ದೇಹದ ಉಷ್ಣಾಂಶ ಹೆಚ್ಚಾದಾಗ ಕೆಲವೊಂದು ಸಮಸ್ಯೆಗಳು ಉಂಟಾಗುತ್ತವೆ ಅದೇ ನಿಟ್ಟಿನಲ್ಲಿ ಈ ಉರಿ ಮೂತ್ರ ಸಮಸ್ಯೆ ಕೂಡ ಒಂದು, ಮೂತ್ರ ವಿಸರ್ಜನೆ ಮಾಡುವಂತ ಸಂದರ್ಭದಲ್ಲಿ ಹೆಚ್ಚು ಉರಿಯಾಗುವುದು ಹಾಗೂ ಸಂಕಟ ಅನಿಸುತ್ತದೆ. ಇಂತಹ ಸಮಸ್ಯೆಗೆ ಮನೆಯಲ್ಲಿಯೇ ಸಿಗುವಂತ ಒಂದಿಷ್ಟು ಮನೆಮದ್ದನ್ನು ಈ ಮೂಲಕ ತಿಳಿಯೋಣ ಹಾಗೂ ಇದನ್ನು ಹೇಗೆ ಬಳಸಬೇಕು ಅನ್ನೋದನ್ನ ಕೂಡ ತಿಳಿದು ಪರಿಹಾರ ಕಂಡುಕೊಳ್ಳೋಣ.
ತುಳಸಿ ದೇವರ ಪೂಜೆಗೆ ಅಷ್ಟೇ ಅಲ್ದೆ ಪ್ರತಿದಿನ ಕಾಡುವಂತ ಒಂದಿಷ್ಟು ಸಮಸ್ಯೆಗಳಿಗೆ ಪರಿಹಾರ ನೀಡುವಂತ ಮನೆಮದ್ದಾಗಿ ಸಹ ತುಳಸಿಯನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ, ಉರಿಮೂತ್ರ ಸಮಸ್ಯೆಗೆ ಒಂದು ಗ್ಲಾಸ್ ಹಸುವಿನ ಹಾಲಿನಲ್ಲಿ ಶುದ್ಧವಾದ 4 ರಿಂದ 5 ತುಳಸಿ ಎಲೆಗಳನ್ನು ಅರೆದು ಹಾಲಿನಲ್ಲಿ ಬೆರಸಿ ದಿನದಲ್ಲಿ ಎರಡರಿಂದ ಮೂರೂ ಬಾರಿ ಸೇವನೆ ಮಾಡುವುದರಿಂದ ಉರಿಮೂತ್ರ ನಿವಾರಣೆ ಮಾಡಿಕೊಳ್ಳಬಹುದು ಹಾಲು ಹಾಗೂ ತುಳಸಿ ಎಲೆಯ ಮಿಶ್ರಣ ದೇಹದ ಉಷ್ಣಾಂಶವನ್ನು ಕಡಿಮೆ ಮಾಡುವ ಗುಣ ಹೊಂದಿದೆ.
ಎರಡನೆಯ ಮನೆಮದ್ದು ಏಲಕ್ಕಿ: ಏಲಕ್ಕಿಯನ್ನು ಅಡುಗೆಯ ರುಚಿಗೆ ಬಳಸಲಾಗುತ್ತದೆ ಹಾಗೂ ಕೆಲವೊಂದು ಸಾಮಾನ್ಯ ಕಾಯಿಲೆಗಳ ನಿವಾರಣೆಗೆ ಮನೆಮದ್ದಾಗಿ ಏಲಕ್ಕಿಯನ್ನು ಬಳಸಲಾಗುತ್ತದೆ. ಅದೇ ನಿಟ್ಟಿನಲ್ಲಿ ಈ ಎಲ್ಲಕಿ ಉರಿಮೂತ್ರವನ್ನು ನಿವಾರಿಸುತ್ತದೆ. ಹೇಗೆ ಅನ್ನೋದಾದರೆ ಏಲಕ್ಕಿ ಹಾಗೂ ಇದರ ಜೊತೆಗೆ ಗಸಗಸೆಯನ್ನು ರಾತ್ರಿವೇಳೆ ಮೊಸರಿನಲ್ಲಿ ನೆನಸಿ ಬೆಳಗಿನ ವೇಳೆ ಸೇವನೆ ಮಾಡುವುದರಿಂದ ಉರಿಮೂತ್ರ ನಿವಾರಣೆಯಾಗುವುದು.
ಈ ಮನೆಮದ್ದು ನಿಮಗೆ ಇಷ್ಟವಾಗಿದ್ದರೆ ನಿಮ್ಮ ಆತ್ಮೀಯರಿಗೂ ತಿಳಿಸಿ ಕೆಲವೊಮ್ಮೆ ಇಂತಹ ಸಮಸ್ಯೆಗಳಿಗೆ ಮನೆಮದ್ದುಗಳು ತಿಳಿಯದೆ ಇರುತ್ತಾರೆ, ಅಂತವರಿಗೆ ಇದರ ಪ್ರಯೋಜನ ಪಡೆಯಲು ಸಹಕಾರಿಯಾಗುತ್ತದೆ. ಇವುಗಳಿಂದ ದೇಹಕ್ಕೆ ಯಾವುದೇ ಅಡ್ಡ ಪರಿಣಾಮಬೀರುವುದಿಲ್ಲ ನೈಸರ್ಗಿಕವಾಗಿ ಉತ್ತಮ ಆರೋಗ್ಯವನ್ನು ವೃದ್ಧಿಸುವಂತ ಗುಣಗಳನ್ನು ಏಲಕ್ಕಿ ಹಾಗೂ ತುಳಸಿ ಹೊಂದಿದೆ.