ರುದ್ರಾಕ್ಷಿ ಇದೊಂದು ಪವಿತ್ರವಾದ ಮಣಿಯಾಗಿದೆ. ಇದು ಹೆಚ್ಚಾಗಿ ಸನ್ಯಾಸಿಗಳು, ಜ್ಯೋತಿಷ್ಯರು, ಆಸ್ತಿಕರು ತಮ್ಮ ಕುತ್ತಿಗೆಗೆ ಶಿವನ ಮೇಲಿನ ಭಕ್ತಿಯಿಂದ ಧರಿಸುತ್ತಾರೆ. ರುದ್ರಾಕ್ಷಿಯಲ್ಲಿ ತುಂಬಾ ವಿಧಗಳಿವೆ. ಅವುಗಳು ಯಾವುದೆಂದರೆ ಏಕಮುಖಿ, ದ್ವಿಮುಖಿ, ತ್ರಿಮುಖಿ, ಚತುರ್ಮುಖಿ, ಪಂಚಮುಖಿ, ಷಟ್ಮುಖಿ, ಪಂಚಮುಖಿ ಸಾಮಾನ್ಯವಾಗಿ ಎಲ್ಲಾ ಕಡೆ ಸಿಗುತ್ತದೆ. ಏಕಮುಖಿ ರುದ್ರಾಕ್ಷಿ ಇರುವುದಿಲ್ಲ. ಷಟ್ಮುಖಿ ರುದ್ರಾಕ್ಷಿಯನ್ನು ಬಂಗಾರದ ಜೊತೆ ಪೋಣಿಸಿ ಹಾಕಿಕೊಂಡರೆ ತುಂಬಾ ಒಳ್ಳೆಯದು.
ದ್ವಿಮುಖ ರುದ್ರಾಕ್ಷಿ ತಾಂತ್ರಿಕ ಸಾಧನೆಗೆ ತುಂಬಾ ಒಳ್ಳೆಯದು.ಏಕಮುಖ ರುದ್ರಾಕ್ಷಿ ಕೇವಲ ನೇಪಾಳದಲ್ಲಿ ಮಾತ್ರ ಆಗುತ್ತದೆ. ಇದಕ್ಕೆ ಮಹಾರಾಜನ ರಕ್ಷಣೆ ಇರುತ್ತದೆ. ಇದು 100ವರ್ಷಕ್ಕೆ ಮೂರಾಗುತ್ತದೆ. ಹಾಗೆಯೇ ನೂರರಲ್ಲಿ ಒಂದು ರುದ್ರಾಕ್ಷಿ ನೆಲಕ್ಕೆ ಬೀಳುತ್ತದೆ. ಇನ್ನೊಂದನ್ನು ಸರ್ಪ ಬಂದು ತಿನ್ನುತ್ತದೆ ಎಂದು ತಿಳಿದವರು ಹೇಳುತ್ತಾರೆ. ಆದರೆ ಅದು ಹೇಗೆ ಜೀರ್ಣಿಸಿಕೊಳ್ಳಲು ಸಾಧ್ಯ ಎಂದು ತಿಳಿವಸ್ಥರಿಗೆ ಯೋಚನೆಯಾಗಿದೆ. ಮರದಲ್ಲಿ ಉಳಿದ ಒಂದನ್ನು ರಾಜಮನೆತನದವರು ತಂದು ಅರಮನೆಯಲ್ಲಿ ಇಟ್ಟುಕೊಳ್ಳುತ್ತಾರೆ. ಇಂದಿರಾಗಾಂಧಿ ಕತ್ತಿನಲ್ಲಿ ಏಕಮುಖಿ ರುದ್ರಾಕ್ಷಿ ಮಣಿ ಇತ್ತು ಎಂದು ಹೇಳುತ್ತಾರೆ. ಆದರೆ ಸಾಯುವಾಗ ಇರಲಿಲ್ಲ ಎಂದು ಹೇಳುತ್ತಾರೆ.
ಅನೇಕ ವರ್ಷಗಳ ಹಿಂದೆ ಬೆಂಗಳೂರಿಗೆ ಒಂದು ಏಕಮುಖಿ ರುದ್ರಾಕ್ಷಿ ಬಂದಿತ್ತಂತೆ. ಆಗ ಒಬ್ಬ ಜ್ಯೋತಿಷಿಗಳು ಅದರನ್ನು ನೋಡಲು ಹೋಗಿದ್ದರಂತೆ. ಅದರ ಬೆಲೆ ಸುಮಾರು ಒಂದು ಕೋಟಿ ಆಗಿತ್ತಂತೆ. ಅವರು ರುದ್ರಾಕ್ಷಿಯ ಬಗ್ಗೆ ಬಹಳ ತಿಳಿದವರಾಗಿದ್ದರು. ಎಕೆಂದರೆ ಅವರ ಸಂಬಂಧಿಕರ ಮನೆಯಲ್ಲಿ ರುದ್ರಾಕ್ಷಿಯನ್ನು ಬೆಳೆಯುತ್ತಿದ್ದರಂತೆ . ಅದನ್ನು ಕ್ಯೆಯಲ್ಲಿ ಹಿಡಿದುಕೊಂಡರೆ ಓಂ ಎಂಬ ನಾದವು ಸುಮಾರು ಐದಾರು ಬಾರಿ ಆ ಕ್ಯೆಯಲಿದ್ದ ರುದ್ರಾಕ್ಷಿ ಮಣಿಯಿಂದ ಹೊರ ಹೊಮ್ಮುತ್ತಿತ್ತಂತೆ. ಆಗ ಇವರಿಗೆ ಅನುಮಾನ ಬಂದು ಅಲ್ಲಿದ್ದವರ ಹತ್ತಿರ ಸ್ವಲ್ಪ ನೀರು ತರಲು ಹೇಳಿದರಂತೆ. ಆಗ ಆ ನೀರಿಗೆ ಆ ರುದ್ರಾಕ್ಷಿಯನ್ನು ಹಾಕಿದರಂತೆ. ಆಗ ಅದು ಬಣ್ಣ ಬಿಟ್ಟಿತಂತೆ. ಹೀಗೆ ರುದ್ರಾಕ್ಷಿಯಲ್ಲಿ ಮೋಸ ನಡೆಯುತ್ತದೆ ಎಂದು ಒಂದು ಸಣ್ಣ ಉದಾಹರಣೆಯಾಗಿದೆ.
ಹಾಗೆಯೇ ರುದ್ರಾಕ್ಷಿಯನ್ನು ಮನೆಯಲ್ಲಿ ಬೆಳೆಯಬಹುದು. ರುದ್ರಾಕ್ಷಿ ಮರದ ಕೆಳಗೆ ಗಿಡಗಳು ಹುಟ್ಟುತ್ತವೆ. ಅದನ್ನು ತೆಗೆದುಕೊಂಡು ಹೋಗಿ ಯಾರು ಬೇಕಾದರೂ ಬೆಳೆಯಬಹುದು. ಜ್ಞಾನವನ್ನು ವೃದ್ಧಿಸಲು ರುದ್ರಾಕ್ಷಿ ತುಂಬಾ ಸಹಕಾರಿಯಾಗಿದೆ. ಇದನ್ನು ಬಳಸಿ ಜಪ ಮಾಡುವುದರಿಂದ ದೇಹಕ್ಕೆ ಶಕ್ತಿ ಹೆಚ್ಚುತ್ತದೆ. ಆದರೆ ರುದ್ರಾಕ್ಷಿ ಮೂಲಕ ಅನೇಕ ಮೋಸಗಳು ನಡೆಯುತ್ತದೆ. ಆದ್ದರಿಂದ ರುದ್ರಾಕ್ಷಿಯ ಬಳಕೆ ಅಥವಾ ಖರೀದಿಯ ಮೊದಲು ಮುನ್ನೆಚ್ಚರಿಕೆ ಹೊಂದಿರುವುದು ಒಳ್ಳೆಯದಾಗಿದೆ.