಗಳಿಂದ ವೀಕ್ಷಕರಲ್ಲಿ ಬದಲಾವಣೆಗಳಾಗಿವೆ. ಕೃಷ್ಣನ ಪಾತ್ರ ನಿರ್ವಹಿಸುತ್ತಿದ್ದ ನಟ ಸೌರಭ ಜೈನ್ ಅವರು ಕೃಷ್ಣನ ಪಾತ್ರದಿಂದ ಪ್ರಭಾವಿತರಾಗಿದ್ದಾರೆ. ಮಹಾಭಾರತವನ್ನು ಕೇವಲ ಕಾವ್ಯವಾಗಿ ಪರಿಗಣಿಸದೆ ಜೀವನ ಪಾಠವಾಗಿ ಪರಿಗಣಿಸಬೇಕು. ಭಗವಂತ ಕೃಷ್ಣ ಅರ್ಜುನನಿಗೆ ಉಪದೇಶ ಮಾಡಿದ ಭಗವದ್ಗೀತೆಯೆ ನಮ್ಮ ನ್ಯಾಯಾಲಯದ ಮನಸಾಕ್ಷಿ ಆಗಿದೆ ಅಷ್ಟರಮಟ್ಟಿಗೆ ಕೃಷ್ಣನ ಮಾತುಗಳು ಸಾಗಿಬಂದಿದೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಹಾಭಾರತ ಧಾರಾವಾಹಿಯಿಂದ ಮತ್ತೊಮ್ಮೆ ಕೃಷ್ಣನ ಆರಾಧನೆ ಹೆಚ್ಚಾಗಿದೆ. ಧರ್ಮ ಅಧರ್ಮದ ಪಾಠ ಹೇಳಿದೆ ಇದರಿಂದ ಜನರು ಪ್ರಭಾವಿತರಾಗಿದ್ದಾರೆ. ನಟ ಸೌರಭ ಜೈನ್ ಅವರು ಮಹಾಭಾರತ ಧಾರಾವಾಹಿಯಲ್ಲಿ ನಟಿಸಿದ ನಂತರ ತಮ್ಮ ಜಿವನದಲ್ಲಿ ಹಲವು ಸಂಗತಿಗಳನ್ನು ಕಲಿತಿದ್ದಾರಂತೆ.

ಮಹಾಭಾರತದಲ್ಲಿ ಯುದ್ಧಕ್ಕೂ ಮುನ್ನ ಕೃಷ್ಣ ಅರ್ಜುನನಿಗೆ ಗೀತೋಪದೇಶ ಮಾಡುತ್ತಾನೆ ಈ ದೃಶ್ಯಗಳಲ್ಲಿ ಅಭಿನಯಿಸಿದ ನಂತರ ಗೀತಸಾರ ನನ್ನ ಜಿವನದ ಮೇಲೆ ಬೆಳಕು ಚೆಲ್ಲಿದೆ ಕೋಪವನ್ನು ನಿಯಂತ್ರಿಸುವುದು ಹೇಗೆ, ನೀರಿಕ್ಷೆ ಮಾಡದೆ ಕೆಲಸ ಮಾಡುವುದು ಹೇಗೆ, ನಮ್ಮನ್ನು ನಾವು ನಂಬುವುದು, ಪ್ರೀತಿ ಹಾಗೂ ಬಾಂಧವ್ಯ ಹೆಚ್ಚಿಸಿಕೊಳ್ಳಲು ಸಹಾನುಭೂತಿ ಹೊಂದುವುದು ಇವೆಲ್ಲ ಎಷ್ಟು ಮುಖ್ಯ ಎಂದು ನಾನು ಮಹಾಭಾರತದಿಂದ ಕಲಿತೆ ಎಂದು ಸೌರಭ ಜೈನ್ ಅವರು ಹೇಳಿಕೊಂಡಿದ್ದಾರೆ.

ಕೃಷ್ಣನನ್ನು ನೀರಿಗೆ ಹೋಲಿಸಿ ವಿವರಿಸಬಹುದು ನೀರು ಹೇಗೆ ಪ್ರಶಾಂತವಾಗಿರುತ್ತದೊ ಹಾಗೆ ಕೃಷ್ಣನು ಇರುತ್ತಾನೆ. ಕೃಷ್ಣನು ಏನೆ ಮಾತನಾಡಿದರೂ ಲಯವಿರುತ್ತದೆ. ಮಹಾಭಾರತವು ಜ್ಞಾನ ಹಾಗೂ ಬುದ್ಧಿವಂತಿಕೆಯ ಮಹಾಕಾವ್ಯ ಎಂದು ಸೌರಭ ಜೈನ್ ವರ್ಣಿಸಿದ್ದಾರೆ. ಇಲ್ಲಿಯವರೆಗೆ ಸೌರಭ ಅವರು ಸಾಕಷ್ಟು ಪೌರಾಣಿಕ ಪಾತ್ರಗಳಲ್ಲಿ ನಟಿಸಿ ಜನರ ಮೆಚ್ಚುಗೆ ಗಳಿಸಿದ್ದಾರೆ ಆದರೆ ಮಹಾಭಾರತದಲ್ಲಿ ನಟಿಸಿ ಸೌರಭ ಅವರು ನ್ಯಾಷನಲ್ ಕೃಷ್ಣ ಆಗಿ ಹೊರಹೊಮ್ಮಿದ್ದಾರೆ. ಸೌರಭ ಅವರು ಕೃಷ್ಣನ ವೇಷ ಹಾಕಿಕೊಂಡು ಮೇಕಪ್ ರೂಮಿನಲ್ಲಿ ಕುಳಿತುಕೊಂಡು ಹನುಮಾನ್ ಚಾಲೀಸ ಓದುತ್ತಿದ್ದರಂತೆ. ಸೌರಭ ಕೃಷ್ಣ ಹೇಗೆ ಸದಾ ನಗುತ್ತಿರುತ್ತಾನೆ ಅದಕ್ಕೆ ಉತ್ತರ ಕಂಡುಕೊಂಡಿದ್ದಾರಂತೆ ಸೌರಭ ಪ್ರಕಾರ ಕೃಷ್ಣನ ನಗುವಿನ ಅರ್ಥ ಮನುಷ್ಯನು ನಿನಗೇನು ಬೇಕೋ ಅದನ್ನು ನೀನು ಮಾಡು ನಂತರ ನಾನು ಏನು ಮಾಡಬೇಕೊ ಅದನ್ನೆ ಮಾಡುತ್ತೇನೆ ಎಂದು ನಗುತ್ತಾನೆ. ಒಟ್ಟಿನಲ್ಲಿ ಕೃಷ್ಣನ ಪಾತ್ರಧಾರಿ ಸೌರಭ ಅವರು ಕೃಷ್ಣನ ಪಾತ್ರದಿಂದ ಜೀವನದಲ್ಲಿ ಬದಲಾಗಿದ್ದಾರೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!