ತುಳಸಿ ಇದು ಎಲ್ಲಾ ಹಿಂದೂ ಧರ್ಮದವರ ಮನೆಯಲ್ಲಿ ಕಂಡು ಬರುತ್ತದೆ. ಏಕೆಂದರೆ ಇದನ್ನು ಪೂಜೆ ಮಾಡಲಾಗುತ್ತದೆ. ಹಾಗೆಯೇ ವರ್ಷಕ್ಕೆ ಒಂದು ಬಾರಿ ಬರುವ ದೀಪಾವಳಿ ಹಬ್ಬದಲ್ಲಿ ತುಳಸಿ ಮದುವೆ ಎಂದು ಆಚರಣೆ ಮಾಡಲಾಗುತ್ತದೆ. ಹಾಗೆಯೇ ಇದು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಬೆಳಿಗ್ಗೆ ಎದ್ದ ಕೂಡಲೇ ದಿನನಿತ್ಯ ಒಂದು ತುಳಸಿ ಎಲೆಯನ್ನು ತಿನ್ನಬೇಕು. ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಆದ್ದರಿಂದ ನಾವು ಇಲ್ಲಿ ತುಳಸಿಯ ಪ್ರಯೋಜನಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಹಳೆಯ ಕಾಲದವರು ತುಳಸಿಯ ಬಗ್ಗೆ ಒಂದು ಕಥೆಯನ್ನು ಹೇಳಿದ್ದಾರೆ. ಅದೇನೆಂದರೆ ಸಮುದ್ರಮಥನದ ಸಮಯದಲ್ಲಿ ರಾಕ್ಷಸರು ಮತ್ತು ದೇವತೆಗಳು ಮಥನ ಮಾಡುತ್ತಿದ್ದಾಗ ಧನ್ವಂತರಿ ದೇವ ಅಮೃತವನ್ನು ಹಿಡಿದುಕೊಂಡು ಬರುತ್ತಾನೆ. ಆಗ ಬರುವಾಗ ಬಹಳ ಸಂತೋಷದಿಂದ ಕಣ್ಣೀರು ಬಂದು ಅದು ನೆಲಕ್ಕೆ ಬಿದ್ದು ತುಳಸಿಗಿಡ ಹುಟ್ಟಿತು ಎಂಬ ಕಥೆ ಇದೆ. ತುಳಸಿ ಇದು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಹಾಗೆಯೇ ಇದು ಮನೆಯಲ್ಲಿ ಇದ್ದರೆ ಅಲ್ಲಿ ಹಾದು ಹೋಗುವ ಕೆಟ್ಟ ಗಾಳಿಗಳನ್ನು ತಡೆದು ಒಳ್ಳೆಯ ಗಾಳಿಯನ್ನು ನೀಡುತ್ತದೆ. ಇದು ಶ್ವಾಸಕೋಶ, ಗಂಟಲು ಮತ್ತು ತಲೆಯ ಭಾಗಗಳಲ್ಲಿ ಉಂಟಾಗುವ ಸಮಸ್ಯೆಗಳಿಗೆ ಬಹಳ ಒಳ್ಳೆಯದು.
ಇದು ಸ್ವಲ್ಪ ಉಷ್ಣತೆಯನ್ನು ಹೊಂದಿರುವ ಸಸ್ಯವಾಗಿದ್ದು ಅಲರರ್ಜಿಗಳನ್ನು ಹೋಗಲಾಡಿಸುತ್ತದೆ. ಇದನ್ನು ನೀರಿಗೆ ಹಾಕಿ ಕುದಿಸಿ ಇದರ ಉಗಿಯನ್ನು ತೆಗೆದುಕೊಳ್ಳಬಹುದು. ಹಾಗೆಯೇ ವಾರಕ್ಕೆ ಒಂದರಿಂದ ಎರಡು ಬಾರಿ ಇದರ ಕಷಾಯವನ್ನು ಮಾಡಿ ಕುಡಿಯಬೇಕು. ಇದರಿಂದ ಕಫ ಮತ್ತು ನೆಗಡಿಯಂತಹ ಸಮಸ್ಯೆಗಳು ದೂರವಾಗುತ್ತವೆ. ಹಾಗೆಯೇ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಇದು ಜ್ವರವನ್ನು ಸಹ ಕಡಿಮೆ ಮಾಡುತ್ತದೆ. ತುಳಸಿ ಎಲೆಯ ಕಷಾಯವನ್ನು ಮಾಡಲು ಮೊದಲು ಎರಡು ಲೋಟ ನೀರನ್ನು ಹಾಕಿ ಅದಕ್ಕೆ ಒಬ್ಬರಿಗಾದರೆ ನಾಲ್ಕು ಎಲೆ ತುಳಸಿ ಸಾಕಾಗುತ್ತದೆ.
ಸಣ್ಣ ಬೆಂಕಿಯಲ್ಲಿ ಇದನ್ನು ಚೆನ್ನಾಗಿ ಕುದಿಸಿಕೊಳ್ಳಬೇಕು. ನಂತರದಲ್ಲಿ ಸರಿಯಾಗಿ ಸೋಸಿಕೊಂಡು ತಣ್ಣಗಾದ ನಂತರ ಸ್ವಲ್ಪ ಜೋನಿಬೆಲ್ಲ ಅಥವಾ ಜೇನುತುಪ್ಪ ಹಾಕಿಕೊಂಡು ಕುಡಿಯಬಹುದು. ಆದರೆ ಯಾವುದೇ ಕಾರಣಕ್ಕೂ ಇದಕ್ಕೆ ಹಾಲನ್ನು ಸೇರಿಸಬಾರದು. ಏಕೆಂದರೆ ತುಳಸಿ ಮತ್ತು ಹಾಲು ವಿರುದ್ಧದ ಆಹಾರ ಪದಾರ್ಥಗಳು. ದಿನನಿತ್ಯ ಇದನ್ನು ಸೇವನೆ ಮಾಡಬಾರದು. ಹಾಗೆಯೇ ಗರ್ಭಿಣಿಯರು ಇದನ್ನು ವೈದ್ಯರ ಸಲಹೆಯ ಮೇರೆಗೆ ಕುಡಿಯಬಹುದು. ಹಾಗೆಯೇ ಅಪರೂಪಕ್ಕೆ ಇದರ ಟೀ ಮಾಡಿ ಕುಡಿಯಬಹುದು. ಹಾಗೆಯೇ ಇದು ಕೂದಲಿಗೂ ಕೂಡ ಬಹಳ ಒಳ್ಳೆಯದು. ಇದನ್ನು ಶಾಂಪೂ ಮಾಡಲು ಕೂಡ ಬಳಸಲಾಗುತ್ತದೆ.