ಒಂದೇ ಒಂದು ತುಳಸಿ ಎಲೆ ಯಾವೆಲ್ಲ ರೋಗಗಳಿಗೆ ರಾಮಬಾಣ ನೋಡಿ

0 8

ತುಳಸಿ ಹಿಂದೂ ಧರ್ಮದ ಎಲ್ಲರ ಮನೆಯಲ್ಲೂ ಇರುತ್ತದೆ. ತುಳಸಿಯನ್ನು ದೇವರಂತೆ ಪೂಜೆ ಮಾಡುತ್ತಾರೆ. ಬೆಳಿಗ್ಗೆ ಎದ್ದ ತಕ್ಷಣ ಸ್ನಾನ ಮುಗಿಸಿ ತುಳಸೀ ಪೂಜೆ ಮಾಡುವುದು ನಮ್ಮ ಭಾರತೀಯರ ಸಂಸ್ಕೃತಿಯಾಗಿದೆ. ಹಾಗೆಯೇ ತುಳಸಿಯು ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ನಾವು ಇಲ್ಲಿ ತುಳಸಿಯ ಪ್ರಯೋಜನಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ನಮ್ಮ ಹಿರಿಯರು ಪ್ರತಿನಿತ್ಯ ತುಳಸಿಯ ತೀರ್ಥ ಕುಡಿಯುತ್ತಾರೆ. ಕಾರಣ ಶಾಸ್ತ್ರ ಎಂದು ಎಲ್ಲರೂ ತಿಳಿದಿರುತ್ತಾರೆ. ಆದರೆ ಮೂಲ ಕಾರಣವೇನೆಂದರೆ ಅದರಲ್ಲಿ ಔಷಧೀಯ ಗುಣ ಇದೆ. ಇದರಲ್ಲಿ ರೋಗ ನಿರೋಧಕ ಶಕ್ತಿ ತುಂಬಾ ಹೆಚ್ಚಾಗಿ ಇದೆ. ದಿನವೂ ಬೆಳಿಗ್ಗೆ ಎದ್ದು ಎರಡು ತುಳಸಿ ಎಲೆಯನ್ನು ತಿನ್ನಬೇಕು. ಇದರಿಂದ ತುಳಸಿಯ ನೈಸರ್ಗಿಕ ಅಂಶ ನಮ್ಮ ದೇಹಕ್ಕೆ ಸೇರುತ್ತದೆ. ಮಹಾಭಾರತದ ಕಾಲದಲ್ಲಿ ಒಮ್ಮೆ ಘಟೋದ್ಘಜನಿಗೆ ವಿಷ್ಣುವನ್ನು ಎತ್ತಲಾಗಲಿಲ್ಲ. ಆಗ ಒಂದು ತುಳಸೀ ದಳ ಎತ್ತಿತು ಎಂಬ ನಂಬಿಕೆ ಇದೆ.

ನಮ್ಮ ದೇಶದಲ್ಲಿ ತುಳಸಿಯನ್ನು ಎಲ್ಲರೂ ಪೂಜಿಸುತ್ತಾರೆ. ಪುರಾಣಗಳಲ್ಲಿ ಇದಕ್ಕೆ ಒಂದು ಪ್ರತ್ಯೇಕ ಸ್ಥಾನವಿದೆ. ತುಳಸೀ ಎಲೆಯ ರಸವನ್ನು 10ಎಂ.ಎಲ್ ಗೆ ಯಾಲಕ್ಕಿ ಮತ್ತು ಶುಂಠಿ ಪುಡಿಯನ್ನು ಸೇರಿಸಿ ತಿನ್ನುವುದರಿಂದ ವಾಂತಿಯ ಸಮಸ್ಯೆಯಿಂದ ದೂರವಿರಬಹುದು. ಕೆಲವರಿಗೆ ಬಾಯಿಯಿಂದ ದೂರ್ವಾಸನೆ ಬರುತ್ತದೆ. ಅಂತಹವರು ರಾತ್ರಿ ನೀರಿನಲ್ಲಿ ತುಳಸೀ ಎಲೆಯನ್ನು ನೆನೆಸಿಟ್ಟು ಆ ನೀರಿನಿಂದ ಬೆಳಿಗ್ಗೆ ಹಲ್ಲುಜ್ಜಬೇಕು. ಇದರಿಂದ ಬಾಯಿಯ ದೂರ್ವಾಸನೆ ದೂರವಾಗುತ್ತದೆ.

ಹಾಗೆಯೇ ತುಳಸೀ ನೀರನ್ನು ಸೇವನೆ ಮಾಡುವುದರಿಂದ ಮೂತ್ರದಿಂದ ಕಲ್ಲುಗಳು ಹೊರಹೋಗಿ ದೇಹದಲ್ಲಿ ಇರುವ ವಿಷಕಾರಿ ವಸ್ತುಗಳನ್ನು ಹೊರ ಹಾಕುತ್ತದೆ. ಕುಷ್ಠರೋಗ ಇರುವವರು ತುಳಸೀ ಎಲೆಯ ರಸವನ್ನು 20ಎಂ.ಎಲ್ ತೆಗೆದುಕೊಂಡು ಪ್ರತಿನಿತ್ಯ ಬೆಳಿಗ್ಗೆ ಸೇವನೆ ಮಾಡುವುದರಿಂದ ಅದರಿಂದ ಮುಕ್ತಿ ಪಡೆಯಬಹುದು. ಚರ್ಮರೋಗಗಳ ವಿರುದ್ಧ ಹೋರಾಡುವಲ್ಲಿ ಇದು ಮುಖ್ಯ ಪಾತ್ರ ವಹಿಸುತ್ತದೆ. ಹಾಗೆಯೇ ಕಣ್ಣಿನ ಉರಿ ಇರುವವರು ತುಳಸೀ ರಸವನ್ನು ಹತ್ತಿಯಿಂದ ಕಣ್ಣಿಗೆ ಇಟ್ಟರೆ ಕಡಿಮೆ ಆಗುತ್ತದೆ.

ತುಳಸೀ ರಸವನ್ನು ಜೇನುತುಪ್ಪದೊಂದಿಗೆ ಸೇರಿಸಿ ಕುಡಿಯುತ್ತಾ ಬಂದರೆ ಗಂಟಲು ನೋವು ಕಡಿಮೆಯಾಗುತ್ತದೆ. ತೂಕ ಹೆಚ್ಚು ಇರುವವರು ಮಜ್ಜಿಗೆ ಜೊತೆ ತುಳಸೀ ಎಲೆಯನ್ನು ಸೇರಿಸಿಕೊಂಡು ಕುಡಿಯುವುದರಿಂದ ತೂಕ ಕಡಿಮೆ ಆಗುತ್ತದೆ. ನಿದ್ರಾಹೀನತೆ ಇರುವವರು ಎರಡು ಚಮಚ ತುಳಸೀ ರಸಕ್ಕೆ ಸಕ್ಕರೆಯನ್ನು ಸೇರಿಸಿ ಕುಡಿಯುವುದರಿಂದ ನಿದ್ರೆ ತುಂಬಾ ಚೆನ್ನಾಗಿ ಬರುತ್ತದೆ. ಇಷ್ಟೊಂದು ಪ್ರಯೋಜನಗಳು ಇರುವ ತುಳಸೀ ಎಲೆಯನ್ನು ಬಳಸಿ ನಾವು ಸಹ ಇದರ ಪ್ರಯೋಜನವನ್ನು ಪಡೆದುಕೊಳ್ಳೋಣ.

Leave A Reply

Your email address will not be published.