ನಮ್ಮ ದೇಶದಲ್ಲಿ ಅರಿಶಿಣ ತುಂಬಾ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ ಅರಿಶಿನವನ್ನು ಧಾರ್ಮಿಕ ಕಾರ್ಯಗಳಲ್ಲಿ ಬಳಸುತ್ತಾರೆ. ಅಡುಗೆಯಲ್ಲಿ ಬಳಸುತ್ತಾರೆ ಜೊತೆಗೆ ಔಷಧೀಯ ವಸ್ತುವನ್ನಾಗಿ ಕೂಡ ಇದನ್ನು ಬಳಸುತ್ತಾರೆ. ಇಂದು ನಾವು ನಿಮಗೆ ಚಳಿಗಾಲದಲ್ಲಿ ಅರಿಶಿಣದ ಪ್ರಾಮುಖ್ಯತೆ ಏನು ಅದನ್ನು ಬಳಸುವುದರಿಂದ ಯಾವೆಲ್ಲ ರೀತಿಯ ಪ್ರಯೋಜನಗಳು ಆಗುತ್ತದೆ ಎಂಬುದನ್ನು ತಿಳಿಸಿಕೊಡುತ್ತೇವೆ. ಚಳಿಗಾಲದಲ್ಲಿ ಅರಿಶಿನ ಬಹಳ ಸಹಾಯ ಮಾಡುತ್ತದೆ ಅರಿಶಿಣದ ಹಾಲನ್ನು ಕುಡಿಯುವುದರಿಂದ ಇಮ್ಮುನಿಟಿ ಹೆಚ್ಚಾಗುತ್ತದೆ ಇತ್ತೀಚಿನ ದಿನಗಳಲ್ಲಿ ಎಲ್ಲರೂ ಅರಿಶಿಣದ ಹಾಲನ್ನು ಕುಡಿಯುವ ಹವ್ಯಾಸವನ್ನು ಬಳಸಿಕೊಳ್ಳುತ್ತಿದ್ದಾರೆ.
ಅರಿಶಿನದಲ್ಲಿ ಕರ್ಕ್ಯೂಮನ್ ಎನ್ನುವ ದಿವ್ಯವಾದ ಔಷಧೀಯ ಗುಣವಿದೆ ಅರಿಶಿಣದಲ್ಲಿರುವ ಔಷಧಿಯ ಗುಣಗಳಿಂದಾಗಿ ಇದು ವಿದೇಶಗಳಿಗೂ ಕೂಡ ರಫ್ತಾಗುತ್ತದೆ. ಅಮೆರಿಕಾಕ್ಕೆ ಹೆಚ್ಚಾಗಿ ರಪ್ತಾಗುವ ಔಷಧಿಗಳಲ್ಲಿ ಕರ್ಕ್ಯೂಮನ್ ಕೂಡ ಒಂದು. ಭಾರತದಲ್ಲಿ ಬೆಳೆಯುವಂತಹ ಅರಿಶಿಣದಲ್ಲಿ ಒಳ್ಳೆಯ ಕರ್ಕ್ಯೂಮನ್ ಅಂಶವಿದೆ.
ಅರಿಶಿಣದಲ್ಲಿರುವ ಕರ್ಕ್ಯೂಮನ್ ಅಂಶವನ್ನು ತೆಗೆದು ಉಳಿದ ಅರಿಶಿಣವನ್ನು ಪುಡಿ ಮಾಡುತ್ತಾರೆ ಕರ್ಕ್ಯೂಮನ್ ಅಂಶವನ್ನು ವಿದೇಶಗಳಿಗೆ ರಫ್ತು ಮಾಡುತ್ತಾರೆ. ಹಾಗಾಗಿ ಅರಿಶಿಣದಲ್ಲಿ ಇರುವ ಕರ್ಕ್ಯೂಮನ್ ಲ್ಲಿ ಔಷಧೀಯ ಗುಣಗಳಿರುವುದು ಬಹಳ ಮುಖ್ಯವಾದ ಅಂಶವಾಗಿದೆ. ಅರಿಶಿಣದಲ್ಲಿರುವ ಕರ್ಕ್ಯೂಮನ್ ಅಂಶವನ್ನು ತೆಗೆದಾಗ ಅರಿಶಿಣದಲ್ಲಿರುವ ಶೇಕಡ ಎಪ್ಪತ್ತರಷ್ಟು ಔಷಧಿಯಗುಣ ಕಡಿಮೆಯಾಗುತ್ತದೆ.
ಹಾಗಾಗಿ ಅರಿಶಿಣವನ್ನು ಉಪಯೋಗಿಸುವಾಗ ಗಮನಿಸಬೇಕಾದ ಅಂಶವೆಂದರೆ ನೀವು ಮಾರುಕಟ್ಟೆಯಲ್ಲಿ ಅರಿಶಿಣದ ಕೊಂಬುಗಳನ್ನು ಖರೀದಿ ಮಾಡಬೇಕು ಅಥವಾ ಹಸಿ ಅರಿಶಿಣವನ್ನು ಖರೀದಿ ಮಾಡಿ ಅದನ್ನು ಒಣಗಿಸಿಕೊಳ್ಳಬೇಕು. ಅದನ್ನು ನೀವೇ ಮನೆಯಲ್ಲಿ ಮಿಕ್ಸಿಯಿಂದ ಪುಡಿ ಮಾಡಿಕೊಳ್ಳಬಹುದು ಅಥವಾ ಮಿಲ್ಲಿನಲ್ಲಿ ಪುಡಿ ಮಾಡಿಸಿಕೊಳ್ಳಬಹುದು. ಅದು ಶುದ್ಧವಾದ ಅರಿಶಿಣದ ಪುಡಿಯಾಗಿರುತ್ತದೆ ಈ ರೀತಿ ತಯಾರಿಸಿಕೊಂಡ ಪುಡಿಯನ್ನು ನೀವು ಬಳಸಬೇಕು.
ಕೆಲವರು ರಾತ್ರಿ ಮಲಗುವ ಪೂರ್ವದಲ್ಲಿ ಅರಿಶಿಣದ ಪುಡಿ ಹಾಕಿ ಹಾಲನ್ನು ಕುಡಿಯುತ್ತಾರೆ ಆದರೆ ಇದರಿಂದ ಕಫ ಆಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಮಲಗುವಾಗ ಹಾಲಿಗೆ ಅರಿಶಿಣವನ್ನು ಹಾಕಿ ಕುಡಿಯುವುದು ಅಷ್ಟು ಒಳ್ಳೆಯದಲ್ಲ. ಅದರ ಬದಲಾಗಿ ಸಂಜೆ ಆರು ಅಥವಾ ಏಳು ಗಂಟೆಯ ಸುಮಾರಿಗೆ ಒಂದು ಲೋಟ ಬಿಸಿಬಿಸಿ ಹಾಲಿಗೆ ಒಂದರಿಂದ ಒಂದೂವರೆ ಚಮಚ ಅರಿಶಿಣ ಪುಡಿಯನ್ನು ಹಾಕಿ ಕುಡಿಯಬೇಕು.
ಒಂದು ವೇಳೆ ನಿಮಗೆ ಅರಿಶಿಣವನ್ನು ತುಂಬಾ ಬಳಸುವುದರಿಂದ ಹಿಟ್ ಆಗುತ್ತದೆ ಎಂದರೆ ಒಂದು ಲೋಟ ಹಾಲಿಗೆ ಅರ್ಧ ಚಮಚ ಅರಿಶಿಣದ ಪುಡಿಯನ್ನು ಹಾಕಿ ಕುಡಿಯುವಂತಹ ಹವ್ಯಾಸವನ್ನು ನೀವು ಬೆಳೆಸಿಕೊಂಡು ಬಂದರೆ ಚಳಿಗಾಲದಲ್ಲಿ ನಿಮ್ಮ ಚರ್ಮದ ರಕ್ಷಣೆಯಾಗುತ್ತದೆ ಸೌಂದರ್ಯದ ರಕ್ಷಣೆಯಾಗುತ್ತದೆ. ಚರ್ಮ ಬಿರುಕು ಬಿಡುವುದು ಕಡಿಮೆಯಾಗುತ್ತದೆ ಜೊತೆಗೆ ಹೃದಯದ ರಕ್ಷಣೆಯಾಗುತ್ತದೆ.
ಹಾಲಿಗೆ ಅರಿಶಿನವನ್ನು ಹಾಕಿ ಕುಡಿಯುವುದು ಎಲ್ಲಾ ದೃಷ್ಟಿಯಿಂದಲೂ ಕೂಡ ಒಳ್ಳೆಯದು. ಚಳಿಗಾಲದಲ್ಲಿ ಉಂಟಾಗುವ ಹಲವಾರು ಸಮಸ್ಯೆಗಳಿಗೆ ಅರಿಶಿನದ ಹಾಲು ತುಂಬಾ ಉಪಯುಕ್ತವಾಗಿದೆ. ನೀವು ಗಮನಿಸಬೇಕಾದ ಬಹುಮುಖ್ಯವಾದ ಅಂಶವೆಂದರೆ ಮಾರುಕಟ್ಟೆಯಲ್ಲಿ ಸಿಗುವ ಅರಿಶಿಣವನ್ನು ಬಳಸುವುದಕ್ಕಿಂತ ನೀವೇ ಮನೆಯಲ್ಲಿ ಅಥವಾ ಮಿಲ್ಲಿನಲ್ಲಿ ಪುಡಿಮಾಡಿಕೊಂಡ ಅರಿಶಿಣವನ್ನು ಬಳಸುವುದು ಬಹಳ ಸೂಕ್ತವಾದದ್ದು. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಸ್ನೇಹಿತರು ಹಾಗೂ ಪರಿಚಿತರಿಗೂ ತಿಳಿಸಿರಿ.
ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430