ವಯಸ್ಸು ಹೆಚ್ಚಾಗುತ್ತಾ ಹೋದಂತೆ ನಮಗೆ ಹಲವಾರು ಅನಾರೋಗ್ಯಕರ ಸಮಸ್ಯೆಗಳು ಸಹ ಹೆಚ್ಚುತ್ತಾ ಹೋಗುತ್ತವೆ. ಈ ರೀತಿಯ ಸಮಸ್ಯೆಗಳು ಎದುರಾಗುವುದರಲ್ಲಿ ಕೀಲುನೋವು ಕೂಡ ಒಂದಾಗಿರುತ್ತದೆ. ಕೀಲುಗಳಲ್ಲಿ ಸಹಿಸಲಾಗದಷ್ಟು ನೋವಿದ್ದರೂ ಎದ್ದರೆ ಕೂರಲು ಆಗಲ್ಲ ಕುಳಿತರೆ ಏಳಲು ಆಗುವುದಿಲ್ಲ. ಈ ರೀತಿಯ ನೋವುಂಟಾದಾಗ ಡಾಕ್ಟರಗಳು ಕೊಡುವ ಮಾತ್ರೆಯನ್ನು ಸೇವಿಸುವುದು ಮಾತ್ರವಲ್ಲದೆ ನಮ್ಮ ಮನೆಯಲ್ಲಿ ಸಿಗುವಂತಹ ಪದಾರ್ಥಗಳನ್ನು ಬಳಸಿ ಸಹ ಮನೆಮದ್ದನ್ನು ಮಾಡಿ ನೋವನ್ನು ಶಮನ ಮಾಡಿಕೊಳ್ಳಬಹುದು. ಹಾಗಿದ್ರೆ ಕೇಳು ನೋವು ಮಂಡಿ ನೋವು ಮೊಣಕಾಲು ನೋವು ಮುಂತಾದವುಗಳಿಗೆ ನಾವು ಮನೆಯಲ್ಲಿ ಸುಲಭವಾಗಿ ಹೇಗೆ ಪರಿಹಾರವನ್ನು ಕಂಡುಕೊಳ್ಳಬಹುದು ಅದರ ಬಗ್ಗೆ ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಈ ಮನೆಮದ್ದನ್ನು ನಮಗೆ ಮಾಡಲು ಬೇಕಾಗಿರುವುದು ಮುಖ್ಯವಾಗಿ ಅರಿಶಿಣದ ಪುಡಿ. ನಾವು ಮನೆಯಲ್ಲಿ ಯಾವುದೇ ಒಂದು ಅಡುಗೆ ಏನು ಮಾಡಿದರು ಸಹ ಅದರಲ್ಲಿ ಚಿಟಿಕೆಯಷ್ಟು ಆದರೂ ಅರಿಶಿನವನ್ನು ಸೇರಿಸಿ ಇರುತ್ತೇವೆ. ಅರಿಶಿನ ಕೇವಲ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಕ್ಯಾನ್ಸರ್ ನಂತಹ ಭಯಂಕರ ಕಾಯಿಲೆಯಿಂದ ಸಂರಕ್ಷಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತದೆ. ಅರಿಶಿಣ ದಲ್ಲಿ ಇರುವಂತಹ anti-inflammatory ಗುಣಗಳು ನೋವುಗಳ ಬರೆದ ಹಾಗೆ ಹಾಗೂ ಊತ ಉಂಟಾಗದಂತೆ ತಡೆಯಲು ಉತ್ತಮ ಸಹಾಯಕಾರಿಯಾಗಿದೆ. ಇಷ್ಟು ಅದ್ಭುತವಾದ ಔಷಧೀಯ ಗುಣವನ್ನು ಹೊಂದಿರುವ ಅರಿಶಿನ ಪುಡಿಯು ನಮ್ಮ ದೇಹದ ಕೀಲು ನೋವು ಕಡಿಮೆ ಮಾಡಲು ಸಹ ನೆರವಾಗುತ್ತದೆ ಎಂದು ರಿಸರ್ಚ್ ನಲ್ಲಿ ಸಾಭೀತು ಆಗಿದೆ. ಅರಿಶಿನದಲ್ಲಿ ಕೀಲು ನೋವನ್ನು ಕಡಿಮೆ ಮಾಡುವ ಉತ್ತಮ ಅಂಶ ಇದೆ.
ಇನ್ನು ಎರಡನೆಯದಾಗಿ ಈ ಮನೆ ಮದ್ದು ಮಾಡಲು ಅರಿಶಿನದ ಜೊತೆಗೆ ಬೇಕಾಗಿರುವುದು ಒಣ ಶುಂಠಿ ಪುಡಿ. ಶುಂಠಿಯಲ್ಲಿ ಸಹ ಆಂಟಿ ಇಂಪ್ಲಾಮೇಟರಿ ಗುಣಗಳು ಇರುತ್ತದೆ. ಶುಂಠಿ ಪುಡಿ ಆರ್ಥರಿಟಿ ಹಾಗೂ ಕೀಲು ನೋವು ಸಮಸ್ಯೆಗೆ ಉತ್ತಮ ಔಷಧ. ಕೀಲು ನೋವನ್ನು ಕಡಿಮೆ ಮಾಡಲು ಈ ಶುಂಠಿ ಮತ್ತು ಅರಿಷಿನವನ್ನು ಹೇಗೆ ತೆಗೆದುಕೊಳ್ಳೋದು ಅನ್ನೋದನ್ನ ನೋಡೋಣ. ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಒಂದು ಚಿಟಕಿ ಅರಿಶಿನ ಪುಡಿ ( ಮಳೆಗಾಲ ಹಾಗೂ ಚಳಿಗಾಲದಲ್ಲಿ ಒಂದು ಸ್ಪೂನ್ ವರೆಗೂ ಬಳಸಬಹುದು. ಬೇಸಿಗೆಯಲ್ಲಿ ಕೇವಲ ಚಿಟಿಕೆ ಅಷ್ಟು ಮಾತ್ರ ಬಳಸಿದರೆ ಸಾಕು) ಅರಿಶಿನದ ಜೊತೆಗೆ ಎರಡು ಚಿಟಿಕೆ ಅಥವಾ ಕಾಲು ಟೀ ಚಮಚ ಅಷ್ಟು ಶುಂಠಿ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಕುಡಿಯಬೇಕು.
ಅರಿಶಿನ ಹಾಗೂ ಒಣ ಶುಂಠಿ ಪುಡಿ ಮಿಶ್ರಿತ ಈ ನೀರು ನಮ್ಮ ದೇಹವನ್ನು ಸೇರಿ ನಮ್ಮ ದೇಹದಲ್ಲಿರುವ ಕೀಲು ನೋವು ಹಾಗೂ ಉಳಿದ ನೋವುಗಳನ್ನು ಸಹ ಶಮನ ಮಾಡುತ್ತದೆ. ಇವೆರಡರಲ್ಲೂ ಆಂಟಿ ಬ್ಯಾಕ್ಟೀರಿಯಲ್ ಗುಣಗಳು ಇರುವುದರಿಂದ ತುಂಬಾ ಸಹಾಯಕಾರಿ ಆಗುತ್ತವೆ. ಹಾಗೂ ಬ್ಲಡ್ ಶುಗರ್ ಲೇವಲ್ ಅನ್ನು ಕೂಡಾ ನಿಯಂತ್ರಿಸುತ್ತದೆ. ಈ ಮನೆಮದ್ದನ್ನು ಮಾಡುತ್ತಲೇ ಇದರ ಜೊತೆಗೆ ನಾವು ನಮ್ಮ ಈ ಕೀಲು ನೋವಿಗೆ ಕಾರಣ ಆಗುವಂತಹ ಆಹಾರಗಳನ್ನು ಸೇವಿಸುವುದನ್ನು ಮೊದಲು ಬಿಡಬೇಕು. ಆರ್ಟಿಫಿಷಯಲ್ ಸಿಹಿಗಳು, ಆಲ್ಕೋಹಾಲ್ ನ ಅತಿಯಾದ ಸೇವನೆ ಇವುಗಳಿಂದಲೂ ಸಹ ಕೀಲು ನೋವು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಆಹಾರ ಪದ್ಧತಿಯಲ್ಲಿ ಸ್ವಲ್ಪ ಬದಲಾವಣೆಯನ್ನು ಮಾಡಿಕೊಳ್ಳಬೇಕು. ಕೀಲು ನೋವನ್ನು ಕಡಿಮೆ ಮಾಡುವ ತರಕಾರಿಗಳಾದ ಶುಂಠಿ, ಬೀನ್ಸ್ , ಕ್ಯಾರೆಟ್ ಇವುಗಳನ್ನು ಅತಿಯಾಗಿ ಬಳಸಬೇಕು. ಇವುಗಳಲ್ಲಿ ಮ್ಯಾಗ್ನಿಶಿಯಂ, ವಿಟಮಿನ್ ಸಿ ಅತಿಯಾಗಿ ಇರುತ್ತದೆ ಇವೆಲ್ಲವೂ ನಮ್ಮ ಶರೀರಕ್ಕೆ ಪೇನ್ ಕಿಲ್ಲರ್ ತರ ಸಹಾಯ ಮಾಡಿ ಕೀಲು ನೋವು , ಮಂಡಿ ನೋವು ಕಡಿಮೆ ಆಗಲು ಸಹಾಯ ಮಾಡುತ್ತದೆ.
ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:- ಶ್ರೀ ಪ್ರತ್ಯಂಗಿರಾ ದೇವಿ ಜ್ಯೋತಿಷ್ಯ ಕೇಂದ್ರ ಕಾಶಿ ಪಂಡಿತರಾದ ಶ್ರೀ ಶ್ರೀ ಅಘೋರಿ ನಾಥ್ ಗುರೂಜಿ 9980877934 ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು,ಮದುವೆ ವಿಳಂಬ,ಮಕ್ಕಳ ಸಮಸ್ಯೆ, ದಾಂಪತ್ಯದಲ್ಲಿ ಕಲಹ ನಿರಾಶೆ, ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ, ವ್ಯವಹಾರದಲ್ಲಿ ಲಾಭ-ನಷ್ಟ, ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ವಿಚಾರ, ಉದ್ಯೋಗದಲ್ಲಿ ಜನಗಳ ತೊಂದರೆ, ಅತ್ತೆ ಸೂಸೆ ಕಿರಿ-ಕಿರಿ, ಅಷ್ಟೇ ಅಲ್ಲದೆ ನಿಮ್ಮ ಯಾವುದೇ ಕಠಿಣ ಮತ್ತು ಗುಪ್ತ ಸಮಸ್ಯೆಗಳಿಗೆ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.