ಹಿಂದೂ ಸಂಪ್ರದಾಯದಲ್ಲಿ ತುಳಸಿ ಗಿಡವನ್ನು ದೇವರೆಂದು ಪೂಜಿಸಲಾಗುತ್ತದೆ. ಆಧ್ಯಾತ್ಮಿಕ ದೃಷ್ಟಿಯಿಂದ ಮಾತ್ರ ತುಳಸಿ ಗಿಡ ಮಹತ್ವ ಪಡೆಯದೆ ಆರೋಗ್ಯದ ದೃಷ್ಟಿಯಿಂದಲೂ ಮಹತ್ವವನ್ನು ಪಡೆದಿದೆ. ಹಾಗಾದರೆ ತುಳಸಿ ಗಿಡದ ಆರೋಗ್ಯದ ಮಹತ್ವವನ್ನು ಈ ಲೇಖನದ ಮೂಲಕ ತಿಳಿಯೋಣ.
ಎಲ್ಲರ ಮನೆ ಮುಂದೆ ತುಳಸಿ ಗಿಡವನ್ನು ನೆಟ್ಟು ಪ್ರತಿದಿನ ಪೂಜೆ ಮಾಡಲಾಗುತ್ತದೆ. ತುಳಸಿ ಗಿಡ ಅನೇಕ ಔಷಧೀಯ ಗುಣವನ್ನು ಹೊಂದಿರುತ್ತದೆ. ತುಳಸಿ ಗಿಡದ ಬೇರಿನಿಂದ ಹಿಡಿದು ಕಾಂಡ, ಎಲೆ ಸೇರಿದಂತೆ ತುಳಸಿ ಗಿಡವು ಅತ್ಯುತ್ತಮ ಔಷಧಿ ಗಿಡವಾಗಿದೆ. ಹುಳುಕಡ್ಡಿ ಆದರೆ ತುಳಸಿ ಸೊಪ್ಪಿನ ಕಷಾಯ ಮಾಡಿಕೊಂಡು ಹುಳುಕಡ್ಡಿ ಸ್ಥಾನವನ್ನು ತೊಳೆದು ನಂತರ ತುಳಸಿ ಸೊಪ್ಪನ್ನು ಚೆನ್ನಾಗಿ ಅರೆದು ಹುಳುಕಡ್ಡಿಯ ಭಾಗಕ್ಕೆ ಚೆನ್ನಾಗಿ ಲೇಪಿಸುವುದರಿಂದ ಶೀಘ್ರವೆ ನಿವಾರಣೆಯಾಗುತ್ತದೆ. ತುಳಸಿ ಗಿಡದ ಹಸಿ ಬೇರಿನಿಂದ ಗಂಧವನ್ನು ತೆಗೆದು ಚೇಳು ಕಚ್ಚಿದ ಜಾಗಕ್ಕೆ ಲೇಪಿಸುವುದರಿಂದ ಚೇಳಿನ ವಿಷ ಇಳಿದುಹೋಗಿ ಬೇಗನೆ ವಾಸಿಯಾಗುತ್ತದೆ.
ಕಿವಿಯೊಳಗೆ ಹುಣ್ಣಾಗಿದ್ದರೆ ತುಳಸಿ ಎಲೆಯಿಂದ ರಸ ತೆಗೆದು ಒಂದೆರಡು ತುಳಸಿ ರಸವನ್ನು ಹಾಕಬೇಕು ಇದರಿಂದ ಕಿವಿನೋವು ಶೀಘ್ರವೆ ನಿವಾರಣೆಯಾಗುತ್ತದೆ. ಆಗಾಗ ಕಿವಿನೋವು ಕಾಣಿಸಿಕೊಳ್ಳುತ್ತಿದ್ದರೆ ಒಂದೆರಡು ಹನಿ ತುಳಸಿ ರಸವನ್ನು ಹಾಕುವುದರಿಂದ ಕಿವಿ ನೋವು ಶಮನವಾಗುತ್ತದೆ. ತುಳಸಿ ಎಲೆಯ ಕಷಾಯವನ್ನು ತಯಾರಿಸಿ ಅದಕ್ಕೆ ಜೇನುತುಪ್ಪ ಸೇರಿಸಿ ಸೇವಿಸಬೇಕು ಆರೋಗ್ಯಕ್ಕೆ ಒಳ್ಳೆಯದು.
ತುಳಸಿ ರಸ, ಬೆಳ್ಳುಳ್ಳಿ ರಸ, ಜೇನುತುಪ್ಪವನ್ನು ಸಮಪ್ರಮಾಣದಲ್ಲಿ ಮಿಕ್ಸ್ ಮಾಡಿ ಮೂರು ಗಂಟೆಗಳಿಗೊಮ್ಮೆ 1 ಟೀ ಚಮಚವನ್ನು ಸೇವಿಸುವುದರಿಂದ ಕೆಮ್ಮು ಗುಣವಾಗುತ್ತದೆ. ತುಳಸಿ ರಸದಲ್ಲಿ ಕಾಳುಮೆಣಸಿನ ಚೂರ್ಣವನ್ನು ಕಲಸಿ ಸೇವಿಸುವುದರಿಂದ ಜ್ವರ ಬಂದಾಗ ಉಂಟಾಗುವ ಕೆಮ್ಮನ್ನು ನಿವಾರಿಸಿಕೊಳ್ಳಬಹುದು. ತುಳಸಿ ಹೂವುಗಳನ್ನು ಈರುಳ್ಳಿ ರಸ, ಶುಂಠಿ ರಸ, ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸಿದರೆ ಕಫ ನಿವಾರಣೆಯಾಗುತ್ತದೆ.
ಮಲೇರಿಯಾ ರೋಗಕ್ಕೆ ಕೃಷ್ಣ ತುಳಸಿ ರಸವನ್ನು ಮೈಗೆ ತಿಕ್ಕಿ ಮಾಲಿಶ್ ಮಾಡುವುದರಿಂದ ಜ್ವರ ಕಡಿಮೆಯಾಗುತ್ತಾ ಬರುತ್ತದೆ, ಅಲ್ಲದೆ ತುಳಸಿ ರಸಕ್ಕೆ ಕಾಳುಮೆಣಸಿನ ಚೂರ್ಣವನ್ನು ಸೇರಿಸಿ ಸೇವಿಸುವುದರಿಂದ ಮಲೇರಿಯಾ ಜ್ವರ ನಿವಾರಣೆಯಾಗುತ್ತದೆ. ಒಂದು ಟೀ ಚಮಚ ತುಳಸಿ ಸೊಪ್ಪಿನ ರಸವನ್ನು ದಿನಕ್ಕೆ ಎರಡು ಬಾರಿ ಮೂರು ನಾಲ್ಕು ದಿನಗಳ ಕಾಲ ಸೇವಿಸುವುದರಿಂದ ಅಜೀರ್ಣ ಸಮಸ್ಯೆ ನಿವಾರಣೆಯಾಗುತ್ತದೆ. ತುಳಸಿ ಸೊಪ್ಪಿನ ಕಷಾಯವನ್ನು ದಿನಕ್ಕೆ ಮೂರು ಬಾರಿ ಸೇವಿಸುವುದರಿಂದ ಬೆಳಗ್ಗೆ ಎದ್ದಾಗ ಉಂಟಾಗುವ ಅಸ್ವಸ್ಥತೆ ದೂರವಾಗುತ್ತದೆ.
ತುಳಸಿ ಎಲೆ ಜೇನುತುಪ್ಪ ಮತ್ತು ಜೀರಿಗೆಯನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಸೇವಿಸುವುದರಿಂದ ಕಡಿಮೆ ಸಮಯದಲ್ಲಿ ಲೂಸ್ ಮೋಷನ್ ನಿಯಂತ್ರಣಕ್ಕೆ ಬರುತ್ತದೆ. ಪ್ರತಿದಿನ ತಪ್ಪದೆ 3-4 ತುಳಸಿ ಎಲೆಗಳನ್ನು ತಿನ್ನುವುದರಿಂದ ಕ್ಯಾನ್ಸರ್ ನಂತಹ ಮಾರಕ ರೋಗವನ್ನು ಬರದಂತೆ ತಡೆಯಬಹುದು. ಸುಟ್ಟ ಗಾಯಕ್ಕೆ ತುಳಸಿ ರಸ ಮತ್ತು ಕೊಬ್ಬರಿ ಎಣ್ಣೆಯನ್ನು ಮಿಕ್ಸ್ ಮಾಡಿ ಹಚ್ಚುವುದರಿಂದ ಉರಿ ಕಡಿಮೆಯಾಗುತ್ತದೆ. ತುಳಸಿ ಗಿಡವನ್ನು ಮನೆಯ ಸುತ್ತ ಹೆಚ್ಚು ಬೆಳೆಸಿ ಆರೋಗ್ಯವಾಗಿರಿ.
ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430