ಈ ಹಳ್ಳಿ ಹುಡುಗನ ಕೈ ಚಳಕಕ್ಕೆ ಫುಲ್ ಫಿದಾ ಆದ್ರು ಊರಿನ ಜನ, ಈತ ಮಾಡಿರೋ ಸಾಧನೆ ನೋಡಿ

0 0

ಪರಿಶ್ರಮ ಮತ್ತು ಸಾಧನೆ ಇದ್ದರೆ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು ಎಂಬುದಕ್ಕೆ ಹಲವು ಉದಾಹರಣೆಗಳಿವೆ. ಹಳ್ಳಿ ಹೈದನೊಬ್ಬ ಯೂಟ್ಯೂಬ್ ವಿಡಿಯೋಗಳಿಂದ ಪ್ರೇರಿತನಾಗಿ ಅತಿ ಕಡಿಮೆ ವೆಚ್ಚದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸಿ ಯಶಸ್ವಿಯಾದ ಯುವಕರೊಬ್ಬರ ಸಾಧನೆಯನ್ನು ಓದಿ ನೋಡಿ.

ತನ್ನ ಸಾಧನೆ, ಪ್ರತಿಭೆ ಮತ್ತು ಪರಿಶ್ರಮದ ಮೂಲಕ ತಿಪಟೂರು ತಾಲ್ಲೂಕು ನೊಣವಿನಕೆರೆ ಹೋಬಳಿಯ ಕುರುಬರಹಳ್ಳಿ ಗ್ರಾಮದ ಜೀವನ್ ಎಂಬ ಗ್ರಾಮೀಣ‌ ಪ್ರತಿಭೆಯಿಂದ “ಎಲೆಕ್ಟ್ರಿಕ್ ಜೀಪ್” ಅನ್ವೇಷಣೆ ಮಾಡಿದ್ದಾರೆ. ವಿದ್ಯಾಭ್ಯಾಸದಲ್ಲಿ PUC ಫೇಲ್ ಆಗಿದ್ದರು ಕೂಡಾ ನಿರಂತರ ಪರಿಶ್ರಮದಿಂದ ಸ್ಧಳೀಯ ಸಂಪನ್ಮೂಲವನ್ನು ಬಳಸಿಕೊಂಡು ಎಲೆಕ್ಟ್ರಿಕ್ ಜೀಪ್ ಕಂಡು ಹಿಡಿದದ್ದು ಊರಿಗೆ ಹಾಗೂ ಇಡೀ ತಾಲ್ಲೂಕಿಗೆ ಹೆಮ್ಮೆಯ ವಿಷಯವಾಗಿದೆ. ಮೆಕ್ಯಾನಿಕಲ್ ನಲ್ಲಿ ಆಸಕ್ತಿ ಹೊಂದಿರುವ ಜೀವನ್ ಬಿಡುವಿನ ವೇಳೆಯಲ್ಲಿ ಯೂಟ್ಯೂಬ್ ವಿಡಿಯೋಗಳನ್ನು ನೋಡಿ ಕೊನೆಗೆ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸಿದ್ದಾರೆ.

ಈತ ತಯಾರಿಸಿದ ಎಲೆಕ್ಟ್ರಿಕ್ ವಾಹನಗಳು ಬ್ಯಾಟರಿ ಚಾಲಿತ ವಾಗಿದ್ದು 4 ಗಂಟೆ ಚಾರ್ಜ್ ಹಾಕಿದರೆ 60 km ಓಡಿಸಬಹುದಾಗಿದೆ. ಈ ಯುವಕ ಕೇವಲ 4 ತಿಂಗಳ ಅವಧಿಯಲ್ಲಿ ಸುಮಾರು 60 ಸಾವಿರ ರೂಪಾಯಿಯನ್ನು ಖರ್ಚು ಮಾಡಿ ಎಲೆಕ್ಟ್ರಿಕ್ ಜೀಪ್ ತಯಾರಿಸಿದ್ದಾರೆ. ಈತನ ಸಾಧನೆಗೆ ತಂದೆ ತಾಯಿ ಆಶೀರ್ವಾದ, ಸಹಕಾರವೂ ದೊರೆತಿದೆ. ಅಂದಹಾಗೆ ಪೀ ಯು ಸಿ ಯನ್ನ ಮತ್ತೆ ಪಾಸ್ ಮಾಡಿಕೊಂಡಿರುವ ಜೀವನ್ ಡಿಪ್ಲೊಮಾ ಪದವಿ ಸೇರಿದ್ದಾರೆ. ಆ ಮೂಲಕ ತಮ್ಮ ಪ್ರತಿಭೆಗೆ ಇನ್ನಷ್ಟೂ ಸಾಣೆ ಹಿಡಿಯಲು ಮುಂದಾಗಿದ್ದಾರೆ.

ನಿಜಕ್ಕೂ ಯುವಕ ಎಷ್ಟು ಬುದ್ದಿವಂತ ಅನ್ನೋದಕ್ಕೆ ತನ್ನ ಕೃಷಿ ಕೆಲಸಕ್ಕೆ ಬೇಕಾದ ಹಲವು ಕೃಷಿ ಉಪಕರಣಗಳನ್ನು ತಾನೇ ತಯಾರಿಸಿಕೊಂಡಿದ್ದಾನೆ. ಕಡಿಮೆ ವೆಚ್ಚದಲ್ಲಿ ಎಲೆಕ್ಟ್ರಿಕ್ ಬೈಕ್, ಮೇವು ಕತ್ತರಿಸುವ ಎಲೆಕ್ಟ್ರಿಕಲ್ ಯಂತ್ರ, ಎಲೆಕ್ಟ್ರಿಕ್ ಜೀಪ್, ಎಲೆಕ್ಟ್ರಿಕ್ ಟಿಲ್ಲರ್ ಗಳನ್ನು ಆವಿಷ್ಕರಿಸಿದ್ದು ಕೃಷಿಯಲ್ಲಿ ಖರ್ಚು ಹೆಚ್ಚಾಗಿರುವ ಇಂತಹ ಸಂದರ್ಭದಲ್ಲಿ ಈ ಯುವಕನ ಸಾಧನೆ ನಿಜಕ್ಕೂ ಮೆಚ್ಚುವಂತಹದ್ದು.

ಯಾವುದೇ ವಿಜ್ಞಾನಿಗಳ ಸಲಹೆ ಇಲ್ಲದೆ, ಯಾವುದೇ ಇಂಜಿನಿಯರ್ ಹಾಗು ಹೆಚ್ಚಿನ ಶಿಕ್ಷಣದ ಜ್ಞಾನವಿಲ್ಲದೆ ತನ್ನ ಅವಶ್ಯಕತೆಗೆ ಬೇಕಾಗುವ ಮಾದರಿಯಲ್ಲಿ ಕೃಷಿ ಉಪಕರಣಗಳನ್ನು ಕಂಡು ಹಿಡಿದ್ದಿದ್ದಾನೆ. ಈ ಮೂಲಕ ತನ್ನಲ್ಲಿರುವ ಕೌಶಲ್ಯವನ್ನು ಇಡೀ ಜಗತ್ತಿಗೆ ತೋರಿಸಿದ್ದಾನೆ. ಗ್ರಾಮೀಣ ಭಾಗದಲ್ಲಿ ಆಸಕ್ತಿ ಕಳೆದುಕೊಳ್ಳದೆ ಒಬ್ಬ ಯುವಕ ಈ ತರಹದ ವಾಹನಗಳನ್ನು ತಯಾರಿಸಿರೋದು ಎಲ್ಲರೂ ಮೆಚ್ಚುವಂತಹದ್ದು.

Leave A Reply

Your email address will not be published.