ನಮ್ಮ ದಿನನಿತ್ಯದ ಆಹಾರ ಪದ್ದತಿಯಲ್ಲಿ ಉದ್ದನ್ನು ಬಳಸುವುದನ್ನು ಸಾಮಾನ್ಯವಾಗಿ ನೋಡಿರುತ್ತೀರಿ. ಹಲವು ಸಂಶೋಧನೆಗಳ ಮೂಲಕ ಗೊತ್ತಾಗಿರುವ ಸಂಗತಿ ಏನೆಂದರೆ ಉದ್ದಿನಲ್ಲಿ ಇರುವ ಬಹು ಮುಖ್ಯವಾದ ಆರೋಗ್ಯಾಕಾರಿ ಅಂಶಗಳು ಹಾಗು ಆಯುರ್ವೇದದಲ್ಲಿ ಇದನ್ನು ಔಷಧಿಯ ರೂಪದಲ್ಲಿ ಬಹು ಮುಖ್ಯವಾಗಿ ಬಳಸುತ್ತಾರೆ.

ಉದ್ದನ್ನು ಆಯುರ್ವೇದ ಭಾಷೆಯಲ್ಲಿ ಮಾಷ ಎಂದು ಕರೆಯುತ್ತಾರೆ. ಉದ್ದಿನಲ್ಲಿ ಇರುವ ಪ್ರಮುಖ ಅಂಶಗಳಾದ ಹೈ ಪ್ರೋಟೀನ್, ಕಾರ್ಬೋಹೈಡ್ರೇಟ್, ಫ್ಯಾಟ್ ಇಂದ ದಿನದಲ್ಲಿ ನಮ್ಮ ದೇಹಕ್ಕೆ ಬೇಕಾದ ಪ್ರಮುಖ ಅಂಶಗಳನ್ನು ಒದಗಿಸಲು ಸಹಾಯಕಾರಿಯಾಗಿವೆ. ಇದಲ್ಲದೆ ಇದರಲ್ಲಿರುವ ಪೋಷಕಾಂಶಗಳಿಂದ ದೇಹದ ಕೆಲ ಭಾಗಗಳ ನೋವಿನ ಸಮಸ್ಯೆಯನ್ನು ಕೂಡ ನಿವಾರಿಸಬಹುದು. ಉದ್ದಿನಲ್ಲಿರುವ ಅರೋಗ್ಯಕಾರಿ ಅಂಶಗಳ ಬಗ್ಗೆ ಹೆಚ್ಚು ತಿಳಿಯೋಣ.

ಹಿಂದಿನ ಕಾಲದಲ್ಲಿ ಎಲ್ಲ ಬಲಿ ಅಥವಾ ಹೋಮಗಳ ಸಂದರ್ಭಗಳಲ್ಲಿ ಮಾಂಸಗಳನ್ನು ಬಳಸುವುದು ನಿಮಗೆ ಗೊತ್ತಿದೆ. ಆದರೆ ಸಸ್ಯಾಹಾರಿಗಳು ಮಾಂಸದ ಬದಲಿಗೆ ಉದ್ದನ್ನು ಮಾಂಸದ ರೂಪದಲ್ಲಿ ಉಪಯೋಗಿಸಬಹುದು. ಏಕೆಂದರೆ ಮಾಂಸದಲ್ಲಿರುವ ಎಲ್ಲ ಪೋಷಕಾಂಶ ಉದ್ದಿನಲ್ಲೂ ಸಹ ಸಿಗುವ ಕಾರಣ ಸಸ್ಯಾಹಾರಿ ಪಥ್ಯೆಯನ್ನು ಪಾಲಿಸುವವರು ಉದ್ದನ್ನು ಈ ರೀತಿಯ ಸಂದರ್ಭಗಳಲ್ಲಿ ಬಳಸಬಹುದು. ಹಾಗಾಗಿ ಇದು ಮಾಂಸದ ರೂಪದ ಶಕ್ತಿಯನ್ನು ನೀಡುತ್ತದೆ.

ನಮ್ಮ ದೇಹಕ್ಕೆ ದಿನನಿತ್ಯ ಬೇಕಾದ ಅಗತ್ಯ ಪ್ರೊಟೀನ್, ಕಾರ್ಬೋಹೈಡ್ರೇಟ್ ಸರಿಯಾದ ಅಂಶದಲ್ಲಿ ಸೇರಲು ಸೂಕ್ತವಾದ ತಿಂಡಿ ಎಂದರೆ ಅದು ಇಡ್ಲಿ. ಇಡ್ಲಿ ನಮ್ಮಲ್ಲಿ ತಲ ತಲಾಂತರದಿಂದ ಬಂದ ಒಂದು ಆಹಾರ ಪದ್ಧತಿ. ಸಾಮಾನ್ಯವಾಗಿ ಯಾವುದೇ ಖಾಯಿಲೆ ಅಥವಾ ಸಮಸ್ಯೆಯಿಂದ ಬಳಲುತ್ತಿರುವ ಸಣ್ಣ ವಯಸ್ಸಿನಿಂದ ಹಿಡಿದು ದೊಡ್ಡವರವರೆಗೂ ನೀಡುವ ಮುಖ್ಯ ಆಹಾರ ಎಂದರೆ ಅದು ಇಡ್ಲಿ. ಏಕೆಂದರೆ ಇಡ್ಲಿಯು ಮೃದುವಾಗಿದ್ದು ಅದು ಸುಲಭವಾಗಿ ಜೀರ್ಣವಾಗುತ್ತದೆ.

ನಮ್ಮ ದೇಹದ ಯಾವುದೇ ಅಂಗಾಂಗದಲ್ಲಿ ಕಾಣಿಸುವ ನೋವನ್ನು ಉದ್ದು ಕಡಿಮೆ ಮಾಡಬಲ್ಲದು. ಉದ್ದಿಗೆ ಈ ನೋವು ನಿವಾರಣಾ ಶಕ್ತಿ ಇದೆ. ಹಾಗಾದರೆ ಉದ್ದನ್ನು ಹೇಗೆ ನೋವನ್ನು ನಿವಾರಿಸಲು ಬಳಸುವರು. ಉದ್ದನ್ನು ಚೆನ್ನಾಗಿ ಅರಿದು ಬಿಸಿ ಮಾಡಿ ನೋವಿರು ಜಾಗಕ್ಕೆ ಭಟ್ ಕೊಡುವ ಮುಖಾಂತರ ನೋವನ್ನು ಕಡಿಮೆ ಮಾಡಬಹುದು. ನಾವು ಸಾಮಾನ್ಯವಾಗಿ ನೋವಿರುವ ಜಾಗಕ್ಕೆ ಹಾಕುವ ನೋವಿನ ಎಣ್ಣೆ, ಕಾಳು ಮೆಣಸಿನ ಜೊತೆಗೆ ಉದ್ದನ್ನು ಸೇರಿಸುವುದರಿಂದ ಅದು ಇನ್ನಷ್ಟು ಪರಿಣಾಮಕಾರಿಯಾಗಿ ನೋವನ್ನು ನಿವಾರಿಸಲು ಸಹಾಯವಾಗಲಿದೆ ಎನ್ನುತ್ತಾರೆ ಆಯುರ್ವೇದಿಕ್ ತಜ್ಞರು.

ನರ ದೌರ್ಭಲ್ಯವನ್ನು ಹೋಗಲಾಡಿಸಿ ನರ ನಾಡಿಗಳಲ್ಲಿ ಶಕ್ತಿ ತುಂಬುತ್ತದೆ.
ಫೇಶಿಯಲ್ ಪಾಲ್ಸ್, ಪಾರ್ಶ್ವವಾಯು, ಸಂಧಿವಾತ ಅಥವಾ ನಾಡಿ ದೌರ್ಭಲ್ಯ ಇತ್ಯಾದಿ ಸಮಸ್ಯೆಗಳ ಸಂದರ್ಭದಲ್ಲೂ ಸಹ ಉದ್ದನ್ನು ಬಳಸಬಹುದು. ಇದರಿಂದ ನರ ನಾಡಿಗೆ ಹೆಚ್ಚು ಶಕ್ತಿಯನ್ನು ಉದ್ದು ನೀಡುತ್ತದೆ ಹಾಗು ನರ ದೌರ್ಬಲ್ಯವನ್ನು ಕಡಿಮೆ ಮಾಡಲು ನೆರವಾಗುತ್ತದೆ.

ಕೆಲ ಸಮಸ್ಯೆಗಳಾದ ಅದ್ರಿತ ಅಥವಾ ಪಕ್ಷಾಗಾಥದ ಸಮಯದಲ್ಲಿ ರೋಗಿಗೆ ಪ್ರತಿನಿತ್ಯ ಬೆಳಿಗ್ಗೆ ಉದ್ದಿನ ಇಡ್ಲಿಯನ್ನು ಸೇವನೆ ಮಾಡಲು ನೀಡುವುದು ಬಹಳ ಒಳ್ಳೆಯದು ಹಾಗು ಇದಕ್ಕೆ ಬೆಣ್ಣೆಯನ್ನು ಸಹ ಸೇರಿಸುವುದರಿಂದ ಇದು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಿ ಈ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಈ ರೀತಿಯ ಪಥ್ಯೆಯನ್ನು ಪಾಲಿಸುವುದರಿಂದ ನರಕ್ಕೆ ಬಹಳ ಶಕ್ತಿ ಹಾಗು ಚೈತನ್ಯವನ್ನು ನೀಡಿ ನರ ದೌರ್ಭಲ್ಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿ ಕಬ್ಬಿಣದಂಶ ಅಧಿಕವಾಗಿರುವುದರಿಂದ ದೇಹದಲ್ಲಿ ಶಕ್ತಿಯನ್ನು ವೃದ್ಧಿಸಿ, ನಮ್ಮಲ್ಲಿ ಲವಲವಿಕೆಯನ್ನು ಹೆಚ್ಚಿಸುತ್ತದೆ.

ಸಸ್ಯಹಾರಿಗಳು ಅತ್ಯುತ್ತಮವಾದ ಪ್ರೊಟೀನ್ ನ ಮೂಲ ಇದಾಗಿದೆ. ಮಾಂಸಾಹಾರಿಗಳಿಯಾದರೆ ಮೊಟ್ಟೆ, ಮಾಂಸಗಳಲ್ಲಿ ಪ್ರೊಟೀನ್ ಅಂಶ ಇರುತ್ತದೆ. ಆದರೆ ಸಸ್ಯಹಾರಿಗಳು ತಮ್ಮ ದೇಹದಲ್ಲಿ ಪ್ರೊಟೀನ್ ಅಂಶ ಕಡಿಮೆಯಾಗದಿರಲು ಈ ರೀತಿಯ ಧಾನ್ಯಗಳನ್ನು ತಿನ್ನುವುದು ಒಳ್ಳೆಯದು. ಇದು ಸುಲಭದಲ್ಲಿ ಜೀರ್ಣವಾಗುವುದರಿಂದ ಅಜೀರ್ಣ, ಮಲಬದ್ಧತೆ ಈ ರೀತಿಯ ಸಮಸ್ಯೆಯನ್ನು ತರುವುದಿಲ್ಲ. ಉದ್ದಿನ ಬೇಳೆಯನ್ನು 4-5 ಗಂಟೆ ಕಾಲ ನೆನೆ ಹಾಕಿ ನಂತರ ತುಪ್ಪದಲ್ಲಿ ಹುರಿದು ತಿಂದರೆ ಲೈಂಗಿಕ ಶಕ್ತಿ ಹೆಚ್ಚುವುದು ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ.

ಲೈಂ ಗಿಕ ನಿಶ್ಯಕ್ತಿ ಇರುವ ವ್ಯಕ್ತಿ ಮಾನಸಿಕ ಖಿನ್ನತೆ ಅನುಭವಿಸುತ್ತಾರೆ. ಅವರ ಖಿನ್ನತೆ ಹೋಗಲಾಡಿಸಲು ಇದು ಸಹಾಯ ಮಾಡುತ್ತದೆ. ಇದನ್ನು ಫೇಸ್ ಪ್ಯಾಕ್ ನಂತೆ ಹಚ್ಚಿದರೆ ಮುಖದಲ್ಲಿ ಬೇಗನೆ ನೆರಿಗೆಗಳು ಬೀಳುವುದಿಲ್ಲ, ಅಲ್ಲದೆ ಮುಖದ ಕಾಂತಿಯನ್ನು ಕೂಡ ಹೆಚ್ಚಿಸುವುದು. ಉದ್ದಿನ ಬೇಳೆಯನ್ನು ತಿಂದರೆ ಇದರಲ್ಲಿ ಕೂದಲಿನ ಬೆಳವಣಿಗೆಗೆ ಅವಶ್ಯಕವಾದ ಪ್ರೊಟೀನ್ ಮತ್ತು ವಿಟಮಿನ್ಸ್ ಇರುವುದರಿಂದ ಕೂದಲಿನ ಆರೋಗ್ಯ ಹೆಚ್ಚುವುದು.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458. ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರುಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ) ಪೂರ್ವಜರ ಶಾಪ (ಪಿತೃ ದೋಷ) ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Reply

Your email address will not be published. Required fields are marked *