ಅಪರಾಧಿಗಳನ್ನು ನೇಣಿಗೆ ಹಾಕುವಾಗ ಕಿವಿಯಲ್ಲಿ ಏನ್ ಹೇಳ್ತಾರೆ ಗೊತ್ತೇ, ನಿಜಕ್ಕೂ ಶಾಕಿಂಗ್!

0 7

ನಮ್ಮ ಜಗತ್ತಿನಲ್ಲಿ ಇತ್ತೀಚೆಗೆ ಅಪರಾಧಗಳು ಹಾಗೂ ಅಪರಾಧಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಅಪರಾಧಿ ಯಾರೇ ಆಗಿರಲಿ ಅಪರಾಧವೂ ಯಾವುದೇ ಆಗಿರಲಿ ಅಪರಾಧದ ಪ್ರಮಾಣ ಚಿಕ್ಕದೋ ದೊಡ್ಡದೋ ಮಾಡಿದ ತಪ್ಪಿಗೆ ಶಿಕ್ಷೆ ಆಗಲೇಬೇಕು. ನಮ್ಮ ದೇಶದಲ್ಲಿ ಅಪರಾಧಿಗಳಿಗೆ ಅತ್ಯಂತ ಘೋರವಾದ ಶಿಕ್ಷೆ ಅಂದರೆ ಅದು ಗಲ್ಲು ಶಿಕ್ಷೆ. ನಮ್ಮ ದೇಶದ ಕಾನೂನಿನಲ್ಲಿ ಗಲ್ಲಿಗೆ ಏರುವ ವ್ಯಕ್ತಿಯನ್ನು ಹೇಗೆ ನೇಣುಗಂಬಕ್ಕೆ ಹಾಕುತ್ತಾರೆ ಆಗ ಏನೆಲ್ಲಾ ಪ್ರೊಸೀಜರ್ ಇರತ್ತೆ ಅನ್ನೋದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಅಪರಾಧಿಗಳನ್ನು ನೇಣಿಗೆ ಹಾಕುವಾಗ ಅವರ ಕಿವಿಯಲ್ಲಿ ಏನು ಹೇಳ್ತಾರೆ ? ಈ ನೇಣಿಗೆ ಹಾಕುವ ಕೆಲಸದ ವ್ಯಕ್ತಿಗಳನ್ನು [ವಾಧಾಕಾರ] ಯಾವ ರೀತಿಯಲ್ಲಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ ಇವರ ಸಂಬಳ ಎಷ್ಟು ಅನ್ನೋದರ ಬಗ್ಗೆಯೂ ತಿಳಿಯೋಣ

ನಮಗೆಲ್ಲ ತಿಳಿದಿರುವ ಹಾಗೇ ಕೋರ್ಟ್ ನಲ್ಲಿ ಜಡ್ಜ್ ಒಬ್ಬ ಅಪರಾಧಿಗೆ ಗಲ್ಲು ಶಿಕ್ಷೆಯನ್ನು ವಿಧಿಸಿ ತೀರ್ಪನ್ನು ಬರೆದ ನಂತರ ಬರೆದ ಪೆನ್ ನ ನಿಬ್ ಅನ್ನು ಮುರಿಯುತ್ತಾರೆ. ಮರಣದಂಡನೆ ಆದೇಶವನ್ನು ಕೇಳಿ ಅಪರಾಧಿಗೆ ನಡುಕ ಶುರುವಾಗುತ್ತದೆ ಅಳಲು ಪ್ರಾರಂಭಿಸುತ್ತಾನೆ. ಗಲ್ಲು ಶಿಕ್ಷೆ ವಿಧಿಸೋಕೆ ಸಂಬಂಧಿಸಿ ಕೆಲವೊಂದಿಷ್ಟು ನಿಯಮಗಳಿವೆ. ಗಲ್ಲಿಗೆ ಹಾಕುವ ಹಗ್ಗ, ಕಂಬ ಹಾಗೂ ಸಮಯ ಎಲ್ಲವೂ ಮೊದಲೇ ನಿರ್ಧರಿತವಾಗುತ್ತದೆ. ಮರಣದಂಡನೆಗೆ ಗುರಿಯಾದ ವ್ಯಕ್ತಿಗೆ ಗಲ್ಲಿಗೇರಿಸುವಾಗ ಅಲ್ಲಿ ಜೈಲಿನ ಡಾಕ್ಟರ್, ಜಡ್ಜ್, ಜೈಲಿನ ಅಧಿಕಾರಿ ಮತ್ತು ವಧಾಕಾರ ಇಷ್ಟು ಜನ ಉಪಸ್ಥಿತರಿರುತ್ತಾರೆ. ಇಷ್ಟು ಜನರಲ್ಲಿ ಯಾರೊಬ್ಬ ಇಲ್ಲದೇ ಇದ್ದರೂ ಮರಣದಂಡನೆ ಪ್ರಕ್ರಿಯೆ ನಡಿಯಲ್ಲ. ಯಾವ ವ್ಯಕ್ತಿಗೆ ಮರಣದಂಡನೆ ವಿಧಿಸಲಾಗಿದೆಯೋ ಆ ವ್ಯಕ್ತಿ ಸಾಯುವವರೆಗೂ ವಧಾಕಾರ ಅಲ್ಲಿಯೇ ಇರಬೇಕು. ಈ ಪ್ರಕ್ರಿಯೆಯಲ್ಲಿ ವಧಾಕಾರನದ್ದೇ ಪ್ರಮುಖ ಪಾತ್ರ. ಈ ವಧಾಕಾರ ಪ್ರತೀ ಅಪರಾಧಿಗೆ ನೇಣಿಗೆ ಹಾಕುವ ಮೊದಲು ಅವನ ಕಿವಿಯಲ್ಲಿ ಒಂದು ಗುಟ್ಟನ್ನು ಹೇಳುತ್ತಾನೆ. ಇದನ್ನು ನಮ್ಮ ದೇಶದ ಪ್ರತೀ ಗಲ್ಲು ಶಿಕ್ಷೆ ವಿಧಿಸುವ ಸಂದರ್ಭದಲ್ಲೂ ಅಳವಡಿಸಿಕೊಳ್ಳಲಾಗುತ್ತದೆ. ಹಾಗಾದ್ರೆ ಅಪರಾಧಿಯನ್ನ ಗಲ್ಲಿಗೇರಿಸುವ ಮುನ್ನ ಕಿವಿಯಲ್ಲಿ ಹೇಳುವ ಗುಟ್ಟು ಏನು? ಅನ್ನೋದರ ಬಗ್ಗೆ ತಿಳಿಯೋಣ.

ಗಲ್ಲು ಶಿಕ್ಷೆಯನ್ನು ಬೆಳಿಗಿನ ಜಾವವೇ ನೀಡಬೇಕು ಎಂಬ ನಿಯಮ ಇದೆ ಯಾಕೆ ಅಂದ್ರೆ ಜೈಲಿನ ನಿಯಮದ ಪ್ರಕಾರ ಪ್ರತಿಯೊಂದು ಕೆಲಸವೂ ಬೆಳಗಿನ ಜಾವವೇ ಆರಂಭವಾಗಬೇಕು. ಗಲ್ಲು ಶಿಕ್ಷೆಯ ಕಾರಣದಿಂದ ಜೈಲಿನ ಉಳಿದ ಕೆಲಸಗಳಿಗೆ ತಡವಾಗಬಾರದು ಎಂಬ ಕಾರಣಕ್ಕೆ ಬೆಳಿಗ್ಗೆ ಸೂರ್ಯೊದಯಕ್ಕೆ ಮೊದಲು ಗಲ್ಲು ಶಿಕ್ಷೆ ವಿಧಿಸಲಾಗುತ್ತೆ. ನಮಗೆ ಯಾವುದೇ ಒಂದು ಪರೀಕ್ಷೆ ಅಥವಾ ಇಂಟರ್ವ್ಯೂಗೆ ಹೋಗೋವಾಗ ಎಷ್ಟು ಟೆನ್ಷನ್ ಮಾಡಿಕೊಳ್ಳುತ್ತೇವೆ ಇನ್ನು ನೇಣಿನ ಕುಣಿಕೆಗೆ ಹಗ್ಗವನ್ನು ಹಾಕುವಾಗ ನೇಣಿಗೆ ಗುರಿಯಾದ ವ್ಯಕ್ತಿಯ ಮನಸ್ಸು ಮತ್ತು ಹೃದಯದಲ್ಲಿ ಯಾವ ರೀತಿಯ ಭಾವನೆ ಉಂಟಾಗಬಹುದು? ಆತನ ಮುಖಕ್ಕೆ ಕಪ್ಪು ಬಟ್ಟೆಯನ್ನು ಹಾಕಿದಾಗ ಅವನ ಮನದಲ್ಲಿ ಇಡೀ ಜಗತ್ತೇ ಕತ್ತಲಾಗಿ ಎಂತಹ ಭಾವನೆ ಆಗುತ್ತದೆ ಕೊನೆಯದಾಗಿ ವಧಾಕಾರ ಆ ವ್ಯಕ್ತಿಯ ಕಿವಿಯಲ್ಲಿ ಕೊನೆಯಬಾರಿ ಗುಟ್ಟನ್ನು ಹೇಳಿದಾಗ ಆ ವ್ಯಕ್ತಿಗೆ ಹೇಗಾಗಬಹುದು?

ಅಪರಾಧಿಯ ಜೀವ ತೆಗೆಯುವ ಮುನ್ನ ಕಿವಿಯಲ್ಲಿ ಆ ಗುಟ್ಟನ್ನು ಹೇಳುವುದು ವಧಾಕಾರನಿಗೆ ಅನಿವಾರ್ಯ. ಅಪರಾಧಿ ಜೀವ ಬಿಡುವ ಮುನ್ನ ಶಾಂತವಾಗಿರಲಿ ಎಂದು ಈ ಸಾಲುಗಳನ್ನ ಹೇಳಿಸಲಾಗುತ್ತದೆ. ಹಾಗೇ ವಧಾಕಾರನಿಗೂ ಸಹ ತಾನು ಒಂದು ಜೀವವನ್ನು ತೆಗೆದೆ ಎಂಬ ಮನೋಭಾವ ಬಾರದೇ ಇರಲಿ, ಮಾನಸಿಕವಾಗಿ ಖಿನ್ನತೆಗೆ ಒಳಗಾಗದೇ ಇರಲಿ ಎಂದೂ ಸಹ ಈ ಸಾಲುಗಳನ್ನು ಹೇಳಿಸಲಾಗುತ್ತದೆ. ಹಾಗಾದ್ರೆ ಅಪರಾಧಿಯ ಜೀವ ತೆಗೆಯುವ ಮೊದಲು ವಧಾಕಾರ ಕ್ಷಮೆ ಕೇಳುತ್ತಾ ಏನು ಹೇಳುತ್ತಾನೆ ಅಂತ ತಿಳಿಯೋಣ ಬನ್ನಿ.

“ನನ್ನನ್ನ ಕ್ಷಮಿಸಿಬಿಡು ಇದು ನನ್ನ ಅನಿವಾರ್ಯತೆ. ನನ್ನನ್ನ ಕ್ಷಮಿಸಿಬಿಡು ನಾನು ಸರ್ಕಾರದ ಗುಲಾಮ. ನಾನು ನಿನಗಾಗಿ ಈ ಸಮಯದಲ್ಲಿ ಏನನ್ನೂ ಮಾಡಲು ಸಾಧ್ಯವಿಲ್ಲ. ರಾಮ್ ರಾಮ್ ಇಲ್ಲಿ ಅಪರಾಧಿ ಹಿಂದೂ ಆಗಿದ್ದರೆ ರಾಮ್ ರಾಮ್ ಎಂದೂ, ಅನ್ಯ ಧರ್ಮೀಯನಾಗಿದ್ದರೆ ಅವರವರ ಧರ್ಮದ ವಿಚಾರಗಳನ್ನು ಅಪರಾಧಿಯ ಕಿವಿಯಲ್ಲಿ ಹೇಳಲಾಗುತ್ತದೆ. ಇಷ್ಟನ್ನು ಹೇಳುತ್ತಿದ್ದಂತೇ ಅಪರಾಧಿಗೆ ತನ್ನ ಸಾವು ತನ್ನ ಕಿವಿಯವರೆಗೂ ಬಂದು ನಿಂತಿದೆ ಎಂದು ತಿಳಿದು ಹೆಚ್ಚು ಭಯ ಉಂಟಾಗಿ ವಿಪರೀತ ನಡುಕ ಉಂಟಾಗುತ್ತದೆ. ಅಫರಾಧಿ ಹೆದರಿ ನಡುಗಲು ಪ್ರಾರಂಭಿಸಿದಾಗ ವಧಾಕಾರ ನೇಣುಗಂಬದ ಲಿವರ್ ಅನ್ನು ಒತ್ತಿರುತ್ತಾನೆ. ಅಷ್ಟೇ, ಅಪರಾಧಿ ನಿಂತ ಜಾಗದ ಕೆಳಗಿನ ಹಲಗೆ ಸರಿಯುತ್ತದೆ ಅಪರಾಧಿ ನೇಣುಗಂಬದಲ್ಲಿ ನೇತಾಡುತ್ತಾ ಇರುತ್ತಾನೆ. ಕೆಲವೇ ಸೆಕೆಂಡ್ ಗಳಲ್ಲಿ ಅಪರಾಧಿಯ ಪ್ರಾಣ ಪಕ್ಷಿ ಹಾರಿಹೋಗಿರತ್ತೆ.

ಜೀವನದಲ್ಲಿ ಕೆಲವರಿಗೆ ಅಪರಾಧ ಮಾಡೋದು ಅಂದ್ರೆ ನೀರು ಕುಡಿದಷ್ಟೇ ಸುಲಭ. ಅಪರಾಧ ಮಾಡೋದರಲ್ಲೇ ಸಂತೋಷ ಕಂಡುಕೊಳ್ಳುತ್ತಾನೆ. ಆದರೆ ಪ್ರತಿಯೊಬ್ಬ ಮನುಷ್ಯ ಕೂಡ ಒಬ್ಬರಿಗಿಂತ ಇನ್ನೊಬ್ಬ ವಿಭಿನ್ನವಾಗಿರುತ್ತಾನೆ ಪ್ರತಿಯೊಬ್ಬ ವ್ಯಕ್ತಿಯೂ ಒಂದಲ್ಲ ಒಂದು ರೀತಿಯಲ್ಲಿ ಅಪರಾಧಿನೇ ಕೆಲವರದ್ದು ಸಣ್ಣ ಅಪರಾಧವಾದರೆ ಇನ್ನು ಕೆಲವರದ್ದು ದೊಡ್ಡ ಮಟ್ಟದ ಅಪರಾಧ. ಎಲ್ಲರಿಗೂ ನೇರವಾಗಿ ಗಲ್ಲು ಶಿಕ್ಷೆಯನ್ನ ನೀಡಲ್ಲ ಒಬ್ಬರ ಜೀವ ತೆಗೆದವರಿಗೆ ಗಲ್ಲುಶಿಕ್ಷೆ ಕಟ್ಟಿಟ್ಟ ಬುತ್ತಿ. ಇವು ಗಲ್ಲು ಶಿಕ್ಷೆಯ ಬಗೆಗಿನ ಮಾಹಿತಿ.

ಇನ್ನು ಆ ವಧಾಕಾರನ ಕೆಲಸಕ್ಕೆ ಹೇಗೆ? ನೇಮಕ ಮಾಡಿಕೊಳ್ಳಲಾಗುತ್ತದೆ ಅನ್ನೋದನ್ನ ತಿಳಿಯೋಣ.
ವಧಾಕಾರನ ಕೆಲಸ ವಿಶ್ವದಲ್ಲೇ ಅತ್ಯಂತ ಕಷ್ಟದ ಕೆಲಸ. ನಾವು ಮಗು ಹುಟ್ಟಿದಾಗ ನೀನು ಡಾಕ್ಟರ್, ಇಂಜಿನೀಯರ್ ಆಗಬೇಕು ಅಂತ ತಲೆಗೆ ತುಂಬುತ್ತೇವೆ ಮಕ್ಕಳು ಕೂಡಾ ಅದೇ ಯೋಚನೆಯಲ್ಲಿ ಬೆಳೆದು ಡಾಕ್ಟರ್, ಇಂಜಿನೀಯರ್, ಸೈಂಟಿಸ್ಟ್ ಆಗುಲ ಪ್ರಯತ್ನ ಮಾಡುತ್ತಾರೆ. ಎಲ್ಲರಿಗೂ ಐಶಾರಾಮಿ ಜೀವನ ಬೇಕು ಆದರೇ ವಿಶ್ವದಲ್ಲೇ ಅತೀ ಕಷ್ಟದ ಕೆಲಸ, ಕೆಲಸವೂ ಕಡಿಮೆ ಸಂಬಳವೂ ಕಡಿಮೆ. ಈ ಕೆಲಸಕ್ಕೆ ಸೇರಿದ್ರೆ ಎಷ್ಟೋ ವರ್ಷಕ್ಕೆ ಒಮ್ಮೆ ಕೆಲಸ ಮಾಡಿದ್ರೆ ಆಯ್ತು ಅದೇ ಈ ವಧಾಕಾರನ ಕಷ್ಟದ ಕೆಲಸ.

ಭಾರತದ ಜನಸಂಖ್ಯೆ ಸುಮಾರು 130 ಕೋಟಿಗೂ ಹೆಚ್ಚು ಇಲ್ಲಿ ಅಪರಾಧಿಗಳೂ ಇದ್ದಾರೆ ನಿರಪರಾಧಾಗಳೂ ಇದ್ದಾರೆ. ಆದರೆ ಅಪರಾಧಿಗಳನ್ನ ಇನ್ನೂ ಸರಿ ಮಾಡಲು ಅಸಾಧ್ಯವಾದಂತಹ ಅಪರಾಧಿಗಳನ್ನ ಗಲ್ಲಿಗೆ ಏರಿಸಲಾಗುತ್ತದೆ. ಭಾರತದಲ್ಲಿ ಬ್ರಿಟೀಷರ ಕಾಲದಿಂದಲೂ ಮರಣದಂಡಣೆ ಎಂದರೆ ನೇಣಿಗೆ ಹಾಕುವುದು. ಆದರೆ, ಆ ನೇಣಿಗೆ ಹಾಕುವ ವಧಾಕಾರರ ಸಂಖ್ಯೆ ಕಡಿಮೆ ಆಗ್ತಾ ಇದೆ. ಭಾರತದಲ್ಲಿ ಅಪರೂಪದಲ್ಲಿ ಅಪರೂಪದ ಪ್ರಕರಣಗಳಿಗೆ ಮಾತ್ರ ಗಲ್ಲು ಶಿಕ್ಷೆ ನೀಡಲಾಗತ್ತೆ. ಭಾರತೀಯರು ಗಲ್ಲುಶಿಕ್ಷೆಯ ಬಗ್ಗೆ ವಿರೋಧ ಹೊಂದಿದ್ದು ಸ್ವತಂತ್ರ್ಯಾ ನಂತರ ಕೇವಲ 50 ಗಲ್ಲು ಶಿಕ್ಷೆಯನ್ನು ವಿಧಿಸಲಾಗಿದೆ. ತೀರಾ ಗಂಭೀರದ ಅಶರಾಧಗಳು ಕೊಲೆ, ಅತ್ಯಾಚಾರದಂತಹ ಪ್ರಕರಣಗಳಿಗೆ ಗಲ್ಲಿಗೆ ಏರಿಸಬೇಕು ಎಂದರೂ, ಒಬ್ಬರ ಜೀವ ತೆಗೆಯಬಾರದು ಎಂಬ ಕನಿಕರ ಭಾವನೆ ನಮ್ಮ ಜನರಿಗೆ. ಈ ಕಾರಣಕ್ಕೇ ನಮ್ಮ ದೇಶದಲ್ಲಿ ವಧಾಕಾರರು ಒಂದು ನಿವ್ರತ್ತಿ ಹೊಂದುತ್ತಿದ್ದಾರೆ ಅಥವಾ ಕೆಲಸ ಬಿಡುತ್ತಾ ಇದ್ದಾರೆ. ಇನ್ನಿವರ ಮುಂದಿನ ತಲೆಮಾರಿನವರು ನಮಗೆ ಇಂತ ಕೆಲಸ ಬೇಡ ಎಂದು ಓಡಿ ಹೋಗುತ್ತಿದ್ದಾರೆ. ಈ ವಧಾಕಾರರ ಕೆಲಸಕ್ಕೆ ಸಂಬಳ ತಿಂಗಳಿಗೆ 3000 ಕೊಟ್ಟರೆ ಹೆಚ್ಚು. ಹಾಗಾಗಿ ಇವರು ಬೇರೆ ಕೆಲಸದಲ್ಲಿ ತೊಡಗಿರುತ್ತಾರೆ ಜೈಲಿನಿಂದ ನೇಣಿಗೆ ಹಾಕುವುದಿದೆ ಎಂದು ಕರೆ ಬಂದಾಗ ಹೋಗಿ ತಮ್ಮ ಕಾರ್ಯ ನಿರ್ವಹಿಸಿ ಬರುತ್ತಾರೆ.

ಇವರಿಗೆ ತಿಂಗಳ ವೇತನವೂ ಇರಲ್ಲ‌ ವಧೆಗೆ ಹೋದಾಗ 3, 4 ಸಾವಿರ ರೂಪಾಯಿ ಕೊಟ್ಟುಕಳಿಸುತ್ತಾರೆ. ವಧಾಕಾರರನ್ನ ಸಾಮಾಜಿಕವಾಗಿ ಜನ ನೋಡೋ ದ್ರಷ್ಟಿಯೇ ಬೇರೆ. ಈ ಕಾರಣಕ್ಕೇ ದೇಶದಲ್ಲಿ ವಧಾಕಾರರ ಸಂಖ್ಯೆ ಕಡಿಮೆ ಆಗಿದೆ. ಈ ವಧಾಕಾರರ ಕೆಲಸ ಕಾಂಟ್ರಾಕ್ಟ್ ಕೆಲಸ. ಇದು ವಂಶಪಾರಂಪರ್ಯವಾದ ಕೆಲಸ. ಮಾಜಿ ವಧಾಕಾರನ ಮಗನೊಬ್ಬ ತಾನೂ ವಧಾಕಾರ ಆಗಬೇಕು ಅಂದುಕೊಂಡರೇ ಜೈಲಿನ ಅಧಿಕಾರಿಯ ಬಳಿ ಹೋಗಿ ಹೇಳಿ ಸಹಿ ಹಾಕಬೇಕು ಹಾಗೂ ತನ್ನ ತಂದೆಯಿಂದ ತರಬೇತಿಯನ್ನೂ ಪಡೆದುಕೊಳ್ಳಬೇಕು. ಕೆಲವೇ ಸೆಕೆಂಡಿನಲ್ಲಿ ಪ್ರಾಣ ಹೋಗುವ ಹಾಗೇ ನೇಣಿನ ಹಗ್ಗವನ್ನ ಕಟ್ಟೋದು ಹೇಗೆ ಅನ್ನೋದನ್ನೂ ಕಲಿಯಬೇಕು. ನಂತರ ಜೈಲಿನ ಅಧಿಕಾರಿಗಳಿಗೆ ಡೆಮೋ ತೋರಿಸಬೇಕು ಅಲ್ಲಿ ಪಾಸ್ ಆದರೆ ಮಾತ್ರ ಇವರ ಕೆಲಸ ಖಾಯಂ ಆಗತ್ತೆ ಹಾಗೂ ಜೈಲಿನ ಅಧಿಕಾರಿಗಳ ಬಳಿ ರಿಜಿಸ್ಟರ್ ಕೂಡ ಮಾಡಿಸಬೇಕು. ಇವರಿಗೆ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿರಲು ತಿಂಗಳಿಗೆ 2/3 ಸಾವಿರ ಗೌರವ ಧನ ನೀಡುತ್ತಾರೆ. ಕೆಲವು ಜೈಲಿನಲ್ಲಿ ವಧೆ ಇದ್ದಾಗ ಮಾತ್ರ ಇವರನ್ನ ಕರೆಸಿ ಒಂದು ಸಲ ಮಾತ್ರ 4/5 ಸಾವಿರ ರೂಪಾಯಿ ಕೊಟ್ಟು ಕಳಿಸುತ್ತಾರೆ.

ಈ ವಧಾಕಾರನ ಕೆಲಸ ಎಂದರೆ ಕೆಲವರಿಗೆ ಹೆಮ್ಮೆ ಇನ್ನು ಕೆಲವರಿಗೆ ಅಸಹ್ಯ. ಖಸಬ್, ಯಾಕೂಬ್ ಯೆಮನ್ ಅಂತ ಭಯೋತ್ಪಾದಕರು, ಸಮಾಜದ ಕೆಟ್ಪ ಹುಳಗಳನ್ನ ಸಾಯಿಸುವ ಮೂಲಕ ಸಮಾಜಕ್ಕೆ ಒಳ್ಳೆಯದು ಮಾಡುತ್ತಿದ್ದೇವೆ ಎಂದು ಕೆಲವರು ಹೆಮ್ಮೆ ಪಡುತ್ತಾರೆ. ಈ ಭಯೋತ್ಪಾದರಿಗೆ ಗಲ್ಲು ಹಾಕೋಕೆ ವಧಾಕಾರರಲ್ಲೇ ಕಾಂಪಿಟೇಶನ್ ಏರ್ಪಟ್ಟತ್ತು. ಮಾಜಿ ವಧಾಕಾರರೂ ಸಹ ಇವರನ್ನ ಗಲ್ಲಿಗೇರಿಸೋಕೆ ಅವಕಾಶ ಕೊಡಿ ಅಂತ ಕೇಳ್ತಾ ಇದ್ರಂತೆ ಅದೂ ಈ ಕೆಲಸಕ್ಕೆ ಹಣ ಪಡೆಯದೇ ಖಸಬ್ ನಿಗೆ ಗಲ್ಲಿಗೇರಿಸುಲ ಅವಕಾಶ ದೊರಕಿದ್ದು ‘ಬಾಬೂ ಜಲ್ಲಾದ್’ ಎಂಬ ಕಾನಸ್ಟೇಬಲ್ ಗೆ. ಬಾಬೂ ಜಲ್ಲಾದ್ ಇದು ಅವನ ಕೋಡ್ ಆಗಿದ್ದು ಅವನ ನಿಜವಾದ ಹೆಸರನ್ನ ಗೌಪ್ಯವಾಗಿಡಲಾಗಿದೆ. ಇದು ಒಂದೆಡೆ ಆದ್ರೇ ಇನ್ನೂ ಕೆಲವು ವಧಾಕಾರರಿಗೆ ತಾವು ಇನ್ನೊಬ್ಬರ ಜೀವ ತೆಗೆಯುವ ಕೆಲಸ ಮಾಡ್ತಾ ಇದ್ದೇವೆ ಎಂಬ ಜಿಗುಪ್ಸೆ. ಇದು ಪಾಪದ ಕೆಲಸ ಮುಂದಿನ ಜನ್ಮದಲ್ಲಿ ನಾವು ಕೆಟ್ಟ ಪ್ರಾಣಿಯಾಗಿ ಹುಟ್ಟಬಹುದು ಎಂದುಕೊಳ್ಳುತ್ತಾರೆ. ಅಕ್ಕ ಪಕ್ಕದ ಮನೆಯವರಿಗೆ ತಿಳಿದರೆ ತಮ್ಮನ್ನ ಮಾತನಾಡಿಸುವುದೂ ಇಲ್ಲ ಎಂದು ತಮ್ಮ ಕೆಲಸವನ್ನು ಗುಟ್ಟಾಗಿ ಇಡುತ್ತಾರೆ. ಕಾನೂನಾತ್ಮಕವಾಗಿ ಆದರೂ ಒಬ್ಬನಿಗೆ ಗಲ್ಲಿಗೇರಿಸಿ ಸಾಯಿಸುವ ವಧಾಕಾರನ ಕೆಲಸ ವಿಶ್ವದಲ್ಲೇ ಅತ್ಯಂತ ಕಷ್ಟದ ಕೆಲಸ.

Leave A Reply

Your email address will not be published.