ನೇಮ್ ಫೇಮ್ ಅನ್ನೋದೂ ನಾವು ಅದನ್ನು ಸಾಧಿಸುವ ವರೆಗೆ ಮಾತ್ರ ನಂತರ ಅದು ಕೂಡ ಶಾಶ್ವತವಲ್ಲ. ಯಾವುದು ಕೂಡ ನಮ್ಮ ಮನಸ್ಸಿಗೆ ಶಾಂತಿ ನೆಮ್ಮದಿಯನ್ನು ನೀಡುವುದಿಲ್ಲ ಕೊನೆಗೆ ಮಾನವ ಆಧ್ಯಾತ್ಮಿಕ ಚಿಂತನೆಯ ಕಡೆಗೆ ಒಲವು ತೋರುತ್ತಾನೇ. ಒಂದು ಕಾಲದಲ್ಲಿ ನಟಿಯರಾಗಿ ಮಿಂಚಿದ ಇವರು ಈಗ ಸನ್ಯಾಸಿನಿಯರಾಗಿ ಬದಲಾಗಿದ್ದಾರೆ. ಸನ್ಯಾಸಿನಿಯಾಗಿ ಬದಲಾದ ನಟಿಯರು ಯಾರು? ಇವರು ಸನ್ಯಾಸತ್ವ ಸ್ವೀಕರಿಸಲು ಕಾರಣ ಏನು ಎನ್ನುವುದನ್ನು ಇಲ್ಲಿ ತಿಳಿದುಕೊಳ್ಳೋಣ.
ಸನ್ಯಾಸತ್ವ ಸ್ವೀಕರಿಸಿದ ನಟಿ ಮನಿಷಾ ಕೊಯಿರಾಲ. ಭಾರತ ಚಿತ್ರರಂಗದ ಟಾಪ್ ನಟಿಯಾಗಿ ಮಿಂಚಿದ್ದ ಇವರು ಕ್ಯಾನ್ಸರ್ಗೆ ತುತ್ತಾಗಿದ್ದರು ಮುಂದೆ ಇದರಿಂದ ಚೇತರಿಸಿಕೊಂಡು ಉಜ್ಜೈನಿಯಲ್ಲಿ ಸನ್ಯಾಸಿನಿ ಆಗಿ ದೀಕ್ಷೆ ಪಡೆದರು.
ಸೋಫಿಯಾ ಹೈಯತ್: ಮಾಡೆಲ್ ಹಾಗೂ ನಟಿ ಆಗಿದ್ದ ಸೋಫಿಯಾ ಸನ್ಯಾಸಿನಿ ಆಗಿ ಮಾರ್ಪಟ್ಟು ಜೀವನ ನಡೆಸಿದರು. ಆದರೆ ಕೆಲವು ವರ್ಷಗಳ ನಂತರ ಮದುವೆಯ ಬಗ್ಗೆ ಆಕರ್ಷಿತರಾದ ಈ ನಟಿ ಸನ್ಯಾಸತವನ್ನು ತೊರೆದು ಸಂಸಾರಿ ಆದರು.
ಮಮತಾ ಕುಲಕರ್ಣಿ: ಸಾಕಷ್ಟು ಹಿಟ್ ಚಿತ್ರಗಳಲ್ಲಿ ನಟಿಸಿದ ಈ ನಟಿ ಸನ್ಯಾಸತ್ವ ಸ್ವೀಕಾರ ಮಾಡಿದ್ದು,, ಇತ್ತೀಚೆಗೆ 200ಕೋಟಿ ಸ್ಕ್ಯಾಮ್ ಕೇಸ್ ನಲ್ಲಿ ಮಮತಾ ಕುಲಕರ್ಣಿ ದೋಷಿ ಎಂದು ಕೋರ್ಟ್ ಹೇಳಿದ್ದ ಕಾರಣ ಜೈಲು ವಾಸ ಅನುಭಿಸಿ ಹೊರಬಂದಿದ್ದಾರೆ.
ಬರ್ಖಾ ಮದನ್: ಬಾಲಿವುಡ್ ಚಿತ್ರಗಳಲ್ಲಿ ಮಿಂಚಿದ ಈ ನಟಿ ತನ್ನ ಐಷಾರಾಮಿ ಜೀವನವನ್ನು ತ್ಯಜಿಸಿ ಸಾಮಾನ್ಯ ಜನರ ಹಾಗೆಯೇ ಈಗ ಬೌದ್ಧ ಸನ್ಯಾಸಿನಿ ಆಗಿ ಜೀವನ ನಡೆಸುತ್ತ ಇದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಸನ್ಯಾಸತ್ವ ಸ್ವೀಕಾರ ಮಾಡಿದ್ದು ಆಶ್ಚರ್ಯವೇ….
ಸುಚಿತ್ರಾ ಸೇನ್: ತನ್ನ ಇಪ್ಪತ್ತೈದು ವರ್ಷ ವಯಸ್ಸಿನಲ್ಲಿಯೇ ಸ್ಟಾರ್ ನಟಿಯಾಗಿ ಮಿಂಚಿ , ನಂತರ ತಮ್ಮ ಮನೆಯಲ್ಲಿ ಅಶಾಂತಿ ಎದ್ದ ಕಾರಣ ರಾಮಕೃಷ್ಣ ಆಶ್ರಮದಲ್ಲಿ ಸನ್ಯಾಸಿನಿ ಆಗಿ ಸೇರಿಕೊಂಡರು.
ಅನು ಅಗರ್ವಾಲ್: ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ಈ ನಟಿಗೆ ಅದೇನಾಯಿತೋ ತಿಳಿಯದು. ಇದ್ದಕ್ಕಿದ್ದಂತೆ ಉತ್ತರಾಖಾಂಡ ದ ಯೋಗ ಆಶ್ರಮಕ್ಕೆ ಸೇರಿಕೊಂಡು ಈಗ ಸನ್ಯಾಸಿನಿ ಆಗಿ ಜೀವನ ನಡೆಸುತ್ತಾ ಇದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಬೇಕಾದಷ್ಟು ಹಣ ಹೆಸರು ಗಳಿಸಿ , ಜೀವನ ನೋಡಿದ ಮೇಲೆ ಜೀವನ ಅಂದರೆ ಇಷ್ಟೇನಾ ಎಂದು ಸನ್ಯಾಸತ್ವ ಸ್ವೀಕರಿಸುವವರ ಸಾಲಿಗೆ ಈ ನಟಿಯರು ಸೇರಿದ್ದಾರೆ.